ಸುಶಿಕ್ಷಿತ ಭಾರತ 2025 ರೋಟರಿ ಕನಸು: ಜೊಸೆಫ್ ಮ್ಯಾಥ್ಯೂ

Source Credit NewsKannada.com


DSK
  ¦   


Jan 16, 2020 09:39:58 AM (IST)

ಮೂಡುಬಿದಿರೆ: ಜಾಗತಿಕ ಮಟ್ಟದಲ್ಲಿ ಪೋಲಿಯೋ ನಿರ್ಮೂಲನೆಗೆ ರೋಟರಿ ಪಟ್ಟ ಪರಿಶ್ರಮದಿಂದಾಗಿ ಇಂದು ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿ ಬದಲಾಗಿದೆ. ಮುಂದಿನ 2025ರೊಳಗೆ ಭಾರತವನ್ನು ಸಂಪೂರ್ಣ ಸಾಕ್ಷರತಾ ರಾಷ್ಟ್ರವನ್ನಾಗಿಸುವ ಕನಸು ರೋಟರಿಯದ್ದು ಎಂದು ರೋಟರಿ ಜಿಲ್ಲೆ 3181ರ ರಾಜ್ಯಪಾಲ ಜೊಸೆಫ್ ಮ್ಯಾಥ್ಯೂ ಹೇಳಿದರು. ಮೂಡುಬಿದಿರೆ ಟೆಂಪಲ್‍ಟೌನ್ ರೋಟರಿ ಕ್ಲಬ್‍ಗೆ ಬುಧವಾರ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಹಿರಿಯ ನಾಗರಿಕರ ಕುರಿತಾದ ಕಾಳಜಿ ಈ ಬಾರಿ ರೋಟರಿ ಜಿಲ್ಲೆಯ ಗುರಿಯಾಗಿದೆ. ಹಿರಿಯರು ವೃದ್ಧಾಶ್ರಮಗಳಲ್ಲಿರುವುದಕ್ಕಿಂತ ಅವರ ಮನೆಯಲ್ಲೇ ನೆಮ್ಮದಿಯಿಂದ ಬಾಳುವಂತಹ ವಾತಾವರಣ, ಅವರಿಗೆ ಬೇಕಾದ ಸಹಾಯ, ಸಹಕಾರದ ನಿಟ್ಟಿನಲ್ಲಿ ಈ ಬಾರಿ ರೋಟರಿ ಕಾರ್ಯನಿರ್ವಹಿಸುತ್ತಿದೆ ಎಂದ ಅವರು ಆಂಗ್ಲಮಾಧ್ಯಮದ ಆಕರ್ಷಣೆಯಿಂದ ಕನ್ನಡ ಮಾಧ್ಯಮ ಶಾಲೆಗಳು ಸೊರಗಿದ್ದರೂ ಭಾಷಾಭಿವೃದ್ಧಿಗೆ ಪೂರಕವಾಗಿ ರೋಟರಿ ಕೆಲಸ ಮಾಡಲಿದೆ. ಜಿಲ್ಲಾ ರೋಟರಿ ಈ ಬಾರಿ ವೈಯಕ್ತಿಕ ದೇಣಿಗೆ, ರೋಟರಿ ಪ್ರತಿಷ್ಠಾನಕ್ಕೆ ಸಲ್ಲಿಸುವ ಕೊಡುಗೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ ಎಂದರು.

ಸಹಾಯಕ ರಾಜ್ಯಪಾಲ ರಿತೇಶ್ ಬಾಳಿಗ, ಟೆಂಪಲ್ ಟೌನ್ ರೋಟರಿ ಅಧ್ಯಕ್ಷ ಡಾ. ಮಹಾವೀರ ಜೈನ್, ಕಾರ್ಯದರ್ಶಿ ದಿನೇಶ್ ಎಂ.ಕೆ. ಉಪಸ್ಥಿತರಿದ್ದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬ್ರೇಕಿಂಗ್ ನ್ಯೂಸ್.. ರಶ್ಮಿಕಾ ಮಂದಣ್ಣ ಮನೆ ಮೇಲೆ ಐ ಟಿ ದಾಳಿ.. ರಶ್ಮಿಕಾಗೆ ಸಮನ್ಸ್ ಜಾರಿ..

Thu Jan 16 , 2020
Source Credit RJ News Kannada ಸ್ಯಾಂಡಲ್ವುಡ್ ನ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಐ ಟಿ ದಾಳಿಯಾಗಿದ್ದು, ರಶ್ಮಿಕಾ ಮಂದಣ್ಣನಿಗೆ ಸಮನ್ಸ್ ಜಾರಿ ಮಾಡಲಾಗಿದೆ.. ಇಂದು ಬೆಳಿಗ್ಗೆ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿನ ರಶ್ಮಿಕಾ ಮಂದಣ್ಣ ಮನೆ ಮೇಲೆ ಐ ಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.. Pin it Email https://nirantharanews.com/%e0%b2%b8%e0%b3%81%e0%b2%b6%e0%b2%bf%e0%b2%95%e0%b3%8d%e0%b2%b7%e0%b2%bf%e0%b2%a4-%e0%b2%ad%e0%b2%be%e0%b2%b0%e0%b2%a4-2025-%e0%b2%b0%e0%b3%8b%e0%b2%9f%e0%b2%b0%e0%b2%bf-%e0%b2%95%e0%b2%a8%e0%b2%b8/#UGhvdG9HcmlkXzE ಆದರೆ ರಶ್ಮಿಕಾ ಮನೆಯಲ್ಲಿ ಇರದ ಕಾರಣ ಅಧಿಕಾರಿಗಳು ರಶ್ಮಿಕಾಗೆ ಸಮನ್ಸ್ ಜಾರಿ ಮಾಡಿದ್ದಾರೆ.. ಈ ಕೂಡಲೇ ವಿರಾಜಪೇಟೆಗೆ ಬರುವಂತೆ ತಿಳಿಸಲಾಗಿದೆ.. Pin it […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links