ರಾಬರ್ಟ್ ಸಿನಿಮಾದಲ್ಲಿ ದರ್ಶನ್ ರ ಭುಜದ ಮೇಲೆ ಕುಳಿತ ಈ ಬಾಲ ನಟ ಯಾರ ಮಗ ಗೊತ್ತಾ?

Source Credit RJ News Kannada

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕ ಸ್ಟಾರ್ ನಟರ ಸಿನಿಮಾಗಳ ಪೋಸ್ಟರ್ ಗಳು, ಟೀಸರ್ ಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಉಡುಗೊರೆ ನೀಡಿದೆ..

ಅದೇ ರೀತಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷೆಯ ಸಿನಿಮಾ ರಾಬರ್ಟ್ ಚಿತ್ರದ ಎರಡನೇ ಲುಕ್ ನ ಮೋಷನ್ ಪೋಸ್ಟರ್ ಇಂದು ಬಿಡುಗಡೆಯಾಗಿದ್ದು, ಎಂದಿನಂತೆ ಡಿ ಬಾಸ್ ಅಭಿಮಾನಿಗಳಿಂದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ..

ಇನ್ನು ಬಿಡುಗಡೆಗೊಂಡಿರುವ ಪೋಸ್ಟರ್ ನಲ್ಲಿ ದರ್ಶನ್ ಅವರು ಆಂಜನೇಯ ಸ್ವಾಮಿಯ ರೂಪದಲ್ಲಿ ಕಾಣಿಸಿಕೊಂಡಿದ್ದು, ಭುಜದ ಮೇಲೆ ಬಾಲ ರಾಮನನ್ನು ಕೂರಿಸಿಕೊಂಡಿದ್ದಾರೆ.. ಇನ್ನು ಪೋಸ್ಟರ್ ನೋಡಿದ ಬಹಿತೇಕರಿಗೆ ಈ ಬಾಲನಟ ಯಾರು ಎನ್ನುವ ಕುತೂಹಲ ಮೂಡಿದೆ.. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ..

ದರ್ಶನ್ ಅವರ ಭುಜದ ಮೇಲೆ ಕುಳಿತಿರುವ ಈ ಬಾಲ ನಟ ಮತ್ಯಾರೂ ಅಲ್ಲ.. ಜಾಹೀರಾತುಗಳಲ್ಲಿ ಹಾಗೂ ಹಿಂದಿ ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ.‌. ಈತನ ಹೆಸರು ಜೇಸನ್.. ಮೂಲತಃ ಬಾಂಬೆಯವನಾಗಿದ್ದು ಈತನಿಗೆ 10 ವರ್ಷ ವಯಸ್ಸು.. ಆದರೆ ನಟನೆ ಮಾತ್ರ ಅದ್ಭುತ ಎನ್ನಲೇಬೇಕು.. ಈತ ಬಾಂಬೆಯ ಉದ್ಯಮಿಯೊಬ್ಬರ ಮಗನಾಗಿದ್ದು, ರಾಬರ್ಟ್ ಸಿನಿಮಾದಲ್ಲಿ ಬಾಲನಟನಿಗಾಗಿ ನಡೆಸಿದ ಆಡಿಷನ್ ನಲ್ಲಿ ಜೇಸನ್ ಪಾಲ್ಗೊಂಡು ಸೆಲೆಕ್ಟ್ ಆಗಿದ್ದಾನೆ..

ಈಗಾಗಲೇ ಶಾರುಕ್ ಖಾನ್, ಅಕ್ಷಯ್ ಕುಮಾರ್ ಅವರೊಂದಿಗೂ ಕೂಡ ಜೇಸನ್ ಅಭಿನಯಿಸಿದ್ದು, ಅನೇಕ ಜಾಹಿರಾತುಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾನೆ.. ರಾಬರ್ಟ್ ಸಿನಿಮಾದಲ್ಲಿ ಬಾಲನಟನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದ್ದ ಕಾರಣ ಈ ಪಾತ್ರಕ್ಕೆ ಆಡಿಷನ್ ಮಾಡಲಾಗಿತ್ತು.. ಜೇಸನ್ ಈ ಆಡಿಷನ್ ನಲ್ಲಿ ಪಾಲ್ಗೊಂಡು ಆಯ್ಕೆಯಾಗಿದ್ದಾನೆ..

ಇನ್ನು ಇಂದು ಬಿಡುಗಡೆಗೊಂಡ ದರ್ಶನ್ ಅವರ ರಾಬರ್ಟ್ ಸಿನಿಮಾದ ಪೋಸ್ಟರ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ್ದು, ಇದೇ ಬೇಸಿಗೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪೋಸ್ಟರ್ ನಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ ಎನ್ನಬಹುದು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮಹಾ ಕ್ಯಾಥೊಲಿಕ್ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

Wed Jan 15 , 2020
Source Credit NewsKannada.com ಮಹಾ ಕ್ಯಾಥೊಲಿಕ್ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ Jan 15, 2020 05:42:23 PM (IST) Pin it Email https://nirantharanews.com/%e0%b2%b0%e0%b2%be%e0%b2%ac%e0%b2%b0%e0%b3%8d%e0%b2%9f%e0%b3%8d-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a6%e0%b2%b0%e0%b3%8d%e0%b2%b6/#aW52aXRhdGlvbl9 ಮಂಗಳೂರು: ಫೆಬ್ರವರಿ 2ರಂದು ನಡೆಯುವ ಮಡಂತ್ಯಾರು ಕ್ಯಾಥೊಲಿಕ್ ಮಹಾ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಬಿಡುಗಡೆ ಮಾಡಿ ಶುಭಹಾರೈಸಿದರು. ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಬುಧವಾರ ಧರ್ಮಾಧ್ಯಕ್ಷರ ನಿವಾಸದ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಥೋಲಿಕ್ ಸಭಾ ಮಂಗ್ಳುರ್ ಪ್ರದೇಶದ ಅಧ್ಯಕ್ಷರು ಪಾವ್ಲ್ ರೊಲ್ಫಿ ಡಿಕೋಸ್ತ ಅವರು ವಹಿಸಿಕೊಂಡಿದ್ದರು. ಮುಖ್ಯ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links