ವಾಣಿಜ್ಯ ನಗರದಲ್ಲಿ ಮುಚ್ಚುತ್ತಿವೆ ಇಂದಿರಾ ಕ್ಯಾಂಟೀನ್

Source Credit Oneindia.com

Hubballi

oi-Puttappa Koli

|

ಹುಬ್ಬಳ್ಳಿ, ಜನವರಿ 05: ದುಡಿಯುವ ವರ್ಗಕ್ಕೆ ಕಡಿಮೆ ದರದಲ್ಲಿ ಉಪಹಾರ-ಊಟ ನೀಡುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಗಳು ಆರಂಭವಾಗಿದ್ದವು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅನುದಾನದ ಕೊರತೆಯಿಂದ ಒಂದೊಂದಾಗಿ ಬಾಗಿಲು ಹಾಕುತ್ತಿವೆ.

ಹುಬ್ಬಳ್ಳಿಯಲ್ಲಿ ಆರಂಭಗೊಂಡಿದ್ದ 9 ಇಂದಿರಾ ಕ್ಯಾಂಟೀನ್ ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲು ಹಂತದಲ್ಲಿ ಮೂರು ಕ್ಯಾಂಟೀನ್. ನಂತರ ಆರು ಕ್ಯಾಂಟೀನ್ ಗಳನ್ನು ನಿರ್ಮಿಸಲಾಗಿತ್ತು. ಉತ್ತಮ ಸ್ಪಂದನೆಯೂ ಇತ್ತು. ಆದರೆ ಈಗ ಮೂರು ಕ್ಯಾಂಟೀನ್ ಗಳು ಬಾಗಿಲು ಮುಚ್ಚಿವೆ.

ಇಂದಿರಾ ಕ್ಯಾಂಟೀನ್ ನನ್ನು ನಿರ್ವಹಿಸುವ ಸಂಸ್ಥೆಗೆ ಬಾಕಿ ಹಣ ಪಾವತಿ ಮಾಡದಿದ್ದರಿಂದ, ಗುತ್ತಿಗೆ ಪಡೆದಿದ್ದ ಸಂಸ್ಥೆ ಕ್ಯಾಂಟೀನ್ ಸಹವಾಸವೇ ಬೇಡ ಎಂದು ಮುಚ್ಚಲು ಮುಂದಾಗಿದೆ.

ಈ ಹಿಂದೆಯೂ ಕ್ಯಾಂಟಿನ್ ಗಳು ಮುಚ್ಚುವ ಪರಿಸ್ಥಿತಿ ಬಂದಾಗ, ಜಿಲ್ಲಾಡಳಿತ ಹಣ ಬಿಡುಗಡೆ ಮಾಡಿ ಜೀವ ತುಂಬಿತ್ತು. ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದ ಆದಿತ್ಯಾ ಮಯೂರ ರೆಸಾರ್ಟ್ ನವರು ಅನುದಾನಕ್ಕಾಗಿ ಕಾಯುತ್ತಿದ್ದರೂ, ಬಿಡುಗಡೆಯಾಗಲಿಲ್ಲ.

ಒಂದು ವರ್ಷದ ಹಿಂದೆ ಹಣ ಬಿಡುಗಡೆಯಾಗಿದ್ದು ಬಿಟ್ಟರೆ ಮತ್ತೆ ಹಣ ಬಂದಿಲ್ಲ. ಜಿಲ್ಲಾಡಳಿತದಿಂದ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಬಾಕಿ ಅನುದಾನ ಬರಬೇಕಿದೆ.

ಎಲ್ಲೆಲ್ಲಿ ಮುಚ್ಚಿವೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂಬತ್ತು ಇಂದಿರಾ ಕ್ಯಾಂಟೀನ್ ಬರುತ್ತವೆ. ಅದರಲ್ಲಿ ಮೂರು ಕ್ಯಾಂಟೀನ್ ಗಳು ಬಿಲ್ ಬಾಕಿ ಕಾರಣದಿಂದ ಜನವರಿ ಒಂದರಿಂದ ದಾಸೋಹ ನಿಲ್ಲಿಸಿವೆ.

ಎಂ.ಕೃಷ್ಣಾನಗರ, ಸೋನಿಯಾ ಗಾಂಧಿ ನಗರ ಮತ್ತು ಬೆಂಗೇರಿ ಕಿಚನ್ ಪಕ್ಕದಲ್ಲಿರುವ ಕ್ಯಾಂಟೀನ್ ಗಳು ಬಾಗಿಲು ಮುಚ್ಚಿವೆ. ಈ ಮೂರು ಕ್ಯಾಂಟೀನ್ ಗಳಲ್ಲಿ ಸಿಬ್ಬಂದಿ ಕೊರತೆಯೂ ಇತ್ತು, ಜನರೂ ಕೂಡಾ ಕ್ಯಾಂಟೀನ್ ನತ್ತ ಬರಲು ನಿರಾಸಕ್ತಿ ತೋರಿದ್ದರಿಂದ ಬಂದ್ ಮಾಡಲಾಗಿದೆಯಂತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ದೀಪಿಕಾ ಹಾಗೂ ಶೈನ್ ಶೆಟ್ಟಿಗೆ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್..

Sun Jan 5 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7 ರ ಹನ್ನೆರೆಡು ವಾರಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು. ಈ ವಾರ ಮನೆಯಿಂದ ಚಂದನ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ.. Pin it Email https://nirantharanews.com/%e0%b2%b5%e0%b2%be%e0%b2%a3%e0%b2%bf%e0%b2%9c%e0%b3%8d%e0%b2%af-%e0%b2%a8%e0%b2%97%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%81%e0%b2%9a%e0%b3%8d%e0%b2%9a%e0%b3%81%e0%b2%a4/#UGhvdG9HcmlkXzE ಇನ್ನು ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸಾಕಷ್ಟು ಸ್ಪೆಷಲ್ ಸಂಗತಿಗಳು ಈ ವಾರ ನಡೆದವು‌. ಅತಿ ಹೆಚ್ಚು ವೋಟ್ ಪಡೆದು ಚಂದನ್ ಆಚಾರ್ ಮೊದಲು ಸೇಫ್ ಆದರು.. ಇನ್ನು ಈ ವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆಯೂ ಕೂಡ ಚಂದನ್ ಆಚಾರ್ ಗೆ ಲಭಿಸಿತು.. Pin it […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links