3 ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

Source Credit RJ News Kannada

ಎಲ್ಲೆಲ್ಲೂ ಅವನೇ ಶ್ರೀಮನ್ನಾರಾಯಣನ ಜಪ.. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ವಿಭಿನ್ನ ಶೈಲಿಯ ಸಿನಿಮಾ ಪ್ರಯೋಗಿಸಿ ಗೆದ್ದ ಚಿತ್ರತಂಡವೀಗ ಭರ್ಜರಿ ಕಲೆಕ್ಷನ್ನಿನ ಖುಷಿಯಲ್ಲಿದೆ..

ಅವನೇ ಶ್ರೀಮನ್ನಾರಾಯಣ ಬಾಕ್ಸ್ ಆಫೀಸಿನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.. ಹೌದು ರಕ್ಷಿತ್ ಶೆಟ್ಟಿ ಹಾಗೂ ಅವರ ತಂಡದ ಮೂರು ವರ್ಷದ ಪರಿಶ್ರಮದ ಸಿನಿಮಾ.. ರಕ್ಷಿತ್ ಸೇರಿದಂತೆ 7 ಜನರ ಕತೆಯನ್ನು ಸಚಿನ್ ಅಚ್ಚುಕಟ್ಟಾಗಿ ನಿರ್ದೇಶಿಸಿ ಜನರ ಮುಂದೆ ಇಟ್ಟು ಗೆದ್ದಾಗಿದೆ..

ಕಳೆದ ವಾರ ಕನ್ನಡದಲ್ಲಿ ಬಿಡುಗಡೆಗೊಂಡು ಭರ್ಜರಿ ಕಲೆಕ್ಷಮ್ ಮಾಡಿರುವ ಅವನೇ ಶ್ರೀಮನ್ನಾರಾಯಣ ಜನವರಿ ಮೊದಲ ವಾರದಲ್ಲಿ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ..

ಈ ರೀತಿ ಸಿನಿಮಾ ಕನ್ನಡದ ನೆಲದಲ್ಲಿ ಗೆಲ್ಲಲ್ಲ.. ಕನ್ನಡಿಗರು ಇಂತಹ ಸಿನಿಮಾಗಳನ್ನು ಒಪ್ಪಿಕೊಳ್ಳಲ್ಲ ಎಂದು ಬಹಳಷ್ಟು ಜನರು ಟೀಕಿಸಿದ್ದರು.. ಆದರೆ ಅವನೇ ಶ್ರೀಮನ್ನಾರಾಯಣ ಮೂರೇ ದಿನದಲ್ಲಿ ಮಾಡಿರುವ ಗಳಿಕೆ ಟೀಕಾಕಾರರು ತಿರುಗಿ ನೋಡುವಂತೆ ಮಾಡಿದೆ..

ಕೆಜಿಎಫ್ ಕುರುಕ್ಷೇತ್ರ ಸಿನಿಮಾದ ನಂತರ ಮತ್ತೊಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಅವನೇ ಶ್ರೀಮನ್ನಾರಾಯಣ ಗೆಲ್ಲುವುದದಲ್ಲಿ ಡೌಟೇ ಇಲ್ಲ ಎನ್ನಬಹುದು..

ಸಿನಿಮಾ ಮೂಲಗಳ ಪ್ರಕಾರ ಅವನೇ ಶ್ರೀಮನ್ನಾರಾಯಣ ಮೊದಲ ದಿನ ಒಟ್ಟು 9 ಕೋಟಿ ಕಲೆಕ್ಷನ್ ಮಾಡಿದ್ದು, ವೀಕೆಂಡ್ ನಲ್ಲಿ ಎಲ್ಲಾ ಶೋ ಗಳು ಹೌಸ್ಫುಲ್ ಆದ ಕಾರಣ 3 ದಿನದಲ್ಲಿ ಒಟ್ಟು 24 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ..

ಇದಿಷ್ಟೇ ಅಲ್ಲದೆ ಇನ್ನೂ ಒಂದು ವಾರ ಪೂರ್ತಿ ಎಲ್ಲಾ ಸ್ಕ್ರೀನ್ ಗಳು ಬಹುತೇಕ ಹೌಸ್ ಫುಲ್ ಆಗಲಿದ್ದು, ಜೊತೆಗೆ ಬೇರೆ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಮೊದಲ ವಾರದಲ್ಲಿ ಒಟ್ಟು 50 ಕೋಟಿ ಗಳಿಕೆ ಕಾಣಬಹುದೆಂದು ಅಂದಾಜಿಸಲಾಗಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಪೊಲೀಸರ ವಿರುದ್ಧ ದಾಳಿಗೆ ಪ್ರಚೋದನೆ: ಮಂಗಳೂರಿನಲ್ಲಿ ಯುವಕನ ಬಂಧನ

Tue Dec 31 , 2019
Source Credit NewsKannada.com YK   ¦    Dec 31, 2019 12:30:15 PM (IST) ಮಂಗಳೂರು: ಪೌರತ್ವ ಕಾಯ್ದೆ ವಿರುದ್ಧ ಈಚೆಗೆ ಮಂಗಳೂರಿನಲ್ಲಿ ನಡೆದ ಗಲಭೆ, ಗೋಲಿಬಾರ್ ವೇಳೆ ಪೊಲೀಸರ ವಿರುದ್ಧ ದಾಳಿ ಮಾಡಿ ರಕ್ತಪಾತ ನಡೆಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದಿಸಿದ್ದ ಆರೋಪದಲ್ಲಿ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೊಯ್ದೀನ್ ಹಫೀಜ್ ಎಂದು ಗುರುತಿಸಲಾಗಿದೆ. ಈತ ತನ್ನ ವಾಟ್ಸಾಪ್ ಹಾಗೂ ಫೇಸ್ ಬುಕ್ ನಲ್ಲಿ ಪೊಲೀಸರ ವಿರುದ್ಧ ದಾಳಿ ನಡೆಸುವಂತೆ ಪ್ರಚೋದನಕಾರಿ ಫೋಸ್ಟ್ ಹಾಕುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links