ಶೈನ್ ಶೆಟ್ಟಿ ಸಂಪೂರ್ಣ ಸಾಲ ಮಾಡಿಕೊಂಡಾಗ ಕೈ ಹಿಡಿದಿದ್ದು ಒಂದು ಹೆಣ್ಣು ಮಾತ್ರ.. ಅವರು ಯಾರು ಗೊತ್ತಾ?

Source Credit RJ News Kannada

ಬಿಗ್ ಬಾಸ್ ಮನೆಯಲ್ಲಿ ದಿನಗಳು ಕಳೆದಂತೆ ಕೆಲವರು ಕೆಲ ವಿಶೇಷ ಗುಣಗಳಿಂದ ಇಷ್ಟ ಆಗ್ತಾ ಇದ್ದಾರೆ.. ಆದರೆ ಮೊದಲ ಎರಡು ವಾರಗಳಿಂದಲೂ ಶೈನ್ ಶೆಟ್ಟಿ ಬಹುತೇಕ ಎಲ್ಲರಿಗೂ ಇಷ್ಟವಾದರು.. ಅದೇ ಕಾರಣಕ್ಕೆ ಶೈನ್ ಶೆಟ್ಟಿ ನಾಮಿನೇಟ್ ಆದ ಬಹಳಷ್ಟು ವಾರ ಅತಿ ಹೆಚ್ಚು ವೋಟ್ ಪಡೆದು ಸೇವ್ ಆದರು..

ಇನ್ನು ಶೈನ್ ಶೆಟ್ಟಿ ತಾವೇ ಹೇಳಿದಂತೆ ಅವರು ಫುಡ್ ಟ್ರಕ್ ಒಂದನ್ನು ನಡೆಸುತ್ತಿದ್ದಾರೆ.. ಧಾರಾವಾಹಿಯಲ್ಲಿ ಸ್ಟಾರ್ ಆಗಿ ಮಿಂಚಿದ ಒಬ್ಬ ನಟ ಸೌಟ್ ಹಿಡಿದು ದೋಸೆ ಮಾಡಿದ್ದೂ ಇದೆ.. ಇದಕ್ಕೆ ಕಾರಣ ಅವರೇ ಹೇಳಿಕೊಂಡಂತೆ ಸಾಲಗಳು.. ಇಂತಹ ಪರಿಸ್ಥಿತಿಯಲ್ಲಿದ್ದಾಗ ಇವರ ಕೈ ಹಿಡಿದಿದ್ದು ಒಂದು ಹೆಣ್ಣು.. ಯಾರವರು? ಸಂಪೂರ್ಣವಾಗಿ ಓದಿ..

ಹೌದು ಮೀರಾ ಮಾಧವ ಧಾರಾವಾಹಿ ಆ ಕಾಲದಲ್ಲಿ ಕಿರುತೆರೆಯಲ್ಲೇ ಅತ್ಯಂತ ಹೆಚ್ಚು ಜನಪ್ರಿಯವಾದ ಧಾರಾವಾಹಿಯಾಗಿತ್ತು.. ತುಂಬಾ ದೊಡ್ಡ ಹೆಸರನ್ನು ಶೈನ್ ಅವರಿಗೆ ತಂದುಕೊಟ್ಟಿತ್ತು.. ಆನಂತರ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದನ್ ಪಾತ್ರದಲ್ಲಿ ಕಾಣಿಸಿಕೊಂಡರು..

ಒಮ್ಮೊಮ್ಮೆ ತಿಂಗಳಿಗೆ 30 ದಿನವೂ ಬ್ಯುಸಿ ಆಗಿದ್ದ ಶೈನ್ ಗೆ ಕೈತುಂಬಾ ಸಂಪಾದನೆ ಇತ್ತು.. ಬೆಂಗಳೂರಿನಲ್ಲಿ ಒಳ್ಳೆಯ ಜೀವನ ನಡೆಸುತ್ತಿದ್ದರು.. ಇವರಿಗೆ ಕೈತುಂಬಾ ಸಂಪಾದನೆ ಇದ್ದಾಗ ಶೈನ್ ಅವರಿಗೆ ತುಂಬಾ ಸ್ನೇಹಿತರಿದ್ದರು.. ಚೆನ್ನಾಗಿ ಪಬ್ಬು ಅದು ಇದು ಅಂತ ಮಜಾ ಮಾಡಿದ್ರು.. ಎಲ್ಲೆಲ್ಲಿ ಸುತ್ತಬೇಕೋ ಎಲ್ಲಾ ಕಡೆಯೂ ಸ್ನೇಹಿತರೊಂದಿಗೆ ಸುತ್ತಾಡಿದ್ರು.. ಹೀಗೆ ಜೀವನ ಸಾಗುತಿತ್ತು..

ಆದರೆ ಸಿನಿಮಾದ ಕನಸು ಶೈನ್ ಅವರ ತಲೆಯಲ್ಲಿ ಬಂದಾಗ ಎಲ್ಲವೂ ಏರು ಪೇರಾಗಿ ಹೋಯಿತು.. ಆಗಲೇ ಧಾರಾವಾಹಿ ಬಿಡುವ ನಿರ್ಧಾರಕ್ಕೆ ಬಂದರು.. ಧಾರಾವಾಹಿ ಬಿಟ್ಟ ನಂತರ ಕೆಲವೇ ದಿನಗಳಲ್ಲಿ ಶೈನ್ ಅವರ ಕೈ ಖಾಲಿಯಾಯಿತು.. ಸಂಪಾದನೆ ಮಾಡುತ್ತಿದ್ದಾಗ ಸೇವಿಂಗ್ಸ್ ಅಂತ ಶೈನ್ ಏನನ್ನೂ ಕೂಡಿಡಲಿಲ್ಲ..

ಕೈ ಬರಿದಾಗುತ್ತಿದ್ದಂತೆ ಶೈನ್ ಹತ್ತಿರ ಇದ್ದ ಸ್ನೇಹಿತರೂ ಕೂಡ ಖಾಲಿಯಾದರು.. ಕೊನೆಗೆ ಏನೂ ಇಲ್ಲದೆ ಒಬ್ಬಂಟಿಯಾಗಿ ನಿಂತರು.. ಸಾಲಗಳು ಹೆಚ್ಚಾದವು.. ಆ ಸಮಯದಲ್ಲಿ ರಸ್ತೆ ಬದಿಯಲ್ಲಿ ಎಗ್ ರೈಸ್ ತಿನ್ನುವಾಗ ತಲೆಯಲ್ಲೊಂದು ಆಲೋಚನೆ.. ಸಿನಿಮಾ ಮಾಡುವ ವರೆಗೂ ಜೀವನ ನಡೆಸಲು, ಸಾಲಗಳನ್ನು ತೀರಿಸಲು ಫುಡ್ ಟ್ರಕ್ ಮಾಡಬೇಕು ಎನ್ನವ ಯೋಜನೆ ಬಂತು..

ಆದರೆ ಅದಕ್ಕೆ ಹಣ ನೀಡೋರು ಯಾರು? ಆ ಸಮಯದಲ್ಲಿ ಶೈನ್ ಭುಜವನ್ನು ಹಿಡಿದಿದ್ದು ಒಂದು ಹೆಣ್ಣು.. ಹೌದು ಅದೇ ಹೆಣ್ಣು ಶೈನ್ ಗೆ ಹಣ ಕೊಟ್ಟು ಫುಡ್ ಟ್ರಕ್ ಓಪನ್ ಮಾಡಲು ನೆರವಾದರು.. ಇನ್ನೂ ಹೇಳಬೇಕೆಂದರೆ ಶೈನ್ ಕೈತುಂಬಾ ಸಂಪಾದನೆ ಮಾಡುತ್ತಿದ್ದಾಗ ಈ ಹೆಣ್ಣಿಗೆ ಏನೂ ಕೊಡಲಿಲ್ಲ.. ಆದರೆ ಅವರು ಮಾತ್ರ ಶೈನ್ ಬರಿಗೈ ಆದಾಗ ಕೈಬಿಡಲಿಲ್ಲ..

ಆ ಹೆಣ್ಣು ಮತ್ಯಾರೂ ಅಲ್ಲ.. ಶೈನ್ ಅವರ ತಾಯಿ.. ಹೌದು ಮಗ ಚೆನ್ನಾಗಿ ಇದ್ದಾಗ ಅವನಿಂದ ಏನನ್ನೂ ನಿರೀಕ್ಷೆ ಮಾಡದೇ ಅವನು ಚೆನ್ನಾಗಿದ್ದರೆ ಸಾಕು ಎನ್ನುತ್ತಿದ್ದ ತಾಯಿ.. ಮಗ ಈ ಸ್ಥಿತಿಯಲ್ಲಿ ಇರೋದನ್ನು ಹೇಗೆ ತಾನೆ ನೋಡ್ತಾಳೆ.. ಶೈನ್ ಅವರ ಅಪ್ಪನ ಬಳಿ ಮಾತನಾಡಿ ಹಣ ಕೊಡಿಸಿ ಕೊನೆಗೆ ಜೀವನದಲ್ಲಿ ಫುಡ್ ಟ್ರಕ್ ಮೂಲಕ ಒಂದು ದಾರಿ ಕಂಡುಕೊಳ್ಳಲು ನೆರವಾದರು..

ಇದನ್ನು ಸ್ವತಃ ಶೈನ್ ಅವರೇ ಮನೆಗೆ ಹೋಗುವ ಮುನ್ನ ಕಿಚ್ಚನಿಗೆ ಹೇಳುವಾಗ ಕಣ್ಣಲ್ಲಿ ನೀರು ತುಂಬಿಕೊಂಡರು.. ಈಗಲೂ ಕೂಡ ಶೈನ್ ಬಿಗ್ ಬಾಸ್ ಮನೆಯೊಳಗೆ ಇರುವ ಕಾರಣ ಅವರ ಫುಡ್ ಟ್ರಕ್ ಅನ್ನು ಸ್ವತಃ ಅವರ ತಾಯಿಯೇ ನಡೆಸುಕೊಂಡು ಹೋಗ್ತಿದ್ದಾರೆ.. “ಸಾಕು ಹೊರಗೆ ನೀನು ಪಟ್ಟ ಕಷ್ಟ ಸಾಕು.. ಬಿಗ್ ಬಾಸ್ ಮನೆಯಲ್ಲಿ ಸಂತೋಷವಾಗಿರು” ಎಂದು ಶೈನ್ ತಾಯಿ ಬರೆದ ಪತ್ರದಲ್ಲಿದ್ದ ಮಾತುಗಳು ತಾಯಿ ಪ್ರೀತಿಯ ನೂರು ಅರ್ಥಗಳನ್ನು ನೀಡುತ್ತವೆ..

ಇದ್ದಾಗ ಎಲ್ಲರೂ ಬರುವರು.. ಇಲ್ಲವಾದಾಗ ತಾಯಿ ಬರುವಳು ಎಂಬುದಕ್ಕೆ ಶೈನ್ ನೈಜ್ಯ ಉದಾಹರಣೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲು ಶಿಕ್ಷಣ ಸಚಿವರಿಗೆ ಮನವಿ

Wed Dec 18 , 2019
Source Credit NewsKannada.com MV   ¦    Dec 18, 2019 09:21:51 AM (IST) ಬಂಟ್ವಾಳ: ಸರಕಾರಿ ಶಾಲೆ ಉಳಿಸಿ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ  ಮುಂದಿನ ಶೈಕ್ಷಣಿಕ  ವರ್ಷದಲ್ಲಿ ಹೆಚ್ಚುವರಿಯಾಗಿ ರಾಜ್ಯದಲ್ಲಿ ಒಂದು ಸಾವಿರ  ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನು ಪರಿವರ್ತಿಸುವಂತೆ ಆಗ್ರಹಿಸಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಬಂಟ್ವಾಳದ ಪ್ರವಾಸಿ ಬಂಗಲೆಯಲ್ಲಿ ಸಚಿವರನ್ನು ಭೇಟಿಯಾದ ಪ್ರಕಾಶ್ ಅಂಚನ್ ಈಗಾಗಲೇ ರಾಜ್ಯದಲ್ಲಿ 1 ಸಾವಿರ  […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links