Exclusive Interview : ‘ಕ್ಲೋಸ್ ಟು ದಿ ಬೋನ್’ ಪುಸ್ತಕ ಬರೆದ ‘ಯುವರಾಜ’ ನಟಿ

Source Credit Filmibeat.com

ಬೆಂಗಳೂರು ಸಾಕ್ಷರತಾ ನಗರ

ಬೆಂಗಳೂರಿನ ತಮ್ಮ ಪ್ರೀತಿ ಬಗ್ಗೆ ಹೇಳುತ್ತಾ ಲೀಸಾ ರೇ ತಮ್ಮ ಮಾತು ಶುರು ಮಾಡಿದರು. ಬೆಂಗಳೂರು ಲೀಸಾ ರೇಗೆ ಬಹಳ ಇಷ್ಟವಂತೆ. ”ನಾನು ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದು, ತುಂಬ ಉತ್ಸುಕಳಾಗಿದ್ದೇನೆ. ಇದು ಒಂದು ರೀತಿ ಶಕ್ತಿ ನೀಡುವ ವಾತಾವರಣ. ನಾನು ಒಬ್ಬ ಓದುಗಳಾಗಿದ್ದು, ಬೆಂಗಳೂರು ಸಾಕ್ಷರತಾ ನಗರ. ಹಾಗಾಗಿ ಇಷ್ಟ” ಎಂದಿದ್ದಾರೆ.

ಪುಸ್ತಕದಲ್ಲಿ ಏನಿಲ್ಲ ಅಂತ ಹೇಳುತ್ತೇನೆ

ತಮ್ಮ ಮೊದಲ ಪುಸ್ತಕದ ಬಗ್ಗೆಯ ಪ್ರಶ್ನೆಗೆ ಉತ್ತರ ನೀಡಿದ ಲೀಸಾ ರೇ ಪುಸ್ತಕದಲ್ಲಿ ಏನು ಇಲ್ಲ ಎನ್ನುವುದರ ಬಗ್ಗೆ ಮೊದಲು ನಾನು ಹೇಳುತ್ತೇನೆ. ಎಂದು ವಿವರಿಸಿದರು. ”ಇದು ಕ್ಯಾನ್ಸರ್ ನೆನಪುಗಳ ಬಗ್ಗೆ ಇರುವ ಪುಸ್ತಕವಲ್ಲ. ಒಬ್ಬ ಸ್ಟಾರ್ ಬಯೋಗ್ರಾಫಿ ಅಲ್ಲ. ಇದು ಮನಸ್ಸಿನ ಪ್ರವಾಸ ಕಥನ. ಒಬ್ಬ ಯುವತಿಯ ಯಶಸ್ಸು, ಸೋಲು, ಕನಸು, ಭರವಸೆಯ ಬಗ್ಗೆ ಪುಸ್ತಕ ಇದೆ.” ಎಂದು ತಿಳಿಸಿದರು.

ಲೇಖಕಿಯಾಗಿ ರೂಪುಗೊಂಡಿರುವ ಲೀಸಾ

ಪುಸ್ತಕದ ಲೇಖಕಿಯಾಗಿ ಹೊಸ ಜರ್ನಿ ಶುರು

ಲೇಖಕಿಯಾಗಿ ಹೊಸ ಜರ್ನಿ ಶುರು ಮಾಡುತ್ತಿದ್ದು, ”ನನಗೆ ಓದುವುದು ಮತ್ತು ಬರೆಯುವುದರ ಬಗ್ಗೆ ಆಸಕ್ತಿ ಇತ್ತು. ಇದೇ ಪುಸ್ತಕ ಬರೆಯುವ ಸ್ಫೂರ್ತಿ ನೀಡಿತು. ಪುಸ್ತಕದಲ್ಲಿ ಹಾಸ್ಯ ಕೂಡ ಬೆರೆತಿದ್ದು, ಅದು ಓದುಗರಿಗೆ ತಲುಪುತ್ತದೆ ಎನ್ನುವ ನಂಬಿಕೆ ಇದೆ. ನಮ್ಮ ಹಿಂದೆ ಇರುವ ಮುಖವಾಡವನ್ನು ತೆಗೆದು ಹಾಕುವ ಪ್ರಯತ್ನ ಈ ಪುಸ್ತಕದಲ್ಲಿ ಇದೆ. 16ನೇ ವಯಸ್ಸಿನಲ್ಲಿಯೇ ಕ್ಯಾಮರಾ ಮುಂದೆ ಬಂದ ನಾನು ಇಲ್ಲಿ ಅನೇಕ ವಿಷಯಗಳನ್ನು ಹೇಳಿದ್ದೇನೆ.” ಎಂದರು.

‘ಕ್ಲೋಸ್ ಟು ದಿ ಬೋನ್’ ಶೀರ್ಷಿಕೆ ಬಗ್ಗೆ

ಪುಸ್ತಕದ ಶೀರ್ಷಿಕೆ ‘ಕ್ಲೋಸ್ ಟು ದಿ ಬೋನ್’ ಏಕೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಲೀಸಾ ರೇ, ತಾನು ಮೂಳೆ ಕ್ಯಾನ್ಸರ್ ನಿಂದ ಬಳಲಿದ್ದು, ‘ಕ್ಲೋಸ್ ಟು ದಿ ಬೋನ್’ ಟೈಟಲ್ ಅದಕ್ಕೆ ಹೋಲಿಕೆ ಆಗುತ್ತಿದೆ ಎಂದರು. ಆದರೆ, ಅದರ ಜೊತೆಗೆ ನಮ್ಮ ಸುತ್ತಲೂ ನಡೆಯುವ ಎಲ್ಲಾ ರಕ್ಷಾ ಕವಚಗಳನ್ನು ತೆಗೆದು ಹಾಕುವುದರ ಬಗ್ಗೆಯೂ ಪುಸ್ತಕದಲ್ಲಿ ಹೇಳಿದ್ದು, ಈ ಹೆಸರು ಇಟ್ಟೆ. ಎಂದು ವಿವರಿಸಿದರು.

Source Credit Filmibeat.com

Niranthara News

Leave a Reply

Your email address will not be published. Required fields are marked *

Next Post

ಬಾಬರಿ ಮಸೀದಿ ಧ್ವಂಸ; ಹರಕೆಯ ಕುರಿ ಪಿ.ವಿ.ಎನ್

Sat Nov 16 , 2019
Source Credit Vishwavani.news ಡಿಸೆಂಬರ್ 6, 1992ರ ಬೆಳಗ್ಗೆೆ 7 ಗಂಟೆಗೆ ಎದ್ದು ವಾಕಿಂಗ್ ಮಾಡಿ ಕುಳಿತಿದ್ದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ್‌ರಾವ್ ದೈನಂದಿನ ಪತ್ರಿಿಕೆಗಳನ್ನು ಓದುತ್ತಿಿದ್ದರು. ಅಂದು ಎಲ್ಲಾಾ ಪತ್ರಿಿಕೆಗಳಲ್ಲೂ ಸುಮಾರು ಎರಡು ಲಕ್ಷಕ್ಕಿಿಂತ ಅಧಿಕ ವಿಎಚ್‌ಪಿ ಕಾರ್ಯಕರ್ತರು ಉತ್ತರ ಪ್ರದೇಶದ ಆಯೋಧ್ಯೆೆಯ ಬಾಬರಿ ಮಸೀದಿ ಬಳಿ ಜಮಾಯಿಸುತ್ತಿಿದ್ದಾಾರೆಂಬ ಸುದ್ದಿ ತಿಳಿಯಿತು. ಈ ಮೊದಲೇ ತುಸು ಖಿನ್ನತೆಗೆ ಒಳಗಾಗಿದ್ದ ನರಸಿಂಹರಾವ್ ಅವರಿಗೆ ಬರಸಿಡಿಲು ಬಡೆದಂತಾಗಿ ಒಂದೆಡೆ ಕುಳಿತಿರುತ್ತಾಾರೆ. ಏನು ಮಾಡಬೇಕೆಂಬುದು ತೋಚದೆ ಯೋಚಿಸುತ್ತ ಉದ್ವೇಗದಲ್ಲಿಯೇ ತಮ್ಮ ಬೆಳಗಿನ ಚಟುವಟಿಕೆಗಳನ್ನು ಮುಗಿಸುತ್ತಾಾರೆ. ತಮ್ಮ ಆಫೀಸ್‌ನಲ್ಲಿಯೇ ಎಲ್ಲವನ್ನೂ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links