ಸಂಘಸಂಸ್ಥೆಗಳಿಗೆ ಧನಸಹಾಯ: ಇದಾವ ರೀತಿಯ ಸಂಸ್ಕೃತಿ?

Source Credit Vishwavani.news

ಕೆ.ವಿ.ರಾಧಕೃಷ್ಣ , ಬರಹಗಾರರು, ಬೆಂಗಳೂರು 

ಶ್ರೀರಾಮಚಂದ್ರ ವಿಶ್ವಾಾಮಿತ್ರರೊಡನೆ ಅಯೋಧ್ಯೆೆಗೆ ಮರಳುವಾಗ ಸೀತಾ ಸ್ವಯಂವರಕ್ಕೆೆ ಹೋಗುತ್ತಾನೆ. ಅಲ್ಲಿ ಶಿವಧನಸ್ಸನ್ನು ಹೆದೆಯೇರಿಸುವಾಗ ಬಿಲ್ಲು ಮುರಿದು ಬೀಳುತ್ತದೆ. ಸೀತಾ ಕಲ್ಯಾಾಣದ ಸಂದರ್ಭ-ಜನಕ ಮಹಾರಾಜ ರಾಮನಿಗೆ ಕೈಮುಗಿದು ಶಿವಧನಸ್ಸನ್ನು ಎತ್ತಲು ಸಹ ವೀರಾಧಿವೀರರೇ ತಿಣುಕಾಡುವಾಗ ನೀನೆತ್ತಿ ಹೆದೆಯೇರಿಸಲು ಹೋಗಿ ಬಿಲ್ಲು ಮುರಿದೆ. ನೀನೇ ಅವತಾರ ಪುರುಷ, ದೈವಾಂಶ ಸಂಭೂತ ಎಂದು ಕೈಮುಗಿಯುತ್ತಾಾನೆ. ಆಗ ರಾಮ ಜನಕನಿಗೆ ತಾವು ಕನ್ಯಾಾದಾನ ಮಾಡುತ್ತಿರುವ ಪಿತೃ. ಕೊಡುವವರ ಕೈ ಯಾವಾಗಲೂ ಮೇಲೆ ಎಂದು ಜನಕನಿಗೆ ನಮಿಸುತ್ತಾಾನೆ. ಹೀಗೆ ಕೊಡುಕೊಳ್ಳುವವರ ಮಧ್ಯೆೆ ಪರಸ್ಪರ ಗೌರವ ವಿನಿಮಯ ಆಗುತ್ತದೆ.

ಇಂದು ಸಾಂವಿಧಾನಿಕ ಸರಕಾರಗಳು ರಾಜಪ್ರಭುತ್ವದ ಜಾಗದಲ್ಲಿ ಬಂದು ಕುಳಿತಿವೆ. ಪ್ರಜಾ ಸರಕಾರಗಳಾಗಿವೆ. ಆದರೆ, ಪರಸ್ಪರ ಅದೇ ಗೌರವಭಾವ ಉಳಿದಿದೆಯೇ ಎಂಬ ಪ್ರಶ್ನೆೆ ನಮ್ಮನ್ನು ನಾವೇ ಕೇಳಿಕೊಂಡಾಗ ದೊರೆಯುವುದು ಬಹುತೇಕ ನಕಾರಾತ್ಮಕ ಉತ್ತರವೇ. ಕೆಲವು ಸಂಸ್ಥೆೆಗಳ ಪ್ರತಿನಿಧಿಗಳು ಮತ್ತು ಹಲವು ಗುಂಪುಗಳ ನಾಯಕರು ದಾಂಧಲೆ ಮಾಡಿ ಹಣ ನೀಡಲು ಒತ್ತಾಾಯಿಸುತ್ತಾಾರೆ. ಸರಕಾರಿ ಅಧಿಕಾರಿಗಳು ತಾವು ಈ ಹಣ ಟ್ರಸ್‌ಟ್‌‌ಗಳು ಮಾತ್ರ ಎಂಬುದನ್ನು ಮರೆತು ಮಾಲೀಕರಂತೆ ಅಧಿಕಾರ ಚಲಾಯಿಸುತ್ತಾಾರೆ.

ಕೆಲವು ಸಂದರ್ಭಗಳಲ್ಲಿ ದಲ್ಲಾಾಳಿಗಳು ಮತ್ತು ಅಧಿಕಾರಿಗಳು ಭ್ರಷ್ಟ ಮತ್ತು ದುಷ್ಟ ಒಳಸಂಚಿನಲ್ಲಿ ಹಣ ಲಪಟಾಯಿಸುತ್ತಾಾರೆ. ಇದು ಸಾರಾಸಗಟಾಗಿ ಇಲಾಖೆ ಮತ್ತು ಸಾಂಸ್ಕೃತಿಕ ಲೋಕದ ಮೇಲೆ ಕಪ್ಪುುಚುಕ್ಕೆೆಯಾಗಿ ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತದೆ. ಸಾಂಸ್ಕೃತಿಕ ಆಡಳಿತಕ್ಕೆೆ ಸಹಯೋಗಿಗಳಾಗಿ ಸಾಂಸ್ಕೃತಿಕ ವಾತಾವರಣ ವಿಸ್ತರಣೆ, ತರಬೇತಿ, ಸಾಂಸ್ಕೃತಿಕ ಕಾರ್ಯಕ್ರಮ, ಉತ್ಸವಗಳನ್ನು ಬಡಾವಣೆ ಮಟ್ಟದಲ್ಲಿ ನಡೆಸುವ ಸಹಯೋಗಿಗಳನ್ನು ಗುರುತಿಸಿ ಧನಸಹಾಯ ನೀಡುವ ಮೂಲಕ ಪ್ರೋೋತ್ಸಾಾಹ ಮಾಡುವ ಹಲವು ಯೋಜನೆಗಳು ಕೇಂದ್ರ ಸರಕಾರ ಮತ್ತು ಕರ್ನಾಟಕ ಸರಕಾರದಲ್ಲಿ ಚಾಲನೆಯಲ್ಲಿ ಇದೆ. ಕೇಂದ್ರ ಸರಕಾರವು ಸ್ಯಾಾಲರಿ ಗ್ರ್ಯಾಾಂಟ್, ಪ್ರೊೊಡಕ್ಷನ್ ಗ್ರ್ಯಾಾಂಟ್, ಫೆಲೋಶಿಪ್ ಎಂಬಿತ್ಯಾಾದಿ ಹೆಸರುಗಳಲ್ಲಿ ಧನಸಹಾಯ ನೀಡುತ್ತ ಬಂದರೆ. ರಾಜ್ಯ ಸರಕಾರ ಫೆಲೋಶಿಪ್, ಕಾರ್ಯಕ್ರಮ ಪ್ರಾಾಯೋಜನೆ, ಪ್ರೋೋತ್ಸಾಾಹ ಧನಸಹಾಯ, ಎಂಬಿತ್ಯಾಾದಿ ಛಪ್ಪನ್ನೈವತ್ತಾಾರು ಶೀರ್ಷಿಕೆಗಳಲ್ಲಿ ಕಾಲಕಾಲಕ್ಕೆೆ ಹಣ ನೀಡುತ್ತದೆ.

ಹತ್ತಾಾರು ಸಂಸ್ಥೆೆಗಳಿಗೆ ಪ್ರೋೋತ್ಸಾಾಹಕವಾಗಿ ನೀಡಲು ಆರಂಭಿಸಿದ ಧನಸಹಾಯ ಇಂದು ಕೋಟಿಗಳ ಲೆಕ್ಕಕ್ಕೆೆ ಬಂದು ನಿಂತಿದೆ. ನೀನಾಸಂ ಪರವಾಗಿ ಧನಸಹಾಯ ಪಡೆಯಲು ಬಂದ ಕೆ.ವಿ.ಸುಬ್ಬಣ್ಣ ಅವರು ವರ್ಷಾಂತ್ಯದಲ್ಲಿ ಐದುನೂರು ಚಿಲ್ಲರೆ ರುಪಾಯಿಗಳ ಡಿಡಿ ಹಿಡಿದು ವಾಪಸ್ ಇಲಾಖೆಯ ಮೆಟ್ಟಿಿಲೇರಿದ್ದರು. ಕಾರಣವಿಷ್ಟೆೆ, ಅವರಿಗೆ ನೀಡಲಾಗಿದ್ದ ಹತ್ತು ಸಾವಿರ ರುಪಾಯಿ ಅನುದಾನದಲ್ಲಿ ವೆಚ್ಚಗಳನೆಲ್ಲ ಮಾಡಿದ ಮೇಲೆ ಸುಮಾರು ಐದುನೂರು ಚಿಲ್ಲರೆ ರುಪಾಯಿ ಉಳಿದಿತ್ತು. ಅನುದಾನ ಮಂಜೂರಾತಿ ಷರತ್ತಿಿನಂತೆ ಬಿಡುಗಡೆ ಮಾಡಲಾದ ಅನುದಾನವನ್ನು ಆಯಾ ವರ್ಷದಲ್ಲಿಯೇ ವೆಚ್ಚ ಮಾಡಬೇಕಾಗಿತ್ತು, ಹಾಗೆ ಮಾಡದೆ ಉಳಿದ ಹಣವನ್ನು ಅವರು ಡಿಡಿ ಮಾಡಿಸಿ ಸರಕಾರಕ್ಕೆೆ ಪಾವತಿಸಲು ತಂದಿದ್ದರು. ಇಂತಹ ಅಪರೂಪದ ಪ್ರಕರಣಗಳು ಮತ್ತೆೆ ಮತ್ತೆೆ ಮರುಕಳಿಸದಷ್ಟು ನೈತಿಕ ಅಧಃಪತನಕ್ಕೆೆ ಕಾಲವು ಸಾಕ್ಷಿಯಾಗಿದೆ.

ಈಗ ಹಲವು ಸಂಸ್ಥೆೆಗಳಲ್ಲಿ ಸಹಾಯಧನ ನೀಡಿದ ಹಣವನ್ನು ವೆಚ್ಚವೇ ಮಾಡದೆ ಸಾರಾಸಗಟಾಗಿ ತೆಗೆದು ಇತರ ಉದ್ದೇಶಗಳಿಗೆ ಬಳಕೆಗೆ ಬಳಸಿರುವ ಬಗ್ಗೆೆ ಮಹಾಲೆಕ್ಕ ಪರಿಶೋಧಕರು ವರದಿ ನೀಡಿದ್ದಾರೆ. ಹಲವು ಸಂಸ್ಥೆೆಗಳು ಅನುದಾನ ಪಡೆಯುವ ಸಲುವಾಗಿಯೇ ಹುಟ್ಟಿಿವೆ ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ. ನಿಯಮ ಮೀರಿ ಕೆಲವು ಸಂಸ್ಥೆೆಗಳಿಗೆ ಲಕ್ಷಗಳಿಗೆ ಲಕ್ಷ್ಯವೇ ಇಲ್ಲದಂತೆ ಹಣದ ಹೊಳೆ ಹರಿಸಲಾಗಿದೆ. ಹಣ ಪಡೆಯುವ ಸಂಸ್ಥೆೆಗಳು ನಿಯಮ ಮೀರಿವೆ, ಕಾರ್ಯಕ್ರಮದ ಗುಣಮಟ್ಟ ಸರಿಯಿಲ್ಲ ಎಂಬಿತ್ಯಾಾದಿ ಹಲವು ದೂರುಗಳ ನಡುವೆ ಇಂದಿಗೂ ಶಿಸ್ತಾಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿಿರುವ ಹಲವು ಸಾಂಸ್ಕೃತಿಕ ಸಂಘಟನೆಗಳು ಸರಕಾರ ನೆರವು ಕೊಟ್ಟರೂ, ಕೊಡದಿದ್ದರೂ ಕಾರ್ಯಕ್ರಮಗಳನ್ನು ನಡೆಸುತ್ತಲೇ ಇವೆ. ಮತ್ತು ಹಲವಷ್ಟು ಸಕ್ರಿಿಯ ಸಂಸ್ಥೆೆಗಳಿಗೆ ಸರಕಾರದಲ್ಲಿ ಧನಸಹಾಯ ನೀಡುವ ಯೋಜನೆಯ ಪರಿಚಯವೂ ಇದ್ದಂತಿಲ್ಲ.

ಸರಕಾರವು ಸೆಪ್ಟೆೆಂಬರ್, ಅಕ್ಟೋೋಬರ್ ತಿಂಗಳಿನಲ್ಲಿ ಅರ್ಜಿ ಆಹ್ವಾಾನಿಸಿ, ಅವುಗಳನ್ನು ಡಿಸೆಂಬರ್, ಜನವರಿ ತಿಂಗಳಿನಲ್ಲಿ ಪರಿಶೀಲಿಸಿ, ಧನಸಹಾಯವನ್ನು ಫೆಬ್ರವರಿ ತಿಂಗಳಿನಲ್ಲಿ ಮಂಜೂರು ಮಾಡಿ ಮಾರ್ಚ್ ಒಳಗೆ ವೆಚ್ಚ ಮಾಡಬೇಕೆಂಬ ಷರತ್ತು ಹಾಕಿ ಬಿಡುಗಡೆ ಮಾಡಿದರೆ ಸುಳ್ಳು ಲೆಕ್ಕ, ಕಳ್ಳ ಲೆಕ್ಕ ನೀಡಿಯೇ ಹಲವು ಲೆಕ್ಕ ಪೂರೈಸುತ್ತಾಾರೆ.
ಧನಸಹಾಯ ನೀಡುವಲ್ಲಿ ನಿರಂತರತೆ ಇಲ್ಲ. ಸರಕಾರ ನೀಡುತ್ತಿಿದ್ದ ಧನಸಹಾಯದ ಬಗ್ಗೆೆ ಹಿಂದಿನ ಸರಕಾರಗಳಲ್ಲಿ ಸಚಿವರಾಗಿದ್ದವರೊಬ್ಬರು ತಮ್ಮದೇ ಜಿಲ್ಲೆಯಲ್ಲಿ ರಸ್ತೆೆಗೆ ಹತ್ತು ಸಂಸ್ಥೆೆಗಳಿವೆ, ಅವುಗಳ ಕಾರ್ಯವೈಖರಿ ತಮಗೆ ತಿಳಿದಿದೆ ಎಂದು ಸಾರಾಸಗಟಾಗಿ ಧನಸಹಾಯ ಯೋಜನೆಯನ್ನೇ ರದ್ದುಗೊಳಿಸಿದ್ದರು.

ಈ ವ್ಯವಸ್ಥೆೆಯಲ್ಲಿ ಬಲಿ ಹಾಕಬೇಕಾದ್ದು ಸಾಂಸ್ಕೃತಿಕ ಸಂಘಟನೆಯ ಸೋಗು ಹಾಕಿರುವ ಮಧ್ಯವರ್ತಿಗಳು ಮತ್ತು ದಲ್ಲಾಾಳಿಗಳನ್ನು ಮಾತ್ರ. ನೆಗಡಿ ಬಂದಾಗ ಮೂಗು ಕೊಯ್ಯುವುದು ಪರಿಹಾರವಾಗುವುದಿಲ್ಲ. ಕೆಲವರ ತಪ್ಪಿಿಗೆ ಎಲ್ಲ ಸಂಸ್ಥೆೆಗಳ ಅನುದಾನ ರದ್ದತಿಯು ತಕ್ಷಕ ತನ್ನ ತಂದೆಯನ್ನು ಕೊಂದನೆಂಬ ಕೋಪಕ್ಕೆೆ ಜನಮೇಜಯ ಸರ್ಪಯಾಗವನ್ನೇ ಮಾಡಿ ಸರ್ಪ ಸಂಕುಲವನ್ನೇ ನಾಶ ಮಾಡಲು ಹೊರಟ ಕಥೆ ನೆನಪಾಗುತ್ತದೆ.
ಕೆಲವು ಸಂಸ್ಥೆೆಗಳಲ್ಲಿ ಹೆಸರಿಗೆ ಮಾತ್ರ ಇತರ ಪದಾಧಿಕಾರಿಗಳಿದ್ದು, ಸಂಸ್ಥೆೆಗಳಲ್ಲಿ ಮಾಲೀಕತ್ವದ ಧಂಧೆ ಆಗಿದೆ. ಪ್ರಜಾಪ್ರಭುತ್ವ, ಕಾಲಕಾಲಕ್ಕೆೆ ಹೊಸ ಪದಾಧಿಕಾರಿಗಳು ಬರುವುದೇ ಅಪರೂಪ. ನಿಯಮಾನುಸಾರ ಸಂಘ-ಸಂಸ್ಥೆೆಗಳು ಲೀಗಲ್ ಪರ್ಸನ್ ಸ್ವರೂಪದಲ್ಲಿ ತನ್ನದೇ ಅಸ್ಥಿಿತ್ವ ಹೊಂದಿದ್ದರೂ ಅವುಗಳು ಮಾಲೀಕತ್ವದ ಹಂಗಿನಿಂದ ಹೊರಬರಲಾಗುತ್ತಿಿಲ್ಲ.

ಅಯೋಧ್ಯೆೆಕ್ಕೆೆ ಮೇಲಿನಿಂದ ಹಾರಿಬಂದು ತೆರೆದಿಟ್ಟ ಸಿಹಿಗೆ ಮುತ್ತುವ ನೊಣಗಳಂತೆ ಹಣ ಕಂಡಲ್ಲೆಲ್ಲ ಮುಕ್ಕುವ ದಲ್ಲಾಾಳಿಗಳು ಮತ್ತು ನಿಜ ಸಂಕಲ್ಪದ ಸಾಂಸ್ಕೃತಿಕ ಸಂಘಟನೆಗಳ ಮಧ್ಯೆೆ ವ್ಯತ್ಯಾಾಸವನ್ನು ಗುರುತಿಸಿ ನಿರ್ವಹಿಸಲು ಸಾಧ್ಯವಾದರೆ ಮಾತ್ರ ಅರ್ಹ ಮತ್ತು ಯೋಗ್ಯರಿಗೆ ಸಕಾಲಕ್ಕೆೆ ಧನ ಸಹಾಯಮತ್ತು ಪ್ರೋೋತ್ಸಾಾಹ ದೊರೆತಂತಾಗುತ್ತದೆ.
ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ರಾಜ್ಯ ಪರಿಷತ್ ಕ್ರಿಿಯಾ ಯೋಜನೆಯಲ್ಲಿ ಧನಸಹಾಯ ಸೇರ್ಪಡೆ ಮಾಡಿ ಪರಿಷ್ಕೃತ ಯೋಜನೆಗೆ ಒಪ್ಪಿಿಗೆ ನೀಡಿದೆ. ಇದರಿಂದಾಗಿ ಈಗ ಸಂಸ್ಕೃತಿ ಇಲಾಖೆಯಲ್ಲಿ ಸಾಮಾನ್ಯ ವರ್ಗದ ಸಂಸ್ಥೆೆಗಳಿಗೆ ಧನಸಹಾಯವಿಲ್ಲ. ಆದರೆ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯ ಅಡಿಯಲ್ಲಿ ಬರುವ ಸಂಸ್ಥೆೆಗಳಿಗೆ ಧನಸಹಾಯ ಇದೆ. ಇದು ವರ್ಗ ತಾರತಮ್ಯಕ್ಕೆೆ ಕಾರಣವಾಗಿದ್ದಲ್ಲದೆ ಸಂಸ್ಕೃತಿ ಕ್ಷೇತ್ರದಲ್ಲಿ ಜಾತಿ ಭಾವನೆಯ ಪೋಷಣೆಗೆ ಇಂಬು ನೀಡಿದಂತಾಗುತ್ತಿಿದೆ.

ಧನಸಹಾಯ ಯೋಜನೆಯಲ್ಲಿ ಧನಸಹಾಯ ನೀಡುವ ಯೋಜನೆ ನಿರಂತರವಾಗಿರಬೇಕು, ಸಾಂಸ್ಥಿಿಕವಾಗಿ ಮತ್ತು ಪಾರದರ್ಶಕವಾಗಿ ಇರಬೇಕು. ಧನಸಹಾಯ ಅರ್ಜಿ ಸಲ್ಲಿಕೆ ಅವಧಿಯಲ್ಲಿ ಪ್ರತಿ ಜಿಲ್ಲಾ ಕಚೇರಿಯಲ್ಲಿ ಸಹಾಯಕ ತಾಂತ್ರಿಿಕ ಸಿಬ್ಬಂದಿಗಳು ಅರ್ಜಿ ಸಲ್ಲಿಕೆಯಲ್ಲಿ ಸಾಂಸ್ಕೃತಿಕ ಸಂಸ್ಥೆೆಗಳಿಗೆ ತಾಂತ್ರಿಿಕ ಲೋಪಗಳು ಎದುರಾಗದಂತೆ ಸಹಕರಿಸಬೇಕು. ಅನುದಾನದ ನಿರೀಕ್ಷೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಮಾಡುವ ಸಂಘಟನೆಗಳು ತಾಂತ್ರಿಿಕ ಕಾರಣಗಳಿಗಾಗಿ ಅರ್ಜಿ ತಿರಸ್ಕೃತವಾಗುವ ಅನಿಶ್ಚತತೆಯಲ್ಲಿ ಬಳಲುವಂತೆ ಆಗುವುದಿಲ್ಲ. ಧನಸಹಾಯ ಯೋಜನೆಯ ದತ್ತಾಾಂಶಗಳನ್ನು ಸರಕಾರದ ದತ್ತಾಾಂಶ ಕೇಂದ್ರಗಳಲ್ಲಿ ಸಂಗ್ರಹಿಸಿಟ್ಟು ನಿರ್ವಹಿಸುವ ವ್ಯವಸ್ಥೆೆಯು ಜಾರಿ ಆಗಬೇಕು.

ಸಾಂಸ್ಕೃತಿಕ ಸಂಸ್ಥೆೆಗಳಿಗೆ ಧನಸಹಾಯ ನೀಡಲು ಕೋರಿಕೆ ಅರ್ಜಿಗಳನ್ನು ನವೆಂಬರ್ ವೇಳೆಗೆ ಆಹ್ವಾಾನಿಸಿ, ಡಿಸೆಂಬರ್-ಫೆಬ್ರವರಿ ವೇಳೆಗೆ ಪರಿಶೀಲನೆ ಮುಗಿಸಿ ವರ್ಷಾರಂಭದ ವೇಳೆಗೆ ಧನಸಹಾಯ ಪಡೆಯಲು ಅರ್ಹ ಸಂಸ್ಥೆೆಗಳ ಅಂತಿಮ ಪಟ್ಟಿಿಯನ್ನು ಜಾಲತಾಣಗಳಲ್ಲಿ ಅಧಿಕೃತವಾಗಿ ಘೋಷಿಸಬೇಕು. ಆರ್ಥಿಕ ವರ್ಷದ ಆರಂಭದಲ್ಲಿಯೇ ಅಂದರೆ ಏಪ್ರಿಿಲ್-ಜೂನ್ ತ್ರೈಮಾಸಿಕದ ಮೊದಲ ಕಂತಿನಲ್ಲಿ ಬಿಡುಗಡೆ ಆಗುವ ಅನುದಾನದಲ್ಲಿ ಸಂಸ್ಥೆೆಗಳಿಗೆ ಬಿಡುಗಡೆ ಆದರೆ, ವರ್ಷಪೂರ್ತಿ ಕಾರ್ಯಕ್ರಮ ರೂಪಿಸಿ ಅನುಷ್ಠಾಾನ ಮಾಡಲು ಸಾಧ್ಯವಾಗುತ್ತದೆ.

ಪ್ರಜಾ ಸರಕಾರದ ಅಧಿಕಾರಿಗಳು ರಾಜಸ್ವ ಸಂಪತ್ತಿಿನ ನಿರ್ವಹಣೆ ಜವಾಬ್ದಾಾರಿ ಹೊತ್ತ ಸರಕಾರದ ಸೇವಕರಷ್ಟೆೆ. ಹಣದ ಮಾಲೀಕರಲ್ಲ ಎಂಬ ಜವಾಬ್ದಾಾರಿ ಅವರಲ್ಲಿ ಮೂಡಬೇಕು. ಸಾರ್ವಜನಿಕ ಹಣದ ಪ್ರತಿ ಪೈಸೆಯೂ ಪಾರದರ್ಶಕವಾಗಿ ಸಮಾಜಕ್ಕೆೆ ಸಲ್ಲಬೇಕು ಎಂಬ ಜವಾಬ್ದಾಾರಿ ಪ್ರಜ್ಞೆ ಸಾಂಸ್ಕೃತಿಕ ಸಂಘಟನೆಗಳಲ್ಲಿಯೂ ಮೂಡಿದಾಗ ಮಾತ್ರ ರಾಜ್ಯದ ಸಾಂಸ್ಕೃತಿಕ ಚಟುವಟಿಕೆಗೆ ವೆಚ್ಚ ಮಾಡಿದ ಪ್ರತಿ ಪೈಸೆಯಿಂದ ಸಮಾಜದ ಸಬಲೀಕರಣವಾಗುತ್ತದೆ.

Source Credit Vishwavani.news

Niranthara News

Leave a Reply

Your email address will not be published. Required fields are marked *

Next Post

Brahmachari Review: ಬ್ರಹ್ಮಚಾರಿ.....100 % ಕಾಮಿಡಿ

Wed Dec 4 , 2019
Source Credit Kannada.boldsky.com Pin it Email https://nirantharanews.com/%e0%b2%b8%e0%b2%82%e0%b2%98%e0%b2%b8%e0%b2%82%e0%b2%b8%e0%b3%8d%e0%b2%a5%e0%b3%86%e0%b2%97%e0%b2%b3%e0%b2%bf%e0%b2%97%e0%b3%86-%e0%b2%a7%e0%b2%a8%e0%b2%b8%e0%b2%b9%e0%b2%be%e0%b2%af-%e0%b2%87/#MWJyYW1oYWNoYXJ ಬ್ರಹ್ಮಚಾರಿಯ ಮದುವೆ ಕಥೆ ಅಪ್ಪಟ ಬ್ರಹ್ಮಚಾರಿ ರಾಮು (ಸತೀಶ್ ನೀನಾಸಂ) ಸಂಸಾರಿ ಆಗಲು ಸಿದ್ಧವಾಗ್ತಾನೆ. ಜೀವನದಲ್ಲಿ ಯಾವುದೇ ತಪ್ಪು ಮಾಡದ, ಯಾವುದೇ ಕೆಟ್ಟ ಅಭ್ಯಾಸಗಳು ಇಲ್ಲದ ಸ್ವಚ್ಛ ಮನಸ್ಸಿನ ಸರ್ಕಾರಿ ನೌಕರನಿಗೆ ಹುಡುಗಿ ಹುಡುಕುವುದು, ಇಬ್ಬರು ಸ್ನೇಹಿತರು ಅದಕ್ಕೆ ಬೆಂಬಲವಾಗಿ ನಿಲ್ಲುವುದು ಚಿತ್ರದ ಮೊದಲಾರ್ಧ. ವಾಸ್ತವದಲ್ಲಿ ಇಂತಹ ವ್ಯಕ್ತಿಯೊಬ್ಬ ಇದ್ದರೆ, ಅವನಿಗೆ ಮದುವೆ ಮಾಡಿಸುವುದು ಎಷ್ಟು ಕಷ್ಟ ಎಂದು ಹಾಸ್ಯಾಸ್ಪದವಾಗಿ ತೋರಿಸಲಾಗಿದೆ. ಈ ಸನ್ನಿವೇಶಗಳಲ್ಲಿ ಸತೀಶ್ ನೀನಾಸಂ, ಶಿವರಾಜ್ ಕೆ ಆರ್ ಪೇಟೆ ಮತ್ತು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links