Source Credit Kannada Prabha Source : UNI ಬಾಗ್ದಾದ್: ಮಧ್ಯ ಬಾಗ್ದಾದ್‌ನ ಭಾರಿ ಭದ್ರತೆಯ ಹಸಿರು ವಲಯದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಬಳಿ ಮೂರು ಕತ್ಯುಶಾ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಮಧ್ಯರಾತ್ರಿ ಮೂರು ರಾಕೆಟ್‌ಗಳು ಹಸಿರು ವಲಯದ ಅಮೆರಿಕ ರಾಯಭಾರಿ ಕಚೇರಿಯ ಬಳಿ ಅಪ್ಪಳಿಸಿವೆ. ಈ ಪ್ರದೇಶದಲ್ಲಿ ಇರಾಕಿನ ಪ್ರಮುಖ ಸರ್ಕಾರಿ ಕಚೇರಿಗಳಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಕ್ಸಿನ್ಹುವಾ ಸುದ್ದಿಸಂಸ್ಥೆಗೆ ತಿಳಿಸಿದರು. ಸಾವು-ನೋವುಗಳ ಬಗ್ಗೆ ತಕ್ಷಣ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಇರಾನ್​​ […]

Source Credit Kannada Prabha Source : AFP ಮಾಸ್ಕೋ: ಸುಡಾನ್ ರಾಜಧಾನಿ ಖಾರ್ಟೌಮ್ ನಲ್ಲಿ ಅಪರಿಚಿತರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಕನಿಷ್ಛ 7 ಮಂದಿ ಸಾವನ್ನಪ್ಪಿದ್ದು, 40 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಸುಡಾನ್ ಆರೋಗ್ಯ ಇಲಾಖೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು,  ಸುಡಾನ್ ರಾಜಧಾನಿ ಖಾರ್ಟೌಮ್ ನ ಶೇಗ್ಲಾ ಪ್ರಾಂತ್ಯದಲ್ಲಿನ ಅಲ್ ಹಜ್ ಯೂಸೆಫ್ ಜಿಲ್ಲೆಯಲ್ಲಿ ಸ್ಫೋಟ ನಡೆದಿದೆ. ಪರಿಣಾಮ ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, 40 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. […]

Source Credit Kannada Prabha Source : PTI ದಾವೂಸ್: ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆ ಬಗ್ಗೆ ಜನ ಅರ್ಥ ಮಾಡಿಕೊಳ್ಳಬೇಕು , ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  ಹೇಳಿದ್ದಾರೆ. ‘ನಮಗೆಲ್ಲರಿಗೂ ಗೊತ್ತಿರುವಂತೆ ಈ ವರ್ಷದ ವಿಶ್ವ ಆರ್ಥಿಕ ವೇದಿಕೆಯ ಆಶಯ ‘ಸುಸ್ಥಿರ ಮತ್ತು ಸಂಯೋಜಿತ ಜಗತ್ತಿಗಾಗಿ ಪಾಲ್ಗೊಳ್ಳುವಿಕೆ’. ಈ ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನದ್ದನ್ನು ನಾವು ಈ ವರ್ಷ ಸಾಧಿಸಲು, ಜನರ ಆದ್ಯತೆಗಳನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳುವುದು ಅಗತ್ಯ. ಇಂಥ ಪಟ್ಟಿಯಲ್ಲಿ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರ ವಿಚಾರವೂ ಸೇರಿರಬೇಕು’ ಎಂದು ದೀಪಿಕಾ ಹೇಳಿದರು. ಖಿನ್ನತೆಯಿಂದ ಬಳಲುತ್ತಿರುವವರು […]

Source Credit Kannada Prabha Source : Online Desk ಅಬುಜಾ: ನೈಜೀರಿಯಾದ ವಾಣಿಜ್ಯ ನಗರ ಲಾಗೊಸ್ ನಲ್ಲಿ ಸಂಭವಿಸಿದ ತೈಲ ಕೊಳವೆ ಮಾರ್ಗ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಸರ್ಕಾರಿ ಸ್ವಾಮ್ಯದ ನೈಜೀರಿಯಾ ರಾಷ್ಟ್ರೀಯ ಪೆಟ್ರೋಲಿಯಂ ನಿಗಮ(ಎನ್‍ಎನ್‍ಪಿಸಿ) ಸೋಮವಾರ ತಿಳಿಸಿದೆ. ಲಾಗೋಸ್ ನ ಅಲಿಮೊಷೊ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಸ್ಫೋಟದ ನಂತರ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿದೆ.  ಘಟನೆಯಲ್ಲಿ ಐವರು ಮೃತಪಟ್ಟಿರುವುದು ದುರದೃಷ್ಟಕರ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕರ ಸ್ಥಿತಿ ಗಂಭೀರವಾಗಿದೆ. ತೈಲ […]

Source Credit Kannada Prabha Source : UNI ಲಾಹೋರ್:  ಉಗ್ರರನ್ನು  ಪೋಷಿಸುತ್ತಿರುವ  ನೆರೆಯ  ಪಾಕಿಸ್ತಾನದಲ್ಲಿ  ಈಗ  ಹೊಸ ಬಿಕ್ಕಟ್ಟು  ಸೃಷ್ಟಿಯಾಗಿದೆ. ದೇಶದಲ್ಲಿ ಗೋಧಿ ಹಿಟ್ಟಿನ   ತೀವ್ರ  ಕೊರತೆಯಿಂದ ಚಪಾತಿ  ತಿನ್ನುವ  ಜನರು  ಸಮಸ್ಯೆ  ಎದುರಿಸುವಂತಾಗಿದೆ  ಖೈಬರ್ ಪಖ್ತೂನ್ ಖವಾ  ಪ್ರಾಂತ್ಯದ  ರಾಜಧಾನಿ  ಪೇಷಾವರ್  ನಗರದಲ್ಲಿ ಗೋದಿ ಹಿಟ್ಟು  ಮಾರಾಟ ಮಾಡುವ ೨,೫೦೦ ಮಳಿಗೆಗಳಿದ್ದು, ಗೋಧಿ  ಹಿಟ್ಟಿನ ಕೊರತೆ ಕಾರಣ   ಈ  ಅಂಗಡಿಗಳು  ಬಹುತೇಕ ಬಂದ್  ಆಗಿವೆ.  ಬಲೂಚಿಸ್ತಾನ್, ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತೂನ್  ಖವಾ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟಿನ […]

Source Credit Kannada Prabha Source : The New Indian Express ದುಬೈ: 1970 ರಿಂದ ದೇಶದ ಮುಖ್ಯಸ್ಥರಾಗಿದ್ದ ಒಮಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಸುಲ್ತಾನ್ ಶುಕ್ರವಾರ ತಡರಾತ್ರಿ ನಿಧನ ಹೊಂದಿದರು ಅವರಿಗೆ ತಮ್ಮ 79 ವರ್ಷ ವಯಸ್ಸಾಗಿತ್ತು. ಅವರು ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಅವರ ಮರಣದ ನಂತರ ರಾಯಲ್ ಕೋರ್ಟ್‌ನ ದಿವಾನ್ ದಿವಂಗತ ಸುಲ್ತಾನ ನಿಧನವಾರ್ತೆಯನ್ನು ಘೋಷಿಸಿದೆ. ಒಮನ್ ನೂತನ ದೊರೆಯನ್ನು ಆಡಳಿತ ಕುಟುಂಬ ಶೀಘ್ರದಲ್ಲಿಯೇ ಆಯ್ಕೆ ಮಾಡಲಿದೆ ಎಂದು […]

Source Credit Kannada Prabha Source : The New Indian Express ತೆಹ್ರಾನ್: ತಪ್ಪಾಗಿ ಗ್ರಹಿಸಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ್ದು, ಕ್ಷಮಿಸಲಾಗದ ತಪ್ಪಾಗಿದ್ದು, ಪ್ರಮಾದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆಂದು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಹೇಳಿದ್ದಾರೆ.  ಉಕ್ರೇನ್ ವಿಮಾನವನ್ನು ತಪ್ಪಾಗಿ ಗ್ರಹಿಸಿದ ಕಾರಣ ಹೊಡೆದುರುಳಿಸಲಾಗಿತ್ತು. ದಾಳಿ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಇರಾನ್ ಸೇನಾಪಡೆ ತಪ್ಪೊಪ್ಪಿಕೊಂಡಿದೆ.  ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಇರಾನ್ ಅಧ್ಯಕ್ಷ ಹಸನ್ ರೊಹಾನಿಯವರು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಇಂತಹ ಪ್ರಮಾದಕರ ತಪ್ಪನ್ನು ತೀವ್ರವಾಗಿ ವಿಷಾದಿಸುತ್ತದೆ. […]

Source Credit Kannada Prabha Source : PTI ಇಸ್ಲಾಮಾಬಾದ್: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭೀಕರ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಕನಿಷ್ಟ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.   ಈಗ್ಗೆ ಮೂರು ದಿನಗಳ ಹಿಂದಷ್ಟೇ ಇದೇ ಕ್ವೆಟ್ಟಾದಲ್ಲಿ ನಡೆದಿದ್ದ ಬಾಂಬ್ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬಾಂಬ್ ಸ್ಫೋಟದ ಹೊಣೆಯನ್ನು ಈ ವರೆಗೂ ಯಾವುದೇ […]

Source Credit Kannada Prabha Source : The New Indian Express ಕೀವ್: ತಮ್ಮ ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು, ಪರಿಹಾರ ನೀಡಿ ಕ್ಷಮೆ ಕೇಳಬೇಕೆಂದು  ಇರಾನ್ ದೇಶವನ್ನು ಉಕ್ರೆನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ ಸ್ಕೈ ಒತ್ತಾಯಿಸಿದ್ದಾರೆ. ಇರಾನ್ ತಪ್ಪಿತಸ್ಥರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಶಿಕ್ಷೆ ಕೊಡಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಉಕ್ರೆನ್ ನಾಯಕರೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.ಆಗಿರುವ ತಪ್ಪಿಗೆ ಪರಿಹಾರ ಕೂಡಾ ನೀಡಬೇಕು ಎಂದು ಅವರು ಬರೆದುಕೊಂಡಿದ್ದಾರೆ. ಇರಾಕ್ ನಲ್ಲಿನ ಅಮೆರಿಕಾದ ವಾಯುಪಡೆಯನ್ನು ಗುರಿಯಾಗಿರಿಸಿಕೊಂಡು ಬುಧವಾರ  ನಡೆಸಿದ ಕ್ಷಿಪಣಿ ದಾಳಿಯಲ್ಲಿ ತಪ್ಪಾಗಿ ಗ್ರಹಿಸಿ ಉಕ್ರೆನ್ […]

Source Credit Kannada Prabha Source : UNI ನವದೆಹಲಿ: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಎಂಬ  ಹೆಗ್ಗಳಿಕೆಯನ್ನು   ಜಪಾನ್   ಪಾಸ್ ಪೋರ್ಟ್  ಮತ್ತೊಮ್ಮೆ  ಮುಡಿಗೇರಿಸಿಕೊಂಡಿದೆ. “ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್” ನಲ್ಲಿ  ಸತತ ಮೂರನೇ  ಬಾರಿ  ತನ್ನ  ಆಗ್ರ ಶ್ರೇಯಾಂಕವನ್ನು   ಜಪಾನ್  ಪಾಸ್‌ಪೋರ್ಟ್ ಕಾಯ್ದುಕೊಂಡಿದೆ.  ಏಕೆಂದರೆ…  ಈ ಪಾಸ್ ಪೋರ್ಟ್ ನೊಂದಿಗೆ     ವೀಸಾ ಇಲ್ಲದೆ  ವಿಶ್ವದ ೧೯೧ ದೇಶಗಳಿಗೆ  ತೆರಳಬಹುದು. ಸಿಂಗಾಪುರ ಪಾಸ್‌ಪೋರ್ಟ್ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿವೆ. ಸಿಂಗಾಪುರ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links