ವಾರ ಭವಿಷ್ಯ- ನವೆಂಬರ್ 10ರಿಂದ ನವೆಂಬರ್ 16ರ ತನಕ

Source Credit Kannada.boldsky.com

ಮೇಷ: 21 ಮಾರ್ಚ್ – 19 ಏಪ್ರಿಲ್

ಈ ವಾರ ನಿಮ್ಮ ಆರೋಗ್ಯದ ಬಗ್ಗೆ ತುಂಬಾ ಜಾಗರೂಕರಾಗಿರುತ್ತೀರಿ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಜಿಮ್‌ಗೆ ಹೋಗಿ ಅಥವಾ ಮನೆಯಲ್ಲೇ ಪ್ರತಿದಿನ ವ್ಯಾಯಾಮವನ್ನು ಪ್ರಾರಂಭಿಸಬಹುದು, ಇದರಿಂದ ಆರೋಗ್ಯದಲ್ಲಿ ನೀವು ಶೀಘ್ರದಲ್ಲೇ ದೊಡ್ಡ ಸುಧಾರಣೆಯನ್ನು ಕಾಣಬಹುದು. ಹಣದ ದೃಷ್ಟಿಯಿಂದ ಈ ವಾರ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಮೋಜು ಮಾಡಲು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತೀರಿ. ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಿ, ಇಲ್ಲದಿದ್ದರೆ ನಿಮ್ಮ ಯೋಜನೆಗಳಿಗೆ ಅಡ್ಡಿಯಾಗಬಹುದು. ವ್ಯವಹಾರಸ್ಥರು ಈ ವಾರ ದೊಡ್ಡ ವ್ಯವಹಾರವನ್ನು ಪಡೆಯಬಹುದು ಅದು ನಿಮ್ಮ ವ್ಯವಹಾರವನ್ನು ಇನ್ನಷ್ಟು ಬೆಳೆಯುವಂತೆ ಮಾಡುತ್ತದೆ. ಈ ವಾರ ಉದ್ಯೋಗಿಗಳಿಗೆ ತುಂಬಾ ಒಳ್ಳೆಯದಾಗಲಿದೆ. ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೀರಿ,ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ ಮತ್ತು ಅಂತಿಮವಾಗಿ ಅತ್ಯುತ್ತಮವಾದದನ್ನು ನೀಡಲು ಸಾಧ್ಯವಾಗುತ್ತದೆ. ಸಹೋದ್ಯೋಗಿಗಳು ಕಠಿಣ ಪರಿಶ್ರಮವನ್ನೂ ಮೆಚ್ಚುತ್ತಾರೆ. ಈ ಸಮಯದಲ್ಲಿ ಕುಟುಂಬ ಜೀವನದಲ್ಲಿ ಸಣ್ಣ ಸಮಸ್ಯೆಗಳಿರಬಹುದು, ಆದರೆ ಎಲ್ಲವೂ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ.

ಅದೃಷ್ಟ ಬಣ್ಣ: ತಿಳಿ ನೀಲಿ

ಅದೃಷ್ಟ ಸಂಖ್ಯೆ: 27

ಅದೃಷ್ಟ ದಿನ: ಶುಕ್ರವಾರ

ವೃಷಭ: 20 ಏಪ್ರಿಲ್ – 20 ಮೇ

ನಿಮ್ಮ ಕೆಲವು ಪ್ರಯತ್ನಗಳು ಕಳೆದ ವಾರ ವಿಫಲವಾಗಿವೆ, ಆದರೆ ಈ ವಾರ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಸರ್ಕಾರಿ ಉದ್ಯೋಗವನ್ನು ಬಯಸಿದ್ದರೆ ನಿಮಗೆ ಕೆಲವು ಒಳ್ಳೆಯ ಸುದ್ದಿ ಸಿಗಬಹುದು. ವ್ಯಾಪಾರಸ್ಥರು ಈ ವಾರವೂ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಅನೇಕ ಕಾರ್ಯಗಳಿಂದಾಗಿ ನಿಮ್ಮ ಮೇಲೆ ಹೆಚ್ಚಿನ ಒತ್ತಡವಿದ್ದರೂ ನಿಮ್ಮ ಕಠಿಣ ಪರಿಶ್ರಮ ವ್ಯರ್ಥವಾಗುವುದಿಲ್ಲ. ಆರ್ಥಿಕವಾಗಿ ಈ ವಾರ ನೀವು ತುಂಬಾ ಅದೃಷ್ಟಶಾಲಿಯಾಗಿರುತ್ತೀರಿ. ನೀವು ಸುಲಭವಾಗಿ ಹಣವನ್ನು ಸಂಪಾದಿಸಲು ಸಾಧ್ಯವಾಗುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ, ಆದರೆ ಸಾಲ ನೀಡುವುದನ್ನು ತಪ್ಪಿಸಬೇಕು. ಹೊಸ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಲು ಈ ಸಮಯ ಅನುಕೂಲಕರವಾಗಿದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಮನೆಯ ವಾತಾವರಣ ಶಾಂತವಾಗಿರುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಉಳಿಯುತ್ತದೆ. ನೀವು ಅವರ ಸಂಪೂರ್ಣ ಬೆಂಬಲವನ್ನೂ ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಬಹಳ ದೂರ ಪ್ರಯಾಣಿಸಬಹುದು. ಬಹಳ ಸಮಯದ ನಂತರ ಇಬ್ಬರೂ ಒಟ್ಟಿಗೆ ಸ್ವಲ್ಪ ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುತ್ತೀರಿ. ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಲಿ. ನಿಮ್ಮ ಮನೆಯಿಂದ ದೂರವಿದ್ದರೆ ಆರೋಗ್ಯದ ಬಗ್ಗೆ ನೀವು ಚೆನ್ನಾಗಿ ಕಾಳಜಿ ವಹಿಸಬೇಕು.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 4

ಅದೃಷ್ಟ ದಿನ: ಮಂಗಳವಾರ

ಮಿಥುನ: 21 ಮೇ – 20 ಜೂನ್

ನಿಮ್ಮ ಜವಾಬ್ದಾರಿಗಳು ನಿಮಗೆ ಒತ್ತಡವನ್ನು ನೀಡುತ್ತದೆ. ಕೆಲಸ ಮತ್ತು ಕುಟುಂಬವನ್ನು ಸಮತೋಲನಗೊಳಿಸುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಾಕಾಂಕ್ಷಿಗಳು ಈ ವಾರ ಕೆಲವು ಪ್ರಮುಖ ಕಾರ್ಯಗಳನ್ನು ನಿಭಾಯಿಸಬೇಕಾಗಬಹುದು. ಈ ಅವಧಿಯಲ್ಲಿ ಸಣ್ಣದೊಂದು ಅಜಾಗರೂಕತೆಯು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ನಿಮ್ಮ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ಮನಸ್ಸಿನಿಂದ ಪೂರ್ಣಗೊಳಿಸಿ. ವ್ಯಾಪಾರಿಗಳಿಗೆ ಸಾಕಷ್ಟು ಕೆಲಸಗಿಂದ ತುಂಬಾ ಬ್ಯುಸಿ ಇರುವ ಸಾಧ್ಯತೆ ಇದೆ. ಇತ್ತೀಚೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವಾರದ ಆರಂಭದಲ್ಲಿ ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುವುದಿಲ್ಲ ಆದರೆ ಕ್ರಮೇಣ ಪರಿಸ್ಥಿತಿ ಬದಲಾಗುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ. ವ್ಯವಹಾರದಲ್ಲಿ ಪಾಲುದಾರಿಕೆಗೆ ಈ ಸಮಯ ಅನುಕೂಲಕರವಾಗಿದೆ. ಜೀವನ ಸಂಗಾತಿ ನಿಮ್ಮನ್ನು ನಿರ್ಲಕ್ಷಿಸಬಹುದು. ಕೆಲಸದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 24

ಅದೃಷ್ಟ ದಿನ: ಗುರುವಾರ

ಕರ್ಕ: 21 ಜೂನ್ – 22 ಜುಲೈ

ಎಚ್ಚರಿಕೆಯಿಂದ ಯೋಚಿಸಿದ ನಂತರ ನೀವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿರೋಧಿಗಳ ಬಗ್ಗೆ ಎಚ್ಚರವಾಗಿರಿ, ಇವರಿಂದ ದೊಡ್ಡ ನಷ್ಟವನ್ನು ಅನುಭವಿಸಬಹುದು. ಈ ವಾರ ಉದ್ಯೋಗ ಅರಸುವವರಿಗೆ ಸವಾಲುಗಳು ತುಂಬಿರುತ್ತವೆ. ನಿರಂತರ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮದ ಹೊರತಾಗಿಯೂ, ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿಲ್ಲ ಎಂದು ನೀವು ಭಾವಿಸುವಿರಿ. ಪ್ರಸ್ತುತ ಉದ್ಯೋಗದಲ್ಲಿ ನಿಮಗೆ ಸಂತೋಷವಿಲ್ಲದಿದ್ದರೆ, ಹೊಸ ಉದ್ಯೋಗವನ್ನು ಹುಡುಕಲು ಇದು ಉತ್ತಮ ಸಮಯ. ಈ ವಾರ ಆರ್ಥಿಕ ಪರಿಸ್ಥಿತಿ ಕುಸಿಯುವ ನಿರೀಕ್ಷೆಯಿದೆ. ಇತ್ತೀಚೆಗೆ ಹೂಡಿಕೆ ಮಾಡಿದ್ದರೆ ನಿರೀಕ್ಷಿತ ಲಾಭ ಗಳಿಸಲು ಸಾಧ್ಯವಾಗುವುದಿಲ್ಲ, ಇದು ನಿಮ್ಮನ್ನು ನಿರಾಶೆಗೊಳಿಸುತ್ತದೆ. ಇತರರು ಏನು ಹೇಳುತ್ತಾ ಎಂಬುದನ್ನು ಆಧರಿಸಿ ನಿಮ್ಮ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಈ ವಾರ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 7

ಅದೃಷ್ಟ ದಿನ: ಸೋಮವಾರ

ಸಿಂಹ: 23 ಜುಲೈ – 22 ಆಗಸ್ಟ್

ನಿಮ್ಮ ಕೆಲಸವನ್ನು ಪೂರ್ಣವಾಗಿ ಆನಂದಿಸಲು ನಿಮಗೆ ಸಾಧ್ಯವಾಗುತ್ತದೆ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಸಾಧ್ಯವಾದರೆ ಈ ವಾರ ಪ್ರಯಾಣ ಮಾಡುವುದನ್ನು ತಪ್ಪಿಸಿ, ಏಕೆಂದರೆ ಅದು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತದೆ. ವಿವಾಹಿತ ಜೀವನವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುತ್ತದೆ. ಈ ವಾರ ನೀವು ಕೆಲವು ಲಾಭಗಳನ್ನು ಪಡೆಯಬಹುದು, ಅದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುತ್ತದೆ. ನಿಮ್ಮ ಮನೆಗೆ ನೀವು ವಸ್ತುಗಳನ್ನು ಖರೀದಿಸಬಹುದು. ಯಾವುದೇ ರೀತಿಯ ಗಾಸಿಪ್ಗಳ ಭಾಗವಾಗಿರಬೇಡಿ. ಈ ವಾರ ನಿಮ್ಮ ಪೂರ್ವಜರ ಆಸ್ತಿಯ ವಿವಾದದ ಬಗ್ಗೆ ನಕಾರಾತ್ಮಕ ಫಲಿತಾಂಶ ನಿಮ್ಮದಾಗಬಹುದು, ಇದರಿಂದಾಗಿ ಕುಟುಂಬದಲ್ಲಿ ಉದ್ವಿಗ್ನತೆ ಉಂಟಾಗುತ್ತದೆ. ಕುಟುಂಬ ಸದಸ್ಯರ ನಡುವಿನ ವ್ಯತ್ಯಾಸಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಆದಷ್ಟು ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಅವಶ್ಯಕತೆಯಿದೆ. ಸಮಸ್ಯೆಗಳನ್ನು ನಿಮ್ಮ ಹಿರಿಯರೊಂದಿಗೆ ಹಂಚಿಕೊಳ್ಳಿ, ಅವರು ನಿಮಗೆ ಸರಿಯಾದ ಸಮಯದಲ್ಲಿ ಮಾರ್ಗದರ್ಶನ ನೀಡುತ್ತಾರೆ. ಅನಗತ್ಯ ಮಾತುಕತೆಯಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ, ಆದರೆ ಹೊಸದನ್ನು ಕಲಿಯಲು ಪ್ರಯತ್ನಿಸಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 16

ಅದೃಷ್ಟ ದಿನ: ಶನಿವಾರ

ಕನ್ಯಾ: 23 ಆಗಸ್ಟ್ – 22 ಸೆಪ್ಟೆಂಬರ್

ಈ ವಾರ ನೀವು ಎಲ್ಲಾ ಪ್ರಮುಖ ವಿಷಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತೀರಿ, ನಿಮ್ಮ ಪ್ರಯತ್ನವೂ ಸಾಕಷ್ಟು ಮಟ್ಟಿಗೆ ಯಶಸ್ವಿಯಾಗುತ್ತದೆ. ಕೌಟುಂಬಿಕವಾಗಿ ಈ ವಾರ ಸಾಮಾನ್ಯವಾಗಲಿದೆ. ಮನೆಯಲ್ಲಿ ಶಾಂತಿ ಇರುತ್ತದೆ, ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ನೀವು ಪೋಷಕರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ಕಚೇರಿಯಲ್ಲಿ ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮೇಲಧಿಕಾರಿಗಳು ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಆರೋಗ್ಯವು ಉತ್ತಮವಾಗಿರುತ್ತದೆ. ಆರ್ಥಿಕ ವಿಷಯದಲ್ಲಿ ಏರಿಳಿತಗಳನ್ನು ನೋಡುತ್ತೀರಿ, ಆದರೆ ಚಿಂತಿಸಬೇಕಾಗಿಲ್ಲ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಭಿನ್ನಾಭಿಪ್ರಾಯಗಳು ಈ ವಾರ ಇನ್ನಷ್ಟು ಹೆಚ್ಚಾಗಬಹುದು.

ಅದೃಷ್ಟ ಬಣ್ಣ: ತಿಳಿ ಹಳದಿ

ಅದೃಷ್ಟ ಸಂಖ್ಯೆ: 5

ಅದೃಷ್ಟ ದಿನ: ಗುರುವಾರ

ತುಲಾ: 23 ಸೆಪ್ಟೆಂಬರ್ – 22 ಅಕ್ಟೋಬರ್

ಈ ವಾರ ನಿಮ್ಮ ಆತಂಕ ಹೆಚ್ಚಾಗುತ್ತದೆ ಮತ್ತು ಅದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಶಾಂತವಾಗಿರಲು ಪ್ರಯತ್ನಿಸಿ. ಆರ್ಥಿಕ ದೃಷ್ಟಿಯಿಂದ ಈ ವಾರ ಮಿಶ್ರ ಫಲಿತಾಂಶಗಳು ಉಂಟಾಗಬಹುದು. ನಿಮ್ಮ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಸಾಲ ತೆಗೆದುಕೊಳ್ಳಬೇಕಾಗಬಹುದು. ವಾರದ ಮಧ್ಯದಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಈ ಸಮಯದಲ್ಲಿ ನೀವು ಬಾಕಿ ಇರುವ ಹಣವನ್ನು ಪಡೆಯಬಹುದು, ಆದರೆ ನಿಮ್ಮ ಅಗತ್ಯಗಳನ್ನು ಪೂರೈಸಲು ಇದು ಸಾಕಾಗುವುದಿಲ್ಲ. ನಿಮ್ಮ ಪರಿಸ್ಥಿತಿ ಎಷ್ಟೇ ಕಷ್ಟವಾಗಿದ್ದರೂ ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಬೆಂಬಲಿಸುತ್ತಾರೆ. ಅವರ ಸಹಾಯದಿಂದ ನೀವು ಯಾವುದೇ ಪ್ರಮುಖ ಕೆಲಸವನ್ನು ಸಹ ಪೂರ್ಣಗೊಳಿಸಬಹುದು. ಈ ವಾರದಲ್ಲಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರದಿಂದಿರಿ. ನಿಮ್ಮ ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಇರುತ್ತದೆ. ಹೆಚ್ಚು ಕೆಲಸದ ಒತ್ತಡವನ್ನು ತೆಗೆದುಕೊಳ್ಳದಿರುವುದು ಉತ್ತಮ. ಏಕಕಾಲದಲ್ಲಿ ಅನೇಕ ಕೆಲಸಗಳನ್ನು ಮಾಡುವಾಗ ನೀವು ತಪ್ಪುಗಳನ್ನು ಮಾಡಬಹುದು ಎಚ್ಚರ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 28

ಅದೃಷ್ಟ ದಿನ: ಭಾನುವಾರ

ವೃಶ್ಚಿಕ: 23 ಅಕ್ಟೋಬರ್ – 21 ನವೆಂಬರ್

ಈ ವಾರ ನೀವು ಪ್ರತಿ ನಿರ್ಧಾರವನ್ನೂ ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಬೇಕಾಗಿದೆ. ಮೊದಲನೆಯದಾಗಿ ನಿಮ್ಮ ಆಕ್ರಮಣಕಾರಿ ಸ್ವಭಾವವನ್ನು ಕೊಂಚ ಕಡಿಮೆ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ಈ ವಾರ ನೀವು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತೀರಿ. ಬ್ಯಾಂಕಿನೊಂದಿಗೆ ವ್ಯವಹರಿಸುವಾಗ ವಿಶೇಷ ಕಾಳಜಿ ವಹಿಸಿ. ಹಣಕಾಸಿನ ವಿಷಯಗಳಲ್ಲಿ ನಿಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಿ, ಇತರರನ್ನು ಅವಲಂಬಿಸಬೇಡಿ. ಇತರರ ಸಲಹೆಯನ್ನು ಅನುಸರಿಸಿದರೆ ನಷ್ಟವನ್ನು ಎದುರಿಸಬೇಕಾಗುತ್ತದೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿಷಯವು ಈ ವಾರ ಇತ್ಯರ್ಥವಾಗಲಿದೆ, ಅದು ನಿಮಗೆ ಸಾಕಷ್ಟು ಪರಿಹಾರ ನೀಡುತ್ತದೆ. ಮನೆಯಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಮನೆಯ ಹಿರಿಯರ ಪ್ರೀತಿ ಮತ್ತು ಆಶೀರ್ವಾದವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಒಡಹುಟ್ಟಿದವರೊಂದಿಗಿನ ಸಂಬಂಧ ಬಲವಾಗಿರುತ್ತದೆ. ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರೆ ಹಿರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹೆಚ್ಚಿನ ಕೆಲಸದ ಕಾರಣ ಸಂಗಾತಿಯೊಂದಿಗೆ ಸಮಯ ಕಳೆಯಲು ಆಗುವುದಿಲ್ಲ. ಆದಾಗ್ಯೂ ನಿಮ್ಮ ಪರಸ್ಪರ ತಿಳುವಳಿಕೆ ಉತ್ತಮವಾಗಿರುತ್ತದೆ ಮತ್ತು ನಿಮ್ಮ ನಡುವೆ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಆರೋಗ್ಯ ಚೆನ್ನಾಗಿರುತ್ತದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 10

ಅದೃಷ್ಟ ದಿನ: ಮಂಗಳವಾರ

ಧನು: 22 ನವೆಂಬರ್ – 21 ಡಿಸೆಂಬರ್

ಉದ್ಯೋಗ ಅರಸುತ್ತಿರುವವರಿಗೆ ಈ ವಾರ ಒಳ್ಳೆಯ ಸುದ್ದಿ ಸಿಗಬಹುದು. ವಿದೇಶಕ್ಕೆ ಹೋಗಲು ನಿಮಗೆ ಅವಕಾಶ ಸಿಗಬಹುದು. ನೀವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ, ಶೀಘ್ರದಲ್ಲೇ ನಿಮ್ಮ ಸುಂದರ ಭವಿಷ್ಯದ ಕನಸು ಈಡೇರುತ್ತದೆ. ಈ ಸಮಯ ವ್ಯಾಪಾರಿಗಳಿಗೆ ವಿಶೇಷವಾಗಿರುವುದಿಲ್ಲ. ನಿಮ್ಮ ವ್ಯವಹಾರವನ್ನು ವಿದೇಶದಲ್ಲಿ ವಿಸ್ತರಿಸಲು ಬಯಸಿದರೆ ಈ ಸಮಯ ಅನುಕೂಲಕರವಾಗಿಲ್ಲ. ಸರಿಯಾದ ಸಮಯಕ್ಕಾಗಿ ಕಾಯಬೇಕು. ಆದಾಯ ಹೆಚ್ಚಾಗುವ ನಿರೀಕ್ಷೆಯಿದೆ, ಅಲ್ಲದೇ, ಹೊಸ ಆದಾಯದ ಮೂಲವನ್ನು ಪಡೆಯಬಹುದು. ವಾರದ ಮಧ್ಯದಲ್ಲಿ ಖರ್ಚಿನಲ್ಲಿ ಹೆಚ್ಚಳವಾಗಬಹುದು ಮತ್ತು ಈ ಖರ್ಚುಗಳನ್ನು ತಪ್ಪಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಈ ವಾರ ನಿಮ್ಮ ಹಣಕಾಸು ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ದಂಪತಿಗಳಿಗೆ ಸಮಯ ತುಂಬಾ ಕಷ್ಟಕರವಾಗಿರುತ್ತದೆ. ಸಂಗಾತಿಯ ಆರೋಗ್ಯ ಕ್ಷೀಣಿಸುತ್ತಿದ್ದಂತೆ ನಿಮ್ಮ ಚಿಂತೆ ಹೆಚ್ಚಾಗಬಹುದು. ಕೌಟುಂಬಿಕ ಜವಾಬ್ದಾರಿಗಳು ನಿಮ್ಮ ಮೇಲೆ ಒತ್ತಡ ಉಂಟಾಗಬಹುದು.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 35

ಅದೃಷ್ಟ ದಿನ: ಸೋಮವಾರ

ಮಕರ: 22 ಡಿಸೆಂಬರ್ – 19 ಜನವರಿ

ಈ ವಾರ ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ. ನೀವು ಬಯಸಿದರೂ ನಿಮ್ಮ ಕೆಲಸದ ಬಗ್ಗೆ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಮನಸ್ಸು ಪ್ರಕ್ಷುಬ್ಧವಾಗಿರುತ್ತದೆ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಪರಿಸ್ಥಿತಿಯನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುವುದು ಉತ್ತಮ; ಆ ಮೂಲಕ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬಹುದು ಮತ್ತು ಸಮಸ್ಯೆಯನ್ನು ಪರಿಹರಿಸಲಾಗುವುದು. ಪೋಷಕರೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ.

ಈ ವಾರ ಸಂಗಾತಿಯೊಂದಿಗೆ ನೀವು ಸಣ್ಣ ವ್ಯತ್ಯಾಸಗಳನ್ನು ಹೊಂದುವ ಸಾಧ್ಯತೆಯಿದೆ, ಇದು ನಿಮ್ಮ ಸಂಬಂಧದಲ್ಲಿ ಕಹಿ ಉಂಟುಮಾಡುತ್ತದೆ. ಮಕ್ಕಳಿಂದ ಕೆಲವು ತೊಂದರೆ ಎದುರಾಗುವ ಸಾಧ್ಯತೆ ಇದೆ, ಅವರ ಅಸಡ್ಡೆ ವರ್ತನೆ ಕಳವಳಕಾರಿಯಾಗಿರಲಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಅವರಿಗೆ ಮನವರಿಕೆ ಮಾಡಬೇಕಿದೆ. ಕೆಲಸದಲ್ಲಿ ಕಠಿಣ ಸಮಯ ನಿಮ್ಮದಾಗಿದೆ. ಹಿರಿಯರು ಕೆಲವು ಸಮಯದಿಂದ ನಿಮ್ಮ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ, ನೀವು ಅವರಿಗೆ ದೂರು ನೀಡಲು ಅವಕಾಶ ನೀಡದಿರುವುದು ಉತ್ತಮ. ಈ ವಾರ ನಿಮ್ಮ ಆರೋಗ್ಯ ಉತ್ತಮವಾಗಿರುವುದಿಲ್ಲ. ನಿಮಗೆ ಮಧುಮೇಹ ಇದ್ದರೆ ನಿಮ್ಮ ಆರೋಗ್ಯ ಕ್ಷೀಣಿಸುವ ಸಾಧ್ಯತೆಯಿದೆ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 7

ಅದೃಷ್ಟ ದಿನ: ಶುಕ್ರವಾರ

ಕುಂಭ: 20 ಜನವರಿ – 18 ಫೆಬ್ರವರಿ

ಪ್ರೇಮಿಗಳಿಗೆ ಈ ವಾರ ತುಂಬಾ ವಿಶೇಷವಾಗಿದೆ. ಆದರೆ ಈ ಬಗ್ಗೆ ನೀವು ಪ್ರಸ್ತಾಪಿಸಲು ಚಿಂತಿಸುತ್ತಿದ್ದರೆ ಕಾಯುವುದು ಉತ್ತಮ. ಮೊದಲು ಅವರ ಮನಸ್ಸನ್ನು ತಿಳಿದುಕೊಳ್ಳಿ. ವಿವಾಹಿತರಿಗೆ ಈ ವಾರ ಅದ್ಭುತ ಸಮಯವಾಗಿರುತ್ತದೆ. ನಿಮ್ಮ ಪ್ರಿಯತಮೆಯೊಂದಿಗೆ ನೀವು ಹೆಚ್ಚು ಸಮಯ ಕಳೆಯುತ್ತೀರಿ. ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಪ್ರೀತಿ, ಐಕ್ಯತೆ ಮತ್ತು ಪರಸ್ಪರ ಬಂಧವು ಕುಟುಂಬದ ನಡುವೆ ಇರುತ್ತದೆ. ಮನೆಯ ಕಿರಿಯ ಸದಸ್ಯರೊಂದಿಗೆ ಸಾಕಷ್ಟು ಮೋಜು ಮಾಡುತ್ತೀರಿ. ವಾರದ ಮಧ್ಯದಲ್ಲಿ ಕುಟುಂಬದೊಂದಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಈ ವಾರ ಸಾಮಾನ್ಯವಾಗಿರಲಿದೆ. ಅಪೂರ್ಣ ಕಾರ್ಯಗಳನ್ನು ನಿರ್ವಹಿಸಲು ನೀವು ಅತ್ಯುತ್ತಮ ಪ್ರಯತ್ನವನ್ನು ಮಾಡಬೇಕಾಗುತ್ತದೆ, ಇಲ್ಲದಿದ್ದರೆ ಕೆಲಸದ ಹೊರೆ ಹೆಚ್ಚಾಗಬಹುದು. ನಿಮ್ಮ ಆರೋಗ್ಯವು ಸುಧಾರಿಸುವುದರಿಂದ ನೆಮ್ಮದಿ ಇರುತ್ತದೆ. ನಿಮ್ಮನ್ನು ಸದೃಢವಾಗಿಡಲು ಯೋಗ ಮಾಡಬಹುದು.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 25

ಅದೃಷ್ಟ ದಿನ: ಶನಿವಾರ

ಮೀನ: 19 ಫೆಬ್ರವರಿ – 20 ಮಾರ್ಚ್

ಈ ವಾರ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದಾಗಲಿದೆ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಇಚ್ಚಿಸುವವರಿಗೆ ಇದು ಅತ್ಯುತ್ತಮ ಸಮಯ. ಎಲ್ಲವೂ ನಿಮ್ಮ ಪರವಾಗಿಯೇ ಇದೆ ಎಂದು ಕಾಣುತ್ತಿದೆ. ಕೆಲಸದ ಒತ್ತಡದಿಂದಾಗಿ ಅನೇಕ ತಪ್ಪುಗಳನ್ನು ಮಾಡಿರಬಹುದು; ಆದರೆ ನೀವು ಅದರಿಂದ ಕಲಿಯುವಿರಿ. ನಿಮ್ಮ ಕಠಿಣ ಪರಿಶ್ರಮವನ್ನು ನೋಡಿ ನಿಮ್ಮ ಮೇಲಧಿಕಾರಿ ತುಂಬಾ ಪ್ರಭಾವಿತರಾಗುತ್ತಾರೆ. ಆದಾಗ್ಯೂ, ನೀವು ಪ್ರಗತಿಗೆ ಹೆಚ್ಚು ಶ್ರಮಿಸಬೇಕು. ವ್ಯಾಪಾರಿಗಳಿಗೆ ಈ ವಾರ ಬಹಳ ಮುಖ್ಯವಾಗುತ್ತದೆ. ಬಾಕಿ ಇರುವ ಯಾವುದೇ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಫಲಿತಾಂಶ ನಿಮಗೆ ನಿಧಾನವಾಗಿ ಸಿಗಬಹುದು, ಆದರೆ ನಿಮ್ಮನ್ನು ನಂಬಿರಿ, ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಹಣದ ವಿಷಯದಲ್ಲಿ ಈ ವಾರ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ಬಯಸಿದರೆ ನೀವು ಹೊಸದನ್ನು ಯೋಚಿಸಬೇಕಿದೆ. ನಿಮ್ಮ ಜೀವನವನ್ನು ಪೂರ್ಣವಾಗಿ ಆನಂದಿಸುವಿರಿ. ಸಂಗಾತಿಯೊಂದಿಗಿನ ಅನ್ಯೋನ್ಯತೆ ಹೆಚ್ಚಾಗುತ್ತದೆ. ಈ ವಾರ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 9

ಅದೃಷ್ಟ ದಿನ: ಗುರುವಾರ

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಭಾನುವಾರದ ದಿನ ಭವಿಷ್ಯ (10-11-2019)

Sun Nov 10 , 2019
Source Credit Kannada.boldsky.com Pin it Email https://nirantharanews.com/%e0%b2%b5%e0%b2%be%e0%b2%b0-%e0%b2%ad%e0%b2%b5%e0%b2%bf%e0%b2%b7%e0%b3%8d%e0%b2%af-%e0%b2%a8%e0%b2%b5%e0%b3%86%e0%b2%82%e0%b2%ac%e0%b2%b0%e0%b3%8d-10%e0%b2%b0%e0%b2%bf%e0%b2%82%e0%b2%a6-%e0%b2%a8/#MS0xNTczMjk2NjQ ಮೇಷ ರಾಶಿ: 21 ಮಾರ್ಚ್ – 19 ಏಪ್ರಿಲ್ ಇಂದು ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಿ. ಗರ್ಭಿಣಿ ಮಹಿಳೆಯರು ಯಾವುದೇ ರೀತಿಯ ನಿರ್ಲಕ್ಷ್ಯ ಮಾಡುವುದು ಸಲ್ಲದು. ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ನಿಮ್ಮ ಭಾವನೆಗಳನ್ನು ಅವರಿಗೆ ತಿಳಿಸಲು ಇಂದು ಉತ್ತಮ ದಿನ. ಅವರಿಂದ ನಿಮ್ಮ ಪ್ರೇಮಕ್ಕೆ ಹಸಿರು ನಿಶಾನೆ ತೋರುವ ಬಲವಾದ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ಮಕ್ಕಳೊಂದಿಗೆ ಮೋಜಿನ ಸಮಯವನ್ನು ಕಳೆಯುತ್ತೀರಿ ಅದು ನಿಮಗೆ ವಿಶ್ರಾಂತಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links