‘ಸಿನಿಮಾಗಳತ್ತ ನನ್ನ ಗಮನ’ ಎನ್ನುತ್ತಾರೆ ಮಂಗಳೂರಿನ ಗಾನಾ

Source Credit Filmibeat.com

ಮಂಗಳೂರಿನಿಂದ ಯುಎಸ್ ಗೆ ಹೋಗಿ, ಬಳಿಕ ಗಾಂಧಿನಗರಕ್ಕೆ ಕಾಲಿಡುವ ತನಕದ ನಿಮ್ಮ ಪಯಣ ಹೇಗಿತ್ತು?

ಜನಿಸಿದ್ದು ಮಂಗಳೂರಿನಲ್ಲಿ. ಆದರೆ ಬಾಲ್ಯ ಕಳೆದಿದ್ದು ಕೊಯಂಬತ್ತೂರಿನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬಳಿಕ ಮಂಗಳೂರಿಗೆ ವಾಪಸಾದೆ. ಮಂಗಳೂರಿನ ಅಲೊಶಿಯಸ್ ಕಾಲೇಜ್ ನಲ್ಲಿ ಪಿಯುಸಿ ಮಾಡಿ, ಶ್ರೀನಿವಾಸ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮುಗಿಸಿ, ಇನ್ಫೋಸಿಸ್ ನಲ್ಲಿ ವೃತ್ತಿಯಲ್ಲಿದ್ದೆ. ಬಳಿಕ ಯುಎಸ್ ಗೆ ಹೋಗಿ ಅಲ್ಲಿ ಯಾಹೂ ಸಂಸ್ಥೆಗೆ ಸೇರಿಕೊಂಡೆ. ಇದೀಗ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದರೂ ನಾನು ಇಂದಿಗೂ ಯಾಹೂನಲ್ಲೇ ವೃತ್ತಿಯಲ್ಲಿದ್ದೇನೆ.

ಚಿತ್ರರಂಗದ ಕಡೆಗಿನ ಒಲವು ಮೂಡಿದ್ದು ಹೇಗೆ?

ನನಗೆ ಶಾಲಾ ಕಾಲೇಜು ದಿನಗಳಿಂದಲೇ ಡಾನ್ಸ್ ಮಾಡುವ ಹವ್ಯಾಸವಿತ್ತು. ಹಾಗಂತ ಶಾಸ್ತ್ರೀಯವಾಗಿ ನೃತ್ಯಾಭ್ಯಾಸ ಮಾಡಿರಲಿಲ್ಲ. ಆದರೆ ಬಾಲಿವುಡ್ ಶೈಲಿಯ ನೃತ್ಯ ಮಾಡುವ, ಕೊರಿಯೋಗ್ರಫಿ ಮಾಡಿ ಕುಣಿಸುವ ಹವ್ಯಾಸವಿತ್ತು. ಇನ್ಫೊಸಿಸ್ ಸಂಸ್ಥೆಗಾಗಿ ಒಂದು ವಿಡಿಯೋ ಮಾಡಿದ್ದೆವು. ಅದರಲ್ಲಿ ನಾನು ಪಾರ್ಟಿಸಿಪೇಟ್ ಮಾಡಿದ್ದೆ. ಅದರ ನಿರ್ದೇಶಕ ನಾಗರಾಜ್ ಭಟ್ ಅವರೇ ಬಳಿಕ ಟ್ಯಾಕ್ಸಿ 24 ಇನ್ ಟು 7 ಹಿಂದಿ ಕಿರುಚಿತ್ರ ನಿರ್ದೇಶನ ಮಾಡುವಾಗ ಅವರೇ ನನ್ನನ್ನು ಕರೆಸಿ ಆಡಿಶನ್ ನಡೆಸಿದರು. ಹಾಗೆ ನಟಿಯಾಗಿ ಬದಲಾದೆ.

ಇದುವರೆಗೆ ಎಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದೀರಿ?

ಟ್ಯಾಕ್ಸಿ 24 ಇನ್ ಟು 7 ಎನ್ನುವ ಹಿಂದಿ ಕಿರುಚಿತ್ರದ ಮೂಲಕ ವೃತ್ತಿ ಬದುಕು ಶುರುವಾಯಿತು. ಅದರಲ್ಲಿ ನಾನು ಇಂಗ್ಲಿಷ್ ಹುಡುಗಿಯ ಪಾತ್ರ ಮಾಡಿದ್ದೆ. ಆಮೇಲೆ ತಮಿಳು, ತೆಲುಗು ಭಾಷೆಗಳಲ್ಲಿ ಸಣ್ಣ ಪುಟ್ಟ ಅವಕಾಶಗಳು ಸಿಗತೊಡಗಿದವು. ತೆಲುಗಲ್ಲಿ ಮೈಮರಪು’ ಎನ್ನುವ ಒಂದು ವೆಬ್ ಸೀರೀಸ್ ನಲ್ಲಿ ಮುಖ್ಯ ಪಾತ್ರವನ್ನು ನಿಭಾಯಿಸಿದ್ದೆ. `ನಿನ್ನು ಕೋರಿ’ ಎನ್ನುವ ಚಿತ್ರದಲ್ಲಿ ನಟ ನಾನಿಯವರ ಜತೆಗೆ ಸಣ್ಣದೊಂದು ಪಾತ್ರ ಮಾಡಿದ್ದೇನೆ. ಯುಎಸ್ ನ ಮಂದಿ ಮಾಡಿರುವ ಒಂದು ಗಂಟೆ ಕಾಲಾವಧಿಯ ಹಿಂದಿ ಸಿನಿಮಾದಲ್ಲಿ ಕೂಡ ನಟಿಸಿದ್ದೇನೆ. ಇನ್ನೊಂದಷ್ಟು ಪ್ರಾಜೆಕ್ಟ್ ಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ತಮಿಳು ನಟ ಧನುಷ್ ಅವರು ಹಾಡಿದ ಆದರೆ ಸಿನಿಮಾದಲ್ಲಿ ಬಳಸಿರದ ಹಾಡಿಗೆ ಕತೆ ಮಾಡಿ ಅದರಲ್ಲಿ ನಾನು ನಟಿಸಿದ್ದೇನೆ. ಅದರ ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಅದನ್ನು ಮೆಚ್ಚಿಕೊಂಡು ತಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಅವಕಾಶ ನೀಡಿದ್ದಾರೆ.

ಹೆಸರಿನಲ್ಲೆ ಸೆಳೆವಂಥ ಇವರು ಸುಂದರ್ ವೀಣಾ..!

ಸುಮನ್ ನಗರ್ಕರ್ ಅವರ `ಬಬ್ರೂ’ ಚಿತ್ರ ತಂಡದಲ್ಲಿ ಸೇರಿಕೊಂಡ ಬಗ್ಗೆ ಹೇಗೆ?

‘ಬಬ್ರೂ’ ಚಿತ್ರದ ನಿರ್ದೇಶಕ ಸುಜಯ್ ಅವರು ಬೇರೆ ಒಂದು ಚಿತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದ್ದರು. ಅದು ನಡೆಯಲಿಲ್ಲ. ಆದರೆ ಬಬ್ರುವಿನಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರದಲ್ಲಿ ಒಂದು ವಿದೇಶೀ ಹುಡುಗಿಯ ಪಾತ್ರ ಬೇಕಾಗಿತ್ತು. ನಾನು ಭಾರತೀಯಳಾದರೂ ನನ್ನನ್ನು ಯುಎಸ್ ಮಂದಿ ಕೂಡ ರಷ್ಯನ್ ಅಥವಾ ಸ್ಪಾನಿಷ್ ಹುಡುಗಿ ಎಂದುಕೊಳ್ಳುವುದೇ ಹೆಚ್ಚು. ವಸಂತ ಸಮೀರನ್ ಎನ್ನುವ ತೆಲುಗು ಸಿನಿಮಾದಲ್ಲಿ ಕೂಡ ನನ್ನನ್ನು ಸ್ಪಾನಿಷ್ ಹುಡುಗಿಯಾಗಿ ತೋರಿಸಿದ್ದಾರೆ. ಭಾರತದಲ್ಲಿ ನನ್ನನ್ನು ನಾರ್ತ್ ಇಂಡಿಯನ್ ಹುಡುಗಿ ಇರಬೇಕು ಎಂದುಕೊಳ್ಳುವವರೇ ಅಧಿಕ. ಬಹುಶಃ ಈ ಲುಕ್ ನಿಂದಾಗಿಯೇ ನನಗೆ ಬಬ್ರೂವಿನಲ್ಲಿ ಕೂಡ ಅವಕಾಶ ಸಿಕ್ಕಿತೆನ್ನಬಹುದು. ಆದರೆ ಈ ಚಿತ್ರದ ಬಳಿಕ ನನ್ನ ನಟನೆಯಿಂದಾಗಿ ಇನ್ನಷ್ಟು ವೈವಿಧ್ಯಮಯ ಪಾತ್ರಗಳು ಸಿಗಬಹುದೆನ್ನುವ ನಿರೀಕ್ಷೆ ಇದೆ.

ನಿಮ್ಮ ಕೌಟುಂಬಿಕ ಬದುಕಿನ ಬಗ್ಗೆ ಹೇಳಿ

ನನ್ನ ತಂದೆ ದಾಮೋದರ ಭಟ್ ಮಂಗಳೂರಲ್ಲಿ ಬಿಸ್ನೆಸ್ ನಲ್ಲಿ ತೊಡಗಿಸಿಕೊಂಡಿರುವವರು. ತಾಯಿ ಶೈಲಜಾ ಮೃದಂಗ ನುಡಿಸಬಲ್ಲರು. ಅವರಿಗೆ ನಾನು ಮತ್ತು ನಮ್ಮಕ್ಕ ಇಬ್ಬರೇ ಮಕ್ಕಳು. ಅಕ್ಕ ಮಧುರಾ ಭಟ್ ಫಿಸಿಯೋಥೆರಪಿಸ್ಟ್ ಆಗಿದ್ದು, ಹಾಂಕಾಂಗ್ ನಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ. ನಾನು ಸದ್ಯಕ್ಕೆ ಬೆಂಗಳೂರಿಗೆ ಬಂದಿದ್ದೇನೆ. ಸಿನಿಮಾ ಬದುಕಿಗೆ ಹೊಂದಿಕೊಳ್ಳುವ ಹಾಗೆ ಬೆಂಗಳೂರಿನ ಬ್ರ್ಯಾಂಚ್ ಆಫೀಸಲ್ಲಿ ವೃತ್ತಿಯಲ್ಲಿದ್ದೇನೆ.

Source Credit Filmibeat.com

Niranthara News

Leave a Reply

Your email address will not be published. Required fields are marked *

Next Post

ಶೋಕಿಸಬೇಕಿದ್ದ ದಿನವನ್ನೂ ಶೋಕಿ ದಿನವಾಗಿಸಿದ ಅಲಿಬಾಬಾ!

Tue Nov 12 , 2019
Source Credit Vishwavani.news ರೋಹಿತ್ ಚಕ್ರತೀರ್ಥ ಅಲಿಬಾಬ ವರ್ಷ ವರ್ಷ ಹೆಬ್ಬಾಾವಿನಂತೆ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿದೆ. ಹೆಬ್ಬಾಾವಿನಂತೆ ದೇಶದಲ್ಲಿರುವ ಎಲ್ಲ ಸಣ್ಣಪಟ್ಟ ಉದ್ಯಮಗಳನ್ನೂ ಅದು ಆಪೋಶನ ತೆಗೆದುಕೊಳ್ಳುತ್ತಿದೆ. ಅಲಿಬಾಬದ ಎದುರಲ್ಲಿ ನಿಂತು ಗೆಲ್ಲಲು ಯಾವ ಉದ್ಯಮಿಗಳಿಗೂ ಸಾಧ್ಯವಾಗುತ್ತಿಲ್ಲ. ಇದನ್ನು ಹುಚ್ಚು ಎನ್ನಬೇಕೋ ಹಿಸ್ಟೀರಿಯಾ ಎನ್ನಬೇಕೋ ತಿಳಿಯುತ್ತಿಿಲ್ಲ! ಅಂದು ಗಡಿಯಾರದ ಮುಳ್ಳು ಹನ್ನೆೆರೆಡು ತೋರಿಸಿ ಕೇವಲ 85 ಸೆಕೆಂಡುಗಳಾಗಿದ್ದವಷ್ಟೇ. ಪಕ್ಕದಲ್ಲಿ ತೆರೆದಿಟ್ಟಿಿದ್ದ ದೊಡ್ಡ ಎಲೆಕ್ಟ್ರಾಾನಿಕ್ ಬೋರ್ಡಿನಲ್ಲಿ ಅಕ್ಷರಗಳು ತಟಪಟ ಹಾರುತ್ತ, ಜಿಗಿದು ಜಿಗಿದು ಓಡುತ್ತ 1,000,000,000 ಡಾಲರ್ ಎಂದು ತೋರಿಸಿದವು. ನಂತರದ ಒಂದು ಗಂಟೆಯಲ್ಲಿ ಬೋರ್ಡ್‌ನಲ್ಲಿದ್ದ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links