3 ದಿನದ ಕಲೆಕ್ಷನ್ ಎಷ್ಟು?: ಬಾಕ್ಸ್ ಆಫೀಸ್ ನಲ್ಲಿ ಗೆದ್ನಾ ‘ಒಡೆಯ’?

Source Credit Filmibeat.com

ಶನಿವಾರ 4 ಕೋಟಿ, ಭಾನುವಾರ 5 ಕೋಟಿ

‘ಒಡೆಯ’ ಸಿನಿಮಾ ಶನಿವಾರ 4 ಕೋಟಿ ಗಳಿಕೆ ಮಾಡಿದೆ. ಭಾನುವಾರ 5 ಕೋಟಿ ಕಲೆಕ್ಷನ್ ಆಗಿದೆ. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ, ಶನಿವಾರದ ಕಲೆಕ್ಷನ್ ಹೆಚ್ಚಾಗಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ ಭಾನುವಾರದ ಕಲೆಕ್ಷನ್ ಏರಿಕೆಯಾಗಿದೆ. ವಾರಾಂತ್ಯ ಆಗಿರುವ ಕಾರಣ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಜಾಸ್ತಿಯಾಗಿದೆ.

ಮೊದಲ ದಿನ ಬರೀ 3 ಕೋಟಿ

‘ಒಡೆಯ’ ಮೊದಲ ದಿನ ಬರೀ 3 ಕೋಟಿ ಗಳಿಕೆ ಮಾಡಿತ್ತು. ದರ್ಶನ್ ಸ್ಟಾರ್ ಡಮ್ ಗೆ ಈ ಕಲೆಕ್ಷನ್ ಕಡಿಮೆ ಎನ್ನುವ ಹಾಗಿತ್ತು. ಅಲ್ಲಿದೆ ಈ ಸಿನಿಮಾಗೂ ಹಿಂದೆ ಬಂದ ‘ಕುರುಕ್ಷೇತ್ರ’ ಮೊದಲ ದಿನ 8 ರಿಂದ 10 ಕೋಟಿ ಕಲೆಕ್ಷನ್ ಮಾಡಿತ್ತು. ‘ಯಜಮಾನ’ ಸಿನಿಮಾ 7 ರಿಂದ 8 ಕೋಟಿ ಗಳಿಕೆ ಮಾಡಿತ್ತು. ‘ಒಡೆಯ’ ಈ ಚಿತ್ರಗಳ ದಾಖಲೆ ಮುರಿಯುವಲ್ಲಿ ಹಿಂದೆ ಇದೆ.

ರಿಮೇಕ್ ಸಿನಿಮಾ ಎನ್ನುವ ಕಾರಣ ಇರಬಹುದೇ

‘ಒಡೆಯ’ ಸಿನಿಮಾ ತಮಿಳಿನ ‘ವೀರಂ’ ಚಿತ್ರದ ರಿಮೇಕ್. ಆ ಸಿನಿಮಾ ಐದು ವರ್ಷಗಳ ಹಿಂದೆ ಬಂದಿತ್ತು. ಅದೇ ಸಿನಿಮಾವನ್ನು ಈಗ ಕನ್ನಡಿಗರ ಮುಂದೆ ತರಲಾಗಿದೆ. ಈಗಾಗಲೇ ಕಥೆ, ಸಿನಿಮಾ ಎಲ್ಲರಿಗೆ ತಿಳಿದಿದ್ದು, ಇದೇ ಕಾರಣದಿಂದ ಸಿನಿಮಾ ನೋಡಲು ಪ್ರೇಕ್ಷಕರಿಗೆ ಆಸಕ್ತಿ ಕಡಿಮೆ ಆಗಿರಬಹುದು.

ಹೇಗಿದೆ ಸಿನಿಮಾ?

‘ಒಡೆಯ’ ಮಾಸ್ ಹಾಗೂ ಕ್ಲಾಸ್ ಸಿನಿಮಾ. ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್. ದರ್ಶನ್ ಅಭಿಮಾನಿಗಳು, ಕಮರ್ಷಿಯಲ್ ಸಿನಿಮಾ ಇಷ್ಟ ಪಡುವವರು, ಹೊಡೆದಾಟ ನೋಡಬೇಕು ಎನ್ನುವವರು ‘ಒಡೆಯ’ನ ದರ್ಶನ ಮಾಡಬಹುದು. ಹೊಸತನದ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಹೋದರೆ ನಿಮಗೆ ಮನರಂಜನೆ ಸಿಗಬಹುದು.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳುವುದೇನು?

Mon Dec 16 , 2019
Source Credit Oneindia.com Pin it Email https://nirantharanews.com/3-%e0%b2%a6%e0%b2%bf%e0%b2%a8%e0%b2%a6-%e0%b2%95%e0%b2%b2%e0%b3%86%e0%b2%95%e0%b3%8d%e0%b2%b7%e0%b2%a8%e0%b3%8d-%e0%b2%8e%e0%b2%b7%e0%b3%8d%e0%b2%9f%e0%b3%81-%e0%b2%ac%e0%b2%be%e0%b2%95%e0%b3%8d/#Wg== Chitradurga lekhaka-Chidananda m By ಚಿತ್ರದುರ್ಗ ಪ್ರತಿನಿಧಿ | Updated: Monday, December 16, 2019, 12:00 [IST] ಚಿತ್ರದುರ್ಗ, ಡಿಸೆಂಬರ್ 16: ಉಪಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ ನಂತರ ಸಂಪುಟ ವಿಸ್ತರಣೆ ಕುರಿತು ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಈ ಕುರಿತು ಮಾತನಾಡಿ, “ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ಕೊಡಬೇಕು ಅನ್ನೋದು ಮುಖ್ಯಮಂತ್ರಿಯವರ ಪರಮೋಚ್ಛ ಅಧಿಕಾರವಾಗಿದ್ದು, ಅವರೇ ಯಾರಿಗೆ ಯಾವ ಖಾತೆಯನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links