ಶಾಸಕರ ರಾಜೀನಾಮೆ ಕೊಡಿಸಿದವರಲ್ಲಿ ನಾನೂ ಒಬ್ಬ: ಎಸ್‌.ಎಂ.ಕೃಷ್ಣ

Source Credit Oneindia.com

Chikkaballapur

oi-Manjunatha C

|

ಚಿಕ್ಕಬಳ್ಳಾಪುರ, ನವೆಂಬರ್ 26: ಹದಿನೇಳು ಜನ ಶಾಸಕರು ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರ ಬೀಳಿಸಿ, ಬಿಜೆಪಿ ಸರ್ಕಾರ ರಚನೆ ಮಾಡಿ ಈಗ ಆ ಶಾಸಕರೆಲ್ಲಾ ಬಿಜೆಪಿ ಸೇರಿಯಾಗಿದೆ. ಆದರೆ ಆ ಹದಿನೇಳು ಶಾಸಕರಿಂದ ರಾಜೀನಾಮೆ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವರ ಹೆಸರುಗಳು ಒಂದಾದೊಂದಾಗಿ ಹೊರಬರುತ್ತಿವೆ.

ಆ ಶಾಸಕರು ರಾಜೀನಾಮೆ ನೀಡುವಂತೆ ಪ್ರೇರೇಪಿಸುವಲ್ಲಿ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಸಹ ಒಬ್ಬರಂತೆ! ಹೌದು, ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಇಂದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರ ಪ್ರಚಾರ ಮಾಡಿದ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ‘ಶಾಸಕರು ರಾಜೀನಾಮೆ ಕೊಡಿಸುವಲ್ಲಿ ನಾನೂ ಸಹ ಪಾತ್ರಧಾರಿ’ ಎಂದು ಹೇಳಿದರು.

‘ಸುಧಾಕರ್ ರಾಜೀನಾಮೆ ಬಗ್ಗೆ ಹಲವರು ಏನೇನೋ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಲೆಂದು ಸುಧಾಕರ್ ರಾಜೀನಾಮೆ ಕೊಟ್ಟಿದ್ದಾರೆ, ಶಾಸಕರ ರಾಜೀನಾಮೆ ಕೊಡಲು ಪ್ರೇರೇಪಿಸಿದವರಲ್ಲಿ ನಾನೂ ಒಬ್ಬ, ಯಡಿಯೂರಪ್ಪ ಸಿಎಂ ಆಗಿದ್ದು ಸಂತಸ ತಂದಿದೆ’ ಎಂದರು.

‘ಅನಿಷ್ಟ ಸರ್ಕಾರ ನಿರ್ಮಾಣ ಆಗಿ ಎರಡೂ ಪಕ್ಷಗಳ ವಾಚಾನುಗೋಚರ ದ್ವೇಷ ಮಾಡುತ್ತಿದ್ದರು ಅಹೋರಾತ್ರಿ ಸರ್ಕಾರ ಮಾಡಲು ಹೊರಟಿದ್ದರು. ಮಂತ್ರಿ ಮಂಡಲದಲ್ಲಿ ಒಬ್ಬ ಸಿಎಂ, ಡಿಸಿಎಂ ಮಾಡಿದ್ದರು. ಹೊರಗೆ ಒಬ್ಬ ಸೂಪರ್ ಸಿಎಂ ಬೇರೆ ಮಾಡಿದ್ದರು. ನಿಮಗೆ ಗೊತ್ತಿದೆ ಸೂಪರ್ ಸಿಎಂ ಯಾರೆಂದು?’ ಎಂದು ಸಿದ್ದರಾಮಯ್ಯ ಕಾಲೆಳೆದರು ಎಸ್.ಎಂ.ಕೃಷ್ಣ.

ಮೈತ್ರಿ ಸರ್ಕಾರದಲ್ಲಿ ಆಡಳಿತವೇ ಆಗಲಿಲ್ಲ, ನಿತ್ಯ ಬೆಳಿಗೆದ್ದು ಸರ್ಕಾರ ಉಳಿಸಿಕೊಳ್ಳುವುದೇ ಅವರ ಕೆಲಸವಾಗಿತ್ತು ಎಂದು ಎಸ್‌.ಎಂ.ಕೃಷ್ಣ ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ನಾಪತ್ತೆಯಾದ ಪಿಡಿಒ; ನಾವಳ್ಳಿ ಗ್ರಾಮಸ್ಥರಿಗೆ ಶಾಸಕ ಶಂಕರ ಪಾಟೀಲ್ ಅಭಯ

Tue Nov 26 , 2019
Source Credit Oneindia.com Pin it Email https://nirantharanews.com/%e0%b2%b6%e0%b2%be%e0%b2%b8%e0%b2%95%e0%b2%b0-%e0%b2%b0%e0%b2%be%e0%b2%9c%e0%b3%80%e0%b2%a8%e0%b2%be%e0%b2%ae%e0%b3%86-%e0%b2%95%e0%b3%8a%e0%b2%a1%e0%b2%bf%e0%b2%b8%e0%b2%bf%e0%b2%a6%e0%b2%b5%e0%b2%b0/#Wg== Dharwad oi-Jyothi Devangamath By ಧಾರವಾಡ ಪ್ರತಿನಿಧಿ | Published: Tuesday, November 26, 2019, 18:38 [IST] ಧಾರವಾಡ, ನವೆಂಬರ್ 26: ಅಧಿಕಾರ ಹಸ್ತಾಂತರ ಮಾಡದೆ ಕಳೆದ 40 ದಿನಗಳಿಂದ ನಾಪತ್ತೆಯಾಗಿರುವ ಪಿಡಿಒ ಧೋರಣೆಯಿಂದಾಗಿ ನಾಲ್ಕೈದು ಗ್ರಾಮದ ಜನರು ನಿತ್ಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರ್ಕಾರದ ಯೋಜನೆಗಳು ಜಾರಿಯಾಗಲೂ ತೊಂದರೆಯಾಗಿ, ಗ್ರಾಮಸ್ಥರು ಸರ್ಕಾರಕ್ಕೆ ಶಾಪ ಹಾಕುವಂತಾಗಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಾವಳ್ಳಿ ಗ್ರಾಮ ಪಂಚಾಯತಿ ಪಿಡಿಒ ಎ.ಐ.ಸೈಯದ್ ಅವರು ಅಧಿಕಾರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links