ಶೃಂಗೇರಿಯಲ್ಲಿ ದೇವೇಗೌಡರಿಂದ ಸಹಸ್ರ ಚಂಡಿಕಾ ಯಾಗ: ಪಕ್ಷದ ಬಲವರ್ಧನೆಗೆ ಮುಂದಾದರಾ ಎಚ್ ಡಿಡಿ

Source Credit Oneindia.com

Chikkamagaluru

oi-Chetan BP

By ಚಿಕ್ಕಮಗಳೂರು ಪ್ರತಿನಿಧಿ

|

ಚಿಕ್ಕಮಗಳೂರು, ಜನವರಿ 17: ಸತತ ಸೋಲು ಕಂಡ ನಂತರ ರಾಜಕೀಯವಾಗಿ ಪಕ್ಷದ ಬಲವರ್ಧನೆ, ರಾಜಕೀಯ ಭವಿಷ್ಯ, ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಶಕ್ತಿ ದೇವತೆ ಶೃಂಗೇರಿ ಶಾರದೆಯ ಮೊರೆ ಹೋಗಿದ್ದಾರೆ ಎಚ್ ಡಿ ದೇವೇಗೌಡರು. ನಿನ್ನೆ ಗುರುವಾರವೇ ಪತ್ನಿ ಚನ್ನಮ್ಮ ಅವರೊಂದಿಗೆ ಶೃಂಗೇರಿಗೆ ಆಗಮಿಸಿರುವ ದೇವೇಗೌಡರು ಹಲವು ಹೋಮ ಹವನಗಳನ್ನು ನೆರವೇರಿಸಲಿದ್ದಾರೆ.

ಜನವರಿ 21, ಮಂಗಳವಾರದವರೆಗೂ ಇಲ್ಲೇ ವಾಸ್ತವ್ಯ ಹೂಡಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಸ್ಥರಿಂದ ಸಹಸ್ರ ಚಂಡಿಕಾ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ಸಂಕ್ರಾಂತಿಯ ಮರುದಿನವೇ ಶೃಂಗೇರಿಗೆ ಆಗಮಿಸಿದ ಗೌಡರು, ಭಾರತಿ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಶಾರದಾಂಬೆ ಸನ್ನಿಧಿಯಲ್ಲಿ ಇಂದಿನಿಂದ 5 ದಿನಗಳ ಕಾಲ ಹೋಮ ಹವನ ನಡೆಯಲಿದೆ. ಇಂದು ಬೆಳಿಗ್ಗೆ ದೇಗುಲದ ಯಾಗ ಮಂಟಪದಲ್ಲಿ ಗಣಪತಿ ಹೋಮದ ಮೂಲಕ ಯಾಗಕ್ಕೆ ಸಂಕಲ್ಪ ನೆರವೇರಿಸಿದ್ದಾರೆ. ಮಂಗಳವಾರ ಯಾಗದ ಪೂರ್ಣಾಹುತಿ ಆಗಲಿದೆ.

10 ಋತ್ವಿಜಯರಿಂದ ಸಹಸ್ರ ಚಂಡಿಯಾಗ ನಡೆಯಲಿದ್ದು, 5ನೇ ದಿನ ದೇವೇಗೌಡರ ಕುಟುಂಬಸ್ಥರೆಲ್ಲರೂ ಪೂರ್ಣಹುತಿಯಲ್ಲಿ ಭಾಗಿಯಾಗುವರೆಂದು ತಿಳಿದುಬಂದಿದೆ. ದೇವೇಗೌಡರು ಮತ್ತೊಮ್ಮೆ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ, ಈ ಹಿನ್ನೆಲೆ ಜೆಡಿಎಸ್ ಬಲವರ್ಧನೆಗೆ ಗೌಡರು ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಹೋಮ ಹವನ, ಯಾಗ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಇನ್ನೂ ಐದಾರು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ ಸೇಠ್!

Fri Jan 17 , 2020
Source Credit Oneindia.com Pin it Email https://nirantharanews.com/%e0%b2%b6%e0%b3%83%e0%b2%82%e0%b2%97%e0%b3%87%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%a6%e0%b3%87%e0%b2%b5%e0%b3%87%e0%b2%97%e0%b3%8c%e0%b2%a1%e0%b2%b0%e0%b2%bf%e0%b2%82/#Wg== Karnataka oi-Anil Basur | Updated: Thursday, January 16, 2020, 19:38 [IST] ಬೆಂಗಳೂರು, ಜ. 16: ಮಾಜಿ ಸಚಿವ ತನ್ವೀರ್ ಸೇಠ್ ಅವರು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಪತ್ರ ಬರೆದು ಧನ್ಯವಾದ ಹೇಳಿದ್ದಾರೆ. ಎರಡು ತಿಂಗಳುಗಳ ಹಿಂದೆ ದುಷ್ಕರ್ಮಿಯ ಕೊಲೆ ಯತ್ನದಿಂದ ಜೀವನ್ಮರಣ ಹೋರಾಟ ನಡೆಸಿದ್ದ ತನ್ವೀರ್ ಸೇಠ್ ಇದೀಗ ಸುಧಾರಿಸಿಕೊಳ್ಳುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಪತ್ರ ಬರೆದಿದ್ದಾರೆ. ದುರ್ಘಟನೆಯಲ್ಲಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಸಚಿವ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links