ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ರಾಪರ್ ಅಲೋಕ್

News

oi-Harshitha N

|

ಕನ್ನಡ ರಾಪರ್ ಮತ್ತು ‘ಬಿಗ್ ಬಾಸ್’ ವಿನ್ನರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಮತ್ತೋರ್ವ ಕನ್ನಡ ರಾಪರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

‘ನಾನ್ ಕನ್ನಡಿಗ’, ‘ಡೋಂಟ್ ವರಿ’, ‘ಯಾಕಿಂಗೆ’ ಸೇರಿದಂತೆ ಕನ್ನಡದಲ್ಲಿ ಹಲವು ಹಿಟ್ ರಾಪ್ ಹಾಡುಗಳನ್ನು ನೀಡಿರುವ ಅಲೋಕ್ ಬಾಬು ಅಲಿಯಾಸ್ ಆಲ್ ಓಕೆ ಅವರು ನಿಶಾ ನಟರಾಜನ್ ಜೊತೆಗೆ ಹಸೆಮಣೆ ಏರಿದ್ದಾರೆ. ಬ್ರಾಹ್ಮಣ ಮತ್ತು ತಮಿಳು ಅಯ್ಯರ್ ಸಂಪ್ರದಾಯದಂತೆ ವಿವಾಹ ಮಹೋತ್ಸವ ಇತ್ತೀಚೆಗಷ್ಟೇ ಜರುಗಿದೆ.

ಡಾಲಿ ಧನಂಜಯ್, ಕೆ.ಎಂ.ಚೈತನ್ಯ, ಪ್ರಥಮ್ ಸೇರಿದಂತೆ ಸ್ಯಾಂಡಲ್ ವುಡ್ ತಾರೆಯರು ಅಲೋಕ್-ನಿಶಾ ಆರತಕ್ಷತೆಯಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಿದ್ದಾರೆ.

ಹಾಗ್ನೋಡಿದ್ರೆ, ಅಲೋಕ್ ಮತ್ತು ನಿಶಾರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಅಲೋಕ್ ಮತ್ತು ನಿಶಾ ನಟರಾಜನ್ ಈಗ ಹೊಸ ಜೀವನ ಆರಂಭಿಸಿದ್ದಾರೆ. ಎನ್.ಜಿ.ಓ ಒಂದರಲ್ಲಿ ನಿಶಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ರಾಪರ್ ಆಗಿ ಗುರುತಿಸಿಕೊಂಡಿರುವ ಅಲೋಕ್ ಬಾಬು ‘ಜೋಶ್’, ‘ಮಂದಹಾಸ’, ‘ನಿನ್ನಿಂದಲೇ’, ‘ಸಿದ್ದಾರ್ಥ’, ‘ಗಜಕೇಸರಿ’, ‘ತಾರಕ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Niranthara News

Leave a Reply

Your email address will not be published. Required fields are marked *

Next Post

ಪತ್ರಕರ್ತನಿಗೆ ಸಂಪಾದಕ ಸ್ಥಾನಕ್ಕಿಂತ ಮಿಗಿಲಾದ ಗೌರವ ಇಲ್ಲ!

Thu Nov 7 , 2019
Share on Facebook Tweet it Share on Google Pin it Share it Email Share on Facebook Tweet it Share on Google Pin it Share it Email Source Credit Vishwavani.news ಒಬ್ಬ ಅಥವಾ ಪತ್ರಕರ್ತ ಏಕಾಏಕಿ ರಾಜಕಾರಣಿಯ ಪಡಸಾಲೆ ಸೇರಿಬಿಟ್ಟರೆ, ಬಹಳ ಬೇಸರವಾಗುವುದು ಅವನನ್ನು ಅಷ್ಟು ವರ್ಷಗಳ ಕಾಲ ಹಿಂಬಾಲಿಸಿದ ಓದುಗರಿಗೆ! ಪತ್ರಕರ್ತರಿಗೆ ಯಾರಾದರೂ GO To Hell ಅಂತ ಬೈದರೆ, ತಕ್ಷಣ Hell ಗೆ ಹೋಗಲು ಸಾಧ್ಯವಾಗುವುದಾದರೆ ಅದರಂಥ ಅದ್ಭುತ ಇನ್ನೊೊಂದಿಲ್ಲವಂತೆ. ಕಾರಣ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links