ಹೇಗಿದೆ ಗೊತ್ತಾ ಅವನೇ ಶ್ರೀಮನ್ನಾರಾಯಣ.. ಪಾಸಿಟಿವ್ ಏನು? ನೆಗಟೀವ್ ಏನು? ಇಲ್ಲಿದೆ ನೋಡಿ..

Source Credit RJ News Kannada

ಕನ್ನಡ ಸಿನಿಮಾಗಳ ಪೈಕಿ ಈ ವರ್ಷದ ಕೊನೆಯ ಬಹು ನಿರೀಕ್ಷೆಯ ಚಿತ್ರ ಅವನೇ ಶ್ರೀಮನ್ನಾರಾಯಣ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಭರ್ಜರಿ ಓಪನಿಂಗ್ ಪಡೆದಿದೆ.. ಇನ್ನು ಸಿನಿಮಾ ನೋಡಿದ ವೀಕ್ಷಕ ಏನ್ ಹೇಳ್ತಾನೆ? ಸಿನಿಮಾದ ಪಾಸಿಟೀವ್ ಏನು? ನೆಗಟೀವ್ ಏನು? ಸಿನಿಮಾದ ರಿಯಲ್ ವಿಮರ್ಶೆ ಇಲ್ಲಿದೆ ನೋಡಿ..

ಅಣ್ಣಾವ್ರ ಭಕ್ತ ಪ್ರಹ್ಲಾದ ಸಿನಿಮಾದ ದೃಶ್ಯದೊಂದಿಗೆ ರಕ್ಷಿತ್ ಶೆಟ್ಟಿ ಅವರ ಎಂಟ್ರಿ ನೋಡುತ್ತಿದ್ದಂತೆ ಪ್ರೇಕ್ಷಕ ಫುಲ್ ಖುಷ್.. ಇದು ಸಿನಿಮಾ ಅನ್ನೋದಕ್ಕಿಂದ ಒಂದು ಅದ್ಭುತ ಪತ್ತೇದಾರಿ ಕಾದಂಬರಿಯನ್ನು ಓದಿದ ಅನುಭವದ ಜೊತೆಗೆ ಸಿನಿಮಾ ನೋಡುವ ಅಷ್ಟೂ ಸಮಯ ಮನರಂಜನೆಯ ರಸದೌತಣವೆನ್ನಬಹುದು.. ಸಿನಿಮಾ ನೋಡುತ್ತಿದ್ದಂತೆ ಆ ಸಿನಿಮಾದಲ್ಲಿ ನಾವೇ ಇದ್ದೇವೇನೋ.. ಅಥವಾ ನಮ್ಮ ಸುತ್ತ ಮುತ್ತ ಆ ಕತೆ ನಡೆಯುತ್ತಿದೆ.. ಅಯ್ಯೋ ನಾನೇ ಈ ಕೆಲಸ ಮಾಡೋಣ ಅಂತೆಲ್ಲಾ ಅನುಭವಗಳನ್ನು ನೀಡುವ ಸಿನಿಮಾ ಅವನೇ ಶ್ರೀಮನ್ನಾರಾಯಣ.. ಇನ್ನು ಸಂಪೂರ್ಣ ಸಿನಿಮಾವನ್ನು ನಾಯಕ ರಕ್ಷಿತ್ ಶೆಟ್ಟಿ ಅವರು ತೆಗೆದುಕೊಂಡು ಹೋಗುವ ರೀತಿ ಸಖತ್ ಆಗಿದೆ.. ಕನ್ನಡದಲ್ಲಿ ಈ ರೀತಿಯ ವಿಭಿನ್ನ ಶೈಲಿಯ ಸಿನಿಮಾ ಇದೇ ಮೊದಲೆನ್ನಬಹುದು..

ಪ್ರೇಕ್ಷಕ ತಾನೇ ಈ ಹೊಸ ಶೈಲಿಯ ಸಿನಿಮಾಗೆ ಒಗ್ಗಿಕೊಂಡು ಥಿಯೇಟರ್ ನಿಂದ ಆಚೆ ಬರುವ ಹೊತ್ತಿಗೆ ಮತ್ತಷ್ಟು ಈ ಶೈಲಿಯ ಸಿನಿಮಾ ಬರಲಿ ಎನ್ನುತ್ತಾನೆ.. ಹಿನ್ನೆಲೆ ಸಂಗೀತ ಅದ್ಭುತ.. ಒಂದು ರೀತಿಯ ಕನ್ನಡ ಭಾಷೆಯಲ್ಲಿ ಹಾಲಿವುಡ್ ಸಿನಿಮಾ ನೋಡಿದಂತೆ ಭಾಸವಾಗುತ್ತದೆ..

ಪ್ರತಿಯೊಂದು ಪಾತ್ರಗಳು ಕೂಡ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿವೆ.. ಅದರಲ್ಲೂ ಜೈರಾಮ್ ತುಕಾರಾಂ ಪಾತ್ರ ಪದೇ ಪದೇ ನೆನಪಾಗುತ್ತವೆ.. ಫೈಟ್ ದೃಶ್ಯಗಳಾಗಿರಬಹುದು ಹಾಡುಗಳಾಗಿರಬಹುದು ಅಥವಾ ಕಾಮಿಡಿ ಆಗಿರಬಹುದು ಅಲ್ಟಿಮೇಟ್ ಎನ್ನಲೇ ಬೇಕು.. ಇನ್ನು ಒಂದೆರೆಡು ಸೆಕೆಂಡ್ ಅಷ್ಟೇ ಬಂದು ಹೋಗುವ ಯೋಗರಾಜ್ ಭಟ್ಟರು ರಿಶಬ್ ಶೆಟ್ಟರು ಸಖತ್ ಎನ್ನಲೇಬೇಕು..

ಇನ್ನು ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಅವರ ಅಭಿನಯ‌ ಎಲ್ಲಿಯೂ ಓವರ್ ಎನಿಸೋದಿಲ್ಲ.. ಪ್ರೇಕ್ಷಕನನ್ನು ಸಂಪೂರ್ಣ ಸಿನಿಮಾ ಹಿಡಿದಿಟ್ಟುಕೊಳ್ಳುವಲ್ಲಿ ಸಿನಿಮಾ ಫುಲ್ ಮಾರ್ಕ್ಸ್ ಪಡೆದಿದೆ.. ಇದರ ನಡುವೆ ಪುರಾಣದ ಲಕ್ಷ್ಮಿ ನಾರಾಯಣನ ಕತೆಯನ್ನು ಕೂಡ ಸಿನಿಮಾ ನೆನಪಿಸುತ್ತದೆ.‌ ರಕ್ಷಿತ್ ಶೆಟ್ಟಿ ಅಂಡ್ ಟೀಮ್ ಬರೆದಿರುವ ಕತೆಯನ್ನು ಸಚಿನ್ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದಾರೆನ್ನಬಹುದು..

ಇನ್ನು ಸಿನಿಮಾದ ನೆಗಟೀವ್ ಎಂದರೆ.. ಅದು ರಿಶಭ್ ಶೆಟ್ಟಿ ಅವರ ಪಾತ್ರ ಮತ್ತಷ್ಟು ಬೇಕಿತ್ತು ಎನಿಸುತ್ತದೆ.. ಹಾಗೂ ಶಾನ್ವಿ ಅವರನ್ನು ಮತ್ತಷ್ಟು ಹೈಲೈಟ್ ಮಾಡಬೇಕಿತ್ತು.. ಸಿನಿಮಾದ ಅವಧಿ ಕೊಂಚ ಹೆಚ್ಚಾದಂತೆ ಕಾಣುತ್ತದೆ..

ಒಟ್ಟಿನಲ್ಲಿ ಶ್ರೀಮನ್ನಾರಾಯಣ ಸಿನಿಮಾ ಒಂದೊಳ್ಳೆ ಪ್ರಯೋಗದ ಜೊತೆಗೆ ಕನ್ನಡ ಸಿನಿಮಾಗೆ ಕೆಜಿಎಫ್ ನಂತೆಯೇ ಮತ್ತಷ್ಟು ಗೌರವ ತಂದುಕೊಡುವ ಸಿನಿಮಾ ಇದಾಗಿದೆ.. ಆದರೆ ಯಾರೂ ಕೂಡ ಕೆಜಿಎಫ್ ಅನ್ನು ತಲೆಯಲ್ಲಿ ಇಟ್ಟುಕೊಂಡು ಈ ಸಿನಿಮಾ‌ ನೋಡಬಾರದು.. ಅದರ ಪ್ಯಾಟ್ರನ್ ಬೇರೆ.. ಇದರ ಪ್ಯಾಟ್ರನ್ ಬೇರೆ.. ಗಂಭೀರ ಕತೆಯ ಉದ್ದಕ್ಕೂ ಮನರಂಜನೆಯನ್ನು ನೀಡುವ ಸಖತ್ ಸಿನಿಮಾ ಅವನೇ ಶ್ರೀಮನ್ನಾರಾಯಣ..

ತಪ್ಪದೇ ಹತ್ತಿರದ ಚಿತ್ರಮಂದಿರಗಳಲ್ಲಿ ಹೋಗಿ ಶ್ರೀಮನ್ನಾರಾಯಣನ ದರ್ಶನ ಮಾಡಿ.. ಕನ್ನಡ ಚಿತ್ರರಂಗ ಮತ್ತಷ್ಟು ಬೆಳೆಯಲಿ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಡ್ರಾಪ್ ನೀಡುತ್ತೇನೆಂದು ಮಹಿಳೆ ಹತ್ತಿಸಿಕೊಂಡು ದಾರಿ ಮಧ್ಯೆ ಈತ ಮಾಡಿದ್ದೇನು?

Fri Dec 27 , 2019
Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links