ಕಲ್ಯಾಣ ಕರ್ನಾಟಕದ ಕಣ್ಮಣಿ ವೈಜನಾಥ ಪಾಟೀಲ

Source Credit Vishwavani.news

ನಾಗರಾಜ ಹೊಂಗಲ್
ಹಿರಿಯ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರು

ವಿಶೇಷ ಸ್ಥಾಾನಮಾನವನ್ನು ಆಂಧ್ರ ಮಾದರಿಯಂತೆ ಇಡೀ ಕರ್ನಾಟಕಕ್ಕೂ ಕೊಟ್ಟರೆ ತಪ್ಪೇನಿಲ್ಲ. ಆಗ ಎಲ್ಲರಿಗೂ ಸಮಾನ ನ್ಯಾಾಯ ಸಿಗುತ್ತದೆ ಎಂದು ಪ್ರತಿಪಾದಿಸುತ್ತಿಿದ್ದ ವೈಜನಾಥರು, ವಿಶೇಷ ಸ್ಥಾಾನಮಾನದ ಘೋಷಣೆಯನ್ನು ಸಂಸತ್ತು ಅಂಗೀಕರಿಸಿದಾಗ ನಿಟ್ಟುಸಿರು ಬಿಟ್ಟು ಆನಂದ ಭಾಷ್ಪಗಳನ್ನು ಸುರಿಸಿದ್ದರು.

ಪ್ರಾಾದೇಶಿಕ ಅಸಮಾನತೆ ನಿವಾರಣೆಯ ನಿರಂತರ ತುಡಿತ, ಹೈದರಾಬಾದ ನಿಜಾಮ ಸಂಸ್ಥಾಾನದ ಅಧಿಕಾರಿ ಮುಲ್ಕಿಿ 1940ರ ದಶಕದಲ್ಲಿ ರೂಪಿಸಿದ್ದ ಶಿಕ್ಷಣ ಮತ್ತು ಉದ್ಯೋೋಗ ನೇಮಕಾತಿಗಳಲ್ಲಿ ಸ್ಥಳೀಯರಿಗೆ ಆದ್ಯತೆಯ ನೀತಿ ಸಂಪೂರ್ಣ ಕನ್ನಡ ನಾಡಿಗೂ ಅನ್ವಯಿಸಬೇಕೆಂಬ ಹಂಬಲ, ನೀರಾವರಿ ಸೇರಿದಂತೆ ಸರಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಜಾರಿಯ ಮಿಡಿತ, ಯಾವುದೇ ಒಂದು ವಿಷಯವನ್ನು ಕೈಗೆತ್ತಿಿಕೊಂಡರೆ ಅದು ತಾರ್ಕಿಕ ಅಂತ್ಯ ಕಾಣುವವರೆಗೆ ವಿರಮಿಸದ ವ್ಯಕ್ತಿಿತ್ವ, ಉನ್ನತ ಸ್ಥಾಾನದಲ್ಲಿನ ಯಾರೇ ಆಗಲಿ, ತಮ್ಮ ವೈಯಕ್ತಿಿಕ ಘನತೆಗೆ ಕುಂದು ತರುವ ಇಲ್ಲವೇ ಸಾರ್ವಜನಿಕ ಉದ್ದೇಶದ ಆಶಯಗಳ ಸಾಕಾರಕ್ಕೆೆ ಅಡ್ಡಿಿಯಾಗುವ ಅನುಮಾನ ಬಂದರೂ ಸಾಕು, ಕ್ಷಣದಲ್ಲೇ ಅವರ ವಿರುದ್ಧ ಸಿಡಿದೇಳುವ ಸಮಾಜವಾದಿ, ಖಡಕ್ ನಿಷ್ಠುರವಾದಿ, ತತ್ವ ಸಿದ್ಧಾಾಂತಗಳೊಂದಿಗೆ ಎಂದಿಗೂ ರಾಜಿಯಾಗದ ಶಾಶ್ವತ ಬಂಡಾಯವಾದಿ, ಅಪ್ಪಟ ಏಕಾಂಗಿ ಹೋರಾಟಗಾರ…,

ಇವೆಲ್ಲವೂ ಒಬ್ಬರೇ ಆಗಿದ್ದವರು ವೈಜನಾಥ ಪಾಟೀಲ. ಇನ್ನೂ ಹೀಗೆ ಹಲವು ವೈಶಿಷ್ಟ್ಯಗಳನ್ನು ಮೇಳೈಸಿಕೊಂಡಿದ್ದ ಅವರು ಇಂದು ನಮ್ಮೊೊಂದಿಗಿಲ್ಲ. ಹುಟ್ಟಿಿದ್ದು ಔರಾದ ತಾಲೂಕಿನ ಹಕ್ಯಾಾಳದಲ್ಲಿ. ಹೋರಾಟದಿಂದ ರಾಜಕೀಯ ನೆಲೆ ಕಂಡುಕೊಂಡದ್ದು ಪತ್ನಿಿಯ ತವರು ಚಿಂಚೋಳಿಯಲ್ಲಿ. ಅವರ ಅವಿರತ ಹೋರಾಟದ ಛಲದಿಂದಲೇ ಹೈದರಾಬಾದ್ ಕರ್ನಾಟಕಕ್ಕೆೆ ದಕ್ಕಿಿದ ವಿಶೇಷ ಸ್ಥಾಾನಮಾನದ ಜ್ಯೋೋತಿ ಇಂದು ಕಲ್ಯಾಾಣ ಕರ್ನಾಟಕ ಪ್ರತಿ ಮನೆ ಮನೆಗಳಲ್ಲೂ ಬೆಳಗುತ್ತಿಿದೆ.

ಹೌದು! 1956ರ ನವೆಂಬರ್‌ನಲ್ಲಿ ಭಾಷಾವಾರು ಪ್ರಾಾಂತಗಳನ್ನು ಆಧರಿಸಿ ರಾಜ್ಯಗಳ ಪುನರ್ ವಿಂಗಡಣೆ ಮಾಡಲಾಯಿತು. ಹೈದರಾಬಾದ್ ನಿಜಾಮ್ ಆಡಳಿತದ್ದಲ್ಲಿದ್ದ ಮರಾಠಿ – ಉರ್ದು ಭಾಷಿಕ ಪ್ರದೇಶಗಳು ಮಹಾರಾಷ್ಟ್ರ, ತೆಲುಗು – ಉರ್ದು ಭಾಷಿಕ ಪ್ರದೇಶಗಳು ಆಂಧ್ರ (ಇಂದಿನ ತೆಲಂಗಾಣ) ಮತ್ತು ಕನ್ನಡ – ಉರ್ದು ಭಾಷಿಕ ಪ್ರದೇಶಗಳು ಮೈಸೂರು (ಈಗ ಕರ್ನಾಟಕ) ಪ್ರಾಾಂತದಲ್ಲಿ ಸೇರಿಕೊಂಡವು. ಸಂವಿಧಾನ ರಚನೆಕಾರರು ಹಾಗೂ ಭಾಷಾವಾರು ಪ್ರಾಾಂತಗಳ ಪುನರ್ ರಚನೆ ಆಯೋಗದ ಆಶಯದಂತೆ ನಿಜಾಮ ಪ್ರದೇಶದಿಂದ ಮಹಾರಾಷ್ಟ್ರ, ಆಂಧ್ರವನ್ನು ಸೇರಿದ ಪ್ರದೇಶಗಳಿಗೆ ಸಂವಿಧಾನದತ್ತ 371ನೇ ವಿಧಿ ಪ್ರಕಾರ ವಿಶೇಷ ಸ್ಥಾಾನಮಾನ ನೀಡಲಾಯಿತು.

ಕರ್ನಾಟಕವನ್ನು ಸೇರಿದ (ಈಗಿನ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ) ಪ್ರದೇಶಗಳಿಗೆ ವಿಶೇಷ ಸ್ಥಾಾನಮಾನವನ್ನು ಕೊಡಲಿಲ್ಲ. ಯಾಕೆ? ಮೈಸೂರು ಪ್ರಾಾಂತ ದೇಶದಲ್ಲಿಯೇ ಅತಿ ಮುಂದುವರಿದ ರಾಜ ಸಂಸ್ಥಾಾನಗಳಲ್ಲಿ ಒಂದಾಗಿದೆ. ಮುಂದುವರಿದ ಪ್ರದೇಶವನ್ನು ಸೇರುವ ಈ ಪ್ರದೇಶಗಳಿಗೇಕೆ ಬೇಕು ವಿಶೇಷ ಸವಲತ್ತು? ಎಂದು ಆಂದಿನ ನೆಹರು ಸರಕಾರ ವಿಶೇಷ ಸವಲತ್ತಿಿನಿಂದ ವಂಚಿತಗೊಳಿಸಿತ್ತು.

ಇದೆಲ್ಲದರ ಹಿನ್ನೆೆಲೆ, ಹೈದರಾಬಾದ ಅರಸರ ಕಾಲದ ಮುಲ್ಕಿಿ ನಿಯಮಗಳ ಸಮಗ್ರತೆ, ಮಹಾರಾಷ್ಟ್ರ ಮತ್ತು ಆಂಧ್ರಗಳಿಗೆ ವಿಶೇಷ ಸ್ಥಾಾನಮಾನ ನೀಡಿದ ನಂತರ ಅಲ್ಲಿ ಆಗಿರುವ ಬದಲಾವಣೆಗಳನ್ನೆೆಲ್ಲಾಾ ವೈಜನಾಥರು 1970ರ ದಶಕದಿಂದಲೇ ನಿರಂತರವಾಗಿ ಅಧ್ಯಯನ ಮಾಡಿದರು. ವಕೀಲಿ ವೃತ್ತಿಿಯ ಅಧ್ಯಯನದಲ್ಲಿಯೇ ಸಮಾಜವಾದ ವೈಜನಾಥರನ್ನು ಸೆಳೆದಿತ್ತು. ಭೀಮಣ್ಣ ಖಂಡ್ರೆೆ, ಕಾಶಿನಾಥರಾವ ಬೇಲೂರೆ, ದಯಾನಂದರಾವ್, ಬೀಡಪ್ಪ ಮತ್ತಿಿತರರ ಜತೆ ಸಮಾಜವಾದಿ ಚಳುವಳಿಯಲ್ಲಿ ಸಕ್ರಿಿಯರಾಗಿದ್ದರು. ಸಮಾಜವಾದಿ ಮುಂಚೂಣಿಯ ಜಾರ್ಜ್ ಫರ್ನಾಂಡಿಸ್, ಮಧು ದಂಡವತೆ, ಸುರೇಂದ್ರ ಮೋಹನ್, ಜೆ.ಎಚ್. ಪಟೇಲ, ಬಂಗಾರಪ್ಪ ಅವರ ಒಡನಾಟವೂ ಇತ್ತು. ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿಿತಿಯನ್ನು ಘೋಷಿಸಿದಾಗ, ವೈಜನಾಥರು ಭೂಗತ ಚಳವಳಿಯಲ್ಲಿ ಭಾಗಿಯಾಗಿದ್ದಲ್ಲದೇ ಜೈಲಿಗೆ ಹೋದವರ ಪರ ವಕಾಲತ್ತನ್ನು ವಹಿಸಿದ್ದರು. ಜಯ ಪ್ರಕಾಶ ನಾರಾಯಣರ ‘ಸರ್ವೋದಯ’ ಚಳವಳಿ ಜನತಾ ಪಕ್ಷವವನ್ನು ಹುಟ್ಟು ಹಾಕಿದಾಗ ವೈಜನಾಥರಿಗೆ ರಾಜಕೀಯವಾಗಿ ವಿರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ದೇವೇಗೌಡರ ಒಡನಾಟ ಮತ್ತಷ್ಟು ಹೆಚ್ಚಿಿತು. ಬದಲಾದ ರಾಜಕೀಯ ಪರಿಸ್ಥಿಿತಿಯಲ್ಲಿ ಹತ್ತಿಿರದ ಬಂಧು ವಿರೇಂದ್ರ ಪಾಟೀಲರೇ ರಾಜಕೀಯವಾಗಿ ವೈರಿಯಾಗುತ್ತಾಾರೆ.

1984ರಲ್ಲಿ ಈಶಾನ್ಯ ಪದವಿಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆೆ, ಅನಂತರ ರಾಮಕೃಷ್ಟಣ ಹೆಗಡೆ ಮಂತ್ರಿಿ ಮಂಡಳದಲ್ಲಿ ತೋಟಗಾರಿಕೆ ಖಾತೆಯ ನಿರ್ವಹಣೆ, ‘ಹೈದರಾಬಾದ್ ಕರ್ನಾಟಕ ಅಭಿವೃದ್ಧಿಿ’ ಮಂಡಳಿ ರಚನೆಯಾಬೇಕು ಎನ್ನುವ ಬೇಡಿಕೆಯನ್ನು ಹೆಗಡೆ ಅವರು ಒಪ್ಪದಿದ್ದಾಾಗ, ಮಂತ್ರಿಿ ಸ್ಥಾಾನವನ್ನೇ ಧಿಕ್ಕರಿಸಿ ಸಂಪುಟಕ್ಕೆೆ ರಾಜೀನಾಮೆ ನೀಡುತ್ತಾಾರೆ. 1992-93ರಲ್ಲಿ ಆಳಂದದ ಕಮಲಾಕರ ಲಾಕಪ್ ಸಾವು ಪ್ರಕರಣ ವೈಜನಾಥ ಪಾಟೀಲರ ರಾಜಕೀಯ ಜೀವನಕ್ಕೆೆ ಮತ್ತೊೊಂದು ಆಯಾಮ ಕೊಡುತ್ತದೆ. ಅಂದು ಈ ಪ್ರಕರಣದ ವಿರುದ್ಧ ವೈಜನಾಥ ಮತ್ತು ಎಸ್.ಕೆ. ಕಾಂತಾ ಅವರು ಸರಕಾರದ ವಿರುದ್ಧ ನಡೆಸಿದ ಹೋರಾಟ ಇಡೀ ರಾಜ್ಯದಲ್ಲಿ ಕಾಂಗ್ರೆೆಸ್ ವಿರೋಧಿ ಅಲೆಯ ಸೃಷ್ಟಿಿಗೆ ಮೂಲವಾಯಿತು. ತವರು ಜಿಲ್ಲೆೆಯವರೇ ಆಗಿದ್ದ ಗೃಹ ಮಂತ್ರಿಿ ಧರ್ಮಸಿಂಗ್ ತೀವ್ರ ಮುಜುಗರದ ಸನ್ನಿಿವೇಶಗಳನ್ನು ಎದುರಿಸಬೇಕಾಗುತ್ತದೆ.

ಅನಂತರ ಚಿಂಚೋಳಿಯಲ್ಲಿ ವಿರೇಂದ್ರ ಪಾಟೀಲ ಕುಟುಂಬದ (1994) ವಿರುದ್ಧವೇ ಸೆಣಸಿ ವಿಧಾನ ಸಭೆ ಪ್ರವೇಶಿಸುತ್ತಾಾರೆ. ನಂತರ ಪಟೇಲ ಸಂಪುಟದಲ್ಲಿ ನಗರಾಭಿವೃದ್ಧಿಿ ಮಂತ್ರಿಿಯಾಗುತ್ತಾಾರೆ. ವಿಶೇಷ ಸ್ಥಾಾನಮಾನದ ಬೇಡಿಕೆಯನ್ನು ಕೇಂದ್ರಕ್ಕೆೆ ಮನವರಿಕೆ ಮಾಡುವಲ್ಲಿ ಸರಕಾರ ವಿಫಲವಾಗಿದೆ ಎಂಬ ಅಸಮಾಧಾನ ಹೊರ ಹಾಕಿದ್ದಕ್ಕಾಾಗಿಯೇ ಮಂತ್ರಿಿ ಸ್ಥಾಾನವನ್ನು ಕಳೆದುಕೊಳ್ಳುತ್ತಾಾರೆ. ಕಾರ್ಮಿಕರ ಹೋರಾಟ, ಪದವಿಧರರ ಸಮಸ್ಯೆೆಗಳು, ಶಿಕ್ಷಣದ ಕೊರತೆ, ನಿರುದ್ಯೋೋಗ ಮುಂತಾದವುಗಳಿಗೆಲ್ಲಾಾ ಪರಿಹಾರ ವಿಶೇಷ ಸ್ಥಾಾನಮಾನದ ಸವಲತ್ತಿಿನಲ್ಲಿದೆ ಎಂಬುದನ್ನು ವೈಜನಾಥ ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತಿಿದ್ದರು. ಹೈದರಾಬಾದನ ಕೇಶವರಾವ ಜಾಧವ ಅವರೊಂದಿಗೆ ಮುಲ್ಕಿಿ ನಿಯಮ ಸೇರಿದಂತೆ ಇತರೆ ಮೀಸಲು ಸವಲತ್ತುಗಳ ಕುರಿತು ಅಧ್ಯಯನ ನಡೆಸಿ ವಿಧಾನ ಸಭೆಯಲ್ಲಿ ಖಾಸಗಿ ಮಸೂದೆಯನ್ನು ಸಹ ಮಂಡಿಸುತ್ತಾಾರೆ. ಅದೇ 371ನೇ ವಿಧಿಯನುಸಾರ ವಿಶೇಷ ಸ್ಥಾಾನಮಾನ ಪಡೆದುಕೊಳ್ಳುವ ಮೂಲವಾಗುತ್ತದೆ.

ಇದರ ಮಧ್ಯೆೆಯೇ 1989ರ ಕೊನೆಯಲ್ಲಿ ಜನತಾ ಪಕ್ಷ ಹೋಳಾದಾಗ ದೇವೇಗೌಡರೊಂದಿಗೆ ಉಳಿದುಕೊಂಡ ವೈಜನಾಥರು ಸಮಾಜವಾದಿ ಜನತಾ ಪಕ್ಷ ಕರ್ನಾಟಕದ ರಾಜ್ಯಾಾಧ್ಯಕ್ಷರಾಗುತ್ತಾಾರೆ. 1991ರಲ್ಲಿ ದೇವೇಗೌಡರು ಹಾಸನದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಚುನಾಯಿತರಾಗುತ್ತಾಾರೆ. ಪ್ರಧಾನಿ ನರಸಿಂಹರಾವ್ ಸರಕಾರ 1993ರಲ್ಲಿ ಒಂದು ಮತದ ಅಂತರದಿಂದ ಗೆಲ್ಲುವಲ್ಲಿ ದೇವೇಗೌಡರ ಮತವೇ ನಿರ್ಣಾಯಕವಾಗುತ್ತದೆ. ನರಸಿಂಹ ರಾವ್ ಸರಕಾರದ ವಿರುದ್ಧ ಮತ ಚಲಾಯಿಸುವಂತೆ ವೈಜನಾಥ ನೀಡಿದ್ದ ವಿಪ್ ದೇವೇಗೌಡರಿಂದ ಉಲ್ಲಂಘನೆಯಾಗುತ್ತದೆ. ಕಾಂಗ್ರೆೆಸ್ ವಿರೋಧಿ ಕೂಟಗಳೆಲ್ಲಾಾ ಬಲಿಷ್ಠವಾಗುತ್ತಿಿದ್ದ ಸಮಯವದು. ಪಕ್ಷದ ಅಧ್ಯಕ್ಷರಾಗಿ ತಾವು ನೀಡಿದ ವಿಪ್ ಉಲ್ಲಂಸಿದ್ದಕ್ಕಾಾಗಿ ದೇವೇಗೌಡರ ವಿರುದ್ಧ ಮುನಿಸಿಕೊಂಡು ಕ್ರಮಕ್ಕೂ ಮುಂದಾದ ಉದಾಹರಣೆಯುಂಟು. ದೇವೇಗೌಡರು ಪ್ರಧಾನಿಯಾದಾಗ ಈ ಸಂಗತಿಗಳನ್ನೆೆಲ್ಲಾಾ ನೆನೆಸಿಕೊಂಡು ವೈಜನಾಥ ಬಿದ್ದು ಬಿದ್ದು ನಗುತ್ತಿಿದ್ದರು.

ದೇವೇಗೌಡರು ಪ್ರಧಾನಿಯಾಗುವ ಹಿಂದಿನ ದಿನ ಕರ್ನಾಟಕ ಸರಕಾರ ಕೃಷ್ಣಾಾ ಮೇಲ್ದಂಡೆ ಯೋಜನೆ ಕಾಮಗಾರಿಗಳನ್ನು ಪಾರದರ್ಶಕತೆ ನಿಯಮದಿಂದ ಹೊರಗಿಟ್ಟು ತುಂಡು ಗುತ್ತಿಿಗೆ ನೀಡುವ ನಿರ್ಧಾರ ಕೈಗೊಳ್ಳುತ್ತದೆ. ಸ್ವಪಕ್ಷೀಯರೇ ಆದ ವೈಜನಾಥ ಇದನ್ನು ವಿರೋಧಿಸುತ್ತಾಾರೆ. ಅನಂತರ ಈ ಕಾಮಗಾರಿಗಳಲ್ಲಿ ಭಾರೀ ಪ್ರಮಾಣದ ಭ್ರಷ್ಟಾಾಚಾರ ವಿಧಾನ ಮಂಡಳದ ಕಲಾಪದಲ್ಲಿ ಪ್ರತಿಧ್ವನಿಸುತ್ತದೆ. ಪಟೇಲ ಸರಕಾರ ಕಾಮಗಾರಿಗಳ ಕುರಿತು ವಿಧಾನ ಸಭೆ ‘ಅಂದಾಜುಗಳ ಸಮಿತಿ’ ಮೂಲಕ ತನಿಖೆ ನಡೆಸುವ ನಿರ್ಧಾರ ಪ್ರಕಟಿಸುತ್ತದೆ. ಆಗ ಸಮಿತಿಗೆ ಅಧ್ಯಕ್ಷರಾದದ್ದು ವೈಜನಾಥ ಪಾಟೀಲ!

ಕೃಷ್ಣಾಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಅಂತಿಮ ವರದಿ ಈ ಸಮಿತಿಯಿಂದ 28 – 04-1998ರಂದು ವಿಧಾನಸಭೆಯಲ್ಲಿ ಮಂಡನೆಯಾಗುತ್ತದೆ. ಇದಕ್ಕೂ ಮುನ್ನ ಸಮಿತಿ ದಿ. 20-06-1997 ರಿಂದ 20-04-1998ರ ಮಧ್ಯೆೆ ಒಟ್ಟು 13 ಸಭೆ ನಡೆಸಿ ಅಂತಿಮ ನಿರ್ಣಯಕ್ಕೆೆ ಬರುತ್ತದೆ. ಕರ್ನಾಟಕ ಇತಿಹಾಸದಲ್ಲಿ ಕೃಷ್ಣಾಾ ಮೇಲ್ದಂಡೆ ಯೋಜನೆ ಒಂದು ಪ್ರಮುಖ ಯೋಜನೆಯಾಗಿದ್ದು, ಈ ಬಗ್ಗೆೆ ಅನೇಕ ವದಂತಿ, ಕಟ್ಟುಕತೆಗಳು ಆಗಿರುತ್ತವೆ. ಇವುಗಳಿಗೆಲ್ಲಾಾ ಪೂರ್ಣ ವಿರಾಮ ನೀಡುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಆದುದರಿಂದ ಈ ಯೋಜನೆಯ ಕಾಮಗಾರಿಗಳ ಬಗ್ಗೆೆ ಸಿಬಿಐ ಸಂಸ್ಥೆೆಯಿಂದ ಸಮಗ್ರ ತನಿಖೆ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಮಿತಿ ನಿರ್ದೇಶನವಾಗಿತ್ತು. ವೈಜನಾಥರು ಸದನದಲ್ಲಿ ವರದಿಯನ್ನು ಮಂಡಿಸುತ್ತಿಿದ್ದಂತೆಯೇ ಕೋಲಾಹಲ ಸೃಸ್ಟಿಿಯಾಗುತ್ತದೆ. ವರದಿಯ ಫಲಶೃತಿ ಇಂದಿಗೂ ಇಲ್ಲ!

ಇನ್ನೊೊಂದೆಡೆ ಪ್ರಾಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿಿನಲ್ಲಿ ಹೈದರಾಬಾದ ಕರ್ನಾಟಕ ಅಭಿವೃದ್ಧಿಿ ಮಂಡಳಿ ರಚನೆ, ನಂಜುಂಡಪ್ಪ ವರದಿಗಳ ನಂತರವೂ, ಹೈದರಾಬಾದ ಕರ್ನಾಟಕ ಅಭಿವೃದ್ಧಿಿಯಾಗಲಿಲ್ಲ. ಇಲ್ಲಿನ ಅಸಮಾನತೆ ನಿವಾರಣೆಗೆ 371ನೇ ವಿಧಿಯ ವಿಶೇಷ ಸವಲತ್ತೇ ಮದ್ದು ಎಂಬ ಬಲವಾದ ನಂಬಿಕೆ ಅವರದಾಗಿತ್ತು. ಈ ನಡುವೆ ಸರಕಾರಗಳು ವಿಶೇಷ ಸವಲತ್ತಿಿನ ಬೇಡಿಕೆಗೆ ನಿರ್ಲಕ್ಷ್ಯವನ್ನು ಮುಂದುವರಿಸುತ್ತಿಿರುವಾಗಲೇ ವೈಜನಾಥರು ಪ್ರತ್ಯೇಕತೆಯ ಕೂಗನ್ನೆೆಬ್ಬಿಿಸುತ್ತಾಾರೆ. ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣವನ್ನು ನಡೆಸಿ ಸರಕಾರಗಳಿಗೆ ಬಿಸಿ ಮುಟ್ಟಿಿಸುತ್ತಾಾರೆ. ವಿಶೇಷ ಸ್ಥಾಾನಮಾನವೇ ಬೇಕೆಂಬ ಬೃಹತ್ ಆಂದೋಲನಕ್ಕೆೆ ಕೇಂದ್ರ ಸರಕಾರ ಕೊನೆಗೂ ಮಣಿದು 2012ರ ಡಿಸೆಂಬರ್‌ನಲ್ಲಿ ಸಂವಿಧಾನದ 371ನೇ ವಿಧಿಗೆ (ಜೆ) ಉಪಬಂಧವನ್ನು ಸೇರಿಸುವ ಮೂಲಕ ದಶಕಗಳ ಬೇಡಿಕೆಯನ್ನು ಈಡೇರಿಸುತ್ತದೆ.

ವಿಶೇಷ ಸ್ಥಾಾನಮಾನವನ್ನು ಆಂಧ್ರ ಮಾದರಿಯಂತೆ ಇಡೀ ಕರ್ನಾಟಕಕ್ಕೂ ಕೊಟ್ಟರೆ ತಪ್ಪೇನಿಲ್ಲ. ಆಗ ಎಲ್ಲರಿಗೂ ಸಮಾನ ನ್ಯಾಾಯ ಸಿಗುತ್ತದೆ ಎಂದು ಪ್ರತಿಪಾದಿಸುತ್ತಿಿದ್ದ ವೈಜನಾಥರು, ವಿಶೇಷ ಸ್ಥಾಾನಮಾನದ ಘೋಷಣೆಯನ್ನು ಸಂಸತ್ತು ಅಂಗೀಕರಿಸಿದಾಗ ನಿಟ್ಟುಸಿರು ಬಿಟ್ಟು ಆನಂದ ಭಾಷ್ಪಗಳನ್ನು ಸುರಿಸಿದ್ದರು. ಮಾನವೀಯತೆ, ಸಿಟ್ಟು, ಸಿಡುಕುಗಳ ಸಮ್ಮಿಿಶ್ರಣವಾಗಿದ್ದ ಅವರ ಸಹವಾಸವೇ ಒಂದು ರೋಚಕ ಅನುಭವ. ಕೀರ್ತಿಯ ಉತ್ತುಂಗದಲ್ಲಿದ್ದಾಾಗಲೂ, ಆಡಂಬರದ ಜೀವನಕ್ಕೆೆ ಒಗ್ಗಿಿಕೊಂಡಿರಲಿಲ್ಲ. ಜಾರ್ಜ್ ಫರ್ನಾಂಡಿಸ್‌ರಂತೆ ‘ಬರೋಡ ಡೈನಮೆಟ್’ ಸ್ಫೋೋಟಿಸುವ ಸಂಚು ಹಾಕಿದ್ದನ್ನು ಮತ್ತು ಮನೆಯವರ ಮಾತಿಗೆ ಮಣಿದು ಅದನ್ನು ಕೈಬಿಟ್ಟಿಿದ್ದು, ದೇವೇಗೌಡರೊಂದಿಗಿನ ಸ್ನೇಹ, ಮುನಿಸುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿಿದ್ದರು.

ವಿಶೇಷ ಸ್ಥಾಾನಮಾನ ಪ್ರಾಾಪ್ತಿಿಯ ನಂತರವೂ ಅವರು ನೆಮ್ಮದಿಯಿಂದ ಇರಲಿಲ್ಲ! ವೈದ್ಯ, ದಂತ ವೈದ್ಯ ಮತ್ತು ರಾಜ್ಯ ಸರಕಾರಿ ಹುದ್ದೆೆಗಳ ನೇಮಕಾತಿಯಲ್ಲಿ ಹೈದರಾಬಾದ ಕರ್ನಾಟಕದ ನಿವಾಸಿಗಳಿಗೆ ವಿಶೇಷ ಮೀಸಲು ಸವಲತ್ತು ಅಕ್ಷರಶಃ ಸಿಗುವವರೆಗೂ ಅಧಿಕಾರಶಾಹಿ ವ್ಯವಸ್ಥೆೆಯ ಜತೆ ಸೆಣಸಾಡಿದರು. ಈ ವ್ಯವಸ್ಥೆೆ ಜಾರಿಯಲ್ಲಿಯೂ ವಿಳಂಬವಾಗಿತ್ತು. ಈ ಘಟನೆಯೂ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳಲ್ಲಿನ ಅವ್ಯವಹಾರ ಮತ್ತಿಿತರೆ ಪ್ರಚಲಿತ ವಿದ್ಯಮಾನಗಳನ್ನು ಪ್ರಸ್ತಾಾಪಿಸುತ್ತ ವ್ಯವಸ್ಥೆೆ ಯಾವಾಗ ಬದಲಾಗುತ್ತದೋ ಎಂದು ಹಂಬಲಿಸುತ್ತಾಾ, ‘ಅರೇ ಇವ್ನಾಾ.., ನಾನ ವರದಿ ಕೊಟ್ಟಿಿದ್ದು ಭೀ ಅದ.., ಯಾರ ಮುಂದ ಹೇಳಕೋಬೇಕು.’ ಎಂದು ವ್ಯವಸ್ಥೆೆಯ ವಿರುದ್ಧದ ಆಕ್ರೋೋಶವನ್ನು ವ್ಯಂಗ್ಯವಾಗಿ ಹೊರ ಹಾಕುತ್ತಿಿದ್ದರು ವೈಜನಾಥ. ಈಗ ಅವೆಲ್ಲವೂ ಬರೀ ನೆನಪು ಮಾತ್ರ.

Source Credit Vishwavani.news

Niranthara News

Leave a Reply

Your email address will not be published. Required fields are marked *

Next Post

ಕ್ಷಯರೋಗದ ಶೀಘ್ರ ಪತ್ತೆಗೆ ಹೊಸ ಮಾದರಿಯ ಪರೀಕ್ಷೆ

Sat Nov 9 , 2019
Share on Facebook Tweet it Share on Google Pin it Share it Email Share on Facebook Tweet it Share on Google Pin it Share it Email Source Credit Vishwavani.news ಲೇಖಕ: ಡಾ. ಕಿರಣ್ ವಿ. ಎಸ್. ವೈದ್ಯರು ವಿಶ್ವ ಆರೋಗ್ಯ ಸಂಸ್ಥೆೆ 2035 ಇಸವಿಯೊಳಗೆ ಕ್ಷಯರೋಗವನ್ನು ಶೇ.90 ರಷ್ಟು ಕಡಿಮೆ ಮಾಡಬೇಕೆಂದು ಯೋಜನೆ ಹಾಕಿದೆ. ಇದಕ್ಕಾಗಿ ಸರಳ ರೋಗಪತ್ತೆ ವಿಧಾನಗಳನ್ನು ಅಭಿವೃದ್ಧಿ ಪಡಿಸುವುದು ಬಹಳ ಮುಖ್ಯ. ಪ್ರಸ್ತುತ ಸಂಶೋಧನೆಗಳು ಇದನ್ನೇ ಮುಖ್ಯ ಧ್ಯೇಯವಾಗಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links