Source Credit Filmibeat.com ಮಂಗಳೂರಿನಿಂದ ಯುಎಸ್ ಗೆ ಹೋಗಿ, ಬಳಿಕ ಗಾಂಧಿನಗರಕ್ಕೆ ಕಾಲಿಡುವ ತನಕದ ನಿಮ್ಮ ಪಯಣ ಹೇಗಿತ್ತು? ಜನಿಸಿದ್ದು ಮಂಗಳೂರಿನಲ್ಲಿ. ಆದರೆ ಬಾಲ್ಯ ಕಳೆದಿದ್ದು ಕೊಯಂಬತ್ತೂರಿನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬಳಿಕ ಮಂಗಳೂರಿಗೆ ವಾಪಸಾದೆ. ಮಂಗಳೂರಿನ ಅಲೊಶಿಯಸ್ ಕಾಲೇಜ್ ನಲ್ಲಿ ಪಿಯುಸಿ ಮಾಡಿ, ಶ್ರೀನಿವಾಸ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮುಗಿಸಿ, ಇನ್ಫೋಸಿಸ್ ನಲ್ಲಿ ವೃತ್ತಿಯಲ್ಲಿದ್ದೆ. ಬಳಿಕ ಯುಎಸ್ ಗೆ ಹೋಗಿ ಅಲ್ಲಿ ಯಾಹೂ ಸಂಸ್ಥೆಗೆ ಸೇರಿಕೊಂಡೆ. ಇದೀಗ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದರೂ ನಾನು ಇಂದಿಗೂ ಯಾಹೂನಲ್ಲೇ ವೃತ್ತಿಯಲ್ಲಿದ್ದೇನೆ. ಕನ್ನಡ ಎಂದರೆ ರೋಮಾಂಚನ’ ಎನ್ನುತ್ತಾರೆ […]

Source Credit Filmibeat.com `ಕಬ್ಬಿನ ಹಾಲು’ ಕಿರುಚಿತ್ರ ನಿಮ್ಮನ್ನು ಬೆಂಗಳೂರಿಗನನ್ನಾಗಿಸಿದ ಬಗೆ ಹೇಗೆ? ಡಾ.ವಿಷ್ಣುವರ್ಧನ್ ಅವರ ಮೂರನೇ ಪುಣ್ಯತಿಥಿಯಾರ್ಥ ಬೆಂಗಳೂರಿನಲ್ಲಿ ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ನನ್ನ `ಕಬ್ಬಿನ ಹಾಲು’ ಕಿರುಚಿತ್ರಕ್ಕೆ ಪ್ರಥಮ ಸ್ಥಾನ ದೊರಕಿತ್ತು. ಅದರ ತೀರ್ಪುಗಾರರರಲ್ಲೊಬ್ಬರಾಗಿದ್ದ ನಿರ್ದೇಶಕ ಜಯತೀರ್ಥ ಅವರು, ತಮ್ಮ `ಟೋನಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗುವಂತೆ ನನ್ನನ್ನು ಆಹ್ವಾನಿಸಿದರು. ಅವರ ಜತೆಗಿದ್ದ ನನ್ನನ್ನು ಪರಿಚಯ ಮಾಡಿಕೊಂಡ ಇಮ್ರಾನ್ ಸರ್ದಾರಿಯ ಅವರು ನನ್ನನ್ನು ತಮ್ಮ `ಎಂದೆಂದಿಗೂ’ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ನೇಮಿಸಿಕೊಂಡರು. ಆ ಚಿತ್ರದ ಬಳಿಕ ಅದರ ನಿರ್ಮಾಪಕ ಎಸ್.ವಿ ಬಾಬು […]

Source Credit Filmibeat.com ಮದುಮಗನಿಗೆ ಅಭಿನಂದನೆಗಳು. ನಿಮ್ಮ ಬಾಳ ಸಂಗಾತಿಯ ಬಗ್ಗೆ ಏನು ಹೇಳುತ್ತೀರಿ? ವಂದನೆಗಳು. ನನ್ನವಳ ಹೆಸರು ಪಾರುಲ್ ಶುಕ್ಲಾ. ನಾವಿಬ್ಬರು ಇಂದು ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದರೂ ನಮ್ಮ ಪ್ರೇಮಕ್ಕೆ ದಶಕದ ಹಿನ್ನೆಲೆ ಇದೆ! ಪಾರುಲ್ ಪ್ರಸ್ತುತ ಖಾಸಗಿ ವಾಹಿನಿಯೊಂದರಲ್ಲಿ ವೃತ್ತಿಯಲ್ಲಿದ್ದಾರೆ. ಆಕೆ ಮೂಲತಃ ಮುಂಬೈ ಹುಡುಗಿಯಾದರೂ ಕುಟುಂಬ ಸಮೇತ ಬೆಂಗಳೂರಲ್ಲಿ ವಾಸವಾಗಿದ್ದಾರೆ. ಮಾತೃಭಾಷೆ ಹಿಂದಿಯಾದರೂ ಕನ್ನಡ ಚೆನ್ನಾಗಿ ಮಾತನಾಡಬಲ್ಲಳು. ಈಗ ನನ್ನ ಮಾತೃಭಾಷೆ ತುಳುವನ್ನು ಕೂಡ ಕಲಿತುಕೊಂಡಿದ್ದಾಳೆ. ಹತ್ತು ವರ್ಷಗಳ ಕಾಲ ಆಕೆ ನನ್ನನ್ನು ಸಹಿಸಿಕೊಂಡಿರುವುದೇ ದೊಡ್ಡ ವಿಚಾರ. ನಿಮಗೆ ಪ್ರೇಮ […]

Source Credit Filmibeat.com ನಿಮ್ಗೆ ಅಭಿಮನ್ಯು ಅಂತ ಕರೀಬೇಕಾ, ಅಲೋಕ್ ಅಂತ ಕರೀಬೇಕಾ? ”ಅಭಿಮನ್ಯು ನಮ್ಮ ಅಪ್ಪ ಅಮ್ಮ ಇಟ್ಟ ಹೆಸರು. ‘ಬಾಜಿ’ ಸಿನಿಮಾ ಮಾಡುವಾಗ ನನ್ನ ಹೆಸರಿನ ಅಕ್ಷರ ಬದಲಿಸಬೇಕು ಎಂದು ಹೇಳಿದರು. ಆ ಸಿನಿಮಾದ ನಿರ್ಮಾಪಕರು, ನ್ಯೂಮರಾಲಜಿ ನಂಬುತ್ತಿದ್ದರು. ಹೀಗಾಗಿ ಅಲೋಕ್ ಎಂದು ಹೆಸರು ಬದಲಿಸಿದರು. ಬಾಜಿ ಟೀಮ್ ಬಿಟ್ಟರೆ ಎಲ್ಲರೂ ನನ್ನನ್ನು ಅಭಿ, ಅಭಿಮನ್ಯು ಎಂದೇ ಕರೆಯುತ್ತಾರೆ. ಆಗ ನನಗೆ ಕೆಲವು ಬಾರಿ ನನ್ನ ಹೆಸರು ಗೊಂದಲ ಆಗುತ್ತಿತ್ತು. ಇನ್ನು ಮುಂದೆ ನಾನು ಅಭಿಮನ್ಯು ಅಷ್ಟೇ.” ನಿಮ್ಮ ಪಯಣ ಎಲ್ಲಿಗೆ, […]

Source Credit Filmibeat.com ಜನಮನದಲ್ಲಿ ಇಷ್ಟೊಂದು ಅಭಿಮಾನ ಪಡೆದ ಮೇಲೆಯೂ ಹೇಗೆ ನಿಮ್ಮಿಂದ ಇಷ್ಟು ಸರಳವಾಗಿರಲು ಸಾಧ್ಯವಾಗುತ್ತದೆ? ಚಿತ್ರರಂಗದಲ್ಲಿ 19 ವರ್ಷ, ಅದಕ್ಕೂ ಮೊದಲು ರಂಗಭೂಮಿ ಹೀಗೆ ಎಲ್ಲವನ್ನೂ ನೋಡಿಕೊಂಡು ಬಂದಿದ್ದೇನೆ. ಆದರೆ ಈ ಮಟ್ಟದ ಹೆಸರು ಇದೇ ಪ್ರಥಮ ಎಂದೇ ಹೇಳಬಹುದು. ಸಿನಿಮಾಗಳ ಗೆಲುವು, ಸೋಲು ಮತ್ತು ನಾನು ಬೆಳೆದಿರುವ ವಾತಾವರಣ ಎಲ್ಲವೂ ನನಗೆ ಬದುಕನ್ನು ಕಲಿಸುತ್ತಾ ಬಂದಿದೆ. ಹಾಗಾಗಿ ಪ್ರಯತ್ನ ಒಂದನ್ನು ಬಿಟ್ಟು ಬೇರೆ ಯಾವುದು ಕೂಡ ನಮ್ಮ ಕೈಯ್ಯಲ್ಲಿ ಇಲ್ಲ ಎನ್ನುವ ಸ್ಪಷ್ಟ ಅರಿವು ಇರುವ ಕಾರಣ ಎಷ್ಟೇ ದೊಡ್ಡ […]

Source Credit Filmibeat.com ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹೆಸರು ಯಾಕೆ? ಆಟಕ್ಕಿದ್ದರೂ ಲೆಕ್ಕಕ್ಕೆ ಇಲ್ಲ ಎನ್ನುವುದನ್ನು ಆಟದ ವೇಳೆ ಬಳಸಿ ಗೊತ್ತಿರುತ್ತದೆ. ಆದರೆ ಅದನ್ನೇ ಚಿತ್ರದ ಶೀರ್ಷಿಕೆಯಾಗಿಸಿರುವಲ್ಲಿ ಒಂದು ಪ್ರಮುಖ ಕಾರಣವಿದೆ. ಚಿತ್ರದ ಪ್ರಮುಖ ಪಾತ್ರವೊಂದರ ಉಪಸ್ಥಿತಿ ಇದ್ದರೂ ಇರದಂಥ ಸಂದರ್ಭ ಕತೆಯಲ್ಲಿ ಬರುತ್ತದೆ. ಅದು ಯಾರು, ಯಾವ ಪಾತ್ರ ಎನ್ನುವುದು ಪೂರ್ತಿ ಸಿನಿಮಾ ನೋಡಿದ ಬಳಿಕ ಗೊತ್ತಾಗುತ್ತದೆ. ಟ್ರೇಲರ್ ಗಮನಿಸಿದಾಗ ಇದೊಂದು ಹಾರರ್ ಸಿನಿಮಾ ಇರುವಂತಿದೆ? ಈ ಸಂದೇಹ ಈಗಾಗಲೇ ಬಹಳ ಮಂದಿಯಲ್ಲಿದೆ. ಖಂಡಿತವಾಗಿ ಇದು ಹಾರರ್ ಚಿತ್ರವಲ್ಲ. ಸೈಕಾಲಜಿಕಲ್ ಥ್ರಿಲ್ಲರ್ ಎಂದು […]

Source Credit Filmibeat.com ನಿಮ್ಮನ್ನು `ಸುಂದರ್ ವೀಣಾ’ ಎಂದಾಗ ಮುಜುಗರವಾಗದೇ? ವೀಣಾ ನಟಿಯಾಗಿ ನನಗಿಂತ ಸೀನಿಯರ್. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವಳು. ಮಾತ್ರವಲ್ಲ ಪೋಷಕ ಪಾತ್ರದಲ್ಲಿ ಕೂಡ ನನಗಿಂತ ಮೊದಲೇ ಎಷ್ಟಾಬ್ಲಿಷ್ ಆದಂಥವಳು. ಹಾಗಾಗಿ ಸುಂದರ್ ಯಾರು ಎಂದರೆ ವೀಣಾಳ ಗಂಡ ಸುಂದರ್, ವೀಣಾ ಸುಂದರ್, ಸುಂದರ್..ವೀಣಾ ಎಂದು ಗುರುತಿಸುವುದು ಸಹಜವಾಗಿಯೇ ಇದೆ. ಆದರೆ ನಿಜಕ್ಕೂ ಗೊಂದಲಕ್ಕೆ ಒಳಗಾಗುವವರು ಇತರರು. ನಾನು ಸೆಟ್ ಗೆ ಬಂದಾಗ ಪ್ರೊಡಕ್ಷನ್ ಮ್ಯಾನೇಜರ್ ಗಳೇ ಹೇಳಿಕೊಂಡದ್ದಿದೆ.. “ಓಹ್ ನೀವಾ ಸರ್, ನಾವು ವೀಣಾ ಮೇಡಂ ಬರೋದು ಅಂತ ಅಂದ್ಕೊಂಡಿದ್ದೆವು” ಅಂತ. […]

Source Credit Filmibeat.com ಅರೆ, ಭೂಮಿಕಾ ಕಾರಿನ ಕೆಳಗೆ ಬೆಕ್ಕು ಸಿಕ್ಕಿಕೊಂಡಂತಿದೆ?! ಛೇ.. ಬಿಡ್ತೂ ಅನ್ನಿ! ಎಲ್ಲಾದರೂ ಉಂಟೇ? ನಾನು ಈ ರಸ್ತೆಯಲ್ಲಿ ಸಾಗುತ್ತಿರಬೇಕಾದರೆ ಇಲ್ಲೇ ರಸ್ತೆಯಲ್ಲಿ ಬೆಕ್ಕೊಂದು ಗಾಯಗೊಂಡು ಬಿದ್ದಿರುವುದನ್ನು ನೋಡಿದೆ. ಬಹುಶಃ ಯಾವುದೋ ವಾಹನ ಡಿಕ್ಕಿ ಹೊಡೆದು ಹೋಗಿರಬೇಕು. ಅವರು ಹೋಗಿದ್ದಾರೆ ಅಂತ ನಾವು ಕೂಡ ಇದರ ದುರವಸ್ಥೆ ಕಂಡರೂ ಕಾಣದಂತೆ ಹೋಗೋಕಾಗುತ್ತಾ? ಹಾಗಾಗಿ ನಿಲ್ಲಿಸಿ ಸ್ವಲ್ಪ ನೀರು ಕುಡಿಸ್ತಾ ಇದ್ದೆ. ( ಭೂಮಿಕಾ ಹೇಳಿದ್ದು ನಿಜ ಎಂದು ಆಕೆಗೆ ಸಹಾಯಕ್ಕೆ ಮುಂದಾಗಿದ್ದ ದಾರಿ ಹೋಕರೋರ್ವರು ಸಾಕ್ಷಿ ಹೇಳಿದರು!) ಹಾಗಾದರೆ ನೀವು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links