ಸಂಭಾವನೆ ವಿಚಾರದಲ್ಲಿ ವಿಜಯ್ ಪ್ರಕಾಶ್ ರನ್ನ ಮೀರಿಸಿದ್ರಾ ಶಿಷ್ಯ ಸಂಚಿತ್ ಹೆಗ್ಡೆ? ಅಸಲಿ ಕತೆ ಇಲ್ಲಿದೆ ನೋಡಿ..

Source Credit RJ News Kannada

ಸಂಚಿತ್ ಹೆಗ್ಡೆ ಸದ್ಯ ಸ್ಯಾಂಡಲ್ವುಡ್ ನ ಬಹುಬೇಡಿಕೆಯ ಗಾಯಕ.. ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆಯ ಮೂಲಕ ಜನರ ಮನಗೆದ್ದ ಸಂಚಿತ್ ಇದೀಗ ಸಂಭಾವನೆಯ ವಿಚಾರದಲ್ಲಿಯೂ ಸದ್ದು ಮಾಡುತ್ತಿದ್ದಾರೆ..

ಹೌದು ಕಳೆದ ವರ್ಷ ಅತಿ ಹೆಚ್ಚು ಅಂದರೆ 30ಕ್ಕೂ ಹೆಚ್ಚು ಹಾಡು ಹಾಡಿರುವ ಸಂಚಿತ್ ಹೆಗ್ಡೆ ಬಹಳ ಬ್ಯುಸಿ ಆಗಿರುವ ಗಾಯಕ.. ಇವರು ನಮ್ಮ ಸಿನಿಮಾಗೆ ಹಾಡಲಿಲ್ಲ ಅಂತ ಕಳೆದವರ್ಷ ಒಂದು ಸಿನಿಮಾದ ನಿರ್ಮಾಪಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಹಾಕಿದ್ದೂ ಇದೆ..

ಇನ್ನು ಸದ್ಯ ಸಂಭಾವನೆ ವಿಚಾರದಲ್ಲಿ ಸಂಚಿತ್ ಅವರು ವಿಜಯ್ ಪ್ರಕಾಶ್ ರನ್ನೇ ಮೀರಿಸಿದ್ದಾರಾ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಆದರೆ ಅಸಲಿ ಕತೆ ಬೇರೇನೆ ಇದೆ..

ಹೌದು ಸ್ಯಾಂಡಲ್ವುಡ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಗಾಯನದಲ್ಲಿ ಒಂದು ರೀತಿಯ ಬ್ರ್ಯಾಂಡ್ ಎಂದರೆ ಅದು ವಿಜಯ್ ಪ್ರಕಾಶ್ ಅವರು.. ಸ್ಟಾರ್ ನಟರ ಸಿನಿಮಾದಲ್ಲಿ ವಿಜಯ್ ಪ್ರಕಾಶ್ ಅವರು ಹಾಡಲೇ ಬೇಕು.. ಇವರ ಬಳಿ ಹಾಡಿಸಲೆಂದೇ ವಿಶೇಷವಾಗಿ ಹಾಡನ್ನು ಬರೆಸಲಾಗುತ್ತದೆ.. ವಿಜಯ್ ಪ್ರಕಾಶ್ ಅವರು ಹೊಸ ಪ್ರತಿಭೆಗಳ ಸಿನಿಮಾಗಳಿಗೂ ಕೂಡ ಪ್ರೋತ್ಸಾಹ ನೀಡುತ್ತಾರೆ.. ಪ್ರತಿಭಾವಂತರಾಗಿದ್ದು ಒಳ್ಳೆಯ ಸಿನಿಮಾ ಮಾಡಿದ್ದರೆ.. ಅವರಿಗೆ ಪ್ರಚಾರದ ಕೊರತೆ ಇದ್ದರೆ ವಿಜಯ್ ಪ್ರಕಾಶ್ ಅವರು ಪ್ರತಿಭಾವಂತರನ್ನು ಬೆಳೆಸುವ ನಿಟ್ಟಿನಲ್ಲಿ ಆ ಸಿನಿಮಾ ತಂಡಕ್ಕೆ ಹಾಡಿಕೊಡುತ್ತಾರೆ..

ಇನ್ನು ಸಂಚಿತ್ ಹೆಗ್ಡೆ ಸರಿಗಮಪ ಮೂಲಕ ಬೆಳಕಿಗೆ ಬಂದ ಪ್ರತಿಭೆ.. ಶೋ ನಲ್ಲಿ‌ ಗೆಲ್ಲದಿದ್ದರೂ ಸಿನಿಮಾ ರಂಗದಲ್ಲಿ‌ ಕ್ಲಿಕ್ ಆದರು.. ಸಂಚಿತ್ ಹೆಗ್ಡೆ ಜೊತೆಗೆ ಅನೇಕ ಪ್ರತಿಭಾವಂತ ಗಾಯಕರಿಗೆ ಅರ್ಜುನ್ ಜನ್ಯ ಅವರು ಅವಕಾಶ ಕೊಟ್ಟು ಬೆಳೆಸುತ್ತಿದ್ದಾರೆ..

ಇನ್ನು ಸಂಭಾವನೆ ವಿಚಾರಕ್ಕೆ ಬಂದರೆ ಸಂಚಿತ್ ಹಾಗೂ ವಿಜಯ್ ಪ್ರಕಾಶ್ ಅವರ ಸಂಭಾವನೆಗೆ ಅಜಗಜಾಂತರ ವ್ಯತ್ಯಾಸವಿದೆ.. ಬಹಳಷ್ಟು ವರ್ಷಗಳ ಪರಿಶ್ರಮ.. ಹಾಗೂ ವಿಜಯ್ ಪ್ರಕಾಶ್ ಅವರ ದೊಡ್ಡ ಹೆಸರಿಗೆ ತಕ್ಕಂತೆ ಅವರ ಸಂಭಾವನೆ ಒಂದು ಹಾಡಿಗೆ ಒಂದು ಲಕ್ಷ ಎನ್ನಲಾಗುತ್ತದೆ..

ಇನ್ನು ಸಂಚಿತ್ ಹೆಗ್ಡೆ ಅವರ ವಿಚಾರಕ್ಕೆ ಬಂದರೆ ಈಗಿನ್ನು ಸಿನಿಮಾ ರಂಗ ನೋಡುತ್ತಿರುವ ಬೆಳೆಯುತ್ತಿರುವ ಪ್ರತಿಭೆಯಾಗಿರೋದ್ರಿಂದ ಸಾಮಾನ್ಯವಾಗಿ ಇವರ ಸಂಭಾವನೆ ಸಾವಿರಗಳ ಲೆಕ್ಕದಲ್ಲಿಯೇ ಇದೆ.. ಆದರೆ ಕಳೆದ ವರ್ಷ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದು, ಈ ವರ್ಷ ಆಲ್ಬಂ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದ್ದು.. ಇದೇ ಕಾರಣಕ್ಕೆ ಸಿನಿಮಾ ಹಾಡುಗಳನ್ನು ಆಯ್ಕೆ ಮಾಡಿಕೊಂಡು ಹಾಡಲಿದ್ದಾರೆ ಎನ್ನಲಾಗುತ್ತಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ತನಗೆ ದೊಡ್ಡ ಬ್ರೇಕ್ ಕೊಟ್ಟ ಸೂರಿ ಅವರನ್ನ ಯಾವುದಕ್ಕೆ ಹೋಲಿಸಿದ್ದಾರೆ ಗೊತ್ತಾ ಡಾಲಿ ಧನಂಜಯ್..

Tue Feb 11 , 2020
Source Credit RJ News Kannada ಟಗರು ಸಿನಿಮಾ, ಸೂರಿ ಅವರ ನಿರ್ದೇಶನದ ಪವರ್ ಅನ್ನು‌ ಮತ್ತೊಮ್ಮೆ ಸಾಬೀತು ಮಾಡಿದ ಸಿನಿಮಾ.. ಶಿವಣ್ಣ, ಧನಂಜಯ್, ವಸಿಷ್ಠ ಸಿಂಹ ಅವರನ್ನ ಬೇರೆಯದ್ದೇ ಲೆವೆಲ್ ನಲ್ಲಿ ತೋರಿಸಿದ ಸಿನಿಮಾ ಎಂದರೆ ತಪ್ಪಾಗಲಾರದು.. Pin it Email https://nirantharanews.com/%e0%b2%b8%e0%b2%82%e0%b2%ad%e0%b2%be%e0%b2%b5%e0%b2%a8%e0%b3%86-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf%e0%b2%9c%e0%b2%af%e0%b3%8d/#UGhvdG9HcmlkXzE ಟಗರು ನಂತರ ಧನಂಜಯ್.. ಡಾಲಿ ಧನಂಜಯ್ ಆದರು.. ಇನ್ನು ಹಿಂತಿರುಗಿ ನೋಡಿದ್ದೇ ಇಲ್ಲ.. ಇದೀಗ ಮತ್ತೆ ಅದೇ ಡೆಡ್ಲಿ ಕಾಂಬಿನೇಷನ್ ಒಂದಾಗಿದೆ.. ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಮತ್ತೊಮ್ಮೆ ಡಾಲಿ ಧನಂಜಯ್ ಅವರನ್ನ ಫ್ರೆಶ್ ಕಂಟೆಂಟ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links