‘ರಾಬರ್ಟ್’ನಲ್ಲಿದ್ದಾರೆ ದರ್ಶನ್ ಮೆಚ್ಚಿದ ರೈಟರ್ ರಾಜಶೇಖರ್

Source Credit Filmibeat.com

ನೀವು ಸಂಭಾಷಣಾಕಾರರಾಗಿ ಪ್ರವೇಶ ಪಡೆದಿದ್ದು ಹೇಗೆ?

ನಾನು ಮೊದಲು ನಿರ್ದೇಶನ ವಿಭಾಗದ ಮೂಲಕ ಕಿರುತೆರೆಗೆ ಪ್ರವೇಶಿಸಿದೆ. ಮಾಸ್ಟರ್ ಆನಂದ್ ಅವರ ಧಾರಾವಾಹಿಗಳಾದ ‘ಪಡುವಾರ ಹಳ್ಳಿ ಪಡ್ಡೆಗಳು’ `ರೋಬೋ ಫ್ಯಾಮಿಲಿ’ ಮೊದಲಾದ ಧಾರಾವಾಹಿಗಳಿಗೆ ಸಂಚಿಕೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದೆ. ಕಾನ್ಸೆಪ್ಟ್ ಬಗ್ಗೆ ಕೂಡ ಆಸಕ್ತಿ ಇದ್ದ ಕಾರಣ, `ಮಜಾ ಟಾಕೀಸ್’ನಂಥ ರಿಯಾಲಿಟಿ ಶೋಗೆ 200 ಎಪಿಸೋಡುಗಳಷ್ಟು ಬರೆದು ಕೊಡಲು ಸಾಧ್ಯವಾಯಿತು. ಟಿ.ವಿ ಬಿಟ್ಟು ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂದುಕೊಂಡಾಗ `ಅಮ್ಮ ಐ ಲವ್ಯೂ’ ಚಿತ್ರ ಸಿಕ್ಕಿತು. ಹಾಗೆ ಸಿನಿಮಾಗಳಲ್ಲಿ ಮುಂದುವರಿದೆ.

`ರಾಬರ್ಟ್’ ಚಿತ್ರಕ್ಕೆ ನೀವು ಆಯ್ಕೆಯಾಗಿದ್ದು ಯಾರ ಮೂಲಕ?

`ರಾಬರ್ಟ್’ ಮಾತ್ರವಲ್ಲ ನನ್ನ ಮೊದಲ ಸಿನಿಮಾ `ಅಮ್ಮ ಐ ಲವ್ಯು’ ತಂಡದಲ್ಲೇ ನನ್ನನ್ನು ಪರಿಚಯಿಸಿದ್ದು ನಿರ್ದೇಶಕ ತರುಣ್ ಸುಧೀರ್ ಸರ್. ಅವರಿಂದಲೇ `ವಿಕ್ಟ್ರಿ 2′ ಅವಕಾಶವೂ ದೊರಕಿತ್ತು. ಅವರು `ಮಜಾಟಾಕೀಸ್’ ವೀಕ್ಷಕರಾಗಿದ್ದು ಆ ದಿನಗಳಿಂದಲೇ ನನ್ನ ಬಗ್ಗೆ ಮೆಚ್ಚಿದ್ದರು. ಕಾಮಿಡಿ ಬರೆಯಬಲ್ಲವನು ಎಲ್ಲವನ್ನೂ ಬರೆಯಬಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು. ಅದನ್ನು ಉಳಿಸಿಕೊಳ್ಳುವಂತೆ ಸಿನಿಮಾಗಳಲ್ಲಿಯೂ ಬರೆದ ನನಗೆ ರಾಬರ್ಟ್ ನಲ್ಲಿ ಮಾಸ್ ಸಂಭಾಷಣೆ ಬರೆಯುವ ಅವಕಾಶ ಕೊಟ್ಟರು. ಈಗಾಗಲೇ ಪೋಸ್ಟರ್ ಗೆ ಬರೆದಂಥ `ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು; ರಾವಣನ ಮುಂದೆ ಗೆಲ್ಲೋದು ಗೊತ್ತು’ ಡೈಲಾಗೇ ಜನಪ್ರಿಯವಾಗಿರುವುದು ತಂಡಕ್ಕೆ ಖುಷಿ ತಂದಿದೆ.

ನಿಮ್ಮ ಸಂಭಾಷಣೆಗಳ ಬಗ್ಗೆ ದರ್ಶನ್ ಅವರು ಏನು ಹೇಳಿದರು?

ಮಜಾ ಟಾಕೀಸ್ ಶೋವನ್ನು ದರ್ಶನ್ ಸರ್ ಕೂಡ ನೋಡಿದ್ದಾರೆ. ಸೃಜನ್ ಸರ್ ಅವರ ಮೂಲಕ ನಾನು ಕೂಡ ಪರಿಚಯವಾಗಿದ್ದೆ. `ರಾಬರ್ಟ್’ ಚಿತ್ರದ ಸೆಟ್ ನಲ್ಲಿ ದರ್ಶನ್ ಅವರನ್ನು ಕಂಡಾಗ ಒಂದು ನಮಸ್ಕಾರ ಕೊಟ್ಟು ಬದಿಗೆ ಹೋಗುತ್ತಿದ್ದೆ. ಅವರಾಗಿ ನನ್ನನ್ನು ಕರೆದು ಮಾತನಾಡಿಸದ ಕಾರಣ, ನನ್ನನ್ನೆಲ್ಲ ನೆನಪಿಟ್ಟುಕೊಂಡಿರಲ್ಲ ಎಂದುಕೊಂಡಿದ್ದೆ. ಆದರೆ ಅವರು ಮರೆತಿಲ್ಲ ಎನ್ನುವುದು ಗೊತ್ತಾಗಿದ್ದು, ಸೆಟ್ ನಲ್ಲಿ ವಿನೋದ್ ಪ್ರಭಾಕರ್ ಸರ್ ಬಂದಿದ್ದಾಗ. ಆಗ ನನ್ನನ್ನು ಕರೆದು “ಇವರು ತುಂಬ ಚೆನ್ನಾಗಿ ಡೈಲಾಗ್ ಬರೆದಿದ್ದಾರೆ. ಮಜಾ ಟಾಕೀಸ್ ಗೂ ಬರೀತಾ ಇದ್ರು” ಎಂದು ಪರಿಚಯ ಮಾಡ್ಕೊಟ್ರು. ನನಗೆ ಅದು ಯಾವತ್ತಿಗೂ ಮರೆಯದಂಥ ಘಟನೆ.

ದರ್ಶನ್ ಅವರ ಹೊರತು ನಿಮ್ಮನ್ನು ಸಂಭಾಷಣೆಯಿಂದ ಗುರುತಿಸಿದವರು ಯಾರು?

ಅದು ಡಾ. ಶಿವರಾಜ್ ಕುಮಾರ್. ಮಜಾ ಟಾಕೀಸ್ ನ 100ನೇ ಸಂಚಿಕೆಯಲ್ಲಿ ಅತಿಥಿಯಾಗಿ ಶಿವಣ್ಣ ಆಗಮಿಸಿದ್ದರು. ಅವರಿಗೆ ಗಿರಿಜಮ್ಮ ನನ್ನನ್ನು ಪರಿಚಯಿಸಿಕೊಟ್ಟಾಗ, ಒಮ್ಮೆಲೆ ಅವರು ನನಗೆ ಗೊತ್ತು, ಇವರು ಸಂಭಾಷಣೆ ಮಾತ್ರವಲ್ಲ, ನಟನೆ ಕೂಡ ಮಾಡುತ್ತಾರಲ್ವ? ಒಮ್ಮೆ ಕಾಡು ಮನುಷ್ಯನ ಪಾತ್ರ ಮಾಡಿದ್ದನ್ನು ನೋಡಿದ್ದೆ ಅಂದರು! ನನಗೆ ನಿಜಕ್ಕೂ ಅಚ್ಚರಿಯಾಯಿತು. ಅದರಲ್ಲಿ ಒಂದು ಅರ್ಥವೇ ಇರದ ಸಂಭಾಷಣೆಗಳನ್ನು ಹೇಳಿದ್ದೆ.ಅದನ್ನೇ ನೆನಪಿಸಿಕೊಂಡು ಅವರು ಮೆಚ್ಚಿದಾಗ ಬಹಳ ಖುಷಿಯಾಗಿತ್ತು.

ಉಳಿದಂತೆ ನಿಮಗೆ ಸಿಕ್ಕಂಥ ಪ್ರೋತ್ಸಾಹಗಳೇನಿವೆ?

ನನ್ನ ಮನೆ ರಾಯಚೂರು ಜಿಲ್ಲೆಯ ಸಿಂಧನೂರಿಲ್ಲಿದೆ. ಬೆಂಗಳೂರಿಗೆ ಬಂದು ಹದಿನಾರು ವರ್ಷಗಳಾಗಿವೆ. ನಮ್ಮಣ್ಣನ ಜತೆಗೆ ಸೇಲ್ಸ್ ಮ್ಯಾನ್ ಆಗಿ ಬಂದರೂ, ಚಿತ್ರೋದ್ಯಮ ನನ್ನ ಆಸಕ್ತಿಯ ಕ್ಷೇತ್ರವಾಗಿತ್ತು. ಹಾಗೆ ಇಲ್ಲಿ ಅವಕಾಶಕ್ಕಾಗಿ ಅಲೆದಾಡುವಾಗ ಕೂಡ ಎಂದಿಗೂ ನನ್ನಣ್ಣ ಬಸವರಾಜ್ ಆಗಲೀ ತಮ್ಮ ಮಂಜುನಾಥ್ ಆಗಲೀ ವಿರೋಧದ ಮಾತುಗಳಾಡಿದ್ದೇ ಇಲ್ಲ. ಅವರ ಜತೆಗೆ ಊರಲ್ಲಿರುವ ಸಹೋದರರು ಮತ್ತು ಮನೆಮಂದಿ ನೀಡಿದಂಥ ಪ್ರೋತ್ಸಾಹವನ್ನು ಎಂದಿಗೂ ಮರೆಯಲಾರೆ. ಆ ಕಾರಣದಿಂದಲೇ ಇಂದು ವಿನಯ ರಾಜ್ ಕುಮಾರ್ ಅವರ `ಯುವ ಕೇಸರಿ’, `ಚಿಕ್ಕಣ್ಣನ ಬಿಲ್ ಗೇಟ್ಸ್’, ಸಾಯಿಕುಮಾರ್ ಅವರ ‘ರಾಕ್ಷಸರು’ ಮೊದಲಾದ ಚಿತ್ರಗಳಲ್ಲಿ ಇಂದು ಕೆಲಸ ಮಾಡಲು ಸಾಧ್ಯವಾಗಿದೆ.

ನಿಮ್ಮ ಪ್ರಕಾರ ಒಬ್ಬ ಸಿನಿಮಾ ಬರಹಗಾರನಿಗೆ ಇರಲೇಬೇಕಾದ ಪ್ರಮುಖ ಅಂಶಗಳೇನು?

ನಿರ್ದೇಶಕರು ಹೇಳುವುದನ್ನಷ್ಟೇ ಅಲ್ಲದೆ, ಒಂದಷ್ಟು ಡಿಫರೆಂಟಾಗಿ ಯೋಚಿಸುವ ಶಕ್ತಿ ಇರಬೇಕು. ಮಾತ್ರವಲ್ಲ, ತಾಳ್ಮೆ ಕೂಡ ಮುಖ್ಯವಾದ ವಿಚಾರ. ನಮಗೆ ಕಾನ್ಸೆಪ್ಟ್ ಆಗಲೀ ಪಂಚ್ ಆಗಲೀ ತಕ್ಷಣ ಹೊಳೆದಿಲ್ಲ ಎಂದ ಮಾತ್ರಕ್ಕೆ ಸಹನೆ ಕಳೆದುಕೊಳ್ಳಬಾರದು, ಸ್ವಲ್ಪ ಸಮಯ ತೆಗೆದುಕೊಂಡು ಬರೆಯುವ ಸಂಯಮ ಇರಬೇಕು.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕಾರವಾರದಲ್ಲಿ ಮತ್ಸ್ಯಬೇಟೆ ಮೇಲೆ ಕಣ್ಣು; ಬೇಟೆಗೆ ಕಾನೂನಾತ್ಮಕ ಗಾತ್ರ ನಿಗದಿ

Sat Dec 14 , 2019
Source Credit Oneindia.com Pin it Email https://nirantharanews.com/%e0%b2%b0%e0%b2%be%e0%b2%ac%e0%b2%b0%e0%b3%8d%e0%b2%9f%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf%e0%b2%a6%e0%b3%8d%e0%b2%a6%e0%b2%be%e0%b2%b0%e0%b3%86-%e0%b2%a6%e0%b2%b0%e0%b3%8d/#Wg== Karwar oi-Devaraj Naik | Published: Saturday, December 14, 2019, 17:26 [IST] ಕಾರವಾರ, ಡಿಸೆಂಬರ್ 14: ಕಾರವಾರದಲ್ಲಿ ಕೆಲ ಮತ್ಸ್ಯ ಸಂತತಿಯನ್ನು ಉಳಿಸುವ ಉದ್ದೇಶದಿಂದ ಇದೀಗ ಮತ್ಸ್ಯಬೇಟೆ ಮೇಲೂ ಕಣ್ಣಿಡಲಾಗಿದೆ. ಮತ್ಸ್ಯ ಬೇಟೆಗಾಗಿ ಕಾನೂನಾತ್ಮಕ ಗಾತ್ರವನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯು (ಸಿಎಮ್ ‌ಎಫ್‌ಆರ್‌ಐ) ರಾಜ್ಯದ ಕರಾವಳಿಯಲ್ಲಿ ಹೆಚ್ಚಾಗಿ ಸಿಗುವ 19 ಜಾತಿಯ ಮೀನುಗಳನ್ನು ಗುರುತಿಸಿ, ಅವುಗಳ ಬೇಟೆಗೆ ನಿಗದಿಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಕನಿಷ್ಠ ಕಾನೂನಾತ್ಮಕ ಬೇಟೆಯ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links