ರಾಣೇಬೆನ್ನೂರಲ್ಲಿ ‘ಅರುಣೋ’ದಯ, ಕೋಳಿವಾಡಗೆ ಸೋಲು

Source Credit Oneindia.com

ಫಲಿಸಿದ ಬೊಮ್ಮಾಯಿ ತಂತ್ರ

ಅರುಣ್ ಕುಮಾರ್ ಪರವಾಗಿ ಖುದ್ದು ಯಡಿಯೂರಪ್ಪ ಅವರೇ ಕ್ಷೇತ್ರದಲ್ಲಿ ಎರಡು ಬಾರಿ ಪ್ರಚಾರ ಕೈಗೊಂಡಿದ್ದು ಬಿಜೆಪಿ ಲಾಭವಾಗಿದೆ. ಅಲ್ಲದೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಸಂಸದ ಶಿವಕುಮಾರ್ ಉದಾಸಿ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದರು.

ಇನ್ನು ರಾಣೇಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರನ್ನು ಈ ಬಾರಿ ಗೆಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆ ಕರೆ ನೀಡಿದ್ದರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕೆ.ಬಿ.ಕೋಳಿವಾಡ ಅವರ ಪರವಾಗಿ ಬಹಿರಂಗ ಪ್ರಚಾರ ಕೈಗೊಂಡಿದ್ದರೂ ಮತದಾರರು ‘ಕೈ’ ಹಿಡಿಯಲಿಲ್ಲ.

ಆರ್.ಶಂಕರ್ ಗೆ ಮಂತ್ರಿಗಿರಿ ಸಿಗುತ್ತಾ..?

ರಾಣೇಬೆನ್ನೂರು ಕ್ಷೇತ್ರದಲ್ಲಿ ಒಟ್ಟು 2,33,137 ಮತದಾರರಿದ್ದು, ಉಪ ಚುನಾವಣೆಯಲ್ಲಿ 1,72,368 ಜನ ಮತ ಚಲಾಯಿಸಿದ್ದರು. ಶೇಕಡಾವಾರು 73.93% ಮತದಾನವಾಗಿತ್ತು. ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ಅವರು 95,408 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರು 72,186 ಮತಗಳನ್ನು ಪಡೆದು 23,222 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಅನರ್ಹ ಶಾಸಕ ಆರ್.ಶಂಕರ್ ಅವರಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು. ಶಂಕರ್ ಅವರು ಬಿಜೆಪಿ ಸೇರಿದ್ದರೂ ಪಕ್ಷ ಟಿಕೆಟ್ ನೀಡಿರಲಿಲ್ಲ. ಅವರ ಬದಲಾಗಿ 2013 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಅರುಣ್ ಕುಮಾರ್ ಪೂಜಾರ್ ಅವರಿಗೆ ಪಕ್ಷ ಮಣೆ ಹಾಕಿತ್ತು.

ಯಡಿಯೂರಪ್ಪಗೆ ಬಲ ತುಂಬಿದ ರಾಣೇಬೆನ್ನೂರು ಜನ

ಇವರಿಗೆ ಆರಂಭದಲ್ಲಿ ಸ್ಥಳೀಯ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ಬಾರಿಯ ಬಿಜೆಪಿ ಪರಾಜಿತ ಅಭ್ಯರ್ಥಿ ಬಸವರಾಜ ಕೇಲಗಾರ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಅದೇ ರೀತಿ ಅನರ್ಹ ಶಾಸಕ ಆರ್.ಶಂಕರ್ ಅವರಿಗೆ ಟಿಕೆಟ್ ಕೊಡಬೇಕಿತ್ತೆಂದು ಅವರ ಬೆಂಬಲಿಗರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದರು.

ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ವಿರುದ್ದ ವಂಚನೆಯ ಪ್ರಕರಣ ದಾಖಲಾಗಿತ್ತು. ಈ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಗೃಹ ಬಸವರಾಜ ಬೊಮ್ಮಾಯಿ ಅವರು ತಂತ್ರ ಕ್ಷೇತ್ರದಲ್ಲಿ ಕೆಲಸ ಮಾಡಿದೆ.

ಇದ್ದು ಇಲ್ಲದಂತಾದ ಜೆಡಿಎಸ್

ಕ್ಷೇತ್ರದಲ್ಲಿ ಪ್ರಚಾರ ಮಾಡಲು ಮೂರು ಪಕ್ಷಗಳಿಂದ ಘಟಾನುಘಟಿ ರಾಜ್ಯ ನಾಯಕರು ಆಗಮಿಸಿ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸಿದ್ದರು. ಕೊನೆಗೆ ರಾಣೇಬೆನ್ನೂರಿನ ಮತದಾರ ಭಾರತೀಯ ಜನತಾ ಪಕ್ಷಕ್ಕೆ ಗೆಲುವಿನ ಸಿಹಿ ನೀಡಿದ್ದಾರೆ.

ಇನ್ನು ರಾಜಕೀಯ ಜೀವನದ ಕೊನೆಯ ಚುನಾವಣೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದಿದ್ದ ಅವರ ಮುಂದಿನ ನಡೆ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಜೆಡಿಎಸ್ ಈ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ.

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಉಪ ಚುನಾವಣೆ ಫಲಿತಾಂಶದ ಟ್ರೆಂಡ್, ಡಿಕೆಶಿ ಮೊದಲ ಪ್ರತಿಕ್ರಿಯೆ

Mon Dec 9 , 2019
Source Credit Oneindia.com Pin it Email https://nirantharanews.com/%e0%b2%b0%e0%b2%be%e0%b2%a3%e0%b3%87%e0%b2%ac%e0%b3%86%e0%b2%a8%e0%b3%8d%e0%b2%a8%e0%b3%82%e0%b2%b0%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%b0%e0%b3%81%e0%b2%a3%e0%b3%8b%e0%b2%a6/#Wg== Karnataka oi-Mahesh Malnad | Published: Monday, December 9, 2019, 10:56 [IST] Pin it Email https://nirantharanews.com/%e0%b2%b0%e0%b2%be%e0%b2%a3%e0%b3%87%e0%b2%ac%e0%b3%86%e0%b2%a8%e0%b3%8d%e0%b2%a8%e0%b3%82%e0%b2%b0%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%b0%e0%b3%81%e0%b2%a3%e0%b3%8b%e0%b2%a6/#eDQ4MA== D K Shivakumar warn CM of ‘serious action’ | DKS | YEDYURAPPA | BJP | CONGRESS | JDS | ONEINDIA ಬೆಂಗಳೂರು, ಡಿಸೆಂಬರ್ 09: ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಡಿಸೆಂಬರ್ 9ರಂದು ಆರಂಭವಾಗಿದ್ದು, ಆರಂಭಿಕ ಟ್ರೆಂಡ್ ನಂತೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links