ಸಣ್ಣ ಮನಸ್ಸಿನ ನಕಾರಾತ್ಮಕ ವ್ಯಕ್ತಿಗಳ ಜತೆ ಏಕೆ ಚರ್ಚೆ ಮತ್ತು ವಾದ ಮಾಡಬಾರದು ಗೊತ್ತೆ?

Source Credit Kannada.boldsky.com

1. ಸಣ್ಣ ಜಗಳಗಳು ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತದೆ

ಯಾವುದೇ ಕೆಲಸವಿಲ್ಲದ ವ್ಯಕ್ತಿಗಳೊಂದಿಗೆ ವಿನಾಕಾರಣ ಜಗಳವಾಡಬೇಡಿ. ಯಾಕೆಂದರೆ ಅವರದ್ದು ಸಣ್ಣಮನಸ್ಥಿತಿ ಎಂಬುದು ನಿಮಗೆ ತಿಳಿದಿರಲಿ. ಶಾಂತವಾಗಿರುವುದು ಮತ್ತು ಸ್ವಯಂ ಅರಿವಿರುವವರಂತೆ ವರ್ತಿಸಿದರೆ ನಿಮ್ಮ ಘನತೆಗೆ ಒಳ್ಳೆಯದು. ಕೆಲವು ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಂಡು ತೆರೆದ ಮನಸ್ಸಿನಿಂದ ಇದ್ದರೆ ನಿಮಗೇ ಒಳ್ಳೆಯದು. ಅಷ್ಟೇನೂ ಮುಖ್ಯವಲ್ಲದ ವಿಚಾರಕ್ಕೆ ವಿನಾಕಾರಣ ಶಾಂತಿಯನ್ನು ಕಳೆದುಕೊಳ್ಳುವುದರಿಂದಾಗಿ ನಿಮ್ಮ ಮಾನಸಿಕ ಮತ್ತು ದೈಹಿಕ ಜೊತೆಗೆ ನಿಮ್ಮ ಸಂಬಂಧಗಳು, ನಿಮ್ಮ ಕನಸುಗಳು ಎಲ್ಲವೂ ಕೂಡ ವ್ಯಯವಾಗುತ್ತದೆ. ಇಂತಹ ಜಗಳಗಳು ನಿಮ್ಮ ಶಕ್ತಿಯನ್ನು ಕುಗ್ಗಿಸುವ ಮೂರ್ಖತನದ ಪರಮಾವಧಿಯಂತೆಯೇ ಸರಿ.

2. ನಿಮ್ಮ ಬಗ್ಗೆ ವದಂತಿ ಮಾಡುವವರ ಜೊತೆಗೆ ಜಗಳ ಕಾಯುವುದನ್ನು ನಿಲ್ಲಿಸಿ

3. ಅಸೂಯೆಯಿಂದ ನಿಮ್ಮ ಬಗ್ಗೆ ಗಾಸಿಪ್ ಮಾಡುವವರ ಜೊತೆ ಜಗಳ ಮಾಡಬೇಡಿ

ನಕಾರಾತ್ಮಕವಾಗಿ ನಿಮ್ಮ ಬಗ್ಗೆ ವದಂತಿ ಮಾಡುವವರ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ವಿಚಾರ ಎಂದರೆ ಅವರ ಮನಸ್ಥಿತಿ. ವದಂತಿ ಹಬ್ಬಿಸುವವರು ಖಂಡಿತ ನಿಮ್ಮ ಬಗ್ಗೆ ಅಸೂಯೆ ಹೊಂದಿರುವವರಾಗಿರುತ್ತಾರೆ. ನಿಮ್ಮಿಂದಾಗಿ ಅವರು ಅಭದ್ರತೆಯ ಭಾವನೆ ಹೊಂದುತ್ತಿರಬಹುದು. ವದಂತಿಯ ಮೂಲಕ ಅವರು ಅವರ ಅಭದ್ರತೆಯನ್ನ ಮತ್ತು ದುರ್ಬಲತೆಯನ್ನು ರಕ್ಷಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ ಎಂಬುದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಿ. ನಿಮ್ಮನ್ನು ಅಳಿಸುವ ಮೂಲಕ ಇತರರ ಹೋಲಿಕೆಯಲ್ಲಿ ಅವರು ಉತ್ತಮರಾಗಿರುವುದಕ್ಕೆ ಅವರು ಯತ್ನಿಸುತ್ತಾರೆ.ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಸೂಕ್ಷ್ಮವಾಗಿ ವರ್ತಿಸಬೇಕು. ತಾಳ್ಮೆಯಿಂದ, ಸಹಾನುಭೂತಿಯಿಂದ ಮತ್ತು ಮುಖಾಮುಖಿಯಿಲ್ಲದ ರೀತಿಯಲ್ಲಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸುವುದು ಒಳಿತೇ ಹೊರತು ಅವರೊಂದಿಗೆ ವ್ಯರ್ಥ ಜಗಳ ಸಲ್ಲದು. ನಿಮ್ಮ ಕೆಲಸಗಳು ಇತರರಿಗೆ ಒಪ್ಪಿಗೆಯಾಗುವವರೆಗೆ ಸ್ವಲ್ಪ ಸಮಯಕ್ಕೆ ಅವಕಾಶಕೊಡಿ. ಹಿಂದೆಮುಂದೆ ಯೋಚಿಸದೆ ಜಗಳವಾಡಿದರೆ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇರುತ್ತದೆ.

4. ನಿಮ್ಮ ಪ್ರೀತಿಪಾತ್ರರ ಗಮನವನ್ನು ನಿಮ್ಮೆಡೆ ಸೆಳೆಯುವುದಕ್ಕಾಗಿ ಜಗಳ ಮಾಡಬೇಡಿ

5. ಸಾರ್ವಜನಿಕ ನಿರೀಕ್ಷೆಗಳನ್ನು ತಲುಪುವುದಕ್ಕಾಗಿ ಜಗಳ ಮಾಡಬೇಡಿ

ನಾವು ಒಂದಷ್ಟು ನಿಯಮಗಳಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ ಅಲ್ಲವೇ? ಅದೆಷ್ಟೋ ಸಂದರ್ಭದಲ್ಲಿ ಸಮಾಜದ ನಿರೀಕ್ಷೆಗಳನ್ನು ತಲುಪದ ಕೆಲವು ನಮ್ಮದೇ ಆಯ್ಕೆಯಲ್ಲಿ ನಮ್ಮಿಚ್ಛೆಯಂತೆ ಬದುಕುವುದಕ್ಕೆ ನಾವು ಭಯಪಡುತ್ತೇವೆ. ಕೆಲವೊಮ್ಮೆ ನೀವು ನಿಮ್ಮ ಜೀವನವನ್ನು ಪ್ರೀತಿಸುತ್ತಿಲ್ಲ ಎಂದು ಅಂದುಕೊಂಡಿದ್ದೀರಾ? ಉದಾಹರಣೆಗೆ ಏನನ್ನೋ ಕಳೆದುಕೊಂಡ ಭಾವನೆ, ಹಾಗಿದ್ದರೆ ಚೆನ್ನಾಗಿರುತ್ತಿತ್ತು, ಹೀಗಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ನಿಮ್ಮನ್ನ ಕಾಡಿದ್ದು ಇದಿಯಾ? ನಿಮ್ಮ ಬಗ್ಗೆ ನಿಮಗೆ ಗೊತ್ತಿರುವಷ್ಟು ಖಂಡಿತ ಮತ್ತೊಬ್ಬರಿಗೆ ಗೊತ್ತಿರುವುದಕ್ಕೆ ಸಾಧ್ಯವಿಲ್ಲ. ನೀವು ಹೇಗೆ ಬದುಕಬೇಕು ಎಂಬುದು ನಿಮ್ಮ ಸ್ವಂತ ಆಯ್ಕೆಯಾಗಿರಬೇಕು. ಸಾರ್ವಜನಿಕ ನಿರೀಕ್ಷೆಗಳನ್ನು ತಲುಪುದಕ್ಕಾಗಿ ಇನ್ನೊಬ್ಬರೊಂದಿಗೆ ಜಗಳವಾಡಿದರೆ ನೀವು ಸಮಾಜದಲ್ಲಿ ಏನನ್ನೂ ಸಾಧಿಸಲಾರಿರಿ. ನಿಮ್ಮ ಜೀವನ ಅದ್ಭುತವಾಗಿರಬೇಕು ಎಂದಾದಲ್ಲಿ ನಿಮ್ಮ ಇಚ್ಛೆಗಳಿಗೆ ಬೆಲೆ ಕೊಟ್ಟು ಬದುಕುವುದು ಒಳ್ಳೆಯದು.

6. ನಿಮ್ಮ ಹಕ್ಕುಗಳಿಗಾಗಿ ಮೂರ್ಖರೊಂದಿಗೆ ಹೋರಾಡಬೇಡಿ

ಕೆಲವು ಮೂರ್ಖ ವ್ಯಕ್ತಿಗಳು ತಮ್ಮದೇ ತಪ್ಪುಗಳಿಗೆ ಮತ್ತೊಬ್ಬರನ್ನು ದೂರುತ್ತಾರೆ. ಅವರು ತಾವು ಯಾವಾಗಲೂ ಸರಿ, ಮತ್ತೊಬ್ಬರು ಯಾವಾಗಲೂ ತಪ್ಪು ಎಂದೇ ಭಾವಿಸುತ್ತಾರೆ. ಅಂತವರು ಹೆಚ್ಚಾಗಿ ಸಿಟ್ಟಿಗೆ ಒಳಗಾಗುತ್ತಾರೆ ಮತ್ತು ಆಕ್ರಮಣಶೀಲ ಸ್ವಭಾವವನ್ನು ಹೊಂದಿರುತ್ತಾರೆ. ಇತರರ ಅಗತ್ಯತೆಯನ್ನು ಯಾವಾಗಲೂ ಅವರು ಅರ್ಥೈಸಿಕೊಳ್ಳುವುದೇ ಇಲ್ಲ. ಇತರರ ಭಾವನೆಗಳಿಗೆ ಅವರ ಬಳಿ ಬೆಲೆಯೇ ಇರುವುದಿಲ್ಲ. ಇಂತಹ ವ್ಯಕ್ತಿಗಳೊಂದಿಗೆ ನಿಮ್ಮ ಯೋಚನಾಲಹರಿಯನ್ನು ಹೇಳಿ ಅರ್ಥೈಸುವುದು ಅಷ್ಟು ಸುಲಭವಲ್ಲ. ನಿಮ್ಮ ಹಕ್ಕುಗಳಿಗಾಗಿ ಇಂತಹವರ ಬಳಿ ಜಗಳವಾಡಿದರೆ ನಿಮ್ಮ ಮನಸ್ಸೇ ಕದಡಿದಂತಾಗುತ್ತದೆ. ಇಂತಹವರನ್ನು ನಿರ್ಲಕ್ಷಿಸುವುದೇ ಒಳ್ಳೆಯದು.

7. ನಿಮ್ಮ ಕನಸುಗಳೊಂದಿಗೆ ಹೋರಾಡಿ ಮತ್ತು ಉತ್ತಮ ಮನುಷ್ಯರಾಗಿ

ಶಸ್ಸಿನ ಸೂತ್ರಗಳಲ್ಲಿ ಒಂದು ಕನಸುಗಳು. ಕನಸುಗಳು ನಿಮ್ಮ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಪರಿವರ್ತಿಸುತ್ತದೆ. ನಿಮಗೆ ಸಿಗುವ ಪ್ರತಿ ಅವಕಾಶದಲ್ಲೂ ಕೂಡ ನಿಮ್ಮ ಕನಸನ್ನು ಬೆನ್ನಟ್ಟಿ ಸಾಗಬೇಕು. ಯಾರೊಂದಿಗೋ ಸಣ್ಣಪುಟ್ಟ ಜಗಳ ಮಾಡುತ್ತಾ ಕಾಲಹರಣ ಮಾಡುವ ಬದಲು ನಿಮ್ಮ ಕನಸುಗಳನ್ನು ಸಾಕಾರಗೊಳಿಸುವುದಕ್ಕೆ ನಿಮ್ಮ ಶಕ್ತಿಯ ಪ್ರಯೋಗ ಮಾಡಿ. ನಕಾರಾತ್ಮಕವಾಗಿರುವಾಗ ಧನಾತ್ಮಕ ವಿಚಾರಗಳಿಗೆ ಗಮನ ಹರಿಸುವುದು ಅಷ್ಟು ಸುಲಭದ ವಿಷಯವಲ್ಲ. ಆದರೆ ಹೆಚ್ಚಿನ ಸಂದರ್ಭದಲ್ಲಿ ನಿಮ್ಮನ್ನ ನಿಮ್ಮ ಗುರಿಯಿಂದ ಹಿಂದೆ ಸರಿಯುವಂತೆ ಮಾಡುವುದು ನಿಮ್ಮ ಶಾಂತಿಯ ಕೊರತೆ ನಿಮ್ಮ ಉತ್ತಮ ಶಕ್ತಿಯ ದುರ್ಬಳಕೆ. ಯಾವ ದಿನ ಸಣ್ಣಪುಟ್ಟ ಜಗಳವನ್ನು ನೀವು ತ್ಯಜಿಸುತ್ತೀರೋ ಆ ದಿನವೇ ನಿಮ್ಮ ಯಶಸ್ಸಿನ ಹಾದಿ ಪ್ರಾರಂಭವಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ.

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಗಂಡ-ಹೆಂಡತಿ ಬೇರೆ-ಬೇರೆ ಶಿಫ್ಟ್‌ನಲ್ಲಿ ಕೆಲಸ ಮಾಡ್ತಿದೀರಾ? ಹಾಗಾದ್ರೆ ಸಂಬಂಧದ ಉಳಿವಿಗಾಗಿ ಈ ಟಿಪ್ಸ್ ಫಾಲೋ ಮಾಡಿ

Mon Nov 11 , 2019
Source Credit Kannada.boldsky.com Pin it Email https://nirantharanews.com/%e0%b2%b8%e0%b2%a3%e0%b3%8d%e0%b2%a3-%e0%b2%ae%e0%b2%a8%e0%b2%b8%e0%b3%8d%e0%b2%b8%e0%b2%bf%e0%b2%a8-%e0%b2%a8%e0%b2%95%e0%b2%be%e0%b2%b0%e0%b2%be%e0%b2%a4%e0%b3%8d%e0%b2%ae%e0%b2%95-%e0%b2%b5/#cmVsYXRpb25zaGl 1. ನಿಮ್ಮ ಕುಟುಂಬಕ್ಕೆ ಸಮಯವನ್ನು ಮೀಸಲಿಡಿ ದಿನದ 24 ಗಂಟೆಯೂ ಕೆಲಸ, ಬಡ್ತಿ ಅಂತ ತಲೆ ಕೆಡಿಸಿಕೊಳ್ಳದೆ ಸಂಗಾತಿಗಾಗಿ ಸಮಯವನ್ನು ಮೀಸಲಿಡಿ. ಬೇರೆ-ಬೇರೆ ಶಿಫ್ಟ್‌ನಲ್ಲಿದ್ದಾಗ ಸಮಯ ಸಿಗುವುದಿಲ್ಲ, ಆದ್ದರಿಂದ ಸಿಕ್ಕ ಸಮಯವನ್ನು ಒಳ್ಳೆಯ ರೀತಿಯಲ್ಲಿ ಕಳೆಯಿರಿ. ಇಬ್ಬರು ಸೇರಿ ಔಟಿಂಗ್‌ ಹೋಗುವುದು, ಇಲ್ಲಾ ಮನೆಯಲ್ಲೇ ಒಳ್ಳೆಯ ಅಡುಗೆ ಮಾಡಿ ಸವಿಯುವುದು, ಇಬ್ಬರು ಜತೆಯಲ್ಲಿ ಕುಳಿತು ರೊಮ್ಯಾಂಟಿಕ್‌ ಸಂಗೀತ ಕೇಳುವುದು, ಸಿನಿಮಾ ನೋಡುವುದು ಹೀಗೆ ನಿಮಗೆ ಯಾವುದು ಖುಷಿಯಾಗುತ್ತೋ ಅದನ್ನು ಮಾಡಿ. ಇನ್ನು ಒಂದು ವಿಷಯ, […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links