Karnataka
oi-Manjunath Bhadrashetti
ಬೆಂಗಳೂರು, ಡಿಸೆಂಬರ್ 4; ಇತ್ತೀಚೆಗೆ ಸಿದ್ದರಾಮಯ್ಯ ಅವರು ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾಷಣ ಮಾಡುವಾಗ ವ್ಯಕ್ತಿಯೊಬ್ಬ ಕುಡಿದು ಆಡಿದ ಮಾತು ಇದೀಗ ವಾಟ್ಸಪ್, ಫೇಸಬುಕ್ ಹಾಗೂ ಟಿಕ್ ಟಾಕ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಹೌದು, ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡುವಾಗ ‘ಇಂದಿರಾಗಾಂಧಿ ಏನು ಮಾಡಿದರು? ಇಡೀ ದೇಶಕ್ಕಾಗಿ ಪ್ರಾಣ ಕೊಡಲಿಲ್ಲವೇ’ ಎಂದರು. ಮಾತಿನ ನಡುವೆಯೇ ಬಹಿರಂಗ ಸಭೆಯ ಮುಂದೆ ಕುಳಿತು ಭಾರೀ ಉತ್ಸಾಹದಿಂದ ಸಿದ್ದರಾಮಯ್ಯ ಅವರ ಮಾತು ಕೇಳುತ್ತಿದ್ದ ವ್ಯಕ್ತಿಯೊಬ್ಬ ಸಿದ್ದರಾಮಯ್ಯರಿಗೆ ಹುರಿದುಂಬಿಸಿಲು ‘ಹೌದ್ ಹುಲಿಯ’ ಎಂದು ಪಕ್ಕಾ ಉತ್ತರ ಕರ್ನಾಕಟ ಜವಾರಿ ಭಾಷೆಯಲ್ಲಿ ಮಾತು ಬಿಗದಿದ್ದಾನೆ.
‘ಹೌದ್ ಹುಲಿಯ’ ಡೈಲಾಗ್ ಕೇಳಿಸಿಕೊಂಡ ಸಭಿಕರು ಗೊಳ್ಳೆಂದು ನಕ್ಕಿದ್ದಾರೆ. ಇದರಿಂದ ವಿಚಲಿತರಾದ ಸಿದ್ದರಾಮ್ಯ ಅವರು ‘ಯೇ ಯಾರಯ್ಯ ಕಳಸ್ರೀ ಆಚೆ, ಬೆಳಿಗ್ಗೆ ಬೆಳಿಗ್ಗೆನೇ ಕುಡಕೊಂಡ ಬಂದ ಬಿಟ್ಟಿದಾನಲ್ಲ’ ಎಂದು ತಮ್ಮದೇ ಶೈಲಿಯಲ್ಲಿ ಗದರಿಸಿದ್ದಾರೆ.
ಆದರೆ, ಸಬೆಯಲ್ಲಿದ್ದ ಹಲವರು , ಆ ವ್ಯಕ್ತಿ ಸಿದ್ದರಾಮಯ್ಯ ಅವರ ಮಾತನಾಡಲು ಪ್ರೋತ್ಸಾಹ ಕೊಡುತ್ತಿದ್ದ, ಆದರೆ, ಸಿದ್ದರಾಮಯ್ಯ ಅವರು ಅಪಾರ್ಥ ಮಾಡಿಕೊಂಡು ತಾಳ್ಮೆ ಕಳೆದುಕೊಂಡರು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಆ ವ್ಯಕ್ತಿ ಆಡಿದ ಹೌದ್ ಹುಲಿಯ ಡೈಲಾಗ್ ಸಕತ್ ವೈರಲ್ ಆಗಿ ಬಿಟ್ಟಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.
Allow Notifications
You have already subscribed