Karnataka By-Election 2019 Polling LIVE : ಕರ್ನಾಟಕದ ಉಪ ಚುನಾವಣಾ ಕದನ; ಇಂದು ಮತದಾನ

Source Credit Oneindia.com

Karnataka

oi-Nayana Bj

|

ಬೆಂಗಳೂರು, ಡಿಸೆಂಬರ್ 5: ಬಹುನಿರೀಕ್ಷಿತ ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಗೌಪ್ಯ ಮತದಾನ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸದರಿ ಕ್ಷೇತ್ರಗಳಲ್ಲಿ ಮತದಾರರು ಉಮೇದುವಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಿದ್ದಾರೆ.

15 ಕ್ಷೇತ್ರಗಳ ಪೈಕಿ ರಾಣೆಬೆನ್ನೂರಿನ ಆರ್​. ಶಂಕರ್​ ಹಾಗೂ ಶಿವಾಜಿ ನಗರ ಕ್ಷೇತ್ರದ ರೋಷನ್​ ಬೇಗ್​ ಹೊರತುಪಡಿಸಿ ಉಳಿದ ಎಲ್ಲ 13 ಅನರ್ಹರು ಸ್ಪರ್ಧೆಯಲ್ಲಿದ್ದಾರೆ. ಈ ಕ್ಷೇತ್ರಗಳ ಅಂತಿಮ ಫಲಿತಾಂಶ ಹಾಲಿ ಬಿಜೆಪಿ ಸರಕಾರದ ಅಳಿವು ಉಳಿವಿನ ಮೇಲೆ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಉಪ ಚುನಾವಣೆ ರಾಷ್ಟ್ರದ ಗಮನ ಸೆಳೆದಿದೆ.

ಯಾವ ಕ್ಷೇತ್ರಗಳಲ್ಲಿ ಮತದಾನ?:

ಹಿರೇಕೆರೂರು, ಯಲ್ಲಾಪುರ, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಶಿವಾಜಿನಗರ, ಹೊಸಕೋಟೆ, ಕೆಆರ್‌ ಪೇಟೆ, ಹುಣಸೂರು, ಮಹಾಲಕ್ಷ್ಮೀ ಲೇಔಟ್‌, ಗೋಕಾಕ್, ಕಾಗವಾಡ, ಅಥಣಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

‘ಆಪರೇಷನ್ ಕಮಲ’ ಎಂಬ ಕುಖ್ಯಾತ ರಾಜಕೀಯ ಅಸ್ತ್ರ ಪ್ರಯೋಗಿಸಿ ನಮ್ಮ ಸರ್ಕಾರ ಉರುಳಿಸಿದ್ದಾರೆ- ಅವರಿಗೆ ಒಂದು ಕ್ಷೇತ್ರವನ್ನೂ ಗೆಲ್ಲಲು ಬಿಡಬಾರದು- ಎನ್ನುವ ಆಕ್ರೋಶದಲ್ಲಿ ಕಾಂಗ್ರೆಸ್ ಇದ್ದರೆ, ಆಡಿಕೊಳ್ಳುವವರ ಮುಂದೆ ಎಡವಬಾರದು ಎನ್ನುವ ಪರಿಸ್ಥಿತಿ ಬಿಜೆಪಿಯದ್ದಾಗಿದೆ. ಇವೆರೆಡು ಪಕ್ಷಗಳ ನಡುವೆ ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ ಮುಂದೆ ನಿಂತಿದೆ.

ಬಿಜೆಪಿಯದ್ದು 15ಕ್ಕೆ 15 ಕ್ಷೇತ್ರಗಳ ಗೆಲ್ಲುವ ಭರವಸೆ, ಕಾಂಗ್ರೆಸ್‌ನದ್ದು ಈ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುವ ನಂಬಿಕೆ. ಅಂತಿಮ ಫಲಿತಾಂಶಕ್ಕಾಗಿ ಡಿ. 9ರವರೆಗೆ ಕಾಯಲೇಬೇಕಿದೆ.

Newest First Oldest First

ಕ್ಷೇತ್ರವಾರು ಮತದಾರರ ಆಸಕ್ತಿ, ಆಯಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಮಾನಾಂತರವಾಗಿ ನಡೆಯುವ ಬೆಳವಣಿಗೆಗಳು, ಪ್ರಮುಖರ ಮತದಾನ- ಪ್ರತಿಕ್ರಿಯೆ ಹೀಗೆ ಇಡೀ ದಿನದ ಬೆಳವಣಿಗೆಗಳ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ನಿಮಗೆ ಸಿಗಲಿದೆ.

ಸಾಕಷ್ಟು ರಾಜಕೀಯ ಒಳನೋಟ ಹಾಗೂ ಪರಿಣಾಮಗಳನ್ನು ಒಳಗೊಂಡಿರುವ ಉಪ ಚುನಾವಣೆಯ ಮತದಾನದ ಸಂಪೂರ್ಣ ವಿವರ ಇಲ್ಲಿ ಲಭ್ಯವಾಗಲಿದೆ.

ಸಾಕಷ್ಟು ರಾಜಕೀಯ ಒಳನೋಟ ಹಾಗೂ ಪರಿಣಾಮಗಳನ್ನು ಒಳಗೊಂಡಿರುವ ಉಪ ಚುನಾವಣೆಯ ಮತದಾನದ ಸಂಪೂರ್ಣ ವಿವರ ಇಲ್ಲಿ ಲಭ್ಯವಾಗಲಿದೆ.

ಕ್ಷೇತ್ರವಾರು ಮತದಾರರ ಆಸಕ್ತಿ, ಆಯಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಮಾನಾಂತರವಾಗಿ ನಡೆಯುವ ಬೆಳವಣಿಗೆಗಳು, ಪ್ರಮುಖರ ಮತದಾನ- ಪ್ರತಿಕ್ರಿಯೆ ಹೀಗೆ ಇಡೀ ದಿನದ ಬೆಳವಣಿಗೆಗಳ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ನಿಮಗೆ ಸಿಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಡಿಸಿಎಂ ಅಶ್ವತ್ಥನಾರಾಯಣ, ಮೈಸೂರು ಐಜಿಪಿಗೆ ಚುನಾವಣಾ ಆಯೋಗ ನೋಟಿಸ್

Thu Dec 5 , 2019
Source Credit Oneindia.com Pin it Email https://nirantharanews.com/karnataka-by-election-2019-polling-live-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6-%e0%b2%89%e0%b2%aa-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be/#Wg== Karnataka oi-Amith | Published: Thursday, December 5, 2019, 0:30 [IST] ಬೆಂಗಳೂರು, ಡಿಸೆಂಬರ್ 5: ಮಂಡ್ಯದ ಕೆಆರ್ ಪೇಟೆಯ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ ಮಾಡಲಾಗುತ್ತಿದೆ. ಇದಕ್ಕೆ ಮೈಸೂರು ಐಜಿಪಿ ನೆರವು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಮೈಸೂರು ಐಜಿಪಿ ವಿಪುಲ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ರಾಜ್ಯ ಚುನಾವಣಾ ಆಯೋಗದಿಂದ ಬುಧವಾರ ಕಾರಣ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links