ವರಸೆಯಲ್ಲಿ ಅಣ್ಣ-ತಂಗಿ; ಮದುವೆಗೆ ಒಪ್ಪದ್ದಕ್ಕೆ “ಅಶ್ಲೀಲ”ಬ್ಲಾಕ್ ಮೇಲ್

Source Credit Oneindia.com

Hubballi

oi-Jyothi Devangamath

By ಹುಬ್ಬಳ್ಳಿ ಪ್ರತಿನಿಧಿ

|

ಹುಬ್ಬಳ್ಳಿ, ಜನವರಿ 11: ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡದಿದ್ದರೆ ಆಕೆಯೊಂದಿಗಿನ ಖಾಸಗಿ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಕುಟುಂಬವೊಂದಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪಾಂಡಿಚೇರಿ ಮೂಲದ ಬಿಜೆಪಿ ಯುವ ಮುಖಂಡನನ್ನು ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪಾಂಡಿಚೇರಿಯ ಬಿಜೆಪಿಯ ಯುವ ಮುಖಂಡ ರಾಕಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹುಬ್ಬಳ್ಳಿಯ ದೂರದ ಸಂಬಂಧಿಯೊಬ್ಬರ ಮಗಳನ್ನು ಪ್ರೀತಿಸುತ್ತಿದ್ದ. ಆಕೆಯೊಂದಿಗೆ ಹೆಚ್ಚು ಒಡನಾಟ ಹೊಂದಿದ್ದ ರಾಕಿ ಆಕೆಯೊಂದಿಗೆ ಸರಸ ಸಲ್ಲಾಪಗಳಲ್ಲಿ ತೊಡಗಿದ್ದನ್ನು ವೀಡಿಯೋ ಮಾಡಿಕೊಂಡಿದ್ದಾನೆ.

ಯುವತಿಯನ್ನು ಮದುವೆ ಮಾಡಿಕೊಡುವಂತೆ ಅನೇಕ ಬಾರಿ ಆ ಕುಟುಂಬವನ್ನು ಒತ್ತಾಯಿಸಿದ್ದಾನೆ. ವರಸೆಯಲ್ಲಿ ರಾಕಿ ಮತ್ತು ಆ ಯುವತಿ ಅಣ್ಣ-ತಂಗಿ ಆಗಬೇಕಿದ್ದ ಕಾರಣದಿಂದ ವಿವಾಹಕ್ಕೆ ಯುವತಿ ಮನೆಯವರು ನಿರಾಕರಿಸಿದ್ದಾರೆ. ಆದರೆ ಮದುವೆಯಾದರೆ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟುಹಿಡಿದಿದ್ದ ರಾಕಿ ಯುವತಿಯ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಲು ಆರಂಭಿಸಿದ್ದಾನೆ.

ಕೆಲ ವಿಡಿಯೋ ಮತ್ತು ಚಿತ್ರಗಳನ್ನು ಯುವತಿಯ ತಂದೆ ಮೊಬೈಲ್‌ಗೆ ಹರಿಬಿಟ್ಟಿದ್ದಾನೆ. ಅಲ್ಲದೇ, ಹಲವು ವ್ಯಾಟ್ ಆಪ್ ಗ್ರೂಪ್‌ ನಲ್ಲಿಯೂ ವಿಡಿಯೋ ಫೋಟೋಗಳನ್ನು ಹರಿಬಿಟ್ಟಿದ್ದಾನೆ. ಇದರಿಂದ ನೊಂದ ಯುವತಿಯ ತಂದೆ ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಯುವತಿಯ ತಂದೆಯೂ ಪಾಂಡಿಚೇರಿ ಮೂಲದವರಾಗಿದ್ದು, ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದುಳಿದಿದ್ದಾರೆ. ಅವರ ಕುಟುಂಬ ಪಾಂಡಿಚೇರಿಯಲ್ಲಿಯೇ ವಾಸವಾಗಿದ್ದು, ಘಟನೆ ನಂತರ ಇಡೀ ಕುಟುಂಬ ಹುಬ್ಬಳ್ಳಿಗೆ ಬಂದಿದೆ. ರಾಕಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಯುವತಿಯ ತಂದೆ ಮತ್ತು ಕುಟುಂಬಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

"ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ"; ನಗುತ್ತಲೇ ತಿವಿದ ಡಿವಿಎಸ್

Sat Jan 11 , 2020
Source Credit Oneindia.com Pin it Email https://nirantharanews.com/%e0%b2%b5%e0%b2%b0%e0%b2%b8%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%a3%e0%b3%8d%e0%b2%a3-%e0%b2%a4%e0%b2%82%e0%b2%97%e0%b2%bf-%e0%b2%ae%e0%b2%a6%e0%b3%81%e0%b2%b5/#eGdfYXJyb3cuanB Mandya lekhaka-Lavakumar b m | Updated: Saturday, January 11, 2020, 12:52 [IST] ಮಂಡ್ಯ, ಜನವರಿ 11: ರಾಜಕೀಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ. ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿರವರು ಬಿಡುಗಡೆ ಮಾಡಿರುವ ವಿಡಿಯೋ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಿ.ಡಿಗಳು ರಾಜಕೀಯದಲ್ಲಿರುವ ಹಲವರಿಗೆ ತಮ್ಮ ರಾಜಕೀಯದ ಅಸ್ತಿತ್ವದ ಸ್ವತ್ತುಗಳಾಗಿ ಪರಿವರ್ತನೆಯಾಗಿವೆ. ಯಾವುದೋ ಫೇಕ್ ಸಿಡಿಗಳನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links