ಇತಿಹಾಸ ತಿಳಿಸಿದ ಟಿಪ್ಪುುವಿನ ಮಾಯೆ, ಪಠ್ಯದಲ್ಲೇಕೆ ಛಾಯೆ!

Source Credit Vishwavani.news

ಬಾಲಕೃಷ್ಣ ಎನ್ ( ಚರ್ಚೆ)

ಟಿಪ್ಪುು ಚರಿತ್ರೆೆ ಕುರಿತು ಪಠ್ಯದಲ್ಲಿ ಅಳವಡಿಕೆಗೆ ಇತಿಹಾಸಕಾರರಲ್ಲೆೆ ಗೊಂದಲವಿದೆ. ಇನ್ನೂ ರಾಜಕೀಯದಲ್ಲಿ ಪರ ವಿರೋಧಗಳ ಚರ್ಚೆ ಗಂಭೀರವಾಗಿದೆ. ಟಿಪ್ಪುುವಿನ ಕಟು ಸತ್ಯಗಳನ್ನು ಅರಿಯದೆ ಪಠ್ಯದಲ್ಲಿ ಅಳವಡಿಸಿದ್ದು ಸೂಕ್ತವೇ?

ಟಿಪ್ಪುು ಸುಲ್ತಾನ್ ಆಚರಣೆಗೆ ಪರ ವಿರೋಧಗಳ ಚರ್ಚೆಗಳು ಮುನ್ನಲೆಗೆ ಬಂದಿವೆ. ಆದರೆ, ಆಚರಣೆ ಮಾಡಬೇಕಾದರೆ ರಾಜಕೀಯ ವಿಷ ಬೆರೆಸಿರುವುದು ಸತ್ಯ. ಟಿಪ್ಪುು ಸುಲ್ತಾಾನ್ ಬಗ್ಗೆೆ ಕಹಿ ಘಟನೆಗಳನ್ನು ಇತಿಹಾಸ ಮೆಲುಕು ಹಾಕಿಕೊಟ್ಟಿಿದೆ. ‘ಮೈಸೂರು ಹುಲಿ’ ಎಂಬ ಮಾತ್ರಕ್ಕೆೆ ಆಚರಣೆ ಮಾಡುವುದು ಕೆಲವರ ವಾದ. ಯಾವ ಪುರುಷಾರ್ಥಕ್ಕೆೆ ಆಸಾಮಿಯ ಚರಿತ್ರೆೆ ಬಗ್ಗೆೆ ಪಠ್ಯದಲ್ಲಿ ಅಳವಡಿಕೆ ಮತ್ತು ಆಚರಣೆ ಎಂಬುದು ವಿರೋಧ ಗುಂಪಿನ ಪ್ರತಿವಾದ.

ರಾಜಕೀಯದಲ್ಲಿ ಪರ ವಿರೋಧ ಸರ್ವೆ ಸಾಮಾನ್ಯ. ಬಿಜೆಪಿ ಸರಕಾರ ಅಧಿಕಾರಕ್ಕೆೆ ಬಂದ ನಂತರ ಟಿಪ್ಪುು ಜಯಂತಿ ಆಚರಣೆ ಮಾಡದಿರುವ ಕುರಿತು ನಿರ್ಧಾರ ತೆಗೆದುಕೊಂಡಿತ್ತು. ಇದಕ್ಕೆೆ ವಿರೋಧ ವ್ಯಕ್ತಪಡಿಸುತ್ತಿಿರುವ ಕಾಂಗ್ರೆೆಸ್ ನಾಯಕರು ಇದನ್ನೆೆ ಬಂಡವಾಳನ್ನಾಾಗಿಸಿಕೊಂಡಿದ್ದಾಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿಿವೆ. ಆದರೆ, ಇಲ್ಲಿ ಸಮರ್ಥನೆ ಎಂಬುದೇ ಇಲ್ಲವಾಗಿದ್ದು, ಟಿಪ್ಪುು ಮಾಡಿದ್ದ ವಿದ್ರಾಾವಕ ಘಟನೆಗಳನ್ನು ಇತಿಹಾಸ ಪುಟಗಳನ್ನು ತಿರುವಿ ಹಾಕಬೇಕಾಗಿದೆ. ಇತಿಹಾಸ ತಜ್ಞರಲ್ಲಿಯೇ ಟಿಪ್ಪುು ಬಗ್ಗೆೆ ದ್ವಂದ್ವ ನಿಲುವು ವ್ಯಕ್ತವಾಗಿದ್ದು, ತೋಚಿದ್ದನ್ನು ಸಂದೇಶ ಸಾರಿದ್ದಾಾರೆ. ಅದರಲ್ಲೂ ಸಾಹಿತಿಗಳಂತೂ ಟಿಪ್ಪುು ಪರ-ವಿರೋಧಭಾಸ ಸೃಷ್ಟಿಿಯಾಗಿದೆ. ಗೊಂದಲ ಗೂಡಾಗಿರುವ ವ್ಯಕ್ತಿಿಯ ಆಚರಣೆ ಸೂಕ್ತವೇ ಎಂಬದನ್ನು ಕೆಲವರು ಅರಿತುಕೊಳ್ಳಬೇಕಾಗಿದೆ. ಇಲ್ಲಿ ಟಿಪ್ಪುು ಸಮುದಾಯವರು ಟಿಪ್ಪುು ಜಯಂತಿ ಕುರಿತು ಚಕಾರ ಎತ್ತುತ್ತಿಿಲ್ಲ. ರಾಜಕೀಯದಲ್ಲಿ ಮಾತ್ರ ಸದ್ದು ಮಾಡುತ್ತಿಿದೆ. ಇತಿಹಾಸ ಪುಟಗಳೆ ಗೊಂದಲ ಸೃಷ್ಟಿಿ ಮಾಡಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ಟಿಪ್ಪುುವಿನ ಬಗ್ಗೆೆ ಯಾವ ಇತಿಹಾಸ ತಿಳಿಸಬೇಕೊ ಎಂಬುದರ ಬಗ್ಗೆೆ ಪ್ರಶ್ನಿಿಸಿಕೊಳ್ಳಬೇಕಾಗಿದೆ.

ಪಠ್ಯದಲ್ಲಿ ಟಿಪ್ಪುು ವಿಷಯ ಪ್ರಸ್ತಾಾಪಿಸುವ ಕುರಿತು ಮುನ್ನೆೆಲೆಗೆ ಬಂದಿರುವ ಸುದ್ದಿ. ಆದರೆ, ಟಿಪ್ಪುು ಸುಲ್ತಾಾನ್ ಬಗ್ಗೆೆ ಮಾತ್ರ ಆಸಕ್ತಿಿ ತೋರುತ್ತಿಿರುವ ಕೆಲ ಜನ ಪ್ರತಿನಿಧಿಗಳಿಗೆ ದೇಶಕ್ಕಾಾಗಿ ಪ್ರಾಾಣ ಮುಡುಪಾಗಿಟ್ಟವರ ಬಗ್ಗೆೆ ಪಠ್ಯದಲ್ಲಿ ಅಳವಡಿಸಲು ಧ್ವನಿ ಎತ್ತುತ್ತಿಿಲ್ಲ. ಟಿಪ್ಪುು ಜಯಂತಿ ಆಚರಿಸಲೇ ಬೇಕೆನ್ನುವವರು ಒಮ್ಮೆೆ ಇತಿಹಾಸವೇ ತಿಳಿಸಿರುವ ಸಂಗತಿಗಳನ್ನು ತಿಳಿಯಬೇಕಾಗಿದೆ. ದೇಶ ಎಂಬ ಕಲ್ಪನೆಯೇ ಇರದಿದ್ದಾಗ ಒಬ್ಬ ರಾಜನಾಗಿ ತನ್ನ ಸಾಮ್ರಾಾಜ್ಯ ವಿಸ್ತಾಾರಕ್ಕಾಾಗಿ ಟಿಪ್ಪುು ಹೊರಾಡಿದನೇ ಹೊರತು ಆತನನ್ನು ಸ್ವಾಾತಂತ್ರ್ಯ ಹೋರಾಟಗಾರ ಎಂದು ಕರೆಯಲು ಸಾಧ್ಯವಿಲ್ಲ. ಯಾವುದೇ ಐತಿಹಾಸಿಕ ಘಟನೆಗಳ ಬಗ್ಗೆೆಯೂ ಇದೇ ಅಂತಿಮ ಮಾಹಿತಿ ಎನ್ನಲು ಬರುವುದಿಲ್ಲ. ಜನರ ತೆರಿಗೆ ಹಣದಲ್ಲಿ ಸರಕಾರ ಟಿಪ್ಪುು ಜಯಂತಿ ಆಚರಣೆಗೆ ಮುಂದಾಗುತ್ತಿಿಲ್ಲ.

ದೀಪಾವಳಿ ಸಮಯದಲ್ಲಿ ಮಂಡ್ಯ ಐಯ್ಯಂಗಾರ್ ಜನಾಂಗದವರನ್ನು ಮೇಲುಕೋಟೆಯಲ್ಲಿ ಕೊಂದದ್ದರಿಂದ ಇಂದಿಗೂ ಅವರು ದೀಪಾವಳಿಯನ್ನು ಬೇರೆ ದಿನದಂದು ಆಚರಿಸುತ್ತಾಾರೆ. ಟಿಪ್ಪುು ತನ್ನ ಆಡಳಿತದ ಮೊದಲ ಕೆಲವು ವರ್ಷಗಳು ಮತಾಂತರ, ದೇವಾಲಯ, ಮೂರ್ತಿಗಳ ನಾಶದಲ್ಲಿ ತೊಡಗಿದ್ದ. 1791ರ ಯುದ್ಧದ ಸೋಲಿನ ನಂತರ ಬಹುಧರ್ಮಿಯರನ್ನು ಓಲೈಸುವ ಸಲುವಾಗಿ ದೇವಸ್ಥಾಾನಗಳಿಗೆ ದಾನ ಕೊಡಲು ಶುರು ಮಾಡಿದ. ಇದರ ಹಿಂದಿನ ರಾಜಕೀಯ ಉದ್ದೇಶ ಅರಿಯಬೇಕಿದೆ. ಬ್ರಿಿಟಿಷರ ವಿರುದ್ಧ ಹೋರಾಟ ಮಾಡಿದ್ದಕ್ಕೆೆ ಟಿಪ್ಪುುವನ್ನು ವೈಭವೀಕರಿಸಲಾಗುತ್ತಿಿದೆ. ಹೊಯ್ಸಳ ಹುಲಿಯ ಜತೆ ಹೋರಾಡಿದ್ದ, ಮದಕರಿ ನಾಯಕ ಆನೆಯ ಜತೆ ಹೋರಾಡಿದ್ದ. ಹಾಗೆಯೇ ಎಲ್ಲಾ ರಾಜರುಗಳಂತೆ ಟಿಪ್ಪುುವನ್ನು ‘ಮೈಸೂರು ಹುಲಿ’ ಎಂಬುದರಲ್ಲಿ ವಿಶೇಷವೇನಿಲ್ಲ. ಸ್ವಾಾತಂತ್ರ್ಯ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯ ತರಲು ಅಂದಿನ ಬರಹಗಾರರು ಟಿಪ್ಪುುವನ್ನು ವೈಭವಿಕರಿಸಿ ಬರೆದಿರುವ ಕುರಿತು ಅನೇಕ ಇತಿಹಾಸಕಾರರು ತಿಳಿಸಿದ್ದಾಾರೆ. ಆಯಾ ಸಮುದಾಯಕ್ಕೆೆ ಜಯಂತಿಗಳನ್ನು ಬಿಟ್ಟರೆ ಒಳ್ಳೆೆಯದು.

ಇತಿಹಾಸವೇ ಹೇಳಿದ ರೀತಿ ನೋಡಿದರೆ ಟಿಪ್ಪುು ಸಮರ್ಥ ನಾಯಕನಾಗಿದ್ದರೂ ಮಾಡಿದ ಕೆಲಸಗಳು ಜನ ವಿರೋಧಿಯಾಗಿತ್ತು. ಮಲಬಾರಿನ ಮುಸಲ್ಮಾಾನರು ಮಲೆಯಾಳಂ ಭಾಷೆಯನ್ನು, ತಮಿಳು ಮುಸ್ಲಿಿಮರು ತಮಿಳನ್ನು ಇಂದಿಗೂ ಮಾತನಾಡುತ್ತಾಾರೆ ಓದಿ ಬರೆಯುತ್ತಾಾರೆ. ಟಿಪ್ಪುು 1796ರಲ್ಲಿ ಮೈಸೂರಿನ ರಾಜರ ಅರಮನೆಯನ್ನು ಲೂಟಿ ಮಾಡಿದಾಗ ಅರಮನೆಯ ಗ್ರಂಥಾಲಯದಲ್ಲಿದ್ದ ಅಮೂಲ್ಯ ಗ್ರಂಥಗಳು, ತಾಳೆಯೋಲೆಯ ಹಸ್ತಪ್ರತಿಗಳು ಮತ್ತು ಕಡತಗಳನ್ನು ಕುದುರೆಗಳಿಗೆ ಹುರಳಿ ಬೇಯಿಸಲು ಇಂಧನವಾಗಿ ಉಪಯೋಗಿಸುವಂತೆ ಅಪ್ಪಣೆ ಮಾಡಿದ. ಕರ್ನಾಟಕದ ಹೆಮ್ಮೆೆಯ ವಿಜಯನಗರದ ಸಾಮ್ರಾಾಜ್ಯದ ಪರಂಪರೆಯಂತೆ ಮೈಸೂರಿನಲ್ಲಿ ನಡೆಯುತ್ತಿಿದ್ದ ವೈಭವದ ದಸರೆಯ ಮೆರವಣಿಗೆ, ನಾಡ ಹಬ್ಬಕ್ಕೆೆ ತಡೆ ಬಿದ್ದದ್ದು ಸಹ ಜಿಹಾದಿ ಮಾನಸಿಕತೆಯ ಟಿಪ್ಪುುವಿನ ಕಾಲದಲ್ಲೇ ಎಂಬುದನ್ನು ಗಮನಿಸಬೇಕಾದ ಸಂಗತಿ. ಇದು ಟಿಪ್ಪುುವಿನ ಕನ್ನಡ ಪ್ರೇಮ ಮತ್ತು ನಾಡ ಸಂಸ್ಕೃತಿಗೆ ತೋರಿಸುತ್ತಿಿದ್ದ ಗೌರವ.

ಟಿಪ್ಪುುವನ್ನು ‘ಕನ್ನಡದ ಕುವರ’ ಎಂದು ಕೆಲ ಇತಿಹಾಸಕಾರರು ಬಿಂಬಿಸಿದ್ದಾಾರೆ. ಆದರೆ, ಮೈಸೂರು ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಟಿಪ್ಪುು ಬದಲಿಸಿ ಫಾರ್ಸಿ ಭಾಷೆಯನ್ನು ತಂದ. ಸೈನ್ಯದ ಎಲ್ಲ ಯೋಜನೆಗಳಿಗೂ, ವಿಭಾಗಗಳಲ್ಲೂ ಇಸ್ಲಾಾಂ ಮತಾಧಾರಿತ ಹೆಸರುಗಳನ್ನಿಿಡುತ್ತಿಿದ್ದ. ಮೈಸೂರಿನ ನಾನಾ ಇಲಾಖೆಗಳಲ್ಲಿ ಬಳಸುವ ಆಡಳಿತಾತ್ಮಕ ಶಬ್ದಗಳನ್ನು ಇಲ್ಲಿನ ಜನಕ್ಕೆೆ ಅತಿ ಅಪರಿಚಿತವಾಗಿದ್ದ ಫಾರ್ಸಿ ಭಾಷೆಯಲ್ಲಿ ಬಳಸುವಂತೆ ಮಾಡಿದ. ಅಹ್ಮದಿ, ಸಾದಿಕ್, ಝೆಹ್ರಾಾ, ಔತ್ಮಾಾನೀ, ಫಾರೂಕ್, ಜಾಫರ್ ಇತ್ಯಾಾದಿ ಪಕ್ಕಾಾ ಅರೇಬಿಕ್ ಹೆಸರುಗಳುಳ್ಳ ನಾಣ್ಯಗಳನ್ನು ತಂದು ತನ್ನದು ಇಸ್ಲಾಾಮೀ ಆಡಳಿತ ಎಂದು ತೋರ್ಪಡಿಸಿದ್ದ. ಕರಾವಳಿ ಪ್ರದೇಶಕ್ಕೆೆ ಯಾಮ್ ಸುಬಾ, ಮಲೆನಾಡಿಗೆ ತರನ್ ಸುಬಾ ಮತ್ತು ಬಯಲುಸೀಮೆಗೆ ಘಬ್ರಾಾ ಸುಬಾ ಎಂದು ಕರೆದ. ಸರಕಾರಿ ಕಡತ, ದಾಖಲೆಗಳಲ್ಲಿ ಆಡಳಿತ ವ್ಯವಹಾರಗಳಲ್ಲಿ ಇವೇ ಹೆಸರನ್ನು ಟಿಪ್ಪುು ಚಾಲ್ತಿಿಗೆ ತಂದ.

ಇಸ್ಲಾಾಂನ ಅನುಯಾಯಿಯಾಗಿದ್ದ ಟಿಪ್ಪುು ಕುರಾನ್ ನೀಡಿರುವ ಬಹುಪತ್ನಿಿತ್ವದ ಅವಕಾಶವನ್ನು ಸಂಪೂರ್ಣವಾಗಿ ಪಡೆದು ಕೊಂಡಿದ್ದ. 1774ರಲ್ಲಿ ತನ್ನ 24ನೇ ವಯಸ್ಸಿಿನಲ್ಲಿ ಮೊದಲ ಬಾರಿಗೆ ಮದುವೆಯಾದ ಟಿಪ್ಪುು ನಂತರ ಆದ ಮದುವೆಗಳಿಗೆ ಲೆಕ್ಕವೇ ಇಲ್ಲ. ತಾನು ಸೋಲಿಸಿದ ಪ್ರದೇಶಗಳ ರಾಜಮನೆತನಗಳ ಸ್ತ್ರೀಯರಿಂದ ಹಿಡಿದು ಬೇಕೆನಿಸಿದ ಪ್ರತಿಯೊಬ್ಬ ಸ್ತ್ರೀಯನ್ನೂ ಶ್ರೀರಂಗ ಪಟ್ಟಣಕ್ಕೆೆ ಹೊತ್ತೊೊಯ್ಯುತ್ತಿಿದ್ದ ಎಂಬುದು (ಆಧಾರ-ತಾರೀಖ್ -ಎ-ಟಿಪ್ಪುು, ಕಿರ್ಮಾ) ಇತಿಹಾಸದಲ್ಲಿ ಸಾಬೀತಾಗಿದೆ.

ದಿವಾನ್ ಪೂರ್ಣಯ್ಯನ ತಮ್ಮನ ಮಗಳನ್ನೇ ಟಿಪ್ಪುು ಬಲಾತ್ಕಾಾರದಿಂದ ಅಂತಃಪುರಕ್ಕೆೆಳೆದು ಕೊಂಡಿದ್ದ. ಟಿಪ್ಪುುವಿನ ದೃಷ್ಟಿಿಯಿಂದ ಕೊಡಗಿನ ರಾಜನ ಇಬ್ಬರು ಸೋದರಿಯರಾದ ದೇವಮ್ಮಾಾಜಿ ಮತ್ತು ನೀಲಮ್ಮಾಾಜಿ ಸಹ ಹೊರಗುಳಿಯಲಾಗಲಿಲ್ಲ ಇವರ ಜತೆಗೆ ಮೈಸೂರು ಒಡೆಯರ ಮನೆತನಕ್ಕೆೆ ಸೇರಿದ ಮೂವರು ಹೆಣ್ಣು ಮಕ್ಕಳು ಟಿಪ್ಪುುವಿನ ಅಂತಃಪುರಕ್ಕೆೆ ದೂಡಲ್ಪಟ್ಟಿಿದ್ದರು. ತಾನು ಗೆದ್ದ, ಹಾಳು ಮಾಡಿದ ಅಥವಾ ತನ್ನ ಅಧೀನದಲ್ಲಿದ್ದ ಊರುಗಳ ಪಾಳೇಗಾರರು, ಮಾಂಡಲೀಕರು, ಸರದಾರರ ಹೆಣ್ಣುಮಕ್ಕಳು ಸಹ ಆತನ ಜನಾನದಲ್ಲಿದ್ದರು. ಭಾರತದ ಅರ್ಕಾಟ್, ತಂಜಾವೂರು ಇತ್ಯಾಾದಿ ಪ್ರದೇಶಗಳ ಹೆಣ್ಣುಗಳ ಜತೆಗೆ ದೂರದ ಟರ್ಕಿ, ಪರ್ಶಿಯಾ, ಜಾರ್ಜಿಯಾದಂತಹ ದೇಶಗಳಿಂದ ಹೊತ್ತು ತಂದ ಅಥವಾ ಕೊಂಡು ತಂದ ಹೆಂಗಸರೂ ಇದ್ದರು. 1799ರಲ್ಲಿ ಟಿಪ್ಪುು ಸತ್ತ ನಂತರ ಕ್ಯಾಾಪ್ಟನ್ ಥಾಮಸ್ ಮ್ಯಾಾರಿಯೇಟ್ ನೀಡಿದ ಟಿಪ್ಪುುವಿನ ಜನಾನದ (ರಾಣಿವಾಸ) ವರದಿಯು ಈ ಬಗ್ಗೆೆ ಬೆಳಕು ಚೆಲ್ಲುತ್ತದೆ.

ಒಮ್ಮೆೆ ಮರಾಠ ಸೈನ್ಯದ ಕೈಲಿ ಸಿಕ್ಕು ಅಸಹಾಯಕನಾಗಿದ್ದ ಹೈದರಾಲಿಯನ್ನು ಅನುಕಂಪದಿಂದ ಬಿಡಿಸಿದವನೇ ಮದಕರಿ ನಾಯಕ. ಆದರೆ, ಇದನ್ನು ಮರೆತು ಮೋಸ, ಕುಟಿಲ, ವಂಚನೆಗಳಿಂದ ಚಿತ್ರದುರ್ಗವನ್ನು ಗೆದ್ದ ಹೈದರಾಲಿ ಮುಂದೆ ನಡೆಸಿದ್ದು ಮಾತ್ರ ಘೋರ ಅತ್ಯಾಾಚಾರ. ಲೂಟಿ, ಕಗ್ಗೊೊಲೆಗಳ ಸರಮಾಲೆ. ದುರ್ಗದ ವೀರರಾದ ಪರಶುರಾಮನಾಯಕ, ಕುಮಾರ ಭರಮಪ್ಪ ನಾಯಕ, ಅಳಿಯ ಹುಚ್ಚಪ್ಪನಾಯಕ, ಮಡದಿ ಕಡೂರಿ, ಗೌಡಿ ನಾಗಿಯನ್ನು ಮೋಸದಿಂದ ಸೆರೆಹಿಡಿದು ಚೌಕಿ ಪಹರೆಯಿಂದ ಶ್ರೀರಂಗಪಟ್ಟಣಕ್ಕೆೆ ಸಾಗಿಸಿ ಸೆರೆಯಲ್ಲಿರಿಸಿದನು. ಮದಕರಿ ನಾಯಕನ ನೆಚ್ಚಿಿನ ಬಂಟರಾದ ಇಪ್ಪತ್ತು ಸಾವಿರ ಬೇಡರನ್ನು ಶ್ರೀರಂಗಪಟ್ಟಣಕ್ಕೆೆ ಸಾಗಿಸಿ ಮತಾಂತರ ಮಾಡಿದನು. ವಯಸ್ಕರಾದ ಯುವಕರನ್ನು ಇಸ್ಲಾಾಮಿಗೆ ಮತಾಂತರಿಸಿ ಪ್ರತ್ಯೇಕವಾದ ‘ಸರಕಾರಿ ಚೇಲೆ’ ಎಂಬ ಸೈನ್ಯವನ್ನು ಕಟ್ಟಿಿದನು. ಮದಕರಿ ನಾಯಕನನ್ನು ಸೆರೆಮನೆಯಲ್ಲಿಟ್ಟು ವಿಷವಿಕ್ಕಿಿ ಕೊಂದನೆಂತಲೂ ಕೆಲವರು ಹೇಳಿದರೆ ಸ್ವಾಾಭಿಮಾನಿಯಾಗಿದ್ದ ಮದಕರಿ ನಾಯಕನೇ ಕಠಾರಿಯಿಂದ ತಾನೇ ತಿವಿದುಕೊಂಡು ಪ್ರಾಾಣ ಬಿಟ್ಟನೆಂದೂ ಉಲ್ಲೇಖಗಳಿವೆ. ಇಂಥ ಮೋಸವನ್ನು ದುರ್ಗ ಎಂದಾದರೂ ಮರೆತೀತೇ? ಹೈದರಾಲಿಯ ಈ ಎಲ್ಲಾ ಕಪಟಕ್ಕೆೆ ಸಾಕ್ಷಿಯಾಗಿದ್ದ, ಕ್ರೂರತೆಗೆ ಜತೆಯಾಗಿದ್ದ ಟಿಪ್ಪುು ಜಯಂತಿ ಬೇಕೇ? (ಆಕರ-ಶ್ರೀನಿವಾಸ ಜೋಯಿಸರ ಐತಿಹಾಸಿಕ ಲೇಖನಗಳು).

ಕೊಡಗಿನ ಕುಶಾಲನಗರದಿಂದ ಪೊನ್ನಂಪೇಟೆಯವರೆಗೆ ಟಿಪ್ಪುು ನಾಶಮಾಡಿದ ದೇವಸ್ಥಾಾನಗಳ ಕುರುಹುಗಳು ಇಂದಿಗೂ ಕಾಣುತ್ತವೆ. ಆತನ ಕ್ರೂರತೆಯ ಕಥೆಯನ್ನು ಹೇಳುತ್ತವೆ. ಕೊಳಕೇರಿ ಗ್ರಾಾಮದ ಉಮಾಮಹೇಶ್ವರ ದೇವಸ್ಥಾಾನ (1956ರಲ್ಲಿ ಜೀರ್ಣೋದ್ದಾರ), ಕೊಳಕೇರಿ ಮಹಾದೇವರ ದೇವಸ್ಥಾಾನ (2005ರಲ್ಲಿ ಜೀರ್ಣೋದ್ದಾರ) ಪೊನ್ನಂಪೇಟೆ ಸಮೀಪ ನಡಿಕೇರಿ ಗೋವಿಂದ ಸ್ವಾಾಮಿ ದೇವಸ್ಥಾಾನ (ಹೈದರ್ ದಾಳಿ), ಪೊನ್ನಂಪೇಟೆ ಸಮೀಪ ಬೇಗೂರು ಓಣಿಲಯ್ಯಪ್ಪ ದೇವಸ್ಥಾಾನ (ಹೈದರ್ ದಾಳಿ), ಅಪ್ಪಂಗಳ ಮಾದೂರಪ್ಪ ದೇವಸ್ಥಾಾನ (2014ರಲ್ಲಿ ಜೀರ್ಣೋದ್ದಾರ), ಅರಮೇರಿಯ ಭಗವತಿ ದೇವಸ್ಥಾಾನ (ಈಗಲೂ ಪಾಳುಬಿದ್ದಿದೆ) ಅರ್ವತ್ತೋೋಕ್ಲು ಈಶ್ವರ ದೇವಸ್ಥಾಾನ, ಕದನೂರು ಭಗವತಿ ದೇವಸ್ಥಾಾನ, ಮಲೆತಿರಿಕೆ ದೇವಸ್ಥಾಾನ, ಬೊಳ್ಳುಮಾಡು ಈಶ್ವರ ದೇವಸ್ಥಾಾನ. ಐಮಂಗಲ ಈಶ್ವರ ದೇವಸ್ಥಾಾನ, ಕುಶಾಲನಗರ ಮತ್ತು ಶುಂಠಿಕೊಪ್ಪದ ಎಲ್ಲ ದೇವಸ್ಥಾಾನಗಳು, ವಿರಾಜಪೇಟೆ ಸಮೀಪದ ಅರಮೇರಿಯ ಭಗವತಿ ದೇವಸ್ಥಾಾನ ನಾಶಗೊಂಡಿವೆ.

ಸ್ಥಳೀಯ ಸಂಸ್ಕೃತಿಯನ್ನು ನಾಶಗೊಳಿಸಿ ಬಲವಂತವಾಗಿ ಇಸ್ಲಾಾಮಿ ಸಂಸ್ಕೃತಿಯನ್ನು ಹೇರುವ ತನ್ನ ಕಾರ್ಯವನ್ನು ಊರುಗಳ ಮೂಲ ಹೆಸರುಗಳನ್ನು ಬದಲಿಸುವುದರ ಮೂಲಕವೂ ಟಿಪ್ಪುು ಕೈಗೊಂಡಿದ್ದ. ಬ್ರಹ್ಮಪುರಿ-ಸುಲ್ತಾಾನ್ ಪೇಟ್ ಮೊಳಕಾಲ್ಮೂರು-ಮುಹಮ್ಮದಾಬಾದ್, ಕಾಳೀಕೋಟೆ (ಕೇರಳ) -ಫರೂಕಾಬಾದ್ ಚಿತ್ರದುರ್ಗ-ಫಾರುಕ್ ಯಾಬ್ ಹಿಸ್ಸಾಾರ್ ಮಡಿಕೇರಿ-ಜಫರಾಬಾದ್ ಸತ್ಯಮಂಗಲ- ಸಲಾಮಾಬಾದ್ ದೇವನಹಳ್ಳಿಿ-ಯೂಸುಫಾಬಾದ್ ಬೇಕಲ್-ರುಮುಟಾಬಾದ್ ಎಂಬುದಾಗಿ ಸುಮಾತು 15ಕ್ಕೂ ಹೆಚ್ಚು ಸ್ಥಳಗಳ ಹೆಸರು ಬದಲಾಯಿಸಿದ್ದಾಾನೆ. ಟಿಪ್ಪುು ಆಡಳಿತಾವಧಿಯಲ್ಲಿ ಹಿಂದೂಗಳನ್ನು ಸರಿಯಾಗಿ ನಡೆಸಿಕೊಂಡಿದ್ದಾಾರೆ ಆತ ಇಷ್ಟೊೊಂದು ಚರ್ಚೆಗೆ ಗ್ರಾಾಸವಾಗುತ್ತಿಿರಲಿಲ್ಲ.

ಸದ್ಯಕ್ಕೆೆ ಇಷ್ಟೊೊಂದು ವಿಚಿತ್ರ ಮನಸು ಹೊಂದಿದ್ದ ಟಿಪ್ಪುುವಿನ ಬಗ್ಗೆೆ ಯಾಕಾಗಿ ಪಠ್ಯದಲ್ಲಿ ಅಳವಡಿಸಬೇಕೆಂಬುದು ಸ್ಪಷ್ಟತೆ ಬೇಕಾಗಿದೆ. ಇದಲ್ಲದೆ ರಾಜನೆಂದ ಮಾತ್ರಕ್ಕೆೆ ಪಠ್ಯದಲ್ಲಿ ಅಳವಡಿಸುವುದಾದರೆ ಅನೇಕ ಮುಸ್ಲಿಿಂ ರಾಜರು ಹಿಂದೂ-ಮುಸ್ಲಿಿಂ ಸಮಾನವಾದ ಆಡಳಿತ ನೀಡಿದವರು ಇದ್ದು, ಇಂತಹವರ ಬಗ್ಗೆೆ ಅಳವಡಿಸಲು ಪ್ರಸ್ತಾಾಪಿಸುತ್ತಿಿಲ್ಲ. ಟಿಪ್ಪುು ಮೈಸೂರು ಹುಲಿ ಎಂಬ ಮಾತ್ರಕ್ಕೆೆ ಪಠ್ಯದಲ್ಲಿ ಅಳವಡಿಸಲು ವಾದ ಮಾಡುತ್ತಿಿರುವುದು ಎಷ್ಟರ ಮಟ್ಟಿಿಗೆ ಸರಿ.

Source Credit Vishwavani.news

Niranthara News

Leave a Reply

Your email address will not be published. Required fields are marked *

Next Post

ಕನ್ನಡವೆಂದರೆ ಬರಿ ನಾಮಫಲಕವಲ್ಲ ಕಾಣಿರೋ!

Fri Nov 8 , 2019
Share on Facebook Tweet it Share on Google Pin it Share it Email Share on Facebook Tweet it Share on Google Pin it Share it Email Source Credit Vishwavani.news ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಸಿರಿಗನ್ನಡಂ ನಾಲ್ಗೆೆ-ಸಿರಿಗನ್ನಡಂ ಕೈಗೆ ಅಂದರೆ ಕನ್ನಡವನ್ನು ಯಾರು ಶಬ್ದವಾಗಿ ನಾಲಿಗೆಯಲ್ಲಿ ಬರಹವಾಗಿ ಕೈಯಲ್ಲಿ ಬಳಸುವರೋ ಅವರೆಲ್ಲರೂ ಕನ್ನಡಿಗರೇ ಅಲ್ಲವೇ! ‘ಮನೆ ಕಟ್ಟಿಿನೋಡು, ಕನ್ನಡಿಗರ ಹುಡುಕಿ ನೋಡು’ ಹೀಗೊಂದು ಆಧುನಿಕ ಗಾದೆಮಾತು ಬೆಂಗಳೂರಿನಲ್ಲಿ ಮನೆಕಟ್ಟುವ ಕನ್ನಡಿಗರ ಅನುಭವದ ಮಾತಾಗುವುದರಲ್ಲಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links