Exclusive Interview: ಕನ್ನಡದಲ್ಲಿ ಅತಿ ಹೆಚ್ಚು ಬೇಡಿಕೆಯ ಸ್ವಿಲ್ ಫೋಟೋಗ್ರಾಫರ್ ಇವರೇ

Source Credit Filmibeat.com

ಸಿನಿಮಾಗಾಗಿ ಸರ್ಕಾರಿ ಕೆಲಸ ಬಿಟ್ಟೆ

”ನನ್ನ ಹೆಸರು ರಾಘವೇಂದ್ರ ಬಿ ಕೋಲಾರ. ಕೋಲಾರದ ಒಂದು ಹಳ್ಳಿಯವನು. ಬಿಎಂಟಿಸಿಯಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿದೆ. ಆದರೆ, ಸಿನಿಮಾಗೆ ಬರುವ ಆಸೆ ತುಂಬ ಇತ್ತು. ಆಗ ನಮ್ಮ ಅಣ್ಣ ಸೆಟ್ ಕೆಲಸಕ್ಕೆ ಸೇರಿಸಿದರು. 2008ರಲ್ಲಿ ಸೀರಿಯಲ್ ಗೆ ಕಸ ಹೊಡೆಯಲು ಸೇರಿಕೊಂಡು, ಅಲ್ಲಿಂದ ನನ್ನ ಚಿತ್ರರಂಗದ ಜರ್ನಿ ಶುರು ಮಾಡಿದೆ. ‘ಮುಗಿಲು’ ನನ್ನ ಮೊದಲ ಧಾರಾವಾಹಿ. ಆಗೆಲ್ಲ 30 ರಿಂದ 40 ರೂಪಾಯಿ ಸಿಗುತ್ತಿತ್ತು ಅಷ್ಟೇ.”

‘ಮನಸಾರೆ’ಯಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದೆ

”ಹಾಗೆ ಕೆಲಸ ಮಾಡುತ್ತಾ ಅದೇ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕನಾದೆ. ಆ ಧಾರಾವಾಹಿ ಮುಗಿದ ನಂತರ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಆದರೂ ಸಿನಿಮಾ ಬಿಟ್ಟು ಇರಲು ನನಗೆ ಆಗಲಿಲ್ಲ. ಫೋಟೋಗ್ರಫಿ ಕೋರ್ಸ್ ಮಾಡಿಕೊಂಡು, ಒಬ್ಬ ಫೋಟೋಗ್ರಾಫರ್ ಬಳಿ ಕೆಲಸಕ್ಕೆ ಸೇರಿದೆ. ‘ಮನಸಾರೆ’ ಸಿನಿಮಾಗೆ ನಾನೇ ಫೋಟೋಗ್ರಾಫಿ ಮಾಡಿದೆ. ಆ ಸಿನಿಮಾದ ಪೋಸ್ಟರ್ ಗಳು ನನಗೆ ಒಳ್ಳೆಯ ಹೆಸರು ತಂದು ಕೊಟ್ಟಿತು.”

ಯಶ್ ರೊಂದಿಗೆ 14 ಸಿನಿಮಾಗಳು

”ಮನಸಾರೆ ನಂತರ ಪಂಚರಂಗಿ, ‘ಜಂಗ್ಲಿ’ ಯೋಧ, ಡ್ರಾಮ, ಬಹದ್ದೂರ್, ಭರ್ಜರಿ, ಕೆಂಡಸಂಪಿಗೆ, ರಾಜಕುಮಾರ, ಯುವರತ್ನ ಹೀಗೆ ಸಿನಿಮಾ ಮಾಡುತ್ತಿದ್ದೇನೆ. ಯಶ್ ಅಣ್ಣ ಜೊತೆಗೆ ‘ಲಕ್ಕಿ ಸಿನಿಮಾದಿಂದ ಹಿಡಿದು ‘ಕೆಜಿಎಫ್ 2’ ವರೆಗೆ ಸಿನಿಮಾಗಳು 14 ಸಿನಿಮಾಗಳು ಕೆಲಸ ಮಾಡಿದ್ದೇನೆ. ಶರಣ್ ಸರ್ ಅವರ 7 ಚಿತ್ರಕ್ಕೆ ವರ್ಕ್ ಮಾಡಿದ್ದೇನೆ. ಇಲ್ಲಿವರೆಗೆ 42ಕ್ಕೂ ಹೆಚ್ಚು ಸಿನಿಮಾಗಳಾಗಿವೆ. ಅದರ ಜೊತೆಗೆ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’, ‘ಡ್ರಾಮಾ’, ‘ಅಧ್ಯಕ್ಷ’, ‘ಮಾಸ್ಟರ್ ಪೀಸ್’ ಸಿನಿಮಾಗಳಲ್ಲಿ ನಟನೆ ಮಾಡಿದ್ದೇನೆ.”

ನನ್ನ ಜೀವನ ಬದಲಿಸಿದ್ದು ‘ಜ್ಯೂಸ್ ಕುಡಿತಿಯಾ’ ಡೈಲಾಗ್

”ಇಷ್ಟೆಲ್ಲ ಇದ್ದರೂ ‘ಜ್ಯೂಸ್ ಕುಡಿತಿಯಾ’ ಡೈಲಾಗ್ ನನ್ನ ಜೀವನವನ್ನು ಬದಲಿಸಿದೆ. ಎಲ್ಲೇ ಹೋದರು ಜನ ಗುರುತಿಸುತ್ತಾರೆ. ಏನೇ ಸಂಭ್ರಮ ಇದ್ದರೂ ಆ ಫೋಟೋ ಹಾಕಿ ಟ್ರೋಲ್ ಮಾಡುತ್ತಾರೆ. ಖುಷಿಯಾಗುತ್ತದೆ. ನಾನು ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದು ‘ಮನಸಾರೆ’ ಸಿನಿಮಾದಲ್ಲಿ. ‘ಮನಸಾರೆ’ ಸಿನಿಮಾದಲ್ಲಿ ಫೋಟೋಗ್ರಾಫರ್ ದೃಶ್ಯವೇ ಇತ್ತು. ಈ ಸಣ್ಣ ದೃಶ್ಯವನ್ನು ನೀನೇ ಮಾಡೋ ಅಂತ ಭಟ್ ಸರ್ ಹೇಳಿದರು.”

ಈ ಮಟ್ಟಿಗೆ ಹಿಟ್ ಆಗುತ್ತೆ ಅಂತ ಗೊತ್ತಿರಲಿಲ್ಲ

”ರಾಮಾಚಾರಿ ಸಿನಿಮಾ ಮಾಡಿದ್ದರಿಂದ ‘ಮಾಸ್ಟರ್ ಪೀಸ್’ ಸಿನಿಮಾ ಸಿಕ್ತು. ಜ್ಯೂಸ್ ಕುಡಿತಿಯಾ ಅಂತ ಒಂದು ಡೈಲಾಗ್ ಇದೆ, ಫೋರ್ಸ್ ಆಗಿ ಡೈಲಾಗ್ ಹೇಳು.. ಚೆನ್ನಾಗಿ ಮಾಡು, ಬೇರೆ ತರ ಮಾಡು ಅಂದ್ರು. ಹತ್ತು ಸಲ ಪ್ರಾಕ್ಟಿಸ್ ಮಾಡಿದೆ. ಹೇಗೆ ಮಾಡಲಿ ಅಂತ ತೋರಿಸಿದೆ. ಕೊನೆಗೆ ಜೋರಾಗಿ ಮಾಡಿದೆ. ಆ ಡೈಲಾಗ್ ಈ ಮಟ್ಟಿಗೆ ಹಿಟ್ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ.”

ಹೀರೋ ಆಗುವ ಅವಕಾಶವೂ ಬಂತು

”ಜ್ಯೂಸ್ ಕುಡಿತಿಯಾ ಡೈಲಾಗ್ ಪಾಪುಲರ್ ಆದ ಮೇಲೆ ಹೀರೋ ಆಗುವ ಅವಕಾಶ ಬಂತು. ಆದರೆ, ನಾನು ಒಬ್ಬ ಟೆಕ್ನಿಷಿಯನ್ ಇಷ್ಟ ಬೇಗ ಹೀರೋ ಆಗೋದು ಬೇಡ ಅಂತ ಸುಮ್ಮನಾದೆ. ಜ್ಯೂಸ್ ಕುಡಿತಿಯಾ ಅಂತ ಒಂದು ಹಾಡು ಬಂತು. ನಾಗರಬಾವಿಯಲ್ಲಿ ಒಂದು ಜ್ಯೂಸ್ ಅಂಗಡಿ ಕೂಡ ಓಪನ್ ಆಯ್ತು. ನಾನು ಅಪ್ಪು ಸರ್ ಅಭಿಮಾನಿ. ನನ್ನ ಅದೃಷ್ಟಕ್ಕೆ ಅವರ ಜೊತೆಗೆ ಕೆಲಸ ಮಾಡಿದೆ. ನಿರ್ದೇಶಕ ಕೃಷ್ಣ ಸರ್ ನನ್ನ ಗುರುಗಳು.

ಡೈರೆಕ್ಟರ್ ಆಗುವ ಆಸೆ ಇದೆ

”ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವ ಆಸೆಯಿಂದ ಚಿತ್ರರಂಗಕ್ಕೆ ಬಂದೆ. ಆದರೆ, ಇಲ್ಲಿಯವರೆಗೆ ಅದನ್ನು ಬಿಟ್ಟು ಎಲ್ಲವನ್ನು ಮಾಡುತ್ತಿದ್ದೇನೆ. ಒಳ್ಳೆಯ ಕಥೆ ಇದೆ. ನಿರ್ಮಾಪಕರನ್ನು ಸಂಪರ್ಕ ಮಾಡುತ್ತಿದ್ದೇನೆ. ಎಲ್ಲ ಓಕೆ ಆದ್ರೆ ಆ ಚಿತ್ರದ ಶುರು ಆಗುತ್ತೆ. ಅದರೊಂದಿಗೆ ‘ಚತುಷ್ಪತ’ ಎಂಬ ಸಿನಿಮಾಗೆ ನಾನೇ ಸಿನಿಮಾಟೋಗ್ರಾಫಿ ಮಾಡುತ್ತಿದ್ದೇನೆ. ಸದ್ಯ ‘ಭರತ ಬಾಹುಬಲಿ’ ಸಿನಿಮಾದಲ್ಲಿಯೂ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.”

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಖಳನಟ ಗಣೇಶ್ ಕೇಸರ್ಕರ್ ಪರದೆ ಮೇಲೆ ಸದಾ ಪೊಲೀಸ್ ಆಫೀಸರ್..!

Thu Jan 9 , 2020
Source Credit Filmibeat.com Pin it Email https://nirantharanews.com/exclusive-interview-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%a4%e0%b2%bf-%e0%b2%b9%e0%b3%86%e0%b2%9a%e0%b3%8d%e0%b2%9a%e0%b3%81/#Z2FuZXNoLTEtMTU ನಟನೆಯ ಮೇಲಿನ ಆಸಕ್ತಿ ಮೂಡಿದ್ದು ಹೇಗೆ? ನನ್ನದು ಮೂಲತಃ ಕೊಳ್ಳೇಗಾಲ. ಸ್ಕೂಲ್ ಡೇ ಫಂಕ್ಷನ್ ಟೈಮಲ್ಲಿ ನನ್ನನ್ನು ಹುಡುಗಿ ಪಾತ್ರಕ್ಕೆ ಆಯ್ದುಕೊಂಡಿದ್ದರು. ಆದರೆ ಸಂಭಾಷಣೆಯ ರೀತಿನೋಡಿ ನಾಟಕದ ನಾಯಕನನ್ನೇ ಮಾಡಿ ಬಿಟ್ಟರು. ಇಂದಿಗೂ ಆ ನಾಟಕದ ಹೆಸರು ‘ಬೇಸ್ತು ಬಿದ್ದ ಬಾವ’ ಎನ್ನುವುದು ಸರಿಯಾಗಿ ನೆನಪಿಸಿದೆ ನನಗೆ. ಪ್ರೌಢಶಾಲೆಯಲ್ಲೆಲ್ಲ ನಾಟಕ ನಟನೆ ಮುಂದುವರಿಯಿತು. ಎಸ್ ಎಸ್ ಎಲ್ ಸಿಯಲ್ಲಿದ್ದಾಗ ನಡೆದ ಅಂತರರಾರಾಜ್ಯ ನಾಟಕ ಸ್ಫರ್ಧೆಯಲ್ಲಿ ನಾನು ನಟಿಸಿದ್ದ ನಾಟಕಕ್ಕೆ ಪ್ರಥಮ ಸ್ಥಾನ ದೊರಕಿತ್ತು. ಜೊತೆಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links