ಕನ್ಯಾಪೊರೆ ಹಾಗೂ ವರ್ಜಿನಿಟಿ ಬಗ್ಗೆ ಇರುವ ತಪ್ಪು ಕಲ್ಪನೆಗಳು

Source Credit Kannada.boldsky.com

ಹೆಣ್ಣು ಗಂಡು ಮೊದಲ ಬಾರಿ ಕೂಡಿದಾಗ ರಕ್ತಸ್ರಾವ ಆಗಲೇ ಬೇಕಾ?

ಮದುವೆಗೆ ಮೊದಲಿನ ಆಕೆಯ ಶೀಲವನ್ನು ಕನ್ಯೆಪೊರೆ ಮೂಲಕ ಅಳಿಯಲಾಗುತ್ತಿದೆ. ಮದುವೆಯಾದ ಬಳಿಕ ಗಂಡು-ಹೆಣ್ಣು ಕೂಡಿದಾಗ ರಕ್ತಸ್ರಾವವಾದರೆ ಮಾತ್ರ ಆಕೆ ಶೀಲವಂತೆ ಅಂತ ಹೇಳಲಾಗುವುದು. ಇಲ್ಲದಿದ್ದರೆ ಆಕೆ ಕನ್ಯೆ ಆಗಿರಲಿಲ್ಲ ಎಂದು ಹೇಳಲಾಗುವುದು. ಈ ಭಯದಿಂದಲೇ ಹೆಣ್ಣು ಮಕ್ಕಳು ಮದುವೆಗೆ ಮೊದಲು ಕನ್ಯಾಪೊರೆ ಹರಿದಿದ್ದರೆ ಅದರ ಮರುಜೋಡಣೆಯ ಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಕನ್ಯಾಪೊರೆ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆದಾಗ ಮಾತ್ರ ಹರಿಯಲು ಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ಹೇಳುವುದಾದರೆ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆದಾಗ ಎಲ್ಲಾ ಹೆಣ್ಣುಮಕ್ಕಳಲ್ಲಿ ರಕ್ತಸ್ರಾವವಾಗಲ್ಲ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಯೋನಿ, ಕನ್ಯಾಪೊರೆಯ ಬೆಳವಣಿಗೆಯನ್ನು ತಿಳಿದುಕೊಳ್ಳಬೇಕು.

ಏನಿದು ಕನ್ಯಾಪೊರೆ?

ಕನ್ಯಾಪೊರೆ ಎನ್ನುವುದು ಯೋನಿಯ ಹೊರಭಾಗವನ್ನು ಮುಚ್ಚಿರುವ ಒಂದು ಪೊರೆ. ಈ ಪೊರೆಯ ಮಧ್ಯ ಭಾಗದಲ್ಲಿ ಯೋನಿ ಕಿಂಡಿವಿರುತ್ತದೆ. ಯೋನಿಯು ಋುತುಸ್ರಾವಕ್ಕೆ, ಸಂಭೋಗಕ್ಕೆ ಮತ್ತು ಮಗುವಿನ ಜನನಕ್ಕೆ ಇರುವ ಒಂದು ಕೊಳವೆಯಂಥ ಸ್ನಾಯುಯುಕ್ತ ಮಾರ್ಗವಾಗಿದೆ. ಯೋನಿ ಪೊರೆ ಹುಟ್ಟಿನಿಂದಲೂ ಇರುತ್ತದೆ, ಆದರೆ ಕೆಲವರಲ್ಲಿ ತೆಳ್ಳಗಿರಬಹುದು, ಸಡಿವಿರಬಹುದು, ಮತ್ತೆ ಕೆಲವರಲ್ಲಿ ದಪ್ಪವಾಗಿ , ಗಟ್ಟಿಯಾಗಿರಬಹುದು.

ಕೆಲವರಲ್ಲಿ ಕನ್ಯಾಪೊರೆಯ ಯೋನಿ ಕಿಂಡಿಯೂ ತುಂಬಾ ಚಿಕ್ಕದಾಗಿರಬಹುದು ಇಲ್ಲಾ ದೊಡ್ಡದಾಗಿರಬಹುದು, ಕೆಲವರಲ್ಲಿ ಬಿಗಿಯಾಗಿರಬಹುದು, ಇನ್ನು ಕೆಲವರಲ್ಲಿ ಪೂರ್ತಿ ಮುಚ್ಚಿಕೊಂಡಿರಬಹುದು. ಕನ್ಯಾಪೊರೆ ಪೂರ್ತಿ ಮುಚ್ಚಿಕೊಂಡಿದ್ದರೆ ಹೆಣ್ಣು ಮಕ್ಕಳು ಋತುಮತಿಯಾಗುವುದಿಲ್ಲ, ಇದನ್ನು ಶಸ್ತ್ರ ಚಿಕಿತ್ಸೆ ಮಾಡಿಸಿ ಸರಿಪಡಿಸಬಹುದು.

ಯಾರಲ್ಲಿ ಮೊದಲ ಸಂಭೋಗದಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುವುದಿಲ್ಲ:

* ಕನ್ಯಾಪೊರೆ ಸಡಿಲವಿದ್ದರೆ, ತೆಳ್ಳಗಿದ್ದರೆ, ಯೋನಿಕಿಂಡಿಯ ಗಾತ್ರ ಸರಿಯಿದ್ದರೆ ಮೊದಲ ಸಂಭೋಗದಲ್ಲಿ ಯಾವ ತೊಂದರೆಯೂ ಆಗದಿರಬಹುದು. ನೋವು, ರಕ್ತಸ್ರಾವ ಕಾಣಿಸಿಕೊಳ್ಳದಿರಬಹುದು.

* ಕೆಲವರಲ್ಲಿ ಕನ್ಯಾಪೊರೆ ತುಂಬಾ ಸಡಿಲವಾಗಿರುತ್ತದೆ, ಅಂಥವರಲ್ಲಿ ಮೊದಲ ಬಾರಿ ಸಂಭೋಗ ಕ್ರಿಯೆ ನಡೆದಾಗ ರಕ್ತಸ್ರಾವ ಕಾಣಿಸುವುದಿಲ್ಲ.

* ಇನ್ನು ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆದಾಗ ಪ್ರತಿಯೊಬ್ಬರಲ್ಲೂ ರಕ್ತಸ್ರಾವವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಆಧಾರದ ಮೇಲೆ ಅವರು ಕನ್ಯೆತ್ವವನ್ನು ಅಳಿಯಲು ಸಾಧ್ಯವೇ ಇಲ್ಲ.

ಕನ್ಯಾಪೊರೆಯ ಬಗ್ಗೆ ತಪ್ಪುಕಲ್ಪನೆಗಳು

* ಕನ್ಯಾಪೊರೆ ನೋಡಿ ಆಕೆ ಕನ್ಯೆಯೇ, ಇಲ್ಲವೇ ಎಂದು ಹೇಳಲು ಸಾಧ್ಯವಿಲ್ಲ.

* ಇನ್ನು ಸ್ಪೋರ್ಟ್ಸ್‌ನಲ್ಲಿರುವವರಿಗೆ, ಸೈಕ್ಲಿಂಗ್, ಜಿಮ್ನಾಸ್ಟಿಕ್, ಕುದುರೆ ಓಡಿಸುವುದು ಮಾಡಿದರೆ ಕನ್ಯಾಪೊರೆ ಹರಿಯುವುದು ಅಂತ ಹೇಳುತ್ತಾರೆ. ಆದರೆ ಇವುಗಳಿಂದ ಕನ್ಯಾಪೊರೆ ಹರಿಯುವುದಿಲ್ಲ.

* ಟ್ಯಾಂಪೂನ್ ಬಳಕೆ ಮಾಡುವುದರಿಂದ ಕನ್ಯಾಪೊರೆ ಹರಿಯುವುದಿಲ್ಲ.

ಕನ್ಯಾಪೊರೆ ಯೋನಿಯ ಹೊರಗಡೆ ಇರುವ ಪೊರೆಯಾಗಿದ್ದು ಇದು ಲ್ಯಾಬಿಯಾ ಹಿರಿದು ಹಾಗೂ ಕಿರಿದು ಎಂಬ ಪದರಗಳಿಂದ ಸಂರಕ್ಷಿಸಲ್ಪಟ್ಟಿರುತ್ತದೆ ಹಾಗೂ ಇದು ಹಿಗ್ಗುವುದು.

ಮೊದಲ ಸಂಭೋಗದಲ್ಲಿ ರಕ್ತಸ್ರಾವ ಏಕೆ ಉಂಟಾಗುತ್ತದೆ?

* ಈ ಮೊದಲೇ ತಿಳಿಸಿದಂತೆ ಕೆಲವರಲ್ಲಿ ಕನ್ಯಾಪೊರೆ ದಪ್ಪವಾಗಿರುತ್ತದೆ, ಬಿಗಿಯಾಗಿರುತ್ತದೆ ಅಂಥವರಲ್ಲಿ ಮೊದಲ ಸಂಭೋಗದಲ್ಲಿ ಕನ್ಯಾಪೊರೆ ಹರಿದು ನೋವು ಹಾಗೂ ಸ್ವಲ್ಪ ರಕ್ತಸ್ರಾವ ಕಾಣಿಸಿಕೊಳ್ಳುವುದು.

* ಇನ್ನು ಕೆಲವರಲ್ಲಿ ರಕ್ತಸ್ರಾವವಾದರೂ ಅದು ಕ್ನಯಾಪೊರೆ ಹರಿದು ಆಗಿದೆ ಎಂದು ಹೇಳಲು ಸಾಧ್ಯವಿಲ್ಲ, ಯೋನಿಯ ಇತರ ಭಾಗದಿಂದಲು ರಕ್ತಸ್ರಾವವಾಗಬಹುದು.

* ಕೆಲವರಲ್ಲಿ ಕನ್ಯಾಪೊರೆ ತುಂಬಾ ಸಡಿಲವಾಗಿರುವುದರಿಂದ ಅಂಥವರಲ್ಲಿ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆದಾಗ ರಕ್ತಸ್ರಾವ ಕಾಣಿಸುವುದಿಲ್ಲ.

ಆದ್ದರಿಂದ ಕನ್ಯೆತ್ವ ಎನ್ನುವುದು ಮನಸ್ಸಿಗೆ ಸಂಬಂಧಿಸಿದ ವಿಷಯವೇ ಹೊರತು ದೇಹಕ್ಕೆ ಸಂಬಂಧಿಸಿದ ವಿಷಯವಲ್ಲ. ಒಬ್ಬ ಹೆಣ್ಣು ಮೊದಲ ಬಾರಿಗೆ ತಾನೇ ಇಚ್ಛೆಪಟ್ಟು ಪುರುಷನೊಂದಿಗೆ ಕೂಡಿದಾಗ ಮಾತ್ರ ಆಕೆಯ ಕನ್ಯೆತ್ವ ಇಲ್ಲವಾಗುವುದೇ ಹೊರತು, ಆಕೆಯ ಕನ್ಯಾಪೊರೆ ಹರಿದು ರಕ್ತಸ್ರಾವವಾದರೆ ಮಾತ್ರ ಕನ್ಯೆಯಾಗಿದ್ದಳು ಎಂದು ಭಾವಿಸುವುದು ತಪ್ಪು. ಈ ನಿಟ್ಟಿನಲ್ಲಿ ಪುರುಷರು ಯೋಚಿಸುವ ರೀತಿ ಬದಲಾದರೆ ಸಂಸಾರದಲ್ಲಿ ಈ ಕಾರಣದಿಂದಾಗಿ ತೊಂದರೆ ಉಂಟಾಗುವುದಿಲ್ಲ.

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಉದ್ಯಾನ ನಗರಿ ಬೆಂಗಳೂರು ಈಗ ಗುಂಡಿಗಳ ನಗರ

Sat Nov 9 , 2019
Share on Facebook Tweet it Share on Google Pin it Share it Email Share on Facebook Tweet it Share on Google Pin it Share it Email Source Credit Vishwavani.news ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ, ಎಲ್ಲವನ್ನೂ ಮಾಡುತ್ತೇವೆಂದು ಬಡಾಯಿ ಕೊಚ್ಚಿಿಕೊಂಡವರ ಸರಕಾರ ನೂರು ದಿನ ಪೂರೈಸಿದೆ. ತಮ್ಮ ನೂರು ದಿನಗಳ ಸಾಧನೆಯ ಪುಸ್ತಕದಲ್ಲಿ ಬೆಂಗಳೂರಿನ ಸಮಸ್ಯೆೆಗಳಿಗೆ ಪರಿಹಾರ ನೀಡಿದ ಬಗ್ಗೆೆ ವಿಷಯಗಳೇ ಇಲ್ಲ! ಮಾಡುವುದು 9 ಗಂಟೆಯ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links