ಹೆಸರು ಬದಲಿಸಿಕೊಂಡ ನಟಿ ರಾಧಿಕಾ ಚೇತನ್

News

oi-Naveen Ms

|

ನಟಿ ರಾಧಿಕಾ ಚೇತನ್ ಕನ್ನಡದ ಕ್ಯೂಟ್ ನಟಿ.‌ ನಟಿಸಿದ ಮೊದಲ ಸಿನಿಮಾದಲ್ಲಿಯೇ ದೊಡ್ಡ ಹಿಟ್ ನೀಡಿದ ಈ ನಟಿ ಇದೀಗ ಒಂದರ ನಂತರ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ರಾಧಿಕಾ ಈಗ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.

ಇಂಡಸ್ಟ್ರಿಯಲ್ಲಿ ನಟ, ನಟಿಯರು ತಮ್ಮ ಹೆಸರನ್ನು ಬದಲಿಸಿಕೊಳ್ಳುವುದು, ತಮ್ಮ ಹೆಸರ ಅಕ್ಷರಗಳನ್ನು ಚೇಂಚ್ ಮಾಡುವುದು ಸಹಜ. ಇದೀಗ, ರಾಧಿಕಾ ಚೇತನ್ ಕೂಡ ತಮ್ಮ ಹೆಸರನ್ನು ಕೊಂಚ ಬದಲಿಸಿಕೊಂಡಿದ್ದಾರೆ. ರಾಧಿಕಾ ಚೇತನ್ ಈಗ ‘ರಾಧಿಕಾ ನಾರಾಯಣ್’ ಆಗಿದ್ದಾರೆ.

ಏನಿದು ಹೆಸರು ಚೇಂಚ್ ಮಾಡಿಕೊಂಡುಬಿಟ್ಟಿದ್ದೀರಿ ಅಂದರೆ, ತಮ್ಮ ನಗುವನ್ನಷ್ಟೆ ರಾಧಿಕಾ ನಾರಾಯಣ್ ಉತ್ತರವಾಗಿ ‌ನೀಡಿದರು. ಇನ್ನು ಮುಂದೆ ಇದೇ ಹೆಸರಿನಲ್ಲಿ ಈ ನಟಿ ತಮ್ಮ ಸಿನಿ ಕೆರಿಯರ್ ಮುಂದುವರೆಸಲಿದ್ದಾರೆ.

‘ರಂಗಿತರಂಗ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ರಾಧಿಕಾ ನಾರಾಯಣ್ ಬಂದರು. ಆ ಬಳಿಕ ‘ಯೂ ಟರ್ನ್’, ‘ಕಾಫಿತೋಟ’, ‘ಅಸತೋಮಾ ಸದ್ಗಮಯಾ’, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾಗಳಲ್ಲಿ ನಟಿಸಿದರು.

ಸದ್ಯ ‘ಮುಂದಿನ ನಿಲ್ದಾಣ’ ಹಾಗೂ ‘ಚೇಸ್’ ಸಿನಿಮಾಗಳಲ್ಲಿ ರಾಧಿಕಾ ನಾರಾಯಣ್ ಬ್ಯುಸಿ ಇದ್ದಾರೆ. ‘ಮುಂದಿನ ನಿಲ್ದಾಣ’ ಹಾಡುಗಳು ತುಂಬ ಚೆನ್ನಾಗಿ ಮೂಡಿಬಂದುದ್ದು, ಸಖತ್ ಸ್ಟೈಲಿಷ್ ಆಗಿ ರಾಧಿಕಾ ಕಾಣಿಸಿಕೊಂಡಿದ್ದಾರೆ.

Niranthara News

Leave a Reply

Your email address will not be published. Required fields are marked *

Next Post

'ರಾಬರ್ಟ್' ಚಿತ್ರತಂಡ ಸೇರಿದ ಕಿರುತೆರೆಯ ಖ್ಯಾತ ನಟ

Fri Nov 1 , 2019
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links