ಸೀರಿಯಸ್ ಆಗಿ ಮದುವೆ ಆಫರ್ ಕೊಟ್ಟ ಭೂಮಿ ಶೆಟ್ಟಿ.. ಶಾಕ್ ಆದ ವಾಸುಕಿ..

Source Credit RJ News Kannada

ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಹಳೆಯ ಸೀಸನ್ನಿನ ಒಂದು ಜೋಡಿ ಹೊರ ಬಂದು ಇನ್ನೇನು ಮದುವೆ ಹೊಸ್ತಿಲಲ್ಲಿ ನಿಂತಿರುವುದು ಎಲ್ಲರಿಗೂ ತಿಳಿದೇ ಇದೆ.. ಇದೀಗ ಸೀಸನ್ 7ರಲ್ಲೂ ಕೂಡ ಅದ್ಯಾಕೋ ಲವ್ ಪ್ರಪೋಸಲ್ ಗಳು ಹೆಚ್ಚಾಗೆ ಇವೆ.. ‌

ಈಗಾಗಲೇ ಒಂದು ಕಡೆ ತಮಾಷೆಗಾಗಿಯಾದರೂ ಶೈನ್ ಹಾಗೂ ದೀಪಿಕಾ ಅವರ ಒನ್ ಸೈಡ್ ಲವ್ ಟ್ರ್ಯಾಕ್ ನಡೆಯುತ್ತಿದ್ದರೆ.. ಇತ್ತ ವಾಸುಕಿ ಮೇಲೆ ಎರೆಡೆರೆಡು ಹೆಣ್ಣು ಮಕ್ಕಳ ಕಣ್ಣು ಬಿದ್ದಿದ್ದು ಎಲ್ಲರಿಗೂ ತಿಳಿದೆ ಇದೆ..

ಆದರೆ ಇದೀಗ ಭೂಮಿ‌ಶೆಟ್ಟಿ ಅವರು ನೇರವಾಗಿಯೇ ವಾಸುಕಿ ಅವರಿಗೆ ಮದುವೆ ಪ್ರಪೋಸಲ್ ನೀಡಿದ್ದಾರೆ.. ಹೌದು ನಿನ್ನೆ ಸಂಜೆ ಚಟುವಟಿಕೆ ಮುಗಿದ ನಂತರ ಲೈಟ್ ಆಫ್ ಆದಮೇಲೆ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಭೂಮಿ ಚಂದನ ಹಾಗೂ ಅಲ್ಲಿಯೇ ಕೂತಿದ್ದ ವಾಸುಕಿ ನಡುವೆ ಮದುವೆ ವಿಚಾರ ಪ್ರಸ್ತಾಪವಾಯಿತು..

ಆ ಸಮಯದಲ್ಲಿ ಭೂಮಿ ಸೀರಿಯಸ್ ಆಗಿ ವಾಸುಕಿ ಅವರಿಗೆ ಮದುವೆ ಆಫರ್ ಮಾಡಿದ್ದಾರೆ.. ಹೌದು ಇಲ್ಲಿದೆ ನೋಡಿ ಇಬ್ಬರ ನಡುವೆ ನಡೆದ ಸಂಭಾಷಣೆ.. “ಮೊದಲಿಗೆ ಮಾತು ಶುರು ಮಾಡಿದ ಭೂಮಿ ಶೆಟ್ಟಿ ಅವರು..‌ ನಾನು‌ ನೋಡ್ತಾ ಇರ್ತೀನಿ.. ಹೊರಗೆ ಹೋದ್ಮೇಲೆ ವಾಸುಕಿ ಮದುವೆ ಆದ್ಮೇಲೆನೆ ನಾನು ಮದುವೆ ಆಗೋದು..‌ ಅಕಸ್ಮಾತ್ ವಾಸುಕಿ‌ ನಿಮಗೆ ಹೆಣ್ಣು ಸಿಕ್ಕಿಲ್ಲ ಎಂದರೆ ನನ್ನನ್ನೇ ಮದುವೆ ಆಗಿ ಎಂದರು.. ಇದಕ್ಕೆ ಪ್ರತಿಕ್ರಿಯೆ ನೀಡಿದ ಚಂದನ.. ಯಾಕೆ ವಾಸುಕಿಗೆ ಹೆಣ್ಣು ಸಿಗೋದಿಲ್ವಾ ಎಂದು ಪ್ರಶ್ನಿಸಿದರು.. ಇದಕ್ಕೆ ಉತ್ತರಿಸಿದ ಭೂಮಿ.. ನನಗೂ ಕೂಡ ಗಂಡು ಸಿಗದೇ ಇದ್ದರೂ ವಾಸುಕಿಯನ್ನೇ ಮದುವೆ ಆಗೋದು ಎಂದರು..

ಅಂದ್ರೆ ನನಗೆ ಹೆಣ್ ಸಿಗಲ್ವಾ ಎಂದು ವಾಸುಕಿ ಭೂಮಿಯನ್ನು ಕೇಳಿದರು.. ಹಾಗಲ್ಲ ನಾನು ಸೀರಿಯಸ್ ಆಗಿ ಹೇಳಿದೆ.. ನನಗೂ ಗಂಡ್ ಸಿಕ್ಕಿಲ್ಲ ಅಂದರೆ ನಿಮ್ಮನ್ನೇ ಮದುವೆ ಆಗೋದು ಎಂದರು ಭೂಮಿ..

ಎಲ್ಲೆಲ್ಲಿಂದ ಸಿಕ್ಕಿ ಹಾಕೊಂಡ್ನೋ ಅಂತ ತಕ್ಷಣ ವಾಸುಕಿ ವೈಭವ್ ಅವರು ಮನೆಯಿಂದ ಹೊರ ಹೋದ ತಕ್ಷಣ ಬೇಗ ಮದುವೆ ಆಗಿ ಬಿಡ್ತೇನೆ.. ಈ ಸಹವಾಸವೇ ಬೇಡ ಎಂದು ಸಂದರ್ಭದಿಂದ ಬುದ್ದಿವಂತಿಕೆಯಿಂದಲೇ ನುಣುಚಿಕೊಂಡರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯ.. ಈ ವಾರ ಮನೆಯಿಂದ ಹೊರಬಂದವರು ಇವರೇ ನೋಡಿ..

Sat Dec 28 , 2019
Source Credit RJ News Kannada ಬಿಗ್ ಬಾಸ್ ಕನ್ನಡ ಸೀಸನ್ 7 ರ ಹನ್ನೊಂದನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು.. ಹನ್ನೊಂದನೇ ವಾರ ಕಿಚ್ಚ ಸುದೀಪ್ ಅವರು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮನೆಯಿಂದ ಹೊರ ಬಂದ ಸದಸ್ಯರ ಹೆಸರನ್ನು ಅನೌನ್ಸ್ ಮಾಡಿದ್ದಾರೆ.. Pin it Email https://nirantharanews.com/%e0%b2%b8%e0%b3%80%e0%b2%b0%e0%b2%bf%e0%b2%af%e0%b2%b8%e0%b3%8d-%e0%b2%86%e0%b2%97%e0%b2%bf-%e0%b2%ae%e0%b2%a6%e0%b3%81%e0%b2%b5%e0%b3%86-%e0%b2%86%e0%b2%ab%e0%b2%b0%e0%b3%8d-%e0%b2%95%e0%b3%8a/#UGhvdG9HcmlkXzE ಕಳೆದ ವಾರ ಎಲಿಮಿನೇಷನ್ ಗೆ 7 ಮಂದಿ ನಾಮಿನೇಟ್ ಆಗಿದ್ದರೂ ಕೂಡ ನೋ ಎಲಿಮಿನೇಷನ್ ವೀಕ್ ಎಂದು ಅನೌನ್ಸ್ ಮಾಡಿದ್ದರು.. ಆದರೆ ಸುಮ್ಮನೆ ಮನೆಯವರನ್ನು ಕಾಡಿಸಲು ಹರೀಶ್ ರಾಜ್ ಅವರನ್ನು ಎಲಿಮಿನೇಟ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links