ಹಿರೆಕೇರೂರಲ್ಲಿ ವಿಜಯ ಪತಾಕೆ ಹಾರಿಸಿದ ಬಿ.ಸಿ.ಪಾಟೀಲ್

Source Credit Oneindia.com

Haveri

oi-Puttappa Koli

|

ಹಾವೇರಿ, ಡಿಸೆಂಬರ್ 09: ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಪ್ರತಿ ಮತ ಎಣಿಕೆ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಅವರು 29,194 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಬಿ.ಹೆಚ್.ಬನ್ನಿಕೋಡ್ ಅವರನ್ನು ಪರಾಭವಗೊಳಿಸಿದ್ದಾರೆ.

ಡಿಸೆಂಬರ್ 05 ರಂದು ನಡೆದ ಉಪ ಚುನಾವಣೆಗೆ ಇಂದು ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಬಿ.ಸಿ.ಪಾಟೀಲ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದರು.

ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಚುನಾವಣಾ ಪ್ರಚಾರದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದರು. ಬಾಂಬೆ ನೋಟು, ಬನ್ನಿಕೋಡ್ ಗೆ ಓಟು ಅಂತೆಲ್ಲಾ ಮಾತನಾಡಿದ್ದರು. ಆದರೆ ಇದ್ಯಾವುದನ್ನು ತಲೆಗೆ ಹಾಕಿಕೊಳ್ಳದ ಹಿರೇಕೆರೂರು ಮತದಾರ ಬಿ.ಸಿ.ಪಾಟೀಲ್ ಅವರಿಗೆ ಜೈ ಅಂದಿದ್ದಾರೆ.

ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,83,481 ಮತದಾರರಿದ್ದಾರೆ. ಅದರಲ್ಲಿ ಈ ಉಪ ಚುನಾವಣೆಯಲ್ಲಿ 1,45,001 ಜನರು ಮತ ಚಲಾಯಿಸಿದ್ದರು. 79.03% ರಷ್ಟು ಮತದಾನವಾಗಿತ್ತು.

ಹಿರೇಕೆರೂರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಅವರು ತಮ್ಮ ಸನಿಹ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ.ಹೆಚ್.ಬನ್ನಿಕೋಡ್ ಅವರನ್ನು 29.194 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಕೆಆರ್ ಪೇಟೆ: ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಪತಾಕೆ!

Mon Dec 9 , 2019
Source Credit Oneindia.com Pin it Email https://nirantharanews.com/%e0%b2%b9%e0%b2%bf%e0%b2%b0%e0%b3%86%e0%b2%95%e0%b3%87%e0%b2%b0%e0%b3%82%e0%b2%b0%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf%e0%b2%9c%e0%b2%af-%e0%b2%aa%e0%b2%a4%e0%b2%be%e0%b2%95%e0%b3%86/#Wg== Mandya oi-Amith | Updated: Monday, December 9, 2019, 11:34 [IST] ಮಂಡ್ಯ, ಡಿಸೆಂಬರ್ 9: ಜೆಡಿಎಸ್ ಮತ್ತು ಕಾಂಗ್ರೆಸ್‌ ಪಾರುಪತ್ಯ ಹೊಂದಿರುವ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಕಮಲ ಅರಳಿಸುವ ಬಯಕೆ ಹೊಂದಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ ಗೆದ್ದಿದ್ದ ಅನರ್ಹ ಶಾಸಕ ನಾರಾಯಣ ಗೌಡ ಈ ಬಾರಿ ಬಿಜೆಪಿಯ ಅಭ್ಯರ್ಥಿ. ಅವರಿಗೆ ಎದುರಾಳಿಗಳಾಗಿ ಕಾಂಗ್ರೆಸ್‌ನ ಕೆ.ಬಿ. ಚಂದ್ರಶೇಖರ್ ಮತ್ತು ಜೆಡಿಎಸ್‌ನ ಬಿಎಲ್ ದೇವರಾಜು ಇದ್ದಾರೆ. ಡಿ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links