ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಶ್ಚಿತಾರ್ಥಕ್ಕೆ ವಜ್ರದ ಉಂಗುರ ಸೂಕ್ತವೇ?

Source Credit Kannada.boldsky.com

ವಜ್ರದ ಉಂಗುರದಿಂದ ಉಂಟಾಗುವ ಉತ್ತಮ ಪರಿಣಾಮಗಳು

ಅತ್ಯಂತ ಬೆಲೆ ಬಾಳುವ ಹಾಗೂ ಬಹು ಕಾಂತೀಯ ರತ್ನ ಎಂದರೆ ವಜ್ರ. ವಜ್ರವು ಪ್ರಣಯ ದೇವತೆಯಾದ ಶುಕ್ರನನ್ನು ಪ್ರತಿನಿಧಿಸುತ್ತದೆ. ಹಾಗಾಗಿ ವಜ್ರವನ್ನು ಪ್ರೀತಿಯ ಸಂಕೇತವಾಗಿ ಪರಿಗಣಿಸಲಾಗುವುದು. ವಜ್ರ ಧರಿಸುವುದರಿಂದ ಜನ್ಮ ಕುಂಡಲಿಯಲ್ಲಿ ಇರುವ ಶುಕ್ರನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುವುದು. ವಜ್ರವು ಸಂಬಂಧದಲ್ಲಿ ಶಾಶ್ವತವಾದ ಪ್ರೀತಿ ಹಾಗೂ ಆನಂದವನ್ನು ನೀಡುವುದು ಎಂದು ಹೇಳಲಾಗುತ್ತದೆ. ವಧು-ವರರಲ್ಲಿ ಪರಸ್ಪರ ಪ್ರೀತಿ, ಕಾಳಜಿ ಹಾಗೂ ಹೊಂದಾಣಿಕೆಗೆ ಸ್ಫೂರ್ತಿ ನೀಡುವುದರ ಮೂಲಕ ಜೀವನವನ್ನು ಸುಧಾರಿಸುವುದು ಎಂದು ಹೇಳಲಾಗುತ್ತದೆ. ಅಲ್ಲದೆ ಸುತ್ತಲ ಜನರಿಂದ ಪ್ರಶಂಸಿಸಲು ಮತ್ತು ಮೆಚ್ಚುಗೆಯನ್ನು ಪಡೆದುಕೊಳ್ಳಲು ಸಹಕರಿಸುವುದು.

ವಜ್ರದ ಉಂಗುರದಿಂದ ಉಂಟಾಗುವ ಕೆಟ್ಟ ಪರಿಣಾಮಗಳು

ವಜ್ರವು ಅತ್ಯಂತ ಬೆಲೆಬಾಳುವ ಹಾಗೂ ಆಕರ್ಷಕ ರತ್ನ. ಆದರೆ ಇದರಿಂದ ಎಷ್ಟು ಉತ್ತಮ ಗುಣಗಳಿರುತ್ತವೆಯೋ ಅಷ್ಟೇ ನಕಾರಾತ್ಮಕ ಗುಣಗಳು ಇರುತ್ತದೆ ಎಂದು ಹೇಳಲಾಗುವುದು. ಕುಂಡಲಿಯಲ್ಲಿ ನಮ್ಮ ಅದೃಷ್ಟದ ಗ್ರಹ ಯಾವುದು? ನೀಚ ಗ್ರಹ ಯಾವುದು? ಅದರಿಂದ ಉಂಟಾಗುವ ಕೆಟ್ಟ ಗುಣಗಳು ಯಾವವು? ಎನ್ನುವುದನ್ನು ಸರಿಯಾಗಿ ಪರಿಶೀಲಿಸಬೇಕಾಗುವುದು. ಶುಕ್ರನನ್ನು ಪ್ರತಿನಿಧಿಸುವ ಈ ರತ್ನವು ಶುಕ್ರ ಗ್ರಹದ ಪ್ರಭಾವ ಹೇಗಿದೆ? ಎನ್ನುವುದನ್ನು ಮೊದಲು ತಿಳಿಯಬೇಕು. ಶುಕ್ರನು ಕುಂಡಲಿಯಲ್ಲಿ ದೋಷಪೂರಿತನಾಗಿದ್ದರೆ ಅಥವಾ ಹೆಚ್ಚು ಶಕ್ತಿಯನ್ನು ನೀಡದ ಸ್ಥಾನದಲ್ಲಿ ಇದ್ದರೆ ವಜ್ರದ ಉಂಗುರವನ್ನು ಧರಿಸಬಾರದು. ಅದು ಕೆಟ್ಟ ಪರಿಣಾಮಗಳಿಗೆ ಹೆಚ್ಚು ಪ್ರಚೋದನೆ ಮಾಡುವುದು. ಅಲ್ಲದೆ ಸಂಬಂಧ ಅಥವಾ ಪ್ರೀತಿಯ ಜೀವನದ ಮೇಲೆ ಹೆಚ್ಚು ಋಣಾತ್ಮಕ ಪ್ರಭಾವವನ್ನು ಬೀರುವುದು.

ರಾಶಿಗಳ ಆಧಾರದ ಮೇಲೆ ಪ್ರಭಾವ ಬೀರುವುದು

ವಜ್ರದ ಉಂಗುರವು ಎಲ್ಲಾ ರಾಶಿಯವರಿಗೂ ಉತ್ತಮ ಪರಿಣಾಮ ಬೀರದು. ಕೆಲವು ರಾಶಿಗಳಿಗೆ ಧನಾತ್ಮಕ ಫಲಿತಾಂಶವನ್ನು ಕೊಡುವುದು. ಕೆಲವು ರಾಶಿಯವರಿಗೆ ಅತ್ಯುತ್ತಮ ಸ್ಥಿತಿಯನ್ನು ತಂದೊಡ್ಡುವುದು. ಉತ್ತಮ ಫಲಿತಾಂಶವನ್ನು ಪಡೆದರೆ ವ್ಯಕ್ತಿ ಜೀವನದಲ್ಲಿ ಅದೃಷ್ಟ ಹಾಗೂ ಸಂತೋಷವನ್ನು ಪಡೆದುಕೊಳ್ಳುವನು. ಅದೇ ಋಣಾತ್ಮಕ ಪ್ರತಿಫಲಕ್ಕೆ ಒಳಗಾದರೆ ಜೀವನದಲ್ಲಿ ಸಹಿಸಲಾಗದಷ್ಟು ಕೆಟ್ಟ ಪರಿಣಾಮವನ್ನು ಅನುಭವಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರಿಗೆ ವಜ್ರದ ಹರಳು ಉತ್ತಮ ಫಲವನ್ನು ನೀಡುವುದು. ಅದೇ ಮೇಷ, ಸಿಂಹ, ಕರ್ಕ, ಧನು ಮತ್ತು ಮೀನ ರಾಶಿಯವರಿಗೆ ಉತ್ತಮ ಫಲವನ್ನು ನೀಡುವುದಿಲ್ಲ. ಈ ರಾಶಿಯವರ ಮೇಲೆ ನಕಾರಾತ್ಮಕ ಪ್ರಭಾವವನ್ನು ಹೆಚ್ಚಾಗಿ ಬೀರುವುದು.

ನಿಶ್ಚಿತಾರ್ಥದ ಉಂಗುರವನ್ನಾಗಿ ವಜ್ರವನ್ನು ಆಯ್ಕೆ ಮಾಡಬಹುದೇ?

ಪ್ರತಿಯೊಂದು ರಾಶಿಗಳಿಗೆ ವಿಶೇಷವಾದ ಕಲ್ಲು ಅಥವಾ ಹರಳುಗಳು ಹೆಚ್ಚು ಪ್ರಭಾವವನ್ನು ಬೀರುತ್ತವೆ. ಹಾಗಾಗಿ ಮನಸ್ಸು ಬಯಸಿದ ಹಾಗೆ ನಾವು ಹರಳುಗಳನ್ನು ಆಯ್ಕೆ ಮಾಡಿಕೊಂಡು ಧರಿಸಬಾರದು. ಇತರರಿಗೆ ಪ್ರಭಾವ ಬೀರಿದ ಹಾಗೆ ನಿಮ್ಮ ಮೇಲೂ ಉತ್ತಮ ಪ್ರಭಾವ ಬೀರುತ್ತದೆ ಎಂದು ಭಾವಿಸುವುದು ತಪ್ಪು. ಕುಂಡಲಿಯಲ್ಲಿ ಯಾವ ಗ್ರಹಗಳು ಯಾವ ಸ್ಥಾನದಲ್ಲಿದೆ ಎನ್ನುವುದನ್ನು ಅರಿತು, ನಂತರ ನಿಮಗೆ ಯಾವ ಹರಳು ಸೂಕ್ತ ಫಲ ನೀಡುವುದು? ಎನ್ನುವುದನ್ನು ತಿಳಿಯಬೇಕು. ನಂತರ ಅದಕ್ಕೆ ಅನುಗುಣವಾದ ಹರಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಅಂತೆಯೇ ವಜ್ರವು ನಮ್ಮ ನಕ್ಷತ್ರ, ರಾಶಿ ಹಾಗೂ ಕುಂಡಲಿಯಲ್ಲಿರುವ ಗ್ರಹಗತಿಗಳಿಗೆ ಸೂಕ್ತವಾಗಿದೆಯೇ? ಎನ್ನುವುದನ್ನು ಮೊದಲು ಅರಿಯಬೇಕು, ನಂತರ ಧರಿಸುವುದು ಉತ್ತಮ. ಯಾವುದೇ ಚಿಂತನೆ ಅಥವಾ ಪರಿಶೀಲನೆ ನಡೆಸದೆ ನಿಶ್ಚಿತಾರ್ಥಕ್ಕೆ ವಜ್ರದ ಉಂಗುರಗಳನ್ನು ಖರೀದಿಸಬಾರದು.

ನಿಶ್ಚಿತಾರ್ಥಕ್ಕೆ ಉಂಗುರಗಳ ಆಯ್ಕೆ ಮಾಡುವಾಗ ಜ್ಯೋತಿಷ್ಯದ ಮೊರೆ ಹೋಗುವುದು ಉತ್ತಮ

ನಿಶ್ಚಿತಾರ್ಥ ಎನ್ನುವುದು ನಿಮ್ಮ ಭವಿಷ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುವುದು. ಆ ಸುಂದರ ಕ್ಷಣಗಳು ನಿಮ್ಮ ಜೀವನದಲ್ಲಿ ಸದಾ ಹಸನಾಗಿರಲು ನೀವು ಜ್ಯೋತಿಷಿಗಳಿಂದ ಯಾವ ಹರಳು ನಿಮಗೆ ಸೂಕ್ತ ಎನ್ನುವುದನ್ನು ಅರಿಯುವುದು ಉತ್ತಮ. ಉತ್ತಮ ಜ್ಯೋತಿಷಿಯನ್ನು ಸಂಪರ್ಕಿಸಿ ಅವರಲ್ಲಿ ನಿಮ್ಮ ಕುಂಡಲಿಗೆ ಅನುಗುಣವಾಗಿ ಯಾವ ಹರಳನ್ನು ಧರಿಸಬೇಕು? ಯಾವ ಹರಳು ನಿಮ್ಮ ಪ್ರೀತಿ ಹಾಗೂ ಕುಟುಂಬದ ಜೀವನವನ್ನು ಸುಖದಿಂದ ಕೂಡಿರುವಂತೆ ಮಾಡುವುದು? ಎನ್ನುವುದನ್ನು ಅರಿಯಿರಿ. ನಂತರ ಆ ಹರಳಿನ ಉಂಗುರವನ್ನು ಧರಿಸಿ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ. ಹೊರತಾಗಿ ಕುರುಡು ನಂಬಿಕೆಯಿಂದ ವಜ್ರವನ್ನೇ ಧರಿಸಬೇಕು ಎನ್ನುವ ಹಠಕ್ಕೆ ಅಥವಾ ಆಯ್ಕೆಗೆ ಮುಂದಾಗದಿರಿ.

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಅತಿಯಾದ ಮಾಯಿಶ್ಚರೈಸರ್‌ನಿಂದ ನಿಮ್ಮ ಚರ್ಮದ ಮೇಲಾಗುವ ಪರಿಣಾಮಗಳು

Fri Nov 8 , 2019
Share on Facebook Tweet it Share on Google Pin it Share it Email Share on Facebook Tweet it Share on Google Pin it Share it Email Source Credit Kannada.boldsky.com Pin it Email https://nirantharanews.com/archives/515#bW9pc3R1cmlzZXI ಮಾಯಿಶ್ಚರೈಸರ್ ಎಷ್ಟು ಬಾರಿ ಮಾಡಿದರೆ ಒಳ್ಳೆಯದು? ಆರೋಗ್ಯಕರ ಹಾಗೂ ಆಕರ್ಷಕ ತ್ವಚೆಗಾಗಿ ಪ್ರತಿದಿನ ಮಾಯಿಶ್ಚರೈಸರ್ ಮಾಡಬೇಕು, ಆದರೆ ದಿನದಲ್ಲಿ ಎರಡು ಬಾರಿ ಮಾಡಿದರೆ ಸಾಕಾಗುವುದು. ಬೆಳಗ್ಗೆ ಹಚ್ಚಿದರೆ ಇನ್ನು ಮಲಗುವ ಮುನ್ನ ಮಾಡಿದರೆ ಸಾಕು. ಚಳಿಗಾಲದಲ್ಲಿ ತ್ವಚೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links