ಹಿಂದಿ ಹೇರಿಕೆ, ಇಂಗ್ಲಿಷ್ ವಾಕರಿಕೆ ಎಂಬ ಭಾಷಾಂಧತೆ

Source Credit Vishwavani.news

ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ವಕೀಲರು ಧಾರವಾಡ 

ಕನ್ನಡ ಎಂಬ ಭಾಷಾ ವ್ಯಾಪಾರದ ಅಥವಾ ಮಾತೃಭಾಷೆ ಎಂಬ ಸುತ್ತ ನಡೆಯುತ್ತಿರುವ ಈ ಅಭಿಮಾನಕ್ಕೆೆ ಅಥವಾ ಭಾಷಾಂಧತೆಗೆ ಆಘಾತವನ್ನು ಇತ್ತೀಚೆಗೆ ನಡೆದ ಒಂದು ಸಂಶೋಧನಾ ವರದಿ ಕೊಟ್ಟಿದೆ.

ಭಾಷೆಯ ಕುರಿತಾಗಿ ಇತ್ತೀಚೆಗೆ ಮುಖ್ಯವಾಗಿ ಮೂರು ಅಂಶಗಳು ಹೆಚ್ಚು ಚರ್ಚೆ ಗೊಳ್ಳುತ್ತಿಿವೆ. ಒಂದು ಹಿಂದಿ ರಾಷ್ಟ್ರಭಾಷೆ ಎಂಬ ಹೇಳಿಕೆ, ಎರಡು ಇಂಗ್ಲಿಿಷ್ ಮಾಧ್ಯಮ ಶಾಲೆಗಳನ್ನು ಸರಕಾರ ಆರಂಭಿಸಿರುವುದು, ಮೂರು ಕೇಂದ್ರ ಸರಕಾರ, ಬ್ಯಾಾಂಕ್‌ಗಳು ಹಾಗೂ ಇತರ ಸಂಸ್ಥೆೆಗಳು ನಡೆಸುವ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವ ಕುರಿತು. ಇವೆಲ್ಲಕ್ಕಿಿಂತ ಮಹತ್ವದ್ದೆೆಂದರೆ ಆಧಾರದ ಮೇಲೆ ನಡೆದ ಸಂಶೋಧನೆ ಭಾಷೆ ಮತ್ತು ಜನಾಂಗದ ವಲಸೆ ಕುರಿತಾದದ್ದು. ಈ ಅಂಶಗಳನ್ನು ಇಟ್ಟುಕೊಂಡು ಯಾವುದೇ ಪೂರ್ವಾಗ್ರಹಕ್ಕೆೆ ಒಳಗಾಗದೆ ಭಾಷಾ ಅಸ್ಮಿಿತೆಯ ಕುರಿತು ಚರ್ಚೆ ಮಾಡುವುದು ಅಗತ್ಯವೆಂದು ನನಗೆ ಅನ್ನಿಿಸುತ್ತದೆ.

ಶಿಕ್ಷಣ ಮಾಧ್ಯಮ ಕಡ್ಡಾಾಯವಾಗಿ ಕನ್ನಡವಾಗಿರಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರಕಾರ ಅದಕ್ಕೆೆ ಪೂರಕವಾದ ಆದೇಶವನ್ನು ಮಾಡಿತ್ತು. ಖಾಸಗಿ ಶಿಕ್ಷಣ ಸಂಸ್ಥೆೆಗಳ ಸಂಘ ಮತ್ತು ಕೆಲ ಪೋಷಕರು ಇದನ್ನು ನ್ಯಾಾಯಾಲಯದಲ್ಲಿ ಪ್ರಶ್ನಿಿಸಿದರು. ಸುಪ್ರೀಂ ಕೋರ್ಟ್ ತಮ್ಮ ಶಿಕ್ಷಣ ಮಾಧ್ಯಮ ಯಾವುದಾಗಿರಬೇಕು ಎಂಬ ಆಯ್ಕೆೆಯ ಹಕ್ಕು ಆಯಾ ಪೋಷಕರದ್ದು ಎಂದು ಹೇಳಿತು. ಇಂಗ್ಲಿಿಷ ಮಾಧ್ಯಮ ಶಾಲೆಗಳನ್ನು ಕನ್ನಡೀಕರಣಗೊಳಿಸುವ ಸರಕಾರದ ಯತ್ನ ಅಂದಿಗೆ ಸೋತು ಹೋಯಿತು. ಕನ್ನಡ ಸಾಹಿತ್ಯ ಪರಿಚಾರಕನಾದ ನಾನು ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿಕೆಯಿಂದ ಮಕ್ಕಳ ಬುದ್ಧಿಿ ವಿಕಾಸವಾಗುತ್ತದೆ. ತಿಳಿವಳಿಕೆ ಮತ್ತು ಕಾನ್ಫಿಿಡೆನ್‌ಸ್‌ ಲೆವಲ್ ಹೆಚ್ಚಾಾಗುತ್ತದೆ ಎಂದು ನನ್ನ ಮಗಳನ್ನು ಕನ್ನಡ ಮಾಧ್ಯಮಕ್ಕೆೆ ಸೇರಿಸಿದೆ.

ಕನ್ನಡ ಮಾಧ್ಯಮಕ್ಕೆೆ ಬರುವವರು ಹಿಂದುಳಿದ, ದಲಿತ, ಹಳ್ಳಿಿ, ಕೊಳಗೇರಿಗಳಲ್ಲಿ ವಾಸಿಸುವ ಕೂಲಿಕಾರರ ಮಕ್ಕಳು ಎಂಬ ಭಾವನೆ ಶಿಕ್ಷಣ ಸಂಸ್ಥೆೆಗಳಲ್ಲಿ ಮತ್ತು ಸಮಾಜದಲ್ಲಿ ಬೇರೂರಿದೆ ಎಂಬುದು ನಿಧಾನವಾಗಿ ನನಗೆ ತಿಳಿಯಿತು. ಆಂಗ್ಲ ಮತ್ತು ಕನ್ನಡ ಮಾಧ್ಯಮ ಇರುವ ಶಿಕ್ಷಣ ಸಂಸ್ಥೆೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳೆಂದರೆ, ಸಾಧಾರಣ ಬುದ್ಧಿಿಮತ್ತೆೆಯವರು ಎಂಬ ಗ್ರಹಿಕೆ ಇದೆ. ಆ ಮಕ್ಕಳು ತಮ್ಮ ಪ್ರತಿಭೆ ತೋರಿಸಬೇಕೆಂದು ಎಷ್ಟೇ ಯತ್ನಿಿಸಿದರೂ ಅವಕಾಶ, ಪ್ರೋೋತ್ಸಾಾಹ ಸಿಗುವುದೇ ಇಲ್ಲ. ಇದು ನನ್ನ ಮಗಳು ಕನ್ನಡ ಮಾಧ್ಯಮದಲ್ಲಿ ಓದುವ ಕಾರಣದಿಂದ ನಾನು ಕಂಡುಕೊಂಡ ಇಂತಹ ತಾತ್ಸಾಾರ, ಅವಮಾನ ನನ್ನ ಮಗನಿಗೂ ಆಗಬಾರದೆಂದು ನಾನು 50 ಸಾವಿರ ಡೊನೇಶನ್ ಕೊಟ್ಟು ಪ್ರತಿಷ್ಠಿಿತ ಸಿಬಿಎಸ್‌ಸಿ ಶಿಕ್ಷಣ ಸಂಸ್ಥೆೆಗೆ ಒಂದನೇ ತರಗತಿಗೆ ಸೇರಿಸಿದೆ. ಈ ಘಟನೆ ಹೇಳುವ ಉದ್ದೇಶ ಇಷ್ಟೆೆ; ನಮ್ಮ ಮಾತೃಭಾಷೆ ಎಂಬ ಅಭಿಮಾನ ಅಥವಾ ದುರಭಿಮಾನದ ಕಾರಣದಿಂದ ಉತ್ತಮ ಶಿಕ್ಷಣ ಮತ್ತು ವಿಕಾಸದ ಅವಕಾಶವನ್ನು ಮಕ್ಕಳಿಗೆ ತಪ್ಪಿಿಸಿ, ಅವರು ಈ ಜಾಗತಿಕ ಸಮಾಜದಲ್ಲಿ ಕುಬ್ಜರಾಗಿ ಬದುಕುವ ಸಂದರ್ಭವನ್ನು ನಾವು ಸೃಷ್ಟಿಿಸಬಾರದು.

ಸರಕಾರದ ಶಿಕ್ಷಣ ನೀತಿ ಇಂಗ್ಲಿಿಷ್ ಒಂದು ಭಾಷೆಯಾಗಿ ಪ್ರಾಾಥಮಿಕ ಹಂತದಿಂದಲೇ ಮಕ್ಕಳು ಕಲಿಯುತ್ತಾಾರಲ್ಲವೆ? ಹಾಗಾದರೆ ಇಂಗ್ಲಿಿಷ್ ಭಾಷೆಯಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರೇಕೆ ಫೇಲ್ ಆಗುತ್ತಾಾರೆ? ಕೆಲವು ಉದ್ಯೋೋಗಗಳು ಅಖಿಲ ಭಾರತ, ಅಂತರ್ ರಾಜ್ಯ ಅಥವಾ ಅನ್ಯ ಭಾಷಿಕ ಪ್ರದೇಶದಲ್ಲಿ ಇರುತ್ತವೆ. ಉದಾಹರಣೆಗೆ ಕನ್ನಡಿಗನೊಬ್ಬ ಮಹಾರಾಷ್ಟ್ರದಲ್ಲಿ ನೌಕರಿ ಮಾಡಬೇಕಾಗುತ್ತದೆ. ಆಗ ಅವನಿಗೆ ಮರಾಠಿ ಭಾಷೆ ಅನಿವಾರ್ಯವಾಗುತ್ತದೆ. ಇಲ್ಲದಿದ್ದರೆ ರಾಷ್ಟ್ರಭಾಷೆ ಹಿಂದಿ ಅಥವಾ ಜಾಗತಿಕ ಸಂವಹನ ಭಾಷೆ ಇಂಗ್ಲಿಿಷ್ ಆದರೂ ಗೊತ್ತಿಿರಬೇಕಾಗುತ್ತದೆ. ಇಂಗ್ಲಿಿಷ್ ಅಥವಾ ಬಾರದ ಕಾರಣಕ್ಕೆೆ ಹಲವಾರು ರಾಜಕಾರಣಿಗಳೇ ಮಂತ್ರಿಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದಾಾರೆ. ಇನ್ನು ಉದ್ಯೋೋಗಾಕಾಂಕ್ಷಿಗಳ ಪಾಡು ಹೇಗಿರಬೇಡಾ?!

ಕನ್ನಡ ಮಾಧ್ಯಮಕ್ಕೆೆ ಮಗಳನ್ನು ಸೇರಿಸದಾಗ ನನ್ನ ಪರಿವಾರದವರು (ಅನಕ್ಷರಸ್ಥ ನನ್ನ ತಂದೆತಾಯಿಗಳೂ ಸಹ!) ವಿರೋಧ ಮಾಡಿದ್ದರು. ಈಗ ಸರಕಾರವೇ ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದೆ. ಅವು ಕಿಕ್ಕಿಿರಿದು ತುಂಬಿವೆ. ಮತ್ತೆೆ ಒಂದು ಸಾವಿರ ಶಾಲೆಗಳನ್ನು ಆಂಗ್ಲ ಮಾಧ್ಯಮ ಮಾಡುವ ಯೋಚನೆ ಸರಕಾರ ಮಾಡುತ್ತಿಿದೆ. ಕನ್ನಡ ಸಾಹಿತಿಗಳು ವಿರೋಧಿಸುತ್ತಿಿದ್ದಾಾರೆ. ಹಣವಂತ ಸಾಹಿತಿಗಳು ತಮ್ಮ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಾಾರೆ. ಬಡವರಿಗೆ ಇರುವ ಸರಕಾರಿ ಶಾಲೆಗಳು ಆಂಗ್ಲ ಮಾಧ್ಯಮವಾಗಬಾರದೆಂದು ವಿರೋಧಿಸುತ್ತಾಾರೆ. ಕಂಡವರ ಮಕ್ಕಳನ್ನು ಬಾವಿಗೆ ನೂಕಿ ಆಳ ನೋಡುವ ಜಾಣರಿವರು, ಎಂದು ಶ್ರೀಸಾಮಾನ್ಯಅಂದುಕೊಳ್ಳುತ್ತಾಾನೆ. ಭಾಷೆ ಎಂಬುದು ಕಲಿಕೆಗೆ ತೊಡಕಾಗುವ, ಬದುಕಿನ ದಾರಿಗೆ ಅಡಚಣೆಯಾಗುವ ಮಾಧ್ಯಮವಾಗಬಾರದು. ಇಂದಿನ ಮಕ್ಕಳು ಏಕ ಕಾಲಕ್ಕೆೆ ಕನಿಷ್ಠ ಮೂರು ಭಾಷೆಯನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿದ್ದಾಾರೆ.

ಒಂದನೇ ತರಗತಿಯಲ್ಲಿ ಓದುವ ನನ್ನ ಮಗನಿಗೆ ಕನ್ನಡ, ಹಿಂದಿ, ಇಂಗ್ಲಿಿಷ್ ಮೂರು ಭಾಷೆಗಳ ವಿಷಯ ಗ್ರಹಿಕೆಯ ಶಕ್ತಿಿಯನ್ನು ಇಂದಿನ ಶಿಕ್ಷಣ ಮತ್ತು ಸಂಪರ್ಕ ಮಾಧ್ಯಮ ಕಲಿಸಿದೆ ಎಂದರೆ ನನಗೆ ಅಚ್ಚರಿಯಾಗುತ್ತದೆ. ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಬಹಳ ಪ್ರಗತಿ ಮತ್ತು ವಿಕಾಸವಾಗಿದೆ. ಬಹುಭಾಷೆಯ ಅರಿವು ಇಲ್ಲದೆ ಹೋದರೆ ಅಂದುಕೊಂಡಂಥ ಬದುಕನ್ನು ನಡೆಸುವುದು ಕಷ್ಟವಾಗುತ್ತದೆ. ನನ್ನ ಮಗಳ ಶಾಲೆಗೆ ಹೋದಾಗ ಇಂಗ್ಲಿಿಷ್ ಮಾಧ್ಯಮ ಮಕ್ಕಳ ಕಾನ್ಫಿಿಡೆನ್‌ಸ್‌, ಹಾವಭಾವ, ಚುರುಕುತನ, ಕನ್ನಡ ಮಾಧ್ಯಮ ಮಕ್ಕಳ್ಳಲ್ಲಿ ಅಷ್ಟಾಾಗಿ ಇಲ್ಲದಿರುವುದನ್ನು ಕಂಡು ನಾನು ವ್ಯಥೆಪಟ್ಟಿಿದ್ದೇನೆ. ಪ್ರತಿಭೆಯಲ್ಲಿ ಕನ್ನಡ ಮಾಧ್ಯಮ ಕಡಿಮೆಯಲ್ಲ ನಿಜ; ಆದರೆ, ಈ ಇಂಗ್ಲಿಿಷ್ ಪ್ರಪಂಚದ ಡಿಜೆ ಸಪ್ಪಳದಲ್ಲಿ ಅವರ ಕನ್ನಡದ ನೀನಾದ ಕೀರಲು ಧ್ವನಿಯಾಗುತ್ತಿಿದೆ. ಒಂದು ಭಾಷೆ ತನ್ನನ್ನು ತಾನು ಉಳಿಸಿಕೊಳ್ಳ ಬೇಕಾದರೆ ಕೇವಲ ಅದು ಕಲಿಕೆಯ ಮಾಧ್ಯಮವಾಗಬಾರದು, ಅದು ಅನ್ನ, ಉದ್ಯೋೋಗ ತಂದುಕೊಡುವ ಭಾಷೆಯಾಗಬೇಕು.

ಇಂಗ್ಲಿಿಷ್ ಮಾಧ್ಯಮದಲ್ಲಿ ಕಲಿಕೆ ಇದ್ದ ಮಾತ್ರಕ್ಕೆೆ ಕನ್ನಡ ಅವಸಾನವಾಗುತ್ತದೆ ಎಂಬುದು ಊಹೆ ಮಾತ್ರ. ಭಾಷೆ ಎಂಬುದು ಒಂದು ಜನಾಂಗದ ಸಂಸ್ಕೃತಿ. ಆ ಜನಾಂಗ ಇರುವವರೆಗೂ ಅದು ಇದ್ದೇ ಇರುತ್ತದೆ. ಕರ್ನಾಟಕದಲ್ಲಿ ಕನ್ನಡದ ಪುಸ್ತಕಗಳು, ಪತ್ರಿಿಕೆಗಳು ಹೆಚ್ಚು ಬೆಳೆಯುತ್ತಿಿಲ್ಲವೆ? ಭಾವ ಮತ್ತು ಬದುಕಿನ ಭಾಷೆಯಾಗಿ ಕನ್ನಡ ಇರುವಂತೆ, ಬುದ್ಧಿಿ ಮತ್ತು ಉದ್ಯೋೋಗದ ಭಾಷೆಯಾಗಿ ಹಿಂದಿ, ಇಂಗ್ಲಿಿಷ್ ಅನಿವಾರ್ಯ ಮತ್ತು ಅಗತ್ಯ.

ಕನ್ನಡ ಎಂಬ ಭಾಷಾ ವ್ಯಾಾಪಾರದ ಅಥವಾ ಮಾತೃಭಾಷೆ ಎಂಬ ಅಸ್ಮಿಿತೆಯ ಸುತ್ತ ನಡೆಯುತ್ತಿಿರುವ ಈ ಅಭಿಮಾನಕ್ಕೆೆ/ಭಾಷಾಂಧತೆಗೆ ಆಘಾತವನ್ನು ಇತ್ತೀಚೆಗೆ ನಡೆದ ಒಂದು ಸಂಶೋಧನಾ ವರದಿ ಕೊಟ್ಟಿಿದೆ. ನಾವು ನಮ್ಮದು ಎಂದು ಮಾತನಾಡುವ ಭಾಷೆ ಕೇವಲ ನಮ್ಮದೇ ಅಲ್ಲ! ಅದು ಪದ, ಧ್ವನಿಗಳ ಬೆರಕೆ ಎಂಬುದು. 65000 ವರ್ಷಗಳ ಹಿಂದೆ ಆಫ್ರಿಿಕನ್‌ರು, ಕ್ರಿಿ.ಪೂ. 2000 ದಿಂದ 1000 ಅವಧಿಯಲ್ಲಿ ಹರಪ್ಪ ಜನಾಂಗ, ಆರ್ಯನ್ನರು ಬಂದರು. ಅವರು ಇಂಡೋ ಇರಾನಿಯನ್, ಬಾಲ್ಟೋೋ ಸ್ಲಾಾವಿಕ್, ಇಂಡೋ ಯರೋಪಿಯನ್ ಭಾಷೆಗಳು ಬಂದವು.

ದ್ರಾಾವಿಡರು ಸಹ ಈ ಉಪಖಂಡಕ್ಕೆೆ ವಲಸೆ ಬಂದವರೆ ಎಂದು ಹಾರ್ವರ್ಡ್‌ನ ವಾಗೀಶ ನರಶಿಂಹನ್ ನೇತೃತ್ವದ ಸಂಶೋಧಕರ ತಂಡ ‘ಸೈನ್‌ಸ್‌’ ಪತ್ರಿಿಕೆಯಲ್ಲಿ ಪ್ರಕಟಿಸಿದೆ. ವಲಸೆ ಕಾರಣದಿಂದ ಬಹು ಸಂಸ್ಕೃತಿ ಮತ್ತು ಬಹು ಭಾಷಾ ಭಾಷಾ ಪ್ರಬೇಧಗಳು ಹುಟ್ಟಿಿಕೊಂಡವು. ಮೂಲದಲ್ಲಿ ಚಿತ್ರ ರೂಪವಾಗಿದ್ದ ಲಿಪಿ ಮತ್ತು ಧ್ವನಿ ಆಧಾರವಾಗಿದ್ದ ಸಂವಹನ ಮುಂದೆ ಭಾಷೆಯ ಮತ್ತು ಅಕ್ಷರ ಹುಟ್ಟಿಿಗೆ ಕಾರಣವಾದವು. ಅಮ್ಮ, ಮಾ, ಆಯಿ, ಅವ್ವ, ಮದರ್, ಮಾಮ್ ಒಂದೆ ಅರ್ಥದ ಅಪಭ್ರಂಶಗಳಾಗಿ ವಿಭಿನ್ನ ಉಚ್ಚಾಾರಣೆ ಪಡೆದವು. ಇಂತಹ ಹಲವಾರು ರೂಪ ನಿಸ್ಪತ್ತಿಿಯನ್ನು, ಅನ್ಯದೇಶ ಪದಗಳನ್ನು ಪ್ರತಿ ಭಾಷೆಯಲ್ಲೂ ಕಾಣುತ್ತೇವೆ. ಮನೆಯ ಬಾಗಿಲು ಕಿಟಕಿ ಹಾಕಿಕೊಂಡು ಕುಳಿತರೆ. ಗಾಳಿ ಬೆಳಕು ಹೇಗೆ ಬರುತ್ತದೆ. ಭಾಷೆ ಎಂಬ ಜ್ಞಾಾನ ಎಂಬ ಬೆಳಕು ಬರಬೇಕಾದರೆ ನಮ್ಮ ಮನೆ ಮನವನ್ನು ತೆರೆದುಕೊಂಡು ಅಗತ್ಯವಾದದನ್ನು ಸ್ವೀಕರಿಸುವ ಮನೋಭಾವವಿರಬೇಕು.

Source Credit Vishwavani.news

Niranthara News

Leave a Reply

Your email address will not be published. Required fields are marked *

Next Post

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಶ್ಚಿತಾರ್ಥಕ್ಕೆ ವಜ್ರದ ಉಂಗುರ ಸೂಕ್ತವೇ?

Fri Nov 8 , 2019
Share on Facebook Tweet it Share on Google Pin it Share it Email Share on Facebook Tweet it Share on Google Pin it Share it Email Source Credit Kannada.boldsky.com Pin it Email https://nirantharanews.com/archives/512#MDEtMTU3MzIxMjg ವಜ್ರದ ಉಂಗುರದಿಂದ ಉಂಟಾಗುವ ಉತ್ತಮ ಪರಿಣಾಮಗಳು ಅತ್ಯಂತ ಬೆಲೆ ಬಾಳುವ ಹಾಗೂ ಬಹು ಕಾಂತೀಯ ರತ್ನ ಎಂದರೆ ವಜ್ರ. ವಜ್ರವು ಪ್ರಣಯ ದೇವತೆಯಾದ ಶುಕ್ರನನ್ನು ಪ್ರತಿನಿಧಿಸುತ್ತದೆ. ಹಾಗಾಗಿ ವಜ್ರವನ್ನು ಪ್ರೀತಿಯ ಸಂಕೇತವಾಗಿ ಪರಿಗಣಿಸಲಾಗುವುದು. ವಜ್ರ ಧರಿಸುವುದರಿಂದ ಜನ್ಮ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links