ಹಿಟ್ ಆಂಡ್ ರನ್ ಕೇಸ್ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಾರು ವಶಕ್ಕೆ

Source Credit TheMangaloreMirror.in

ಹಿಟ್ ಆಂಡ್ ರನ್ ಕೇಸ್ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಾರು ವಶಕ್ಕೆ

ಪುತ್ತೂರು ಫೆಬ್ರವರಿ 14:ಆರು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಕಡಬ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಕಾರು ಹಿಂದೂ ಮುಖಂಡರಾಗಿ ಪುತ್ತೂರಿನಲ್ಲಿ ಗುರುತಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಎಂಬವರಿಗೆ ಸೇರಿದ್ದಾಗಿದೆ ಎಂದು ಕಡಬ ಪೋಲೀಸರು ತಿಳಿಸಿದ್ದಾರೆ.

ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಸಿ.ಸಿ ಕ್ಯಾಮರಾ ದೃಶ್ಯಗಳನ್ನು ಆಧಾರಿಸಿ ಪತ್ತೆಹಚ್ಚಲಾಗಿದ್ದು, ಪೊಲೀಸರು ಕೊನೆಗೂ ಪ್ರಕರಣವನ್ನು ಬೇಧಿಸಿದ್ದಾರೆ.

2019 ರ ಸೆಪ್ಟೆಂಬರ್ 9 ರಂದು ಸುಬ್ರಹ್ಮಣ್ಯ- ಕಡಬ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ಮಹಿಳೆಗೆ ಡಿಕ್ಕಿ ಹೊಡೆದು ಕಾರು ಪರಾರಿಯಾಗಿತ್ತು. ತೀವೃವಾಗಿ ಗಾಯಗೊಂಡ ಮಹಿಳೆ ಸುಮತಿ (48) ಎಂಬವರು ಮೃತಪಟ್ಟಿದ್ದರು. ಇದೀಗ ಆರು ತಿಂಗಳುಗಳ ನಂತರ ವಾಹನವನ್ನು ಪೋಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆದಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Facebook Comments

comments

Source Credit TheMangaloreMirror.in

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಯಕ್ಷಗಾನದ ಹರಕೆ ಹೊತ್ತಿದ್ದ ವೈದ್ಯ: ಈಡೇರಿಸಿದ ಕಟೀಲು ದೇವಿ

Fri Feb 14 , 2020
Source Credit NewsKannada.com HSA   ¦    Feb 14, 2020 06:06:47 PM (IST) ಮಂಗಳೂರು: ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಯಕ್ಷಗಾನ ಬಯಲಾಟ ಹರಕೆ ಹೊತ್ತಿದ್ದ ವೈದ್ಯರೊಬ್ಬರು ಈಗ ಸೇವೆಯಾಟವನ್ನು ಫೆ.19ರಂದು ಪುತ್ತೂರು ನಗರದ ಬೊಳುವಾರು ಬೈಲ್ ನಲ್ಲಿ ಆಡಿಸಲಿದ್ದಾರೆ. ಶ್ರೀ ದೇವಿ ಮಹಾತ್ಮೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದವರು ಫೆ.19ರಂದು ಆಡಿತೋರಿಸಲಿರುವರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್ ತುಂಬಾ ವೈರಲ್ ಆಗುತ್ತಿದೆ. ಡಾ. ಉದಯಶಂಕರ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links