ಹೆಣ್ಣು ಮಗಳ ಪ್ರಾಣ ಉಳಿಸಲು ಮುಂದಾದ ದರ್ಶನ್ ಅಭಿಮಾನಿಗಳು.

Source Credit RJ News Kannada

ಯತಾ ರಾಜ ತತಾ ಪ್ರಜಾ ಅನ್ನೋ ಗಾದೆ ಅಕ್ಷರಶಃ ಸತ್ಯ ಅನ್ನೋದಕ್ಕೆ ಇಲ್ಲೊಂದು ನೈಜ್ಯ ಉದಾಹರಣೆ ಇದೆ ನೋಡಿ.. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಗಳನ್ನು ಸೆಲಿಬ್ರೆಟಿಗಳನ್ನು ತೆರೆಯ ಮೇಲೆ ನೋಡಿ ಆನಂದಿಸುವುದಷ್ಟೇ ಅಲ್ಲ ಅವರ ನಿಜ ಜೀವನದ ವ್ಯಕ್ತಿತ್ವವನ್ನು ಅನುಕರಿಸುವುದೂ ಉಂಟು.. ಅದಕ್ಕೆ ಉದಾಹರಣೆ ಇದೀಗ ದರ್ಶನ್ ಅವರ ಅಭಿಮಾನಿಗಳು ಮಾಡುತ್ತಿರುವ ಕಾರ್ಯ..

ಹೌದು ದರ್ಶನ್ ಅವರ ಅಭಿಮಾನಿಗಳು ಒಂದು ಹೆಣ್ಣಿನ ಜೀವ ಉಳಿಸಲು ಮುಂದಾಗಿದ್ದಾರೆ.. ಬೆಂಗಳೂರಿನ ದೇವನಹಳ್ಳಿಯ ವಿಜಯಪುರದ ನಿವಾಸಿ ಸತ್ಯನಾರಾಯಣ ಅವರದ್ದು ಬಡ ಕುಟುಂಬ.. ವಾಟರ್ ಟ್ಯಾಂಕರ್ ಅವರ ಜೀವನದ ಆಧಾರವಾಗಿತ್ತು.. ಹೀಗೆ ಜೀವನ ಸಾಗುತಲಿತ್ತು.. ಆದರೆ ದುರ್ವಿಧಿ ಸತ್ಯನಾರಾಯಣ ಅವರ ಮಗಳು ಚೈತನ್ಯಳಿಗೆ ಬ್ರೈನ್ ಟ್ಯೂಮರ್ ಕಾಯಿಲೆ ಇರುವುದು ತಿಳಿಯಿತು.. ಹೇಗಾದರೂ ಮಗಳನ್ನು ಉಳಿಸಿಕೊಳ್ಳಲೇಬೇಕೆಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ..

ಚಿಕಿತ್ಸಾ ವೆಚ್ಛ ಲಕ್ಷಗಳ ಗಡಿ ದಾಟಿ ಹೋಯಿತು.. ಆದರೂ ಮಗಳನ್ನು ಉಳಿಸಿಕೊಳ್ಳಲೇ ಬೇಕೆಂದು ಜೀವನಾಧಾರವಾಗಿದ್ದ ವಾಟರ್ ಟ್ಯಾಂಕರ್ ಮಾರಿದರು.. ಎಲ್ಲೆಡೆ ಸಾಲ ಮಾಡಿ 6 ಲಕ್ಷ ಭರಿಸಿದ್ದಾರೆ..

ಆದರೆ ಶ್ರೀಮಂತ ಕಾಯಿಲೆ ಗುಣವಾಗಲು 25 ಲಕ್ಷದ ವರೆಗೆ ಖರ್ಚಾಗುತ್ತದೆ ಎನ್ನಲಾಗುತ್ತಿದೆ.. ಈ ಸಮಯದಲ್ಲಿ ವಿಜಯಪುರದ ದರ್ಶನ್ ಅಭಿಮಾನಿ ಸಂಘದವರು ಇವರ ನೆರವಿಗೆ ನಿಂತಿದ್ದು.. ದೇವನಹಳ್ಳಿಯ ದರ್ಶನ್ ಅಭಿಮಾನಿ ಸಂಘದವರು ಕೈ ಜೋಡಿಸಿದ್ದಾರೆ..

ಇನ್ನೇನು ಕೆಲ ದಿನಗಳಲ್ಲಿ ದರ್ಶನ್ ಅವರ ಹುಟ್ಟುಹಬ್ಬ ಬರಲಿದ್ದು ಅವರ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಅರ್ಧ ಹಣವನ್ನು ಈ ಹೆಣ್ಣಿನ ಜೀವ ಉಳಿಸಲು ನೀಡೋಣ ಎಂದು ದರ್ಶನ್ ಅವರ ಎಲ್ಲಾ ಅಭಿಮಾನಿಗಳ ಬಳಿ‌ ಮನವಿ‌ ಮಾಡಿದ್ದಾರೆ.. ಆ ಜೀವ ಉಳಿದರೆ ದರ್ಶನ್ ಅವರ ಹುಟ್ಟುಹಬ್ಬಕ್ಕೆ ನಿಜವಾದ ಅರ್ಥ ಸಿಗುತ್ತದೆ.. ಅದಕ್ಕಾಗಿ ಎಲ್ಲರೂ ಕೈಜೋಡಿಸಿ ಎಂದು ಕೇಳಿದ್ದಾರೆ..

ಈಗಾಗಲೇ ಬಹಳಷ್ಟು ಅಭಿಮಾನಿಗಳು ಆ ಹೆಣ್ಣು ಮಗಳ ಜೀವ ಉಳಿಯಲಿ ಎಂಬ ಹಾರೈಕೆಯ ಜೊತೆಗೆ ಹಣ ಸಹಾಯ ಮಾಡುತ್ತಿದ್ದು.. ಆ ಹೆಣ್ಣು ಮಗಳಿಗೆ ಸಹಾಯ ಮಾಡಲು ಇಚ್ಚಿಸುವವರು ಮೇಲಿನ ಫೋಟೋದಲ್ಲಿ ಆಕೆಯ ಸಂಪೂರ್ಣ ವಿವರವನ್ನು ನೋಡಿ.. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅವರ ತಂದೆಯ ಫೋನ್ ನಂಬರ್ ಅನ್ನು ಕೂಡ ನೀಡಲಾಗಿದ್ದು ಅವರಿಗೆ ಫೋನ್ ಮಾಡಿ ಮಾತನಾಡಬಹುದಾಗಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಈ ದೇಶದ್ದೇನಂತೆ ವಿಶ್ವದ ಅತ್ಯಂತ ಪವರ್ ಫುಲ್ ಪಾಸ್ ಪೋರ್ಟ್ 

Sun Jan 12 , 2020
Source Credit Kannada Prabha Source : UNI ನವದೆಹಲಿ: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಎಂಬ  ಹೆಗ್ಗಳಿಕೆಯನ್ನು   ಜಪಾನ್   ಪಾಸ್ ಪೋರ್ಟ್  ಮತ್ತೊಮ್ಮೆ  ಮುಡಿಗೇರಿಸಿಕೊಂಡಿದೆ. “ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್” ನಲ್ಲಿ  ಸತತ ಮೂರನೇ  ಬಾರಿ  ತನ್ನ  ಆಗ್ರ ಶ್ರೇಯಾಂಕವನ್ನು   ಜಪಾನ್  ಪಾಸ್‌ಪೋರ್ಟ್ ಕಾಯ್ದುಕೊಂಡಿದೆ.  ಏಕೆಂದರೆ…  ಈ ಪಾಸ್ ಪೋರ್ಟ್ ನೊಂದಿಗೆ     ವೀಸಾ ಇಲ್ಲದೆ  ವಿಶ್ವದ ೧೯೧ ದೇಶಗಳಿಗೆ  ತೆರಳಬಹುದು. ಸಿಂಗಾಪುರ ಪಾಸ್‌ಪೋರ್ಟ್ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿವೆ. ಸಿಂಗಾಪುರ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links