ಸದಾ ಜೊತೆಯಾಗಿರು… ಪ್ರೇಮಿಗಳ ದಿನ ಪ್ರೀತಿ ಹೇಳಿಕೊಂಡ್ರ ಶೈನ್ ಶೆಟ್ಟಿ.. ಹುಡುಗಿ ಯಾರು ಗೊತ್ತಾ?

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದು ಸಾಲು ಸಾಲು ಸಂದರ್ಶನ ನೀಡೋದ್ರಲ್ಲಿ ಬ್ಯುಸಿ ಇದ್ದರೂ ಕೂಡ ಇದೆಲ್ಲದರ ನಡುವೆ ಇಂದು ಅದರಲ್ಲೂ ಪ್ರೇಮಿಗಳ ದಿನದಂದು ಹಾಡಿನ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಂತೆ ಕಾಣುತ್ತಿದೆ..

ಹೌದು ಶೈನ್ ಶೆಟ್ಟಿ ಒಳ್ಳೆಯ ಗಾಯಕರೂ ಕೂಡ ಹೌದು.. ಆದರೆ ಬಿಗ್ ಬಾಸ್ ಮನೆಯಲ್ಲಿ ಅಷ್ಟಾಗಿ ಇವರ ಹಾಡನ್ನು ಕೇಳಲು ಅವಕಾಶವಾಗಲಿಲ್ಲ.. ಇದೀಗ ಬಿಗ್ ಮನೆಯಿಂದ ಹೊರ ಬಂದ ಬಳಿಕ ಇಂದು ಹಾಡೊಂದನ್ನು ಹಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ..

ಅದರಲ್ಲೂ ಹಾಡಿರುವ ಹಾಡು, ಹಾಡಿಗೆ ಶೈನ್ ಅವರು ಬರೆದ ಸಾಲು.. ಜೊತೆಗೆ ಹಾಡಿರುವ ದಿನ ನೋಡಿದರೆ ಶೈನ್ ಅವರು ಯಾರಿಗೋ ಈ ರೀತಿ ಹಾಡಿನ ಮೂಲಕ ಪ್ರೀತಿ ಹೇಳಿಕೊಂಡಂತೆ ಕಾಣುತ್ತಿದೆ..

ಹೌದು ಪ್ರೇಮಿಗಳ ದಿನ ಬೆಳ್ಳಂಬೆಳಿಗ್ಗೆ ಶೈನ್ ಶೆಟ್ಟಿ ಅವರು ಮುಂದಿನ ನಿಲ್ದಾಣ ಸಿನಿಮಾದ ಇನ್ನೂ ಬೇಕಾಗಿದೆ ಹಾಡಿನ “ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು.. ನಿನ್ನುಸಿರ ಧ್ಯಾನಿಸುವ ತೀರಾ ಸಾಮಾನ್ಯ ನಾನು.. ಆಕಾಶದಲ್ಲಿ ನೀ ದೀಪವಾದೆ.. ಇರುಳಾಗಿ ನಾನು ನಿನಗಾಗಿ ಕಾದೆ.. ಈ ಮೌನಕ್ಕೀಗ ಮಾಧುರ್ಯವಾದೆ.. ಹೊರತಾಗಿ ನಿನ್ನ ನಾ ಖಾಲಿಯಾದೆ..‌ ಸಿಹಿಕಹಿ ಏನಾದರೂ.. ಪ್ರತಿ ಕ್ಷಣ ಜೊತೆಯಾಗಿರು.. ಇನ್ನೂ ಬೇಕಾಗಿದೆ.. ಒಲವು ಇನ್ನು ಬೇಕಾಗಿದೆ ಎಂದು ಹಾಡಿದ್ದಷ್ಟೇ ಅಲ್ಲದೆ.‌. ವೀಡಿಯೋವನ್ನು ತೀರಾ ಸಾಮಾನ್ಯ ನಾನು ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಒಂದು ಕಡೆ ಶೈನ್ ಅವರ ಗಾಯನ ಮೆಚ್ಚಿ ಕಮೆಂಟ್ ಮಾಡಿದರೆ.. ಮತ್ತೊಂದು ಕಡೆ ನಿಮಗೆ ಬೇಕಿರುವ ಒಲವು ಕೊಡುವ ಆ ಹುಡುಗಿ ಯಾರು ತಿಳಿಸಿ ಎಂದು ಕಮೆಂಟ್ ಮೂಲಕ ಶೈನ್ ಅವರನ್ನ ಪ್ರಶ್ನೆ ಮಾಡುತ್ತಿದ್ದಾರೆ.. ಶೈನ್ ಅವರ ಪ್ರೀತಿ ಒಪ್ಪಿಕೊಂಡರೆ ಸದ್ಯದಲ್ಲಿಯೇ ಅಭಿಮಾನಿಗಳಿಗೆ ಅವರ ಪರಿಚಯ ಮಾಡಿಸಿದರೂ ಆಶ್ಚರ್ಯವಿಲ್ಲ.. ಒಟ್ಟಿನಲ್ಲಿ ಸದ್ಯ ಎಲ್ಲಾ ಕಡೆ ಶೈನ್ ಆಗುತ್ತಿರುವ ಶೆಟ್ರು ಲೈಫಲ್ಲಿ ಸದಾ ಯಶಸ್ಸಿನ ಜೊತೆ ಅವರು ಬಯಸಿದ್ದೆಲ್ಲಾ ಸಿಗುವಂತಾಗಲಿ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

'ಎಂಎಸ್ಐಎಲ್ ಬೇಡ, ಲ್ಯಾಂಡ್ ಆರ್ಮಿ ಬೇಕು'

Fri Feb 14 , 2020
Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links