ಹಿರಿಯೂರಿನ “ಪೊಲೀಸ್” ದಿನಗಳನ್ನು ಮೆಲುಕು ಹಾಕಿದ ಕೃಷಿ ಸಚಿವ ಬಿ.ಸಿ.ಪಾಟೀಲ್

Source Credit Oneindia.com

Chitradurga

oi-Chidananda M

|

BC Patil remembers his good old days at Hiriyuru | BC Patil | Hiriyur | Chitradurga

ಚಿತ್ರದುರ್ಗ, ಫೆಬ್ರವರಿ 14: ಮೊದಲ ಬಾರಿಗೆ ಕೃಷಿ ಸಚಿವರಾಗಿ ತಮ್ಮ ತವರೂರಾದ ಹಾವೇರಿ ಜಿಲ್ಲೆಗೆ ಭೇಟಿ ನೀಡುವ ಮಾರ್ಗ ಮಧ್ಯೆ ಹಿರಿಯೂರಿಗೆ ಬಂದಿದ್ದ ಬಿ.ಸಿ.ಪಾಟೀಲ್, ಇಲ್ಲಿನ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಇಂದು ಪ್ರವಾಸಿ ಮಂದಿರದಲ್ಲಿ ಅಭಿಮಾನಿಗಳು ಮತ್ತು ಕೃಷಿಕ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ಹಿರಿಯೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾಗ ರೌಡಿಗಳಿಗೆ ಮತ್ತು ಕಳ್ಳರಿಗೆ ಒಳ್ಳೆ ಪಾಠ ಕಲಿಸಿದ್ದೆ. ಒಳ್ಳೆಯವರಿಗೆ ಒಳ್ಳೆಯವಾನಾಗಿದ್ದೆ. ಹಿರಿಯೂರಿನಲ್ಲಿ ನಾಟಕಗಳಲ್ಲೂ ಅಭಿನಯಿಸಿದ್ದೆ” ಎಂದು ನೆನಪು ಮಾಡಿಕೊಂಡರು.

ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಮಂತ್ರಿಯಾಗಿ ಮೂರು ದಿನ ಆಗಿದೆ. ನಾನು ಇನ್ನೂ ಇಲಾಖೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮೂರು ದಿನಗಳಿಂದ ಸಿಎಂ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ರೈತರ ಅನುಕೂಲಕ್ಕಾಗಿ ರಾಜ್ಯದ ರೈತ ಮುಖಂಡರ ಜೊತೆ ಚರ್ಚಿಸಿದ್ದೇನೆ. ನಾನು ರೈತ ಕುಟುಂಬದಿಂದ ಬಂದವನು. ಹಾಗಾಗಿ ರೈತರ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದೇನೆ. ನಾನು ಪೋಲಿಸ್ ಇಲಾಖೆ ಬಿಟ್ಟು ರಾಜಕೀಯ ರಂಗಕ್ಕೆ ಪ್ರವೇಶ ಮಾಡುವ ಸಂದರ್ಭ ರೈತರ ಹೋರಾಟದಲ್ಲಿ 9 ದಿನಗಳ ಕಾಲ ಇಂಡಗಾಲ ಜೈಲಿನಲಿದ್ದೆ” ಎಂದರು.

“ನನಗೆ ಅರಣ್ಯ ಇಲಾಖೆ ಖಾತೆ ಕೊಟ್ಟಿದ್ದರು. ಆಗ ನಾನು ಸಿಎಂ ಬಳಿ ಹೋಗಿ ನನಗೆ ಜನರ ಜೊತೆ ಇರುವ ಖಾತೆ ಕೊಡಿ ಎಂದಿದ್ದೆ. ಅದಕ್ಕೆ ಕೃಷಿ ಖಾತೆ ಕೊಟ್ಟಿದ್ದಾರೆ. ರೈತರ ಸಮಸ್ಯೆಯನ್ನು ಬಗೆಹರಿಸಲು ಸಿಎಂ ಬಳಿ ಕೃಷಿ ಖಾತೆ ಪಡೆದುಕೊಂಡು ಬಂದಿದ್ದೇನೆ. ರಾಜ್ಯದ್ಯಾಂತ ಪ್ರವಾಸ ಮಾಡಿ, ರೈತರ ಸಮಸ್ಯೆ ಬಗೆಹರಿಸುತ್ತೇನೆ. ರೈತ ಪರ ಕೆಲಸ ಮಾಡಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ” ಎಂದು ಹೇಳಿದರು.

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

"ಕಾರ್ಮಿಕ ಸುರಕ್ಷತೆಗೆ ಮೊದಲ ಆದ್ಯತೆ" ಶಿವರಾಮ ಹೆಬ್ಬಾರ್ ಟ್ವೀಟ್

Fri Feb 14 , 2020
Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links