ಸೂಪರ್ ಸ್ಟಾರ್ ರಜನಿಕಾಂತ್ ಮುಡಿಗೆ ‘ಗೋಲ್ಡನ್ ಜುಬಿಲಿ ಅವಾರ್ಡ್’ ಗರಿ

News

oi-Shruthi GK

|

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಮತ್ತೊಂದು ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ ‘ಐಕಾನ್ ಆಫ್ ಗೋಲ್ಡನ್ ಜುಬಿಲಿ ಅವಾರ್ಡ್’ಗೆ ಕೇಂದ್ರ ಸರ್ಕಾರ ತಲೈವಾ ರಜನಿಕಾಂತ್ ಅವರನ್ನು ಆಯ್ಕೆ ಮಾಡಿದೆ.

ಕೇಂದ್ರ ವಾರ್ತ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. “ಹಲವು ವರ್ಷಗಳ ಕಾಲ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ‘ಐಕಾನ್ ಆಫ್ ಗೋಲ್ಡನ್ ಜುಬಿಲಿ ಅವಾರ್ಡ್ ರಜಿನಿಕಾಂತ್ ಅವರಿಗೆ ನೀಡಲಾಗುತ್ತಿದೆ ಎಂದು ಘೋಷಿಸಲು ಸಂತಸವಾಗುತ್ತಿದೆ” ಎಂದು ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸುವ ಮೂಲಕ ಪ್ರಶಸ್ತಿ ಬಂದ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ “ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ ಗೋಲ್ಡನ್ ಜುಬಿಲಿ ಸಂದರ್ಭದಲ್ಲಿ ನನ್ನನ್ನು ಗೌರವಾನ್ವಿತ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸರ್ಕಾರಕ್ಕೆ ಕೃತಜ್ಞತೆಗಳು” ಎಂದು ಹೇಳಿದ್ದಾರೆ.

ಇಂದೇ ತಿಂಗಳು ನವೆಂಬರ್ 20 ರಿಂದ 28ರವರೆಗೆ ಗೋವಾದಲ್ಲಿ ನಡೆಯುವ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅಂದ್ಹಾಗೆ ಜೀವಮಾನ ಸಾಧನೆಗಾಗಿ ಫ್ರೆಂಚ್ ಕಲಾವಿದೆ ಇಸಾಬೆಲ್ಲ ಹ್ಯೂಪರ್ಟ್ ಆಯ್ಕೆಯಾಗಿದ್ದಾರೆ.

ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಬೇರೆ ಬೇರೆ ದೇಶಗಳ 250 ಸಿನಿಮಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ 200 ವಿದೇಶಿ ಸಿನಿಮಾಗಳಲ್ಲಿ ಆಸ್ಕರ್ ನಾಮಿನೇಷನ್ ಸ್ಪರ್ಧೆಯಲ್ಲಿರುವ 24 ಸಿನಿಮಾಗಳು ಇವೆ. ಜೊತೆಗೆ 50 ಮಹಿಳಾ ನಿರ್ದೇಶಕರ 50 ಸಿನಿಮಾಗಳನ್ನು ಫೆಸ್ಟಿವಲ್ ನಲ್ಲಿ ಪ್ರದರ್ಶಿಸಲಾಗುವುದು ಎಂದು ಜಾವಡೇಕರ್ ಹೇಳಿದ್ದಾರೆ.

Niranthara News

Leave a Reply

Your email address will not be published. Required fields are marked *

Next Post

ಕಿಚ್ಚನ ಕಿಚನ್ ನಲ್ಲಿ ತಯಾರಾಗುತ್ತಿದೆ ಸ್ಪೆಷಲ್ ತಿಂಡಿ

Sun Nov 3 , 2019
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links