Source Credit Kannada Prabha Source : The New Indian Express ದುಬೈ: 1970 ರಿಂದ ದೇಶದ ಮುಖ್ಯಸ್ಥರಾಗಿದ್ದ ಒಮಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಸುಲ್ತಾನ್ ಶುಕ್ರವಾರ ತಡರಾತ್ರಿ ನಿಧನ ಹೊಂದಿದರು ಅವರಿಗೆ ತಮ್ಮ 79 ವರ್ಷ ವಯಸ್ಸಾಗಿತ್ತು. ಅವರು ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಅವರ ಮರಣದ ನಂತರ ರಾಯಲ್ ಕೋರ್ಟ್‌ನ ದಿವಾನ್ ದಿವಂಗತ ಸುಲ್ತಾನ ನಿಧನವಾರ್ತೆಯನ್ನು ಘೋಷಿಸಿದೆ. ಒಮನ್ ನೂತನ ದೊರೆಯನ್ನು ಆಡಳಿತ ಕುಟುಂಬ ಶೀಘ್ರದಲ್ಲಿಯೇ ಆಯ್ಕೆ ಮಾಡಲಿದೆ ಎಂದು […]

Source Credit Kannada Prabha Source : The New Indian Express ತೆಹ್ರಾನ್: ತಪ್ಪಾಗಿ ಗ್ರಹಿಸಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ್ದು, ಕ್ಷಮಿಸಲಾಗದ ತಪ್ಪಾಗಿದ್ದು, ಪ್ರಮಾದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆಂದು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಹೇಳಿದ್ದಾರೆ.  ಉಕ್ರೇನ್ ವಿಮಾನವನ್ನು ತಪ್ಪಾಗಿ ಗ್ರಹಿಸಿದ ಕಾರಣ ಹೊಡೆದುರುಳಿಸಲಾಗಿತ್ತು. ದಾಳಿ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಇರಾನ್ ಸೇನಾಪಡೆ ತಪ್ಪೊಪ್ಪಿಕೊಂಡಿದೆ.  ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಇರಾನ್ ಅಧ್ಯಕ್ಷ ಹಸನ್ ರೊಹಾನಿಯವರು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಇಂತಹ ಪ್ರಮಾದಕರ ತಪ್ಪನ್ನು ತೀವ್ರವಾಗಿ ವಿಷಾದಿಸುತ್ತದೆ. […]

Source Credit Kannada Prabha Source : PTI ಇಸ್ಲಾಮಾಬಾದ್: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭೀಕರ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಕನಿಷ್ಟ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.   ಈಗ್ಗೆ ಮೂರು ದಿನಗಳ ಹಿಂದಷ್ಟೇ ಇದೇ ಕ್ವೆಟ್ಟಾದಲ್ಲಿ ನಡೆದಿದ್ದ ಬಾಂಬ್ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬಾಂಬ್ ಸ್ಫೋಟದ ಹೊಣೆಯನ್ನು ಈ ವರೆಗೂ ಯಾವುದೇ […]

Source Credit Kannada Prabha Source : The New Indian Express ಕೀವ್: ತಮ್ಮ ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು, ಪರಿಹಾರ ನೀಡಿ ಕ್ಷಮೆ ಕೇಳಬೇಕೆಂದು  ಇರಾನ್ ದೇಶವನ್ನು ಉಕ್ರೆನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ ಸ್ಕೈ ಒತ್ತಾಯಿಸಿದ್ದಾರೆ. ಇರಾನ್ ತಪ್ಪಿತಸ್ಥರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಶಿಕ್ಷೆ ಕೊಡಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಉಕ್ರೆನ್ ನಾಯಕರೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.ಆಗಿರುವ ತಪ್ಪಿಗೆ ಪರಿಹಾರ ಕೂಡಾ ನೀಡಬೇಕು ಎಂದು ಅವರು ಬರೆದುಕೊಂಡಿದ್ದಾರೆ. ಇರಾಕ್ ನಲ್ಲಿನ ಅಮೆರಿಕಾದ ವಾಯುಪಡೆಯನ್ನು ಗುರಿಯಾಗಿರಿಸಿಕೊಂಡು ಬುಧವಾರ  ನಡೆಸಿದ ಕ್ಷಿಪಣಿ ದಾಳಿಯಲ್ಲಿ ತಪ್ಪಾಗಿ ಗ್ರಹಿಸಿ ಉಕ್ರೆನ್ […]

Source Credit Kannada Prabha Source : UNI ನವದೆಹಲಿ: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಎಂಬ  ಹೆಗ್ಗಳಿಕೆಯನ್ನು   ಜಪಾನ್   ಪಾಸ್ ಪೋರ್ಟ್  ಮತ್ತೊಮ್ಮೆ  ಮುಡಿಗೇರಿಸಿಕೊಂಡಿದೆ. “ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್” ನಲ್ಲಿ  ಸತತ ಮೂರನೇ  ಬಾರಿ  ತನ್ನ  ಆಗ್ರ ಶ್ರೇಯಾಂಕವನ್ನು   ಜಪಾನ್  ಪಾಸ್‌ಪೋರ್ಟ್ ಕಾಯ್ದುಕೊಂಡಿದೆ.  ಏಕೆಂದರೆ…  ಈ ಪಾಸ್ ಪೋರ್ಟ್ ನೊಂದಿಗೆ     ವೀಸಾ ಇಲ್ಲದೆ  ವಿಶ್ವದ ೧೯೧ ದೇಶಗಳಿಗೆ  ತೆರಳಬಹುದು. ಸಿಂಗಾಪುರ ಪಾಸ್‌ಪೋರ್ಟ್ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿವೆ. ಸಿಂಗಾಪುರ್ […]

Source Credit Kannada Prabha Source : Associated Press ವಾಷಿಂಗ್ಟನ್: ಕಳೆದ ಮಂಗಳವಾರ ಉಕ್ರೇನ್ ನ ವಿಮಾನ ಭೀಕರ ಅಪಘಾತಕ್ಕೀಡಾಗಿ ಎಲ್ಲಾ 176 ಪ್ರಯಾಣಿಕರು ಮೃತಪಟ್ಟಿದ್ದು ಇರಾನ್ ನ ಕ್ಷಿಪಣಿ ದಾಳಿಯಿಂದ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ. ಅದು ಇರಾನ್ ನ ತಪ್ಪಿನಿಂದ ಆಗಿರಬಹುದೇ ಹೊರತು ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯಾಗಿರಲಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ. ಈ ವಿಮಾನ ಅಪಘಾತದಲ್ಲಿ ಕನಿಷ್ಠ 63 ಮಂದಿ ಕೆನಡಾದ ಪ್ರಜೆಗಳು ಮೃತಪಟ್ಟಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸಹ ಟೊರಂಟೊದಲ್ಲಿ ಸುದ್ದಿಗೋಷ್ಠಿಯಲ್ಲಿ […]

Source Credit Kannada Prabha Source : ANI ನ್ಯೂಯಾರ್ಕ್:ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಭಾರತದ ಮೇಲೆ ಸುಳ್ಳು ಆಪಾದನೆ ಹೊರಿಸುವುದನ್ನು ಪಾಕಿಸ್ತಾನ ನಿಲ್ಲಿಸಬೇಕು ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತರಾಟೆಗೆ ತೆಗೆದುಕೊಂಡಿದೆ. ಮಾಟ, ಮಂತ್ರದಂತಹ ಬ್ಲಾಕ್ ಮ್ಯಾಜಿಕ್ ನಂತಹ ಕೆಲಸಗಳಿಗೆ ಪಾಕಿಸ್ತಾನ ಉತ್ತಮ ಉದಾಹರಣೆ ಎಂದು ಕೂಡ ಹೇಳಿದೆ.  ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಮಾತನಾಡಿ ಪಾಕಿಸ್ತಾನಕ್ಕೆ ತೀಕ್ಷ್ಣ ಸಂದೇಶ ರವಾನಿಸಿದ್ದು ನಿಮ್ಮ ತಪ್ಪುಗಳನ್ನು ಸರಿಪಡಿಸಲು ಇಲ್ಲಿ ಯಾರೂ ಇಲ್ಲ, ನಿಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಭಾರತದ ಮೇಲೆ ಸುಖಾಸುಮ್ಮನೆ ಆಪಾದನೆ ಹೊರಿಸಬೇಡಿ ಎಂದರಲ್ಲದೆ […]

Source Credit Kannada Prabha Source : UNI ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಯಾರೊಬ್ಬರ ಯುದ್ಧದ ಭಾಗವಾಗದೆ ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ‘ನಾವು ಇರಾನ್ ಮತ್ತು ಅಮೆರಿಕ ನಡುವೆ ಸ್ನೇಹ ಬಾಂಧವ್ಯ ಪುನರ್ ಸ್ಥಾಪಿಸಲು ಪ್ರಯತ್ನಿಸುತ್ತೇವೆ. ಅಮೆರಿಕ ಮತ್ತು ಇರಾನ್ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಯುವಂತಾಗಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಲು ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಲಾಗಿದೆ.’ […]

Source Credit Kannada Prabha Source : UNI ಮೆಲ್ಬರ್ನ್: ಆಸ್ಟ್ರೇಲಿಯಾದ ಅತ್ಯಂತ ಜನಭರಿತ ಆಗ್ನೇಯ ಭಾಗದತ್ತ ಬಿಸಿ ಗಾಳಿ ಮತ್ತೆ ಬೀಸಿದ್ದು, ಭಾರೀ ಪ್ರಮಾಣದ ಕಾಡ್ಗಿಚ್ಚುಗಳು ಹೊತ್ತಿಕೊಂಡು ಆತಂಕದ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದಾಗಿ ಹಲವಾರು ಪಟ್ಟಣಗಳು ಮತ್ತು ಗ್ರಾಮಗಳು ಕಾಡ್ಗಿಚ್ಚಿನ ತೊಂದರೆಗೆ ಒಳಗಾಗಿದ್ದು, ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಈ ವಲಯದ ಜನರಿಗೆ ಅಧಿಕಾರಿಗಳು ಎಚ್ಚರಿಕೆ ಮತ್ತು ನೋಟಿಸ್ ನೀಡಿದ್ದಾರೆ. ವಿಕ್ಟೋರಿಯ ರಾಜ್ಯದಾದ್ಯಂತ ಜನರಿಗೆ ವಿಪತ್ತು ನೋಟಿಸ್ ಗಳನ್ನು ಕಳೆದ ವಾರ ನೀಡಲಾಗಿದ್ದು, ನೋಟಿಸ್ ಅವಧಿಯನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದ್ದು, ಅಪಾಯ […]

Source Credit Kannada Prabha Source : The New Indian Express ತೆಹ್ರಾನ್: ವಿಶ್ವದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಇರಾನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತಪ್ಪು ಗ್ರಹಿಕೆಯಿಂದಾಗಿ ವಿಮಾನ ಹೊಡೆದುರುಳಿಸಲಾಗಿತ್ತು ಎಂದು ಶನಿವಾರ ಹೇಳಿದೆ.  ದುರ್ಘಟನೆ ಸಂಬಂಧ ಇಂದು ಹೇಳಿಕೆ ಬಿಡುಗಡೆ ಮಾಡಿರುವ ಇರಾನ್, ವಿಮಾನ ಪತನಕ್ಕೆ ಸೇನಾಪಡೆಯ ತಪ್ಪು ಗ್ರಹಿಕೆಯೇ ಕಾರಣ ಎಂದು ಹೇಳಿದೆ.  ಬೋಯಿಂಗ್ 737 ಸರಣಿ ಉಕ್ರೇನ್ ವಿಮಾನ ಕಳೆದ ಬುಧವಾಕ ಬೆಳಿಕ್ಕೆ ಇರಾನ್ ನ ತೆಹ್ರಾನ್ ಇಮಾಮ್ ಕೊಮೆನಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links