ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಲು ಜೋಡೆತ್ತು ಯತ್ನ: ಬಸನಗೌಡ ಪಾಟೀಲ್

Source Credit Oneindia.com

Vijayapura

oi-Puttappa Koli

|

ವಿಜಯಪುರ, ಡಿಸೆಂಬರ್ 04: ಕಾಂಗ್ರೆಸ್ ನಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಲು ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಎಂಬ ಜೋಡೆತ್ತುಗಳು ವ್ಯೆವಸ್ಥಿತವಾಗಿ ಸಂಚು ರೂಪಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಬುಧವಾರ ವಿಜಯಪುರ ನಗರದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಜೋಡೆತ್ತಿನ ಸಭೆಯ ಉದ್ದೇಶವೆನೆಂದರೆ ಸಿದ್ದರಾಮಯ್ಯನನ್ನು ಬದಿಗೆ ಸರಿಸಿ ನಾವು ಅಧಿಕಾರಕ್ಕೆ ಬರಬೇಕು ಎಂದು ಮಸಲತ್ತು ಮಾಡಿದ್ದಾರೆ ಎಂದರು.

ಈ ಜೋಡೆತ್ತುಗಳ ಕುತಂತ್ರ ಸಿದ್ದರಾಮಯ್ಯನವರ ಗಮನಕ್ಕೂ ಬಂದಿದೆ, ಕುಮಾರಸ್ವಾಮಿ ಮತ್ತು ಶಿವಕುಮಾರ್ ಅವರ ಕುತಂತ್ರ ವಿಫಲವಾಗಲಿದೆ ಎಂದು ತಿಳಿಸಿದರು. ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವಂತೆ ನೋಡಿಕೊಳ್ಳಬೇಕು, ಇದರಿಂದ ನಿಮಗೆ ಅನುಕೂಲವಾಗಲಿದೆ ಎಂದು ಬಸನಗೌಡ ಪಾಟೀಲ್ ವಿನಂತಿಸಿದರು.

ದಿನೇಶ್ ಗುಂಡೂರಾವ್ ಅವರಿಗೆ ಬಿಜೆಪಿಯ ಸಾಧನೆ ನೋಡಿ ಭಯವಾಗಿದೆ, ಅವರ ಕೈಯಲ್ಲಿ ಶಾಸಕರು ನಿಲ್ಲುತ್ತಿಲ್ಲ, ಅವರ ಸ್ಥಾನವೇ ಗಟ್ಟಿಯಾಗಿ ಉಳಿದಿಲ್ಲ, ನಾಮಕಾವಸ್ಥೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೈಯಲ್ಲೂ ಶಾಸಕರು ಇಲ್ಲ, ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಉಪ ಚುನಾವಣೆಯಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಅವರಿಗೆ ವಾಸ್ತವ ಚಿತ್ರಣ ಗೊತ್ತಾಗಿದೆ. ಹೀಗಾಗಿ ಹತಾಶೆಯ ಮನೋಭಾವನೆಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಡಿಸೆಂಬರ್ 09 ರ ಬಳಿಕ ಸಂಪೂರ್ಣವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಿ.ಎಸ್.ಯಡಿಯೂರಪ್ಪನವರೇ ಮೂರುವರೆ ವರ್ಷ ಅಧಿಕಾರ ಮಾಡಲಿದ್ದಾರೆ ಎಂದರು. ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ, ಮಂತ್ರಿ ಆಗಬೇಕೆಂದು ಅಸಮಾಧಾನ ಆಗುವವರೇ ನಾವು, ಆದರೆ ನಾವ್ಯಾರು ಅಸಮಾಧಾನಗೊಳ್ಳಲ್ಲ ಹೀಗಾಗಿ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಬೆಂಬಲಿಗನಿಂದ ಹಣ ಹಂಚಿಕೆ: ವಿಡಿಯೋ ವೈರಲ್

Wed Dec 4 , 2019
Source Credit Oneindia.com Pin it Email https://nirantharanews.com/%e0%b2%b8%e0%b2%bf%e0%b2%a6%e0%b3%8d%e0%b2%a6%e0%b2%b0%e0%b2%be%e0%b2%ae%e0%b2%af%e0%b3%8d%e0%b2%af%e0%b2%a8%e0%b2%a8%e0%b3%8d%e0%b2%a8%e0%b3%81-%e0%b2%ae%e0%b3%82%e0%b2%b2%e0%b3%86%e0%b2%97%e0%b3%81/#Wg== Sirsi oi-Amith | Published: Wednesday, December 4, 2019, 23:10 [IST] ಯಲ್ಲಾಪುರ, ಡಿಸೆಂಬರ್ 4: ಯಲ್ಲಾಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ಅವರ ಆಪ್ತ ದ್ಯಾಮಣ್ಣ ದೊಡ್ಡಮನಿ ಶಿರಸಿ ತಾಲ್ಲೂಕಿನ ಬನವಾಸಿ ಸಮೀಪದ ದನಗನಹಳ್ಳಿಯಲ್ಲಿ ಹಣ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಉಪ ಚುನಾವಣೆ ನಡೆಯಲು ಒಂದು ದಿನ ಬಾಕಿ ಇರುವಾಗಲೇ ಹಣ ಹಂಚಿಕೆ ಮಾಡುವ ವಿಡಿಯೋ ಬಿಡುಗಡೆಯಾಗಿದ್ದು, ಬುಧವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತಯಾಚನೆಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links