ಶನಿವಾರ ಭಾನುವಾರ ಧಾರಾವಾಹಿ ಇಲ್ಲ ಎಂದು ಬೇಸರ ಪಟ್ಟುಕೊಳ್ಳುವ ಅಭಿಮಾನಿಗಳಿಗೆ ಗುಡ್ ನ್ಯೂಸ್..

Source Credit RJ News Kannada

ಜೊತೆಜೊತೆಯಲಿ ಅಭಿಮಾನಿಗಳು ವೀಕೆಂಡ್ ಬಂದರೆ ಅದ್ಯಾಕೋ ಆಕಾಶವೇ ತಲೆ ಮೇಲೆ ಬಿದ್ದಂತೆ ಕಾಣುತ್ತಾರೆ.. ಇದಕ್ಕೆ ಕಾರಣ ಶನಿವಾರ ಭಾನುವಾರ ಧಾರಾವಾಹಿ ಪ್ರಸಾರ ಆಗೋದಿಲ್ಲ.. ಎರಡು ದಿನ ಧಾರಾವಾಹಿ ನೋಡಲು ಆಗೋದಿಲ್ಲವಲ್ಲ ಎಂಬ ಕಾರಣಕ್ಕೆ..

ಮೂರೇ ತಿಂಗಳಿಗೆ ಮೋಡಿ ಮಾಡಿರುವ ಜೊತೆಜೊತೆಯಲಿ ಧಾರಾವಾಹಿಗೆ ಚಿಕ್ಕ ವಯಸ್ಸಿನಿಂದ ಹಣ್ಣಣ್ಣು ವಯಸ್ಸಾದವರೂ ಕೂಡ ಅಡಿಕ್ಟ್ ಆಗಿರುವುದು ವಿಶೇಷ… ಅನಿರುದ್ಧ್ ಅವರು ಹಾಗೂ ಎಲ್ಲಾ ಕಲಾವಿದರ ಮನೋಜ್ಞ ಅಭಿನಯ.. ಮೇಕಿಂಗ್ ನಲ್ಲಿನ ಶ್ರೀಮಂತಿಕೆ.. ಮನಮುಟ್ಟುವಂತಹ ಸಂಚಿಕೆಗಳು.. ತೆರೆಯ ಹಿಂದಿನ ಎಲ್ಲ ತಂತ್ರಜ್ಞರ ಪರಿಶ್ರಮ.. ಇವೆಲ್ಲವೂ ಧಾರಾವಾಹಿಯ ಸಕ್ಸಸ್ ಗೆ ಕಾರಣ ಎನ್ನಬಹುದು..

ಇದೀಗ ಜೊತೆಜೊತೆಯಲಿ ಅಭಿಮಾನಿಗಳಿ ಜೀ ವಾಹಿನಿ ಗುಡ್ ನ್ಯೂಸ್ ಒಂದನ್ನು ನೀಡಿದೆ.. ಹೌದು ಶನಿವಾರ ಭಾನುವಾರ ಧಾರಾವಾಹಿ ಬರೋದಿಲ್ಲ ಎಂದು ಬೇಸರಿಸಿಕೊಳ್ಳುವ ಅಭಿಮಾನಿಗಳು ಈ ವಾರ ಆ ಬೇಸರವನ್ನು ದೂರ ಇಡಬಹುದಾಗಿದೆ.. ಇದಕ್ಕೆ ಕಾರಣ ನಾಳೆ ಡಿಸೆಂಬರ್ 29 ರಂದು ಜೊತೆಜೊತೆಯಲಿ ಸೀರಿಯಲ್ ಜಾತ್ರೆ ಕಾರ್ಯಕ್ರಮ ಪ್ರಸಾರವಾಗಲಿದೆ..

ಮಧ್ಯಾಹ್ನ 3 ಗಂಟೆಯಿಂದ ಬ್ಯಾಕ್ ಟು ಬ್ಯಾಕ್ ಮನರಂಜನೆ ನೀಡಲಿದೆ.. ಕಳೆದ ವಾರವಷ್ಟೇ ಚಿತ್ರದುರ್ಗದಲ್ಲಿ ನಡೆದ ಜೊತೆಜೊತೆಯಲಿ ಜಾತ್ರೆ ಕಾರ್ಯಕ್ರಮದಲ್ಲಿ ಆರ್ಯವರ್ಧನ್ ಅನು ಜೋಡಿ ಸೇರಿದಂತೆ ಎಲ್ಲಾ ಕಲಾವಿದರು ಪ್ರೇಕ್ಷಕರಿಗಾಗಿ ಹಾಡು ಡ್ಯಾನ್ಸಿನ ಮೂಲಕ ಮನರಂಜನೆಯ ರಸದೌತಣವನ್ನೇ ನೀಡಿದ್ದಾರೆ. ಅಷ್ಟೇ ಅಲ್ಲದೆ ಸಂಪೂರ್ಣ ತಂಡ ಚಿತ್ರದುರ್ಗದ ಕೋಟೆಯನ್ನು ಸುತ್ತಿ ಅಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾದ ಒಂದು ದೃಶ್ಯವನ್ನು ಕೂಡ ಅನಿರುದ್ಧ್ ಅವರು ಮರುಕಳಿಸುವಂತೆ ಮಾಡಿದ್ದಾರೆ..

ಜೊತೆಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಸೀರಿಯಲ್ ಒಂದಕ್ಕೆ ಅಭಿಮಾನಿಗಳು 60 ಅಡಿ ಕಟೌಟ್ ಅನ್ನು ನಿಲ್ಲಿಸಿದ್ದು, ಧಾರಾವಾಹಿ ಮೇಲಿನ ಜನರ ಪ್ರೀತಿಯನ್ನು ತೋರುತ್ತದೆ.. ಈ ಎಲ್ಲಾ ಕಾರ್ಯಕ್ರಮಗಳು ನಾಳೆ ಮಧ್ಯಾಹ್ನ 3 ಕ್ಕೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದ್ದು ನೋಡಿ ಆನಂದಿಸಬಹುದಾಗಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸಂವಿಧಾನಕ್ಕೆ ಧಕ್ಕೆ ತರಲು ಬಿಡಬಾರದು: ಸಸಿಕಾಂತ್ ಸೆಂಥಿಲ್

Sat Dec 28 , 2019
Source Credit NewsKannada.com ಸಂವಿಧಾನಕ್ಕೆ ಧಕ್ಕೆ ತರಲು ಬಿಡಬಾರದು: ಸಸಿಕಾಂತ್ ಸೆಂಥಿಲ್ MV   ¦    Dec 28, 2019 09:56:01 AM (IST) Pin it Email https://nirantharanews.com/%e0%b2%b6%e0%b2%a8%e0%b2%bf%e0%b2%b5%e0%b2%be%e0%b2%b0-%e0%b2%ad%e0%b2%be%e0%b2%a8%e0%b3%81%e0%b2%b5%e0%b2%be%e0%b2%b0-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf/#c2VudGhpbF9ubnJ ಬಂಟ್ವಾಳ: ಜಗತ್ತಿನಲ್ಲಿಯೇ ಅತ್ಯುತ್ತಮ ಸಂವಿಧಾನ ನಮ್ಮದು, ಆದರೆ ಇದರ ಆಶಯಕ್ಕೆ ಮುಳುವಾಗುವಂತಹಾ ಯಾವುದೇ ವಿದ್ಯಮಾನ ನಡೆಯಲು ಅವಕಾಶ ನೀಡಬಾರದು, ಅದಕ್ಕೆ ಅವಕಾಶ ಕೊಟ್ಟರೆ ಅದು ನಮ್ಮ ದೇಶಕ್ಕೆ ಮಾಡುವ ದೊಡ್ಡ ಅಪಮಾನ ಎಂದು ಮಾಜಿ ಐಪಿಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು. ಎನ್ ಸಿ ಹೆಚ್ ಆರ್ ಓ ‌ನ ಬಂಟ್ವಾಳ ತಾಲೂಕು ಘಟಕ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links