ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲು ಶಿಕ್ಷಣ ಸಚಿವರಿಗೆ ಮನವಿ

Source Credit NewsKannada.com


MV
  ¦   


Dec 18, 2019 09:21:51 AM (IST)

ಬಂಟ್ವಾಳ: ಸರಕಾರಿ ಶಾಲೆ ಉಳಿಸಿ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ  ಮುಂದಿನ ಶೈಕ್ಷಣಿಕ  ವರ್ಷದಲ್ಲಿ ಹೆಚ್ಚುವರಿಯಾಗಿ ರಾಜ್ಯದಲ್ಲಿ ಒಂದು ಸಾವಿರ  ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನು ಪರಿವರ್ತಿಸುವಂತೆ ಆಗ್ರಹಿಸಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಬಂಟ್ವಾಳದ ಪ್ರವಾಸಿ ಬಂಗಲೆಯಲ್ಲಿ ಸಚಿವರನ್ನು ಭೇಟಿಯಾದ ಪ್ರಕಾಶ್ ಅಂಚನ್ ಈಗಾಗಲೇ ರಾಜ್ಯದಲ್ಲಿ 1 ಸಾವಿರ  ಸರಕಾರಿ ಶಾಲೆಗಳನ್ನು  ಆಂಗ್ಲ ಮಾಧ್ಯಮ  ಶಾಲೆಗಳನ್ನಾಗಿ  ಪರಿವರ್ತಿಸಿದ ಕಾರಣ ಪೋಷಕರು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿ  ಮುಂದಿನ ವರ್ಷದಲ್ಲೂ ಅದನ್ನು ಮುಂದುವರೆಸುವಂತೆ  ಮತ್ತು ಅಭಿವೃದ್ದಿ ಪಡಿಸುವಂತೆ ಬೇಡಿಕೆಯನ್ನು ನೀಡಿದ ಕಾರಣ ರಾಜ್ಯ ಸಮಿತಿ ಈ ಬೇಡಿಕೆಯನ್ನು ಮುಂದಿಡುತ್ತಿದೆ ಎಂದು ವಿನಂತಿಕೊಂಡರು. ಅಲ್ಲದೆ ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಮಾರ್ಪಟ್ಟ ಸರಕಾರಿ ಶಾಲೆಗಳಲ್ಲಿ 30 ಮಕ್ಕಳಿಗೆ ಮಾತ್ರ ಅವಕಾಶ ಎಂಬ ನಿಯಮನ್ನು ಸಡಿಲಿಸಿ ಸೇರಲಿಚ್ಛಿಸುವ ಎಲ್ಲಾ ಮಕ್ಕಳಿಗೂ ಪಠ್ಯ ಪುಸ್ತಕವನ್ನು ಶಾಲಾ ಆರಂಭದ ದಿನವೇ ವಿತರಿಸುವಂತೆ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ ಮನವಿ ಸಲ್ಲಿಸಿದರು. ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಎಲ್ಲಾ ಸಚಿವರಿಗೆ ಮಹತ್ವದ ಸೂಚನೆ ನೀಡಿದ ಯಡಿಯೂರಪ್ಪ

Wed Dec 18 , 2019
Source Credit Oneindia.com Pin it Email https://nirantharanews.com/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%86%e0%b2%82%e0%b2%97%e0%b3%8d%e0%b2%b2-%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae-%e0%b2%b6%e0%b2%be%e0%b2%b2/#Wg== Karnataka oi-Gururaj S | Updated: Wednesday, December 18, 2019, 9:47 [IST] ಬೆಂಗಳೂರು, ಡಿಸೆಂಬರ್ 18 : ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಆದ್ದರಿಂದ, ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ ಸೂಚನೆಯನ್ನು ನೀಡಿದ್ದಾರೆ. ವಾರದಲ್ಲಿ ಎರಡು ದಿನ ಜನರನ್ನು ಭೇಟಿ ಮಾಡಲು ಸಹ ಅವರು ತೀರ್ಮಾನಿಸಿದ್ದಾರೆ. 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದೆ. ಈ ಮೂಲಕ ಕರ್ನಾಟಕದ ಬಿಜೆಪಿ ಸರ್ಕಾರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links