Source Credit Oneindia.com Mandya lekhaka-Lavakumar b m | Updated: Saturday, January 11, 2020, 12:52 [IST] ಮಂಡ್ಯ, ಜನವರಿ 11: ರಾಜಕೀಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ. ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿರವರು ಬಿಡುಗಡೆ ಮಾಡಿರುವ ವಿಡಿಯೋ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಿ.ಡಿಗಳು ರಾಜಕೀಯದಲ್ಲಿರುವ ಹಲವರಿಗೆ ತಮ್ಮ ರಾಜಕೀಯದ ಅಸ್ತಿತ್ವದ ಸ್ವತ್ತುಗಳಾಗಿ ಪರಿವರ್ತನೆಯಾಗಿವೆ. ಯಾವುದೋ ಫೇಕ್ ಸಿಡಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡೋದು. ಆಮೇಲೆ […]

Source Credit Oneindia.com Mandya oi-Lekhaka | Published: Thursday, January 2, 2020, 12:18 [IST] ಮಂಡ್ಯ, ಜನವರಿ 02: ರಸ್ತೆ ಕಾಮಗಾರಿ, ವಾಸ್ತು ಕಾರಣದಿಂದಾಗಿ ದೊಡ್ಡ ದೊಡ್ಡ ಮರ, ದೇವಸ್ಥಾನಗಳನ್ನು ಅಡಿಪಾಯದ ಸಮೇತ ಲಿಫ್ಟ್ ಮಾಡುವುದನ್ನು ಕೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬರು ತಮ್ಮ ಮನೆಯನ್ನೇ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಬೈಪಾಸ್ ನಿರ್ಮಾಣದ ಕಾರಣದಿಂದಾಗಿ ಮನೆಯೊಂದನ್ನು ಒಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಹೀಗಾಗಿ ಆ ತನ್ನ ಕನಸಿನ ಮನೆಯನ್ನು ಉಳಿಸಿಕೊಳ್ಳಲೇಬೇಕೆಂದು 20 ಲಕ್ಷ ರೂ. ಖರ್ಚು ಮಾಡಿ ಸ್ಥಳಾಂತರಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ನೆರೆ ತಪ್ಪಿಸಿಕೊಳ್ಳಲು […]

Source Credit Oneindia.com Mandya oi-Puttappa Koli | Published: Wednesday, December 25, 2019, 12:30 [IST] ಮಂಡ್ಯ, ಡಿಸೆಂಬರ್ 25: ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರು ಬಿಜೆಪಿಯಿಂದ 15 ಕೋಟಿ ರೂ, ಪಡೆದಿದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ರಾಜಾಹುಲಿ ಆರೋಪಿಸಿದ್ದಾರೆ. ಮಂಡ್ಯ ಜೆಡಿಎಸ್ ನ ಭದ್ರಕೋಟೆಯಾಗಿದೆ. ಆದರೂ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಗೆ ಸೋಲಾಗಿದ್ದು ಅಚ್ಚರಿಯನ್ನುಂಟು ಮಾಡಿದೆ ಎಂದು ದಿನೇಶ್ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ. ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಸೋಲಿಗೆ “ಒಳೇಟು” ಕಾರಣವಂತೆ […]

Source Credit Oneindia.com Mandya lekhaka-Lavakumar b m | Updated: Saturday, December 21, 2019, 15:48 [IST] ಮಂಡ್ಯ, ಡಿಸೆಂಬರ್ 21: ಉಪಚುನಾವಣೆ ಬಳಿಕ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲುವಿಗೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತ ಕೆರಗೋಡು ತಮ್ಮಣ್ಣ ಎಂಬುವರು ಎಚ್.ಡಿ. ದೇವೇಗೌಡ ಕುಟುಂಬದ ಕುರಿತಂತೆ ಆಕ್ರೋಶದ ಮಾತುಗಳನ್ನಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಯಕರು ತೀವ್ರ ಮುಜುಗರಕ್ಕೊಳಗಾಗಿದ್ದರು. ಇದೀಗ ಆ ಕುರಿತಂತೆ ಸ್ಪಷ್ಟನೆ ನೀಡಿರುವ ಕೆರಗೋಡು ತಮ್ಮಣ್ಣ ಅವರು, “ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್ ಸೋತಿದ್ದಕ್ಕೆ ನನಗೆ ಬೇಸರವಾಗಿ, ಮನನೊಂದು ಎಚ್.ಡಿ. […]

Source Credit Oneindia.com Mandya lekhaka-Lavakumar b m | Updated: Thursday, December 19, 2019, 18:46 [IST] ಮಂಡ್ಯ, ಡಿಸೆಂಬರ್ 19: ಗೆಳತಿಯ ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿ ನಿಂತು ಮದುವೆ ನೋಂದಣಿ ಪತ್ರಕ್ಕೆ ಸಹಿ ಹಾಕಿದ ಕಾರಣಕ್ಕೆ ಯುವತಿಯ ಕುಟುಂಬದವರ ಮೇಲೆ ಹುಡುಗಿ ಮನೆಯವರು ಹಲ್ಲೆ ನಡೆಸಿರುವ ಘಟನೆ ಮದ್ದೂರಲ್ಲಿ ನಡೆದಿದೆ. ಮದ್ದೂರು ತಾಲೂಕು ಮರಳಿಗ ಗ್ರಾಮದ ಹರೀಶ ಮತ್ತು ಶಶಿಕಲಾ ಎಂಬುವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಡೆದ ಮದುವೆಯ ನೋಂದಣಿ ಪತ್ರಕ್ಕೆ ಶಶಿಕಲಾ ಸ್ನೇಹಿತೆ ಸಹನಾ […]

Source Credit Oneindia.com ಎಚ್ಚೆತ್ತುಕೊಳ್ಳುತ್ತಿರುವ ಜೆಡಿಎಸ್ ನಾಯಕರು ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಗೆ ಮೊದಲ ಬಾರಿಗೆ ಬಿಜೆಪಿ ಲಗ್ಗೆಯಿಡುತ್ತಿದ್ದಂತೆಯೇ ಜೆಡಿಎಸ್ ನಾಯಕರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಈಗಾಗಲೇ ಹಾಲಿ ಶಾಸಕ ಮಾಜಿ ಸಚಿವರೂ ಆಗಿರುವ ಡಿ.ಸಿ.ತಮ್ಮಣ್ಣನವರು ತಮ್ಮ ನಿವಾಸದಲ್ಲಿಯೇ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿ ಅವರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಕೆ.ಆರ್. ಪೇಟೆಯಲ್ಲಿ ಬಿಜೆಪಿ ಗೆಲುವಿಗೆ ನಿಜವಾಗಿಯೂ ಕಾರಣವಾಗಿದ್ದೇನು? ಬಿಜೆಪಿಗೆ ಮೊದಲ ಬಾರಿಗೆ ಮಂಡ್ಯದಲ್ಲಿ ಗೆಲುವು ಸಿಕ್ಕಿದೆ. ಇದನ್ನೇ ಮುಂದಿಟ್ಟುಕೊಂಡು ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲಿದ್ದು, ಮುಂದಿನ ದಿನಗಳಲ್ಲಿ […]

Source Credit Oneindia.com Mandya oi-Gururaj S | Updated: Tuesday, December 17, 2019, 17:08 [IST] ಮಂಡ್ಯ, ಡಿಸೆಂಬರ್ 17 : “ಮಂಡ್ಯದ ಜನರು ವಿಶ್ವಾಸದಿಂದ ಅಧಿಕಾರ ಕೊಟ್ಟಿದ್ದಾರೆ. ಜೆಡಿಎಸ್ ಪಕ್ಷವನ್ನು ಬಿಟ್ಟು ಎಚ್. ಡಿ. ಕುಮಾರಸ್ವಾಮಿ ಅವರಿಗೆ ಮೋಸ ಮಾಡುವುದಿಲ್ಲ” ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು. ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಮಂಗಳವಾರ ಹಬ್ಬಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದರು. “ಮಂಡ್ಯದ ಜನರು ವಿಶ್ವಾಸದಿಂದ […]

Source Credit Oneindia.com Mandya lekhaka-Lavakumar b m | Updated: Monday, December 16, 2019, 15:24 [IST] ಮಂಡ್ಯ, ಡಿಸೆಂಬರ್ 16: ಈ ಬಾರಿ ಕೊಡಗು ಸೇರಿದಂತೆ ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾದ ಪರಿಣಾಮ ಕೆ.ಆರ್.ಎಸ್ ಜಲಾಶಯ ಬಹು ಬೇಗ ಭರ್ತಿಯಾಗಿ ಇಂದಿಗೂ ಗರಿಷ್ಠ ಮಟ್ಟವನ್ನು ಕಾಯ್ದುಕೊಂಡು ಬಂದಿದೆ. ಇದರ ಜತೆಗೆ ಹಿಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಮಂಡ್ಯದಲ್ಲಿದ್ದ ಬಹುತೇಕ ಕೆರೆಗಳು ಭರ್ತಿಯಾಗಿವೆ. ಮತ್ತೆ ಕೆಲವು ಕೆರೆಗಳಿಗೆ ನೀರನ್ನು ತುಂಬಿಸಲಾಗಿದೆ. ಈ ನಡುವೆ ಭೀಮಾ ಜಲಾಶಯವನ್ನು ನದಿಯಿಂದ ನೀರು ಹರಿಸುವ […]

Source Credit Oneindia.com Mandya oi-Puttappa Koli | Published: Thursday, December 12, 2019, 14:31 [IST] ಮಂಡ್ಯ, ಡಿಸೆಂಬರ್ 12: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಸಿಎಂ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಮಂಡ್ಯದಲ್ಲಿ ಪ್ರವಾಸ ಕೈಗೊಂಡಿದ್ದರು. ಹೀಗಾಗಿ ಆದಿಚುಂಚನಗಿರಿಗೆ ಹೋದಾಗ ಅವರು ಕಾರಿನಿಂದ ಇಳಿಯುತ್ತಿದ್ದಂತೆ ನಾಗಮಂಗಲ ಜೆಡಿಎಸ್ ಶಾಸಕ ಕಾಲಿಗೆ ಹೂಮಾಲೆ ಹಾಕಿ ಕಾಲಿಗೆ ಎರಗಿದರು. ಈ ಹಿನ್ನೆಲೆಯಲ್ಲಿ […]

Source Credit Oneindia.com Mandya lekhaka-Lavakumar b m | Updated: Tuesday, December 10, 2019, 18:13 [IST] ಮಂಡ್ಯ, ಡಿಸೆಂಬರ್ 10: ಭತ್ತದ ಗದ್ದೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಡಿ.ಹಲಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧನಗೂರು ಅರಣ್ಯವಲಯದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಶಿವಮ್ಮ ಎಂಬುವರ ಜಮೀನಿನಲ್ಲಿ ಭತ್ತ ಬೆಳೆದಿದ್ದು, ಸುಮಾರು ಆರು ವರ್ಷದ ಕಾಡಾನೆಯೊಂದು ಅರಣ್ಯದಿಂದ ಭತ್ತದ ಫಸಲನ್ನು ತಿನ್ನುವ ಸಲುವಾಗಿ ಬಂದ ಸಂದರ್ಭ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಚಿತ್ರದುರ್ಗ; ವಾರದಿಂದ ಬೀಡುಬಿಟ್ಟಿದ್ದ ಒಂಟಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links