Source Credit TheMangaloreMirror.in ಸಿಎಎ ಅಪಪ್ರಚಾರಕ್ಕೆ ಪೊಲಿಯೋ ಲಸಿಕೆ ಕಾರ್ಯಕ್ರಮವನ್ನು ತಳಕು ಹಾಕಿದ ದುಷ್ಕರ್ಮಿಗಳು ಮಂಗಳೂರು ಜನವರಿ 18:ಕೇಂದ್ರ ಸರಕಾರದ ಎನ್.ಆರ್.ಸಿ, ಸಿಎಎ ಕಾನೂನು ವಿರುದ್ಧ ಯಾವ ರೀತಿಯ ಅಪಪ್ರಚಾರ ನಡೆಯುತ್ತಿದೆ ಎಂದರೆ ಇದೀಗ ವೈದ್ಯರನ್ನೂ ಕೇಂದ್ರ ಸರಕಾರದ ಎನ್.ಆರ್.ಸಿ ದಾಖಲೆ ಸಂಗ್ರಹಿಸುವ ಸಿಬ್ಬಂದಿಗಳು ಎನ್ನುವ ಹಂತಕ್ಕೆ ತಲುಪಿದೆ. ಜನವರಿ 19 ದೇಶದೆಲ್ಲೆಡೆ ಪೋಲಿಯೋ ಲಸಿಕೆ ಹಾಕುವ ದಿನವಾಗಿದ್ದು, ಈ ದಿನದಂದೇ ಕೇಂದ್ರ ಸರಕಾರ ತಮ್ಮ ದಾಖಲೆಗಳನ್ನು ವೈದ್ಯರ ಮೂಲಕ ಪಡೆದುಕೊಳ್ಳಲಿದೆ ಎನ್ನುವ ಅಪಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಮುಖ್ಯವಾಗಿ ಮುಸಲ್ಮಾನ ಬಂಧುಗಳಲ್ಲಿ ಈ […]

Source Credit TheMangaloreMirror.in ಸೂಲಿಬೆಲೆ ತೇಜಸ್ವಿ ಮಾತ್ರ ಅಲ್ಲ ನನ್ನ ಕೊಲೆಗೂ ಸ್ಕೇಚ್ ಹಾಕಲಾಗಿತ್ತು – ಯು.ಟಿ ಖಾದರ್ ಮಂಗಳೂರು ಜನವರಿ 17: SDPI ಕಾರ್ಯಕರ್ತರಿಂದ ಚಿಂತಕ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್ ಪ್ರಕರಣಕ್ಕೆ ಕುರಿತಂತೆ ಮಾಜಿ ಸಚಿವ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ನನ್ನ ಮೇಲೆ ಕೂಡಾ ಸ್ಕೆಚ್ ಹಾಕಿದ್ದಾರೆ ಎಂಬ ಮಾಹಿತಿಯನ್ನ ಪೊಲೀಸ್ ಇಲಾಖೆ ನೀಡಿತ್ತು, ಅಲ್ಲದೆ ನನಗೆ ಭಧ್ರತೆ ಕೊಡುವ ಬಗ್ಗೆ ಹೇಳಿದ್ದರು. ಸಮಾಜದ್ರೋಹಿ ಶಕ್ತಿಗಳನ್ನು ಯಾರೂ ಕೂಡಾ ಬೆಂಬಲಿಸಲ್ಲ. ಕಾನೂನು […]

Source Credit TheMangaloreMirror.in ದ.ಕ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿರುದ್ದ ಕ್ರಮಕ್ಕೆ ಅಮಿತ್ ಶಾ ಗೆ ಪತ್ರ ಬಂಟ್ವಾಳ ಜನವರಿ17: ದಕ್ಷಿಣಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಿಎಎ ಕಾಯ್ದೆ ವಿರುದ್ದ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿಸಿ ಕೇಂದ್ರ ಗೃಹಸಚಿವರಿಗೆ ಪತ್ರ ಬರೆಯಲಾಗಿದೆ. ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ್ ಪ್ರಭು ಗೃಹ ಸಚಿವ ಅಮಿತ್‌ ಶಾಗೆ ಪತ್ರ ಬರೆದಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ಧ […]

Source Credit TheMangaloreMirror.in ಮಂಗಳೂರಿನ ಸಿಎಎ ವಿರುದ್ದ ಪ್ರತಿಭಟನೆಗೆ 100 ಕ್ಕೂ ಅಧಿಕ ದೋಣಿಯಲ್ಲಿ ಆಗಮಿಸಿದ ಜನರು ಮಂಗಳೂರು ಜನವರಿ 15: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ದೋಣಿ ಮೂಲಕ ಜನರು ಆಗಮಿಸಿದ್ದಾರೆ. ಉಳ್ಳಾಲದ ಕೋಟೇಪುರದಿಂದ ಅಡ್ಯಾರ್ ಕಣ್ಣೂರುವರೆಗೆ ನದಿಯಲ್ಲಿ 100 ದೋಣಿಯಲ್ಲಿ ಬೃಹತ್ ರ್‍ಯಾಲಿ ಮೂಲಕ ಜನರು ಬಂದಿದ್ದಾರೆ. ಈ ಮೈದಾನ ನೇತ್ರಾವತಿ ನದಿ ತೀರದಲ್ಲಿ ಇರುವುದರಿಂದ ದೋಣಿ ಮೂಲಕ ಕೈಯಲ್ಲಿ ರಾಷ್ಟ್ರಧ್ವಜಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ, ಸಮಾವೇಶದಲ್ಲಿ […]

Source Credit TheMangaloreMirror.in ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರತಿಭಟನೆಯ ಪಾಸ್ ಕಾಂಗ್ರೇಸ್ ಕಛೇರಿಯಲ್ಲಿ…..! ಮಂಗಳೂರು, ಜನವರಿ 15: ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಮಂಗಳೂರಿನ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ನಡೆಯಲಿರುವ ಕೇಂದ್ರ ಸರಕಾರದ ಸಿಎಎ, ಎನ್.ಆರ್.ಸಿ ವಿರೋಧಿ ಪ್ರತಿಭಟನೆಯ ಪಾಸ್ ಮಂಗಳೂರಿನ ಕಾಂಗ್ರೇಸ್ ಕಛೇರಿಯಲ್ಲಿ ವಿತರಣೆಯಾಗುತ್ತಿರುವುದು ಭಾರೀ ಗೊಂದಲಕ್ಕೆ ಕಾರಣವಾಗಿದೆ. ಈ ಕಾನೂನಿನ ವಿರುದ್ಧ ಕಾಂಗ್ರೇಸ್ ಪಕ್ಷ ನೇರವಾಗಿ ಹೋರಾಟಕ್ಕೆ ಇಳಿಯದಿದ್ದರೂ, ಪರೋಕ್ಷವಾಗಿ ಈವರೆಗೆ ಪ್ರತಿಭಟನೆಗೆ ಬೆಂಬಲವನ್ನು ಸೂಚಿಸಿದೆ. ಆದರೆ ಪಕ್ಷದ ಕಛೇರಿಯನ್ನು ಈ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗೆ ಬಳಸಿಕೊಂಡಿಲ್ಲ. ಆದರೆ ಇಂದು […]

Source Credit TheMangaloreMirror.in ಭಟ್ಕಳದಿಂದ ಉಡುಪಿಗೆ ಬಂದು ಪೇಜಾವರ ಶ್ರೀಗಳಿಗೆ ಶೃದ್ದಾಂಜಲಿ ಸಲ್ಲಿಸಿದ ಮುಸ್ಲೀಂ ಬಾಂಧವರು ಉಡುಪಿ ಜನವರಿ 15: ಉಡುಪಿಯಲ್ಲೀಗ ರಥೋತ್ಸವಗಳ ಸಂಭ್ರಮ, ಮಕರ ಸಂಕ್ರಾಂತಿ ಹಿನ್ನಲೆ ನಿನ್ನೆ ಉಡುಪಿಯಲ್ಲಿ ವೈಭವದ ಚೂರ್ಣೋತ್ಸವ ನಡೆಯಿತು. ಚೂರ್ಣೋತ್ಸವ ಅಂಗವಾಗಿ ರಾತ್ರಿ 3 ತೇರ ಎಳೆದು ಉತ್ಸವ ನಡೆಯಿತು ಪರ್ಯಾಯ ಫಲಿಮಾರು ಮಠಾಧೀಶರ ಜೊತೆ ಇತರ ಮಠಾಧೀಶರು ಉಪಸ್ಥಿತರಿದ್ದರು. ನಿನ್ನೆ ನಡೆದ ಮಕರ ಸಂಕ್ರಾಂತಿ ಉತ್ಸವದ ವೇಳೆ ಒಂದು ವಿಶಿಷ್ಟ ಘಟನೆ ನಡೆದಿದೆ. ಸಾವಿರಾರು ಜನರು ಸೇರಿದ್ದ ಜಾತ್ರೆಯಲ್ಲಿ ಒಂದಷ್ಟು ಮುಸ್ಲೀಂ ಬಂಧುಗಳು ಕಾಣಿಸಿಕೊಂಡರು. ಪೇಜಾವರ […]

Source Credit TheMangaloreMirror.in ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಕೋಟಿ ಮೌಲ್ಯದ 5 ಕೆಜಿ ಚಿನ್ನ ವಶಕ್ಕೆ ಮಂಗಳೂರು ಜನವರಿ 15: ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2 ಕೋ.ರೂ. ಮೌಲ್ಯದ 5 ಕೆ.ಜಿ. ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಂಪನಿಯೊಂದರ ನಿರ್ದೇಶಕ ಸಹಿತ ಇಬ್ಬರನ್ನು ಡಿಆರ್‌ ಐ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಉಡುಪಿಯ ಸ್ವರೂಪ್ ಮಿನರಲ್ ರಿಸೋರ್ಸಸ್ ಕಂಪನಿಯ ನಿರ್ದೇಶಕ ಮನೋಹರ್ […]

Source Credit TheMangaloreMirror.in ಉಡುಪಿ : ತಮಿಳುನಾಡು ಪೊಲೀಸ್ ಅಧಿಕಾರಿ ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಶಂಕಿತ ಉಗ್ರರ ಬಂಧನ ಉಡುಪಿ ಜನವರಿ 14: ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಶೂಟೌಟ್ ಮಾಡಿ ಪರಾರಿಯಾಗಿದ್ದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಮಂಗಳೂರು ಹಾಗೂ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ತಮಿಳುನಾಡಿನ ಕೊಯಮತ್ತೂರಿನಿಂದ ತಪ್ಪಿಸಿಕೊಂಡಿದ್ದ ಭಯೋತ್ಪಾದಕರ ಜೊತೆ ನಂಟನ್ನು ಹೊಂದಿದ್ದವರು ಎಂದು ಹೇಳಲಾಗಿದ್ದು, ಇವರ ಬಂಧದನಕ್ಕೆ ಮೂರು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಈ ಶಂಕಿತ ಉಗ್ರರ ಜೊತೆ ನಂಟು ಹೊಂದಿದ್ದ ಇಬ್ಬರು ಆರೋಪಿಗಳನ್ನು […]

Source Credit TheMangaloreMirror.in ಪೌರತ್ವಕಾಯ್ದೆ ಪ್ರತಿಭಟನೆಗೆ ಬಳಸಿದ್ದ ಕುರ್ಚಿ ಸೇರಿದಂತೆ ಮಿನಿ ಲಾರಿಗೆ ಬೆಂಕಿ ಮಂಗಳೂರು ಜನವರಿ 13: ಪೌರತ್ವ ಕಾಯ್ದೆ ವಿರುದ್ದದ ಪ್ರತಿಭಟನೆ ವೇಳೆ, ಪ್ರತಿಭಟನೆಗೆ ಬಳಸಿದ್ದ 2,500 ಕುರ್ಚಿಗಳು ಸೇರಿದಂತೆ ಮಿನಿ ಲಾರಿಗೆ ಬೆಂಕಿ ಬಿದ್ದಿರುವ ಘಟನೆ ಮಂಗಳೂರು ಹೊರ ವಲಯದ ದೇರಳಕಟ್ಟೆ ಸಮೀಪ ನಡೆದಿದೆ. ದೇರಳಕಟ್ಟೆ ಪೌರತ್ವ ಸಂರಕ್ಷಣಾ ಸಮಿತಿಯಿಂದ ನಿನ್ನೆ ಪೌರತ್ವ ಖಾಯ್ದೆ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಲಾಗಿತ್ತು. ರ‍್ಯಾಲಿ ಮುಗಿದ ಬಳಿಕ ಕುರ್ಚಿಗಳನ್ನು ಮಿನಿ ಲಾರಿಗೆ ತುಂಬಿಸಲಾಗಿತ್ತು. ಆದರೆ ಲಾರಿ ಸಮೇತ 2,500 ಕುರ್ಚಿಗಳು ಬೆಂಕಿಗೆ ಆಹುತಿಯಾಗಿದ್ದು, […]

Source Credit TheMangaloreMirror.in ಮೆಸ್ಕಾಂ ಎಟಿಪಿ ಯಂತ್ರದಿಂದ 70 ಸಾವಿರ ದೋಚಿದ ಕಳ್ಳರು ಮಂಗಳೂರು ಜನವರಿ 12: ಮೆಸ್ಕಾಂ ನ ಎಟಿಪಿ ಯಂತ್ರಕ್ಕೆ ಕನ್ನ ಹಾಕಿ 70 ಸಾವಿರ ರೂಪಾಯಿ ನಗದನ್ನು ದೋಚಿರುವ ಘಟನೆ ತೊಕ್ಕೊಟ್ಟುವಿನ ಚೆಂಬುಗುಡ್ಡೆ ಎಂಬಲ್ಲಿ ನಡೆದಿದೆ. ಚೆಂಬುಗುಡ್ಡೆಯ ಮೆಸ್ಕಾಂ ಉಪವಿಭಾಗದಲ್ಲಿ ಈ ಕಳ್ಳತನ ನಡೆದಿದೆ. ಈ ಯಂತ್ರದಲ್ಲಿ 9 ಲಕ್ಷ ರೂಪಾಯಿ ವರೆಗೂ ನಗದು ಇದ್ದು, ಶನಿವಾರ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ಕಳ್ಳರ ಪಾಲಾಗುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links