ಸುಳ್ಯ ನಗರದಲ್ಲಿ ತಂಬಾಕು ನಿಯಂತ್ರಣ ಕಾನೂನು ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ

Source Credit NewsKannada.com

ಸುಳ್ಯ ನಗರದಲ್ಲಿ ತಂಬಾಕು ನಿಯಂತ್ರಣ ಕಾನೂನು ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ


GK
  ¦   


Dec 17, 2019 06:48:09 PM (IST)

ಸುಳ್ಯ: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಸುಳ್ಯ ತಾಲೂಕು ಆರೋಗ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸುಳ್ಯ ನಗರದಲ್ಲಿ  52  ತಂಬಾಕು ನಿಯಂತ್ರಣ ಕಾನೂನು(ಕೋಟ್ಪಾ-2003) ಉಲ್ಲಂಘನೆ ಪ್ರಕರಣವನ್ನು ಪತ್ತೆ ಹಚ್ಚಿ 4,200 ದಂಡ ವಸೂಲಿ ಮಾಡಿದ್ದಾರೆ.

ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜಸೇವಾ ಕಾರ್ಯಕರ್ತೆ ಶ್ರುತಿ, ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಸಂಪತ್ ಕುಮಾರ್ ನೇತೃತ್ವದಲ್ಲಿ ಸುಳ್ಯ ನಗರದ ವಿವಿಧ ಅಂಗಡಿಗಳಲ್ಲಿ ಮತ್ತು ಚಿಲ್ಲರೆ ವ್ಯಾಪಾರ ಕೇಂದ್ರಗಳಲ್ಲಿ ದಾಳಿ ನಡೆಸಿ ತಂಬಾಕು ನಿಯಂತ್ರಣ ಕಾನೂನು ಉಲ್ಲಂಘನೆ ಪ್ರಕರಣವನ್ನು ಪತ್ತೆ ಹಚ್ಚಿದರು.

ಶಾಲಾ ಕಾಲೇಜು ಬಳಿಯಲ್ಲಿ ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಿದ ಮತ್ತು ಸೆಕ್ಷನ್ 6ಬಿ ಬೋರ್ಡನ್ನು ಅಳವಡಿಸದ  ಸಂಬಂಧಪಟ್ಟು ಕಾಯಿದೆಯ ಸೆಕ್ಷನ್ 6ಬಿ  ಅನ್ವಯ 17 ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಎಚ್ಚರಿಕೆಯ ಫಲಕ ಅಳವಡಿಸದಿರುವ, ಸಾರ್ವಜನಿಕ ಸ್ಥಳಗಳಲ್ಲಿ ಲೈಟರ್, ಆಸ್ಟ್ರೇ, ಬೆಂಕಿ ಕಡ್ಡಿ ಪೊಟ್ಟಣ ಪ್ರದರ್ಶನ ಸಂಬಂಧಿಸಿ ಸೆಕ್ಷನ್ 4 ಪ್ರಕಾರ 28 ಪ್ರಕರಣ ಮತ್ತು 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ ,ಚಿಲ್ಲರೆ ಅಂಗಡಿಗಳಲ್ಲಿ ಸೆಕ್ಷನ್ 6ಎ ಬೋರ್ಡ್ ಅಳವಡಿಸದ, ಚಿಲ್ಲರೆ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಪ್ರದರ್ಶನ ಸಂಬಂಧಪಟ್ಟು ಸೆಕ್ಷನ್ 6ಎ  ಅನ್ವಯ ಏಳು ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ನಗರದ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ತೆರಳಿ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸುವುದರ ಜೊತೆಗೆ ತಂಬಾಕು  ನಿಯಂತ್ರಣ ಕಾನೂನು ಅನುಷ್ಠಾನದ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. ಮಾಹಿತಿ ಪತ್ರಗಳನ್ನು ನೀಡಲಾಯಿತು. ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಅಧಿಕಾರಿಗಳಾದ ವಾಸುದೇವ ನಾಯಕ್, ಪ್ರಮೀಳಾ, ಆಶಿಕ್ ಮತ್ತಿತರರು ಇದ್ದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಹನಿಟ್ರ್ಯಾಪ್ ಬಗ್ಗೆ ಗೊತ್ತಿಲ್ಲ, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಗೂಳಿಹಟ್ಟಿ ಶೇಖರ್

Tue Dec 17 , 2019
Source Credit Oneindia.com Pin it Email https://nirantharanews.com/%e0%b2%b8%e0%b3%81%e0%b2%b3%e0%b3%8d%e0%b2%af-%e0%b2%a8%e0%b2%97%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%82%e0%b2%ac%e0%b2%be%e0%b2%95%e0%b3%81-%e0%b2%a8%e0%b2%bf/#Wg== Chitradurga oi-Chidananda M By ಚಿತ್ರದುರ್ಗ ಪ್ರತಿನಿಧಿ | Published: Tuesday, December 17, 2019, 20:19 [IST] ಚಿತ್ರದುರ್ಗ, ಡಿಸೆಂಬರ್ 17: 2008 ರಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ ಆಗಿದ್ದೆನು, ಪಕ್ಷೇತರ‌ ಶಾಸಕನಾಗಿದ್ದ ನಾನೇ ಮೊದಲ ವಿಕೆಟ್ ಆಗಿದ್ದೆ, ಆಗ ಸಿಎಂ ಲೆಫ್ಟ್, ರೈಟ್ ಇದ್ದವರು ಯಾರೂ ರಾಜೀನಾಮೆ ಕೊಟ್ಟು ಬಂದಿರಲಿಲ್ಲ ಎಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಗೂಳಿಹಟ್ಟಿ ಶೇಖರ್, 2008ರ ಸರ್ಕಾರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links