ಹಲಗೂರಿನ ಭತ್ತದ ಗದ್ದೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವು

Source Credit Oneindia.com

Mandya

lekhaka-Lavakumar b m

|

ಮಂಡ್ಯ, ಡಿಸೆಂಬರ್ 10: ಭತ್ತದ ಗದ್ದೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಡಿ.ಹಲಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧನಗೂರು ಅರಣ್ಯವಲಯದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಶಿವಮ್ಮ ಎಂಬುವರ ಜಮೀನಿನಲ್ಲಿ ಭತ್ತ ಬೆಳೆದಿದ್ದು, ಸುಮಾರು ಆರು ವರ್ಷದ ಕಾಡಾನೆಯೊಂದು ಅರಣ್ಯದಿಂದ ಭತ್ತದ ಫಸಲನ್ನು ತಿನ್ನುವ ಸಲುವಾಗಿ ಬಂದ ಸಂದರ್ಭ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಲಗೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ರೈತನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

“ಹಲವಾರು ವರ್ಷಗಳಿಂದಲೂ ಕಾಡಂಚಿನ ಜಮೀನುಗಳ ಬಳಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ. ವ್ಯವಸಾಯವೇ ನಮಗೆ ಆಧಾರ. ಕಾಡು ಪ್ರಾಣಿಗಳ ಹಾವಳಿ ನಿರಂತರವಾಗಿರುವುದರಿಂದ ವ್ಯವಸಾಯ ಮಾಡದೆ ಊರು ಬಿಡುವಂತಹ ಗಂಭೀರ ಸಮಸ್ಯೆ ಎದುರಾಗಿದೆ. ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದೆ ಮೊದಲೇ ಕಷ್ಟದಲ್ಲಿರುವ ರೈತರಿಗೆ ಕಾಡು ಪ್ರಾಣಿಗಳ ಹಾವಳಿ ಗಾಯದ ಮೇಲೆ ಬರೆ ಎಳೆದಿದೆ. ಕಾಡಾನೆ ದಾಳಿಯಿಂದ ರೈತ ಸಾವನ್ನಪ್ಪಿದರೆ, ಒಂದಷ್ಟು ಪರಿಹಾರ ನೀಡಿ ಕೈ ತೊಳೆದುಕೊಳ್ಳುವ ಇಲಾಖೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿದೆ” ಎಂದು ದೂರಿದರು ಸ್ಥಳೀಯ ರೈತ ಕೃಷ್ಣ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಅಶ್ಲೀಲ ವಿಡಿಯೊ ನಕಲಿ, ಸಂಪುಟ ಸೇರಲು ಸಜ್ಜಾದ ಲಿಂಬಾವಳಿ

Wed Dec 11 , 2019
Source Credit Oneindia.com Pin it Email https://nirantharanews.com/%e0%b2%b9%e0%b2%b2%e0%b2%97%e0%b3%82%e0%b2%b0%e0%b2%bf%e0%b2%a8-%e0%b2%ad%e0%b2%a4%e0%b3%8d%e0%b2%a4%e0%b2%a6-%e0%b2%97%e0%b2%a6%e0%b3%8d%e0%b2%a6%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf/#eDAzLWxpbWJhdmF ನಕಲಿ ವಿಡಿಯೊ ಎಂದು ವರದಿ ನೀಡಿದೆ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯವು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ನಕಲಿ ವಿಡಿಯೊ ಎಂದು ವರದಿ ನೀಡಿದೆ. ಅನರ್ಹ ಶಾಸಕರನ್ನು ಕಾಯ್ದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಅರವಿಂದ ಲಿಂಬಾವಳಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ, ಅವರನ್ನು ಅಧಿಕಾರದಿಂದ ದೂರ ಉಳಿಯುವಂತೆ ಮಾಡುವಲ್ಲಿ ಕೆಲವರು ಯಶಸ್ವಿಯಾಗಿದ್ದರು. ಆದರೆ ಈಗ ಕಳಂಕ ರಹಿತರಾಗಿದ್ದು, ಸಂಪುಟ ಸೇರಲು ಯಾವುದೇ ಅಡ್ಡಿ ಕಂಡು ಬರುತ್ತಿಲ್ಲ. Pin it Email https://nirantharanews.com/%e0%b2%b9%e0%b2%b2%e0%b2%97%e0%b3%82%e0%b2%b0%e0%b2%bf%e0%b2%a8-%e0%b2%ad%e0%b2%a4%e0%b3%8d%e0%b2%a4%e0%b2%a6-%e0%b2%97%e0%b2%a6%e0%b3%8d%e0%b2%a6%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf/#eHBob3Rvcy0yLTE ಹೊಸಬರಿಗೆ ಅವಕಾಶ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links