ಹಾಡಿದ ನಂತರ ತಿಳಿಯಿತು ಯಾರಿಗೂ ಹೇಳದ ಈ ತಾತನ ಅಸಲಿ ಕತೆ.. ಕೊನೆ ಕ್ಷಣದಲ್ಲಿ ಆಯ್ಕೆಯ ನಿರ್ಧಾರ ಬದಲಿಸಿದ ವಿಜಯ್ ಪ್ರಕಾಶ್ ಅವರು..

Source Credit RJ News Kannada

ಸರಿಗಮಪ ಸೀಸನ್ 17 ಕಳೆದ ವಾರವಷ್ಟೇ ಶುರು ಆಗಿದೆ.. ಈ ಬಾರಿಯೂ ಶೋನಲ್ಲಿ ಹಲವಾರು ವಿಶೇಷತೆಗಳಿವೆ.. 30 ಜಿಲ್ಲೆಯಲ್ಲೂ ಆಡಿಷನ್ ಮಾಡಿ 35 ಸ್ಪರ್ಧಿಗಳನ್ನು ಹೆಕ್ಕಿ ತಂದು ಮಹಾ ಆಡಿಷನ್ ನಲ್ಲಿ ನಿಲ್ಲಿಸಿದ್ದರು.. ಕೊನೆಗೆ ಅದರಲ್ಲಿ 15 ಸ್ಪರ್ಧಿಗಳ ಆಯ್ಕೆಯನ್ನು ಅಂತಿಮ ಮಾಡಲಾಗಿದೆ..

ಇನ್ನು ವಿಶೇಷ ಎಂಬಂತೆ ಗೋವರ್ಧನ ಎಂಬ 70 ವರ್ಷದ ವೃದ್ಧರೊಬ್ಬರು ಮತ್ತು ತುಮಕೂರಿನ ಮಧುಗಿರಿಯ ದಂಡಿ ಮಾರಮ್ಮನ ದೇವಸ್ಥಾನದ ಮುಂದೆ ಹಾಡು ಹೇಳಿಕೊಂಡು ಜೀವನ ಸಾಗಿಸುತ್ತಿರುವ ರತ್ನಮ್ಮ ಮಂಜಮ್ಮ ರಿಗೆ ಹಾಡಲು ಅವಕಾಶ ಕೊಟ್ಟು ಸ್ಪರ್ಧೆಯಿಂದ ಹೊರಗಿಡಲಾಗಿದೆ..

ಕೊನೆಯ ಎಪಿಸೋಡ್ ವರೆಗೂ ನೀವುಗಳು ಹಾಡಬಹುದು.. ನಿಮಗೆ ಯಾವುದೇ ನಿರ್ಬಂಧವಿಲ್ಲ ಎಂದು ಅವರ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದ್ದಾರೆ.. ಇನ್ನು ತುಮಕೂರಿನಿಂದ ಬಂದ ರತ್ನಮ್ಮ ಹಾಗೂ ಮಂಜಮ್ಮ ಅವರು ಹಸಿವು ತಾಳಲಾಗದೆ ಈ ಕೆಲಸ ಮಾಡುತ್ತಿದ್ದೇವೆ ಎಂದ ಕೂಡಲೆ ಅರ್ಜುನ್ ಜನ್ಯ ಅವರ ಮನ ಕರಗಿ ಇನ್ನು ಜೀವನದಲ್ಲಿ ಎಂದೂ ನೀವು ಹಸಿವಿನಿಂದ ಇರಬಾರದು ಎಂದು ನಾನು ಇರೋ ವರೆಗೂ ನಿಮ್ಮ‌ಮನೆಗೆ ನನ್ನ ಕಡೆಯಿಂದ ರೇಷನ್ ತಲುಪಲಿದೆ ಎಂದು ಮಾತು ಕೊಟ್ಟು ದೊಡ್ಡತನ ಮೆರೆದರು..

ಜೊತೆಗೆ ಇನ್ನು ಈ ಬಾರಿಯ ಸೀಸನ್ ನಲ್ಲಿ ಹಾಡಬೇಕು ಎಂದು ಉತ್ಸಾಹ ತೋರಿ ಬಂದ ಗೋವರ್ಧನ್ ಅವರ ಇನ್ನೊಂದು ಕತೆ ವೇದಿಕೆ ಮೇಲೆ ಬಂದ ಮೇಲಷ್ಟೇ ತಿಳಿದಿದೆ.. ಹೌದು ಗೋವರ್ಧನ ಅವರು ಚಿತ್ರದುರ್ಗದಿಂದ ಆಯ್ಕೆಯಾಗಿ ಬಂದು ಹಾಡಿದರು.. ಎಲ್ಲರಿಗೂ ಇಷ್ಟವಾದರು.. ಅವರನ್ನು ವಿಶೇಷ ಸ್ಪರ್ಧಿಯಾಗಿ ಅವಕಾಶವನ್ನೂ ಕೊಡಲಾಯಿತು..

ಆದರೆ ಈ ತಾತ ವೇದಿಕೆ ಮೇಲೆ ಬಂದು ಹಾಡಿದ ನಂತರ ಇವರ ಮತ್ತೊಂದು ಮನಕಲಕುವ ಕತೆ ಹೊರಬಂದಿದೆ.. ಹೌದು ಗೋವರ್ಧನ ಅವರಿಗೆ ಅವರ ಎಡ ಕಿವಿ ಕೇಳೋದಿಲ್ಲ.. ಮತ್ತು ಎಡ ಕಣ್ಣು ಕಾಣೋದಿಲ್ಲ…

ಹೌದು 8 ವರ್ಷದ ಹಿಂದೆ ಅಪಘಾತವಾಗಿ ಅವರ ಎಡ ಕಣ್ಣ ಹಾಗೂ ಕಿವಿ ಕಾಣದಾಗಿದೆ..‌ ಕೇಳದಂತಾಗಿದೆ.. ಆದರೆ ಕನ್ನಡಕ ಬಳಸುತ್ತಿರುವುದರಿಂದ ಕಣ್ಣು ಸ್ವಲ್ಪ ಕಾಣುತ್ತದೆಯಂತೆ.. ಆದರೆ ಎಡ ಕಿವಿ ಮಾತ್ರ ಸಂಪೂರ್ಣವಾಗಿ ಕೇಳೋದಿಲ್ಲ.. ವೇದಿಕೆ ಮೇಲೆ ಗೋವರ್ಧನ ಅವರು ಹಾಡುವಾಗ ತಾಳ ತಪ್ಪುತ್ತಿದ್ದರು.. ಇದನ್ನು ಗಮನಿಸಿದ ವಿಜಯ್ ಪ್ರಕಾಶ್ ಅವರಿಗೆ ಸಣ್ಣದಾಗಿ ಅನುಮಾನ ಮೂಡಿತ್ತು.. ಸಿಬ್ಬಂದಿಗೂ ಸ್ವಲ್ಪ ಅನುಮಾನ ಬಂತು.. ಆಗ ಅವರೇ ಹೇಳಿಕೊಂಡರು.. ನನಗೆ ಎಡ ಕಣ್ಣು ಕೇಳೋದಿಲ್ಲ ಹಾಗೂ ಎಡ ಕಿವಿ ಕೇಳೋದಿಲ್ಲ.. ಅದಕ್ಕೆ ಸಂಗೀತ ನುಡಿಸೋರು ಎಲ್ಲಿ ಎತ್ಕೊಂಡ್ರು ಅಂತ ನನಗೆ ಕೇಳಲಿಲ್ಲ.. ತಾಳ ತಪ್ಪಿತು ಎಂದರು.. ಅಕ್ಷರಶಃ ಸಿಬ್ಬಂದಿ ಶಾಕ್ ಆದರು.. ನನಗೆ ಯಾರ ಬಳಿಯೂ ನನ್ನ ಕಷ್ಟ ಹೇಳ್ಕೊಳಕೆ ಇಷ್ಟ ಇಲ್ಲ.. ಅದಕ್ಕೆ ಹೇಳ್ಕೊಂಡಿಲ್ಲ ಎಂದರು..

ಕಿವಿ ಕೇಳದಿದ್ದರೆ ತಾಳ ತಪ್ಪುತ್ತದೆ.. ಇವರ ಕೈಲಿ ಹಾಡಿಸೋದು ಹೇಗೆ ಎಂದು ಎಲ್ಲರೂ ಯೋಚಿಸುತ್ತಿರುವಾಗ.. ಎಲ್ಲವನ್ನು ನೋಡಿದ ವಿಜಯ್ ಪ್ರಕಾಶ್ ಅವರು ತಕ್ಷಣ ನಿರ್ಧಾರವೊಂದನ್ನು ತೆಗೆದುಕೊಂಡರು.. ಹೌದು ಈ ತಾತನ ಉತ್ಸಾಹವನ್ನು ತಡೆಯಬಾರದೆಂದು ಆ ತಾತನಿಗೆ..‌ ಸಂಗೀತಕ್ಕೆ ಸಂಬಂಧಪಟ್ಟ ಈಗ ಇರುವ ಟೆಕ್ನಾಲಜಿ “ಇನ್ ಹಿಯರ್ ಪ್ಯಾಕ್” ಅನ್ನು ನಾನು ನಿಮಗೆ ಕೊಡ್ತೀನಿ.. ಅದನ್ನು ಕಿವಿಗೆ ಹಾಕಿಕೊಂಡು ಹಾಡನ್ನು ಕಲಿತು ಹಾಡಿ ಎಂದು ದೊಡ್ಡತನ ತೋರಿದರು..

ಕೊನೆ ಕ್ಷಣದಲ್ಲಿ ಆಯ್ಕೆಯ ನಿರ್ಧಾರ ಬದಲಿಸಿ ಈ ತಾತನಿಗೆ ಹಾಡಲು ಅವಕಾಶ ಮಾಡಿಕೊಟ್ಟರು.. ಇದನ್ನು ಕೇಳಿ ಆ ತಾತನೂ ಸಂತೋಷ ಪಟ್ಟರು.. ವಿಜಯ್ ಪ್ರಕಾಶ್ ಅವರ ಸಮಯೋಚಿತ ನಿರ್ಧಾರಕ್ಕೆ ಹಾಗೂ ಅವರ ದೊಡ್ಡ ಮನಸ್ಸಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಫೆಬ್ರವರಿ 14ನ್ನು ಪುಲ್ವಾಮಾ ಹುತಾತ್ಮರ ದಿನವಾಗಿ ಆಚರಿಸಿಲು ಬಜರಂಗದಳ ಕರೆ

Tue Feb 11 , 2020
Source Credit TheMangaloreMirror.in ಫೆಬ್ರವರಿ 14ನ್ನು ಪುಲ್ವಾಮಾ ಹುತಾತ್ಮರ ದಿನವಾಗಿ ಆಚರಿಸಿಲು ಬಜರಂಗದಳ ಕರೆ ಮಂಗಳೂರು ಫೆಬ್ರವರಿ 11: ಕಳೆದ ವರ್ಷ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದ ಸಿಆರ್ ಪಿಎಫ್ ಯೋಧರ ನೆನಪಿಗಾಗಿ ಫೆಬ್ರವರಿ 14 ನ್ನು ಪುಲ್ವಾಮಾ ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ಬಜರಂಗದಳ ಕರೆ ನೀಡಿದೆ. Pin it Email https://nirantharanews.com/%e0%b2%b9%e0%b2%be%e0%b2%a1%e0%b2%bf%e0%b2%a6-%e0%b2%a8%e0%b2%82%e0%b2%a4%e0%b2%b0-%e0%b2%a4%e0%b2%bf%e0%b2%b3%e0%b2%bf%e0%b2%af%e0%b2%bf%e0%b2%a4%e0%b3%81-%e0%b2%af%e0%b2%be%e0%b2%b0%e0%b2%bf/#eUg1QkFFQUFBQUF ಈ ಬಗ್ಗೆ ಮಂಗಳೂರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್, 2019ರ ಫೆಬ್ರವರಿ 14 ದೇಶವೇ ಮರೆಯಲಾಗದ ದಿನವಾಗಿದ್ದು, ಈ ದಿನ ನಾವು ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links