ಸಾರ್ವಜನಿಕ ವ್ಯವಸ್ಥೆೆಯಲ್ಲಿ ತಲೆದೋರುವ ಸರ್ವರ್ ಸಮಸ್ಯೆೆ!

Source Credit Vishwavani.news

ಆದರ್ಶ್ ಶೆಟ್ಟಿಿ ಉಪ್ಪಿಿನಂಗಡಿ, ಪುತ್ತೂರು 

ಜನಸಾಮಾನ್ಯರು ದಿನನಿತ್ಯ ನೂರಾರು ಉದ್ದೇಶಗಳಿಗಾಗಿ ಬ್ಯಾಾಂಕ್‌ಗಳಿಗೆ ತೆರಳಿ ವ್ಯವಹರಿಸುವುದು ಸಾಮಾನ್ಯ. ಇವುಗಳಲ್ಲಿ ರಾಷ್ಟ್ರೀಕೃತ ಬ್ಯಾಾಂಕ್‌ಗಳಿರಬಹುದು ಅಥವಾ ಸಹಕಾರಿ ಬ್ಯಾಾಂಕ್‌ಗಳಿರಬಹುದು. ಶ್ರೀಮಂತರಿಂದ ಹಿಡಿದು ಬಡಕೂಲಿ ಕಾರ್ಮಿಕರವರೆಗೂ ಇಲ್ಲಿ
ವ್ಯವಹಾರ ಹೊಂದಿರುತ್ತಾಾರೆ. ಜನಸಾಮಾನ್ಯರು ತಾವು ದುಡಿದ ಹಣವನ್ನು ಜಮೆ ಮಾಡಲು, ಇನ್ನಿಿತರ ರೀತಿಯಲ್ಲಿ ವ್ಯವಹಾರಗಳನ್ನು ನಡೆಸಲು ರಾಷ್ಟ್ರೀಕೃತ ಬ್ಯಾಾಂಕ್‌ಗಳಲ್ಲಿ ಹಾಗೂ ಸಹಕಾರಿ ಸಂಸ್ಥೆೆಗಳಲ್ಲಿ ಸರ್ವರ್ ಸಮಸ್ಯೆೆಗಳಿಂದ ವ್ಯವಹಾರಗಳು ಸ್ಥಗಿತವಾಗುತ್ತಿಿರುವ ವಿದ್ಯಮಾನಗಳು ಇತ್ತೀಚಿನ ದಿನಗಳಲ್ಲಿ ಬಹುತೇಕ ಕಡೆಗಳಲ್ಲಿ ಕಂಡು ಬರುತ್ತಿಿದೆ. ಕೆಲ ಬ್ಯಾಾಂಕ್‌ಗಳಲ್ಲಿ ಗ್ರಾಾಹಕರು ಬೆಳಗ್ಗೆೆಯಿಂದ ಮಧ್ಯಾಾಹ್ನದವರೆಗೂ ಸರತಿ ಸಾಲಿನಲ್ಲಿ ನಿಂತು ಬರಿಗೈಯಲ್ಲಿ ವಾಪಾಸಾಗುವ ನಿದರ್ಶನಗಳು ಸಹ ಕಂಡುಬರುತ್ತಿಿವೆ.

ಗ್ರಾಾಹಕರು ಬ್ಯಾಾಂಕ್ ಸಿಬ್ಬಂದಿಗಳಲ್ಲಿ ವಿಚಾರಿಸಿದಾಗ ಸರ್ವರ್ ಸಮಸ್ಯೆೆಗೆ ನಾವು ಜವಾಬ್ದಾಾರರಲ್ಲ. ಮೇಲಾಧಿಕಾರಿಗಳು ಮತ್ತು ಪ್ರಧಾನ ಕಚೇರಿಗಳಲ್ಲಿ ಈ ಬಗ್ಗೆೆ ವಿಚಾರಿಸಿ ಎಂಬ ಹೇಳಿಕೆ ಶಾಖಾ ಸಿಬ್ಬಂದಿಗಳದ್ದಾಗಿರುತ್ತದೆ. ಬಹುತೇಕ ಬ್ಯಾಾಂಕ್‌ಗಳ ಸಿಬ್ಬಂದಿ ಹೊರರಾಜ್ಯದವರಾಗಿರುವುದರಿಂದ ಭಾಷಾ ಸಮಸ್ಯೆೆಯಿಂದ ಗ್ರಾಾಮೀಣ ಭಾಗದ ಜನರು ವ್ಯವಹರಿಸಲು ಕಷ್ಟವಾಗುವುದು, ಹಾಗೆಯೇ ಗ್ರಾಾಹಕರಿಗೆ ಮಾಹಿತಿ ನೀಡಲು ದರ್ಪ ತೋರುವ, ತಲೆ ಎತ್ತಿಿ ಗ್ರಾಾಹಕರೊಡನೆ ಮಾತಾಡಲು ಸಹ ಅಸಡ್ಡೆೆ ತೋರುವ ಸಿಬ್ಬಂದಿಗಳನ್ನು
ಕೆಲ ಬ್ಯಾಾಂಕ್‌ಗಳಲ್ಲಿ ಕಾಣಬಹುದು. ಬ್ಯಾಾಂಕ್‌ಗಳಲ್ಲಿ ಉಂಟಾಗುವ ಇಂತಹ ಸಮಸ್ಯೆೆಗಳಿಂದ ಮದುವೆ, ಆಸ್ಪತ್ರೆೆ ಬಿಲ್ಲು ಕಟ್ಟುವಂತಹ ಅನೇಕ ತುರ್ತು ಅವಶ್ಯಕತೆಗಳಿಗೆ ಗ್ರಾಾಹಕರು ಪರದಾಡಬೇಕಾದ ಸ್ಥಿಿತಿ ಇದೆ.

ಇನ್ನು ಸಕಾಲಕ್ಕೆೆ ತುರ್ತು ಹಣ ಪಡೆಯಲು ಮತ್ತು ಗ್ರಾಾಹಕರಿಗೆ ಅನುಕೂಲವಾಗಲೆಂದು ಎಟಿಎಂ ಯಂತ್ರಗಳನ್ನು ಸ್ಥಾಾಪಿಸಲಾಗಿದ್ದರೂ ಕೆಲವೇಳೆ ಸರ್ವರ್ ಸಮಸ್ಯೆೆಯ ಕಾರಣದಿಂದಾಗಿ ಕೆಲವು ವೇಳೆ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಹಣ ಇಲ್ಲದೇ ಇರುವುದು, ತಾಂತ್ರಿಿಕ ತೊಂದರೆಯಿಂದ ಖಾತೆಗೆ ಹಣ ತೆಗೆಯದಿದ್ದರೂ ಸ್ವಯಂ ಮೊತ್ತ ಕಡಿತಗೊಳ್ಳುವುದು ಇತ್ಯಾಾದಿ ಸಮಸ್ಯೆೆಗಳಿಂದ ಜನರು ತೊಂದರೆಗೆ ಸಿಲಲುಕುವಂತಾಗಿದೆ. ಎಟಿಎಂಗಳ ಸ್ಥಿಿತಿ ಒಂದು ರೀತಿ ‘ಊಟಕ್ಕಿಿಲ್ಲದ ಉಪ್ಪಿಿನಕಾಯಿ’ ಎಂಬಂತಾಗಿದೆ. ಪ್ರಮುಖವಾಗಿ ಬ್ಯಾಾಂಕ್‌ಗಳಿಗೆ ಗ್ರಾಾಹಕರೇ ಆಸ್ತಿಿ. ಇಂತಹ ಸಂದರ್ಭಗಳಲ್ಲಿ ತುರ್ತು ಸಮಯಗಳಲ್ಲಿ ಹಣ ದೊರಕದಿದ್ದಲ್ಲಿ ಗ್ರಾಾಹಕರಿಗೆ ಪೂರಕ ಸ್ಪಂದನೆ ನೀಡಬೇಕಾದ ಹೊಣೆ ಬ್ಯಾಾಂಕ್ ಸಿಬ್ಬಂದಿಗಳದ್ದೇ ಆಗಿರುತ್ತದೆ. ಪ್ರತಿ ದಿನ ಬ್ಯಾಾಂಕ್‌ಗೆ ನೂರಾರು ಜನ ಬಂದರೂ ಗ್ರಾಾಹಕರು ಇಂತಿಷ್ಟೇ ಸಮಯದಲ್ಲಿ ತಮ್ಮ ವ್ಯವಹಾರ ಪೂರ್ಣಗೊಳಿಸಿ ಮರಳುವಂತಿಲ್ಲ. ಕೆಲವೊಂದು ಬಾರಿ ಸಣ್ಣಪುಟ್ಟ ವ್ಯವಹಾರಕ್ಕೂ 4-5 ದಿನ ಕಾಯಬೇಕಾದ ನಿದರ್ಶನಗಳಿವೆ.

ಕೆಲ ಬ್ಯಾಾಂಕ್‌ಗಳಲ್ಲಿ ಸರ್ವರ್ ರಗಳೆ ಒಂದೆಡೆಯಾದರೆ, ಕೆಲ ಶಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸೇವೆ ಪಡೆಯಲಾಗದ
ಸ್ಥಿಿತಿಗತಿಗಳಿವೆ. ಕೆಲ ಬ್ಯಾಾಂಕ್‌ಗಳನ್ನೇ ನಂಬಿ ಸಣ್ಣಪುಟ್ಟ ವ್ಯವಹಾರಕ್ಕಿಿಳಿದ ಮಂದಿ ವ್ಯವಹಾರದಲ್ಲಿ ನಷ್ಟ ಅನುಭವಿಸುವ ಸ್ಥಿಿತಿ ಬಂದೊದಗುತ್ತದೆ. ನಾನಾ ಇಲಾಖೆ, ಕಚೇರಿಯಿಂದ ಸರಕಾರಕ್ಕೆೆ ಪಾವತಿಸಬೇಕಾದ ನಗದು ವ್ಯವಹಾರಗಳಿಗೂ ಅಡ್ಡಿಿಯಾಗುತ್ತದೆ. ಡಿಡಿ, ಶಿಕ್ಷಣ ಸಂಸ್ಥೆೆಗಳ ಶುಲ್ಕ, ಪರೀಕ್ಷಾ ಶುಲ್ಕಗಳನ್ನು ಕಟ್ಟಲು ತೊಂದರೆಯಾಗುತ್ತಿಿದೆ. ಇಂತಹ ಸಮಸ್ಯೆೆಗಳು ಕೆಲ ಸಹಕಾರಿ ಕೃಷಿ ಪತ್ತಿಿನ ಬ್ಯಾಾಂಕ್ ಸಹ ಹೊರತಾಗಿಲ್ಲ. ಪಡಿತರದಾರರಿಗೆ ಪಡಿತರ ವಿತರಣೆಯಾಗಬೇಕಾದರೆ ಬೆರಳಚ್ಚು ನೀಡಬೇಕಾಗಿರುವುದರಿಂದ ಬೆರಳಚ್ಚು ಪಡೆಯಲು ಸರ್ವರ್ ಇಲ್ಲದೆ ಗ್ರಾಾಹಕರು ಪರದಾಡಬೇಕಾಗುತ್ತದೆ.

ಸರಕಾರದ ಆಧಾರ್ ಕಡ್ಡಾಾಯ ಎಂಬ ನೀತಿಯಿಂದ ಆಧಾರ್ ಕಾರ್ಡ್‌ನಲ್ಲಿನ ಲೋಪ ಸರಿಪಡಿಸಲು, ದೂರವಾಣಿ ಸಂಖ್ಯೆೆ ಜೋಡಣೆ ಮಾಡಲು, ನೋಂದಾಯಿಸಲು ಹಾಗೂ ಇನ್ನಿಿತರ ಸಮಸ್ಯೆೆಗಳನ್ನು ಸರಿಪಡಿಸಲು ಕೆಲವು ಬ್ಯಾಾಂಕ್, ನಾಡ ಕಚೇರಿ, ಅಂಚೆ ಕಚೇರಿ, ಮಿನಿ
ವಿಧಾನಸೌಧ ಸ್ಥಳಗಳಲ್ಲಿ ಅವಕಾಶ ಕಲ್ಪಿಿಸಲಾಗಿದೆ. ಆದರೆ, ದಿನವೊಂದಕ್ಕೆೆ ಹದಿನೈದು ಮಂದಿಗೆ ಮಾತ್ರ ಅವಕಾಶ ಇರುವುದರಿಂದ ಆಧಾರ್ ಪಡೆಯುವುದೇ ಒಂದು ಹರಸಾಹಸವಾದರೆ, ಸರ್ವರ್ ಸಮಸ್ಯೆೆಯಂತಹ ಕಾರಣಗಳಿಂದ ಮಹಿಳೆಯರು, ಮಕ್ಕಳು, ವಯೋವೃದ್ದರು ಇಡೀ ರಾತ್ರಿಿ ಜಾಗರಣೆ ಕಾಯುವ, ಬ್ಯಾಾಂಕ್ ಆವರಣದಲ್ಲೇ ಮಲಗುವ, ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಪ್ರಸಂಗಗಳು ಸಾಕಷ್ಟು ಕಂಡುಬರುತ್ತಿಿವೆ. ಮೂಲ ಅವಶ್ಯಕತೆಗಳಾದ ಬ್ಯಾಾಂಕ್, ನಾಡ ಕಚೇರಿ ಸೇರಿದಂತೆ ಸರಕಾರಿ ಸ್ವಾಾಮ್ಯದ ಕೇಂದ್ರಗಳಲ್ಲಿ ಉಂಟಾಗುವ ಅವ್ಯವಸ್ಥೆೆಗಳಿಗೆ ಸರ್ವರ್ ಸಮಸ್ಯೆೆ ಕಾರಣವಾಗುತ್ತಿಿದ್ದು, ಈ ಬಗ್ಗೆೆ ಅಧಿಕಾರಿಗಳು ಕಾಳಜಿ ತೋರಬೇಕಾಗಿದೆ.

Source Credit Vishwavani.news

Niranthara News

Leave a Reply

Your email address will not be published. Required fields are marked *

Next Post

ನಾವು ಓದಬೇಕಾಗಿದ್ದು ಟಿಪ್ಪುುವಿನ ಇತಿಹಾಸವನ್ನಲ್ಲ, ಮದಕರಿ ನಾಯಕರ ವೀರ ಚರಿತ್ರೆ

Thu Nov 28 , 2019
Source Credit Vishwavani.news ಮಾರುತೀಶ್ ಅಗ್ರಾರ, ತುಮಕೂರು  ವೀರಾಧಿವೀರರ, ರಾಷ್ಟ್ರ ಪುರುಷರ, ಕೆಚ್ಚೆೆದೆಯ ಹೋರಾಟಗಾರರ, ದೇಶಭಕ್ತರ ಅದೆಷ್ಟೋೋ ವೀರಗಾಥೆಯನ್ನು ಈ ನೆಲ ಈಗಲೂ ತನ್ನ ಕಾಲ ಗರ್ಭದಲ್ಲಿ ಹುದುಗಿಟ್ಟುಕೊಂಡಿದೆ. ಅಂಥ ಕೆಚ್ಚೆೆದೆಯ ಹೋರಾಟಗಾರರಲ್ಲಿ ಮದಕರಿ ನಾಯಕರೂ ಕೂಡ ಒಬ್ಬರು. ಮೆಕಾಲೆ ಶಿಕ್ಷಣ ಪದ್ಧತಿಯ ಪರಿಣಾಮವೋ ಕೆಲ ಫ್ಯಾಾಸಿಸ್‌ಟ್‌ ಇತಿಹಾಸಕಾರರ ಇಬ್ಬಗೆಯ ನೀತಿ ಪರಿಣಾಮವೋ ಏನೋ ದೇಶಕ್ಕಾಾಗಿ ಹೋರಾಡಿ ತ್ಯಾಾಗ, ಬಲಿದಾನಗೈದ ಅದೆಷ್ಟೋೋ ಮಹಾನ್ ಪುರುಷರ, ನಿಜವಾದ ಪರಿಚಯವೇ ನಮಗೆ ಸಿಗಲಿಲ್ಲ! ತಮ್ಮ ಸರ್ವಸ್ವವನ್ನೂ ರಾಷ್ಟ್ರಕ್ಕಾಾಗಿ ಮುಡುಪಾಗಿಟ್ಟ ಅನೇಕ ದೇಶಭಕ್ತ ನಾಯಕರ ಹೋರಾಟಗಳನ್ನು ನಮ್ಮ ಕೆಲ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links