ವಿಡಿಯೋ: ವಿಜ್ಞಾನವೋ? ಪವಾಡವೋ? ಉರುಳಿಬಿದ್ದ ಒನಕೆ

Source Credit Oneindia.com

Dharwad

oi-Manjunatha C

|

ಧಾರವಾಡ, ಡಿಸೆಂಬರ್ 26: ಇದೇನು ವಿಜ್ಞಾನವೋ, ಪವಾಡವೋ, ತಟ್ಟೆಯ ಮೇಲೆ ಮೂರು ಗಂಟೆ ಕಾಲ ನೆಟ್ಟಗೆ ನಿಂತಿದ್ದ ಒನಕೆ ಗ್ರಹಣ ಮುಗಿದ ಕೂಡಲೇ ಕೆಳಗೆ ಬಿದ್ದಿದೆ!

ಹೌದು, ಗ್ರಹಣದಿನದಂದು ಒನಕೆಯನ್ನು ತಟ್ಟೆಯ ಮೇಲೆ ನಿಲ್ಲಿಸಿದರೆ ನಿಲ್ಲುತ್ತದೆ ಎಂಬುದು ನಂಬಿಕೆ. ಅದರಂತೆ ಹಲವರು ಈ ಪ್ರಯೋಗ ಗ್ರಹಣ ದಿನವಾದ ಇಂದು ನಡೆಸಿದ್ದಾರೆ. ಪ್ರಯೋಗ ಯಶಸ್ವಿಯೂ ಆಗಿದೆ.

ಧಾರವಾಡ, ಮಂಗಳೂರು, ಕಲಬುರ್ಗಿ, ಮಂಗಳೂರು, ಕರಾವಳಿಯ ಹಲವು ಗ್ರಾಮಗಳು ಇನ್ನೂ ಹಲವು ಕಡೆ ಗ್ರಾಮಗಳಲ್ಲಿ ಜನರು ತಟ್ಟೆಯಲ್ಲಿ ನೀರು ಹಾಕಿ ಅದರಲ್ಲಿ ಒನಕೆ ನಿಲ್ಲಿಸಿದ್ದಾರೆ. ತಟ್ಟೆಯಲ್ಲಿ ಒನಕೆ ನಿಲ್ಲಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಗ್ರಹಣ ದಿನದಂದು ಗ್ರಹಣ ಇರುವಷ್ಟೂ ಹೊತ್ತು ತಟ್ಟೆಯಲ್ಲಿ ಒನಕೆ ನಿಲ್ಲುತ್ತದೆ ಎಂಬುದು ನಂಬಿಕೆ. ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಟ್ಟೆ ಮೇಲೆ ನಿಲ್ಲಿಸಲ್ಪಟ್ಟಿದ್ದ ಒನಕೆ ಗ್ರಹಣ ಮುಗಿಯುವ ಹೊತ್ತಿಗೆ ಮೆಲ್ಲಗೆ ಅಲುಗಾಡಿ ಧುಪ್ಪೆಂದು ನೆಲಕ್ಕೆ ಬಿದ್ದಿದೆ.

ಗ್ರಹಣ ಪ್ರಾಕೃತಿಕ ಘಟನೆಯಷ್ಟೆ ಅದರ ಪರಿಣಾಮ ಭೂಮಿಯ ಮೇಲೆ ಏನೂ ಇರದು ಎಂದು ವಿಜ್ಞಾನಿಗಳು ಬಹುಕಾಲದಿಂದ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ ತಟ್ಟೆಯ ಮೇಲೆ ಒನಕೆ ನಿಲ್ಲುವ, ಗ್ರಹಣ ಸಮಯದ ನಂತರ ಒನಕೆ ತನ್ನಂತಾನೆ ಕೆಳಗೆ ಬಿದ್ದ ವಿದ್ಯಮಾನ ಗ್ರಹಣ ಒಳಗೊಂಡ ಕೌತುಕಗಳನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಗ್ರಹಣಕ್ಕೆ ವೈಜ್ಞಾನಿಕ ಆಯಾಮ ಬಿಟ್ಟು ಬೇರೆಯ ಆಯಾಮಗಳೂ ಇವೆಯೇ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕೊನೆಯದೊಂದು ಮಾತು ಹೇಳಿ ರಶ್ಮಿಕಾಗೆ ಕೈಮುಗಿದ ರಕ್ಷಿತ್ ಶೆಟ್ಟಿ..

Thu Dec 26 , 2019
Source Credit RJ News Kannada ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು ಎಲ್ಲೆಲ್ಲೂ ಶ್ರೀಮನ್ನಾರಯಣನದ್ದೇ ಸೌಂಡ್ ಹೆಚ್ಚಾಗಿದೆ.. ಕನ್ನಡ ಸಿನಿಮಾ ಇಂಡಸ್ಟ್ರಿಯ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿರುವ ಅವನೇ ಶ್ರೀಮನ್ನಾರಾಯಣ ಡಿಸೆಂಬರ್ 27 ರಂದು ಕನ್ನಡದಲ್ಲಿ ಹಾಗೂ ಜನವರಿ ಮೊದಲ ವಾರದಲ್ಲಿ ಮಿಕ್ಕ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ರಕ್ಷಿತ್ ಶೆಟ್ಟಿ ಅವರ ಮೂರು ವರ್ಷದ ಶ್ರಮ ಪ್ರತಿಫಲ ನೀಡುವ ಸಮಯ ಬಂದಿದೆ.. Pin it Email https://nirantharanews.com/%e0%b2%b5%e0%b2%bf%e0%b2%a1%e0%b2%bf%e0%b2%af%e0%b3%8b-%e0%b2%b5%e0%b2%bf%e0%b2%9c%e0%b3%8d%e0%b2%9e%e0%b2%be%e0%b2%a8%e0%b2%b5%e0%b3%8b-%e0%b2%aa%e0%b2%b5%e0%b2%be%e0%b2%a1%e0%b2%b5%e0%b3%8b/#UGhvdG9HcmlkXzE ಈ ಸಮಯದಲ್ಲಿ ರಕ್ಷಿತ್ ಶೆಟ್ಟಿ ಅವರು ರಶ್ಮಿಕಾ ವಿಚಾರಕ್ಕೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links