ಹಿರೇಕೆರೂರಿನಲ್ಲಿ ಹಾಕೋದ್ಯಾರು ಗೆಲುವಿನ ಕೇಕೆ?

Source Credit Oneindia.com

Haveri

oi-Rajashekhar Myageri

|

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿರುವ ಮತ್ತೊಂದು ಕಣವೇ ಹಾವೇರಿ ಜಿಲ್ಲೆಯ ಹಿರೇಕೆರೂರು. ಕಳೆದ 2018ರ ಚುನಾವಣೆಯಲ್ಲಿ ಕೌರವನ ಜೊತೆ ಸೇರಿಕೊಂಡು ಕೈ ಕುಲುಕಿದ್ದ ಕಾಂಗ್ರೆಸ್ ಈ ಬಾರಿ ಅವರ ವಿರುದ್ಧವೇ ಕಹಳೆ ಊದಿದೆ. ಹಿರೇಕೆರೂರಿನಲ್ಲಿ ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪಣ ತೊಟ್ಟಿದ್ದರೆ, ಪಕ್ಷ ತೊರೆದ ಶಾಸಕನಿಗೆ ಪಾಠ ಕಲಿಸಲು ಕಾಂಗ್ರೆಸ್ ಸ್ಕೆಚ್ ಹಾಕಿಕೊಂಡಿದೆ. ಇನ್ನು, ಜೆಡಿಎಸ್ ಮಾತ್ರ ಪಕ್ಷೇತರ ಅಭ್ಯರ್ಥಿಗೆ ಸೈಲೆಂಟ್ ಆಗಿ ಬೆಂಬಲ ನೀಡಿದೆ.

ಹಾವೇರಿ ಜಿಲ್ಲೆಯಲ್ಲಿ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರಾಗಿದ್ದ ಬಿ.ಸಿ.ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ಎದುರಾಗಿದೆ. 2018ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿ.ಸಿ.ಪಾಟೀಲ್ ಶಾಸಕರಾಗಿ ಆಯ್ಕೆಯಾಗಿದ್ದರು.

ಈಗಾಗಲೇ ಕಾಂಗ್ರೆಸ್ ಗೆ ಟಾಟಾ ಮಾಡಿರುವ ಕೌರವ ಕೈಯಲ್ಲಿ ಕಮಲ ಹಿಡಿದು ಅಖಾಡಕ್ಕೆ ಧುಮುಕಿದ್ದಾರೆ. ಇನ್ನು, ಕಾಂಗ್ರೆಸ್ ಪರ ಬಿ.ಹೆಚ್.ಬನ್ನಿಕೋಡ ಸ್ಪರ್ಧಿಸಿದ್ದು, ಸಿದ್ದರಾಮಯ್ಯನವರೇ ಕೈ ಅಭ್ಯರ್ಥಿ ಪರ ಅಬ್ಬರ ಪ್ರಚಾರ ಮಾಡಿದ್ದರಿಂದ ಹಿರೇಕೆರೂರು ರಾಜಕಾರಣ ಮತ್ತಷ್ಟು ರಂಗು ಪಡೆದುಕೊಂಡಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿಯಿದೆ.

ಇನ್ನು, ಹಿರೇಕೆರೂರು ಕ್ಷೇತ್ರದಿಂದ 14 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು ನಾಮಪತ್ರ ಹಿಂಪಡೆಯುವ ಕೊನೆಯ ದಿನ ಜೆ.ಡಿ.ಎಸ್ ಅಭ್ಯರ್ಥಿ ಕಬ್ಬಿಣ ಕಂತಿಮಠ ಶಿವಲಿಂಗ ಸ್ವಾಮೀಜಿ,

ಪಕ್ಷೇತರ ಅಭ್ಯರ್ಥಿಗಳಾದ ಅಶೋಕ ಬಾರ್ಕಿ, ರಾಜೇಶ ಜೋಳದ್, ಶಿವಕುಮಾರ ತಳವಾರ ಹಾಗೂ ಸೃಷ್ಟಿ ಪಾಟೀಲ ನಾಮಪತ್ರ ವಾಪಸ್ ಪಡೆದಿದ್ದಾರೆ. ಅಂತಿಮ ಕಣದಲ್ಲಿ ಒಂಭತ್ತು ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಉಳಿದ್ದಾರೆ.

ಹಿರೇಕೆರೂರು ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು – 09:

– ಬನ್ನಿಕೋಡ ಬಸಪ್ಪ ಹನುಮಂತಪ್ಪ(ಭಾ.ರಾ.ಕಾಂಗ್ರೆಸ್)

– ಬಸವನಗೌಡ ಪಾಟೀಲ ತಂದೆ ಚನ್ನಬಸನಗೌಡ ಪಾಟೀಲ(ಬಿಜೆಪಿ),

– ದೇವೆಂದ್ರಪ್ಪ ಜಯಪ್ಪ (ಉತ್ತಮ ಪ್ರಜಾಕೀಯ ಪಾರ್ಟಿ),

– ಮಂಜುನಾಥ ಜಿ.ಎಸ್.ಗಣೇಶಪ್ಪ (ಕರ್ನಾಟಕ ರಾಷ್ಟ್ರ ಸಮಿತಿ),

– ಹರೀಶ ಇಂಗಳಗೊಂದಿ ಸಿದ್ದಪ್ಪ(ಕರ್ನಾಟಕ ಜನತಾ ಪಕ್ಷ),

– ಕೋಡಿಹಳ್ಳಿ ಉಜನಪ್ಪ ತಂದೆ ಜಟ್ಟೆಪ್ಪ(ಪಕ್ಷೇತರ),

– ರಾಜಶೇಖರ ದೂದಿಹಳ್ಳಿ ಕಲ್ಲಪ್ಪ(ಪಕ್ಷೇತರ),

– ರುದ್ರಯ್ಯ ಸಾಲಿಮಠ ತಂದೆ ಅಂದಾನಯ್ಯ(ಪಕ್ಷೇತರ),

– ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ)

ಹಿರೇಕೆರೂರು ಕ್ಷೇತ್ರಗಳಲ್ಲಿ ತೆರೆದ ಒಟ್ಟು ಮತಗಟ್ಟೆಗಳ ಸಂಖ್ಯೆ:

– ಒಟ್ಟು ಮತಗಟ್ಟೆಗಳು: 229

– ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳು: 46

– ಪಿಂಕ್ ಮತಗಟ್ಟೆಗಳು: 02

– ಮಾದರಿ ಮತಗಟ್ಟೆಗಳು: 01

– ವಿಕಲಚೇತನ ಮತಗಟ್ಟೆ: 01

ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಮತದಾರರ ವಿವರ:

ಒಟ್ಟು ಮತದಾರರ ಸಂಖ್ಯೆ: 1,82, 796

ಮಹಿಳಾ ಮತದಾರರು: 88,554.

ಪುರುಷ ಮತದಾರರು: 94,238.

ಇತರೆ ಮತದಾರರ ಸಂಖ್ಯೆ: 4

ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರ:

ಒಟ್ಟು: 1,82,796 ಮತದಾರರು.

ಜಾತಿವಾರು ಲೆಕ್ಕಾಚಾರ:

ವೀರಶೈವ ಲಿಂಗಾಯತ: 80 ಸಾವಿರ

ಮುಸ್ಲಿಂ: 19 ಸಾವಿರ

ಕುರುಬ : 18 ಸಾವಿರ

ಪರಿಶಿಷ್ಠ ಜಾತಿ: 21 ಸಾವಿರ

ಪರಿಶಿಷ್ಠ ಪಂಗಡ:15 ಸಾವಿರ

ಇತರೆ : 29.7 ಸಾವಿರ

ಮತದಾರರ ಸಂಖ್ಯೆ: 1,82,796

ಕಳೆದ 2018ರ ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ಪಾಟೀಲ್ (ಬಿಸಿ ಪಾಟೀಲ್) ಬಿಜೆಪಿಯ ಯು.ಬಿ.ಬಣಕಾರ್ ವಿರುದ್ಧ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ವಿರುದ್ಧ ತೀವ್ರ ಪೈಪೋಟಿ ನಡೆಸಿ 72,461 ಮತಗಳನ್ನ ಪಡೆದ ಬಿ.ಸಿ.ಪಾಟೀಲ್ ಕೇವಲ 555 ಮತಗಳ ಅಂತರದಲ್ಲಿ ಜಯದ ನಗೆ ಬೀರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಅಮೆರಿಕ ನೌಕಾನೆಲೆಯಲ್ಲಿ ಗುಂಡಿನ ದಾಳಿ: ಪ್ರಾಣಾಪಾಯದಿಂದ ಪಾರಾದ ಭಾರತೀಯ ವಾಯುಸೇನೆ ಮುಖ್ಯಸ್ಥ

Thu Dec 5 , 2019
Source : PTI ಲಾಸ್ ಏಂಜಲೀಸ್: ಅಮೆರಿಕದ ಪರ್ಲ್ ಹಾರ್ಬರ್ ನೌಕಾನೆಲೆಯಲ್ಲಿ ಸಂಭವಿಸಿದ ಗುಂಡಿನ ದಾಳಿಯಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥಆರ್.ಕೆ.ಎಸ್. ಭದೌರಿಯ ಮತ್ತು ಅವರ ತಂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ. ವಿಶ್ವದ ಬಲಿಷ್ಠ ನೌಕಾನೆಲೆ ಎಂದೇ ಎನಿಸಿಕೊಂಡಿರುವ ಅಮೆರಿಕದ ಹಾವಾಯಿ ದ್ವೀಪದ ಪರ್ಲ್ ಹಾರ್ಬರ್ ಈ ಶೂಟೌಟ್ ನಡೆದಿದ್ದು, ಇಲ್ಲಿನ ನಾವಿಕನೊಬ್ಬ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಸುಮಾರು ಮೂವರು ಸಿಬ್ಬಂದಿಗಳಿಗೆ ಗಾಯವಾಗಿದ್ದು, ಗುಂಡಿನ ದಾಳಿ ಬಳಿಕ ಆತ ತನಗೆ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links