ರಶ್ಮಿಕಾಗೆ ಮತ್ತೊಂದು ದೊಡ್ಡ ಶಾಕ್.. ಮನೆಗೆ ಬಂದವರು ಕರ್ನಾಟಕದ ಅಧಿಕಾರಿಗಳೇ ಅಲ್ಲ..

Source Credit RJ News Kannada

ನಿನ್ನೆಯಿಂದ ಸಾಮಾಜಿಕ ಜಾಲತಾಣದ ತುಂಬೆಲ್ಲಾ ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ದಾಳಿ ನಡೆದ ವಿಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿದೆ.. ಈಗ ಇದೆಲ್ಲದರ ನಡುವೆ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.. ಹೌದು ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ದಾಳಿ‌ ಮಾಡಿರುವವರು ಕರ್ನಾಟಕದ ಅಧಿಕಾರಿಗಳೇ ಅಲ್ಲ‌.. ಹಾಗಿದ್ದರೆ ಮತ್ಯಾರು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ನಿನ್ನೆ ಮುಂಜಾನೆ 7.30ಕ್ಕೆ ಕೊಡಗು ಜಿಲ್ಲೆ ವಿರಾಜಪೇಟೆಯ ಕಕ್ಲೂರಿನ ರಶ್ಮಿಕಾ ಅವರ ಮನೆ ಮೇಲೆ ಐ ಟಿ ಅಧಿಕಾರಿಗಳು ರಶ್ಮಿಕಾ ಅವರ ಅಭಿಮಾನಿಗಳು ಎಂದು ಮನೆಯೊಳಗೆ ಪ್ರವೇಶ ಪಡೆದು ನಂತರ ಐ ಟಿ ಅಧಿಕಾರಿಗಳು ಎಂದು ತಿಳಿಸಿ ದಾಳಿ ನಡೆಸಿದ್ದಾರೆ.. ಆ ಸಮಯದಲ್ಲಿ ರಶ್ಮಿಕಾ ಅವರಾಗಲಿ ಅವರ ತಾಯಿಯಾಗಲಿ ಮನೆಯಲ್ಲಿರಲಿಲ್ಲ.. ರಶ್ಮಿಕಾ ಅವರ ತಂದೆ ಮಂದಣ್ಣ ಮಾತ್ರ ಮನೆಯಲಿದದ್ದು.. ನಂತರ ರಶ್ಮಿಕಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ತಕ್ಷಣ ಸಮನ್ಸ್ ಕೂಡ ನೀಡಿದ್ದರು.. ನಂತರ ರಶ್ಮಿಕಾ ಹಾಗೂ ಅವರ ತಂದೆ ಮಂದಣ್ಣ ಅವರ ಹೆಸರಿನಲ್ಲಿನ ಆಸ್ತಿ ಪತ್ರಗಳ ಶೋಧ ಕಾರ್ಯ ನಡೆಯುತಿತ್ತು..

ನಂತರ ನಿನ್ನೆ ರಾತ್ರಿ ರಶ್ಮಿಕಾ ಹಾಗೂ ರಶ್ಮಿಕಾ ಅವರ ತಾಯಿ ಮನೆಗೆ ಆಗಮಿಸಿದ್ದಾರೆ.. ಮಧ್ಯ ರಾತ್ರಿ ವರೆಗೂ ರಶ್ಮಿಕಾ ಅವರ ವಿಚಾರಣೆ ನಡೆದಿದೆ.. ನಂತರ ರಶ್ಮಿಕಾ ಅವರ ಮನವಿ ಮೇರೆಗೆ ಇಂದು ಬೆಳಿಗ್ಗೆಗೆ ವಿಚಾರಣೆಯನ್ನು ಮುಂದೂಡಿದ್ದರು..

ಈಗಾಗಲೇ ಕಾಫಿ ಎಸ್ಟೇಟ್, ವಿರಾಜಪೇಟೆಯ ಸೆರೆನಿಟಿ ಹಾಲ್, ಇತ್ತೀಚೆಗೆ ಕೊಂಡ ದುಬಾರಿ ಬೆಲೆಯ ಕಾರ್ ಗಳು, ಕೆಲ ದಿನಗಳ ಹಿಂದೆ ವಿರಾಜಪೇಟೆ ಟೌನ್ ನಲ್ಲಿ ಮಾರಿದ್ದ ಬಂಗಲೆಯ ಹಣ ಹೀಗೆ ಇನ್ನೂ ಅನೇಕ ಮಾಹಿತಿಗಳನ್ನು ಐ ಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ..

ಆದರೆ ಇದೆಲ್ಲದರ ನಡುವೆ ಸತ್ಯ ಸಂಗತಿ ಇನ್ನೊಂದಿದೆ.. ಹೌದು ರಶ್ಮಿಕಾ ಅವರ ಮನೆ ಮೇಲೆ ದಾಳಿ ಮಾಡಿರುವುದು ಕರ್ನಾಟಕದ ಅಧಿಕಾರಿಗಳಲ್ಲ.. ಬದಲಿಗೆ ಅವರೆಲ್ಲರೂ ಆಂಧ್ರ ಮತ್ತು ತೆಲಂಗಾಣದ ಅಧಿಕಾರಿಗಳಾಗಿದ್ದಾರೆ.. ಹೌದು ನಿನ್ನೆ ರಶ್ಮಿಕಾ ಮನೆ ಮೇಲೆ ದಾಳಿ ಮಾಡಿರುವುದು ಆಂಧ್ರ ಹಾಗೂ ತೆಲಂಗಾಣದ ಐ ಟಿ ಅಧಿಕಾರಿಗಳು.. ಮೂರೇ ವರ್ಷದಲ್ಲಿ ಕನ್ನಡ ಮಾತ್ರವಲ್ಲದೇ ಪಕ್ಕದ ತಮಿಳು ತೆಲುಗು ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿ ನಿಂತ ರಶ್ಮಿಕಾ ಅವರಿಗೆ ಈ ರೀತಿಯ ಶಾಕ್ ಕಾದಿರುತ್ತದೆ ಎಂದು ಕನಸಲ್ಲೂ ಊಹೆ ಮಾಡಿರಲು ಸಾಧ್ಯವಿಲ್ಲ..

5 ದಿನದ ಹಿಂದೆಯಷ್ಟೇ ಸಂದರ್ಶನವೊಂದರಲ್ಲಿ ನನ್ನ ಅಕೌಂಟ್ ನಲ್ಲಿ ದುಡ್ಡೇ ಇಲ್ಲ ಅಂದಿದ್ದರು.. ಕಿರಿಕ್ ಪಾರ್ಟಿ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ರಶ್ಮಿಕಾ ತೆಲುಗಿನ ಗೀತಾಗೋವಿಂದಂ ಸಿನಿಮಾದ ನಂತರ ಅವರ ಲಕ್ಕೇ ಬದಲಾಗಿತ್ತು.. ಕನ್ನಡಕ್ಕಿಂತ ಹೆಚ್ಚಾಗಿ ತೆಲುಗಿನ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡ ರಶ್ಮಿಕಾಗೆ ಇದೀಗ ಅದೇ ತೆಲಂಗಾಣ ಹಾಗೂ ಆಂಧ್ರದ ಅಧಿಕಾರಿಗಳು ಶಾಕ್ ನೀಡಿದ್ದಾರೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ರಶ್ಮಿಕಾ ಮನೆಗೆ ಬಂದವರು ಕರ್ನಾಟಕದ ಅಧಿಕಾರಿಗಳೇ ಅಲ್ಲ..

Fri Jan 17 , 2020
Source Credit RJ News Kannada ನಿನ್ನೆಯಿಂದ ಸಾಮಾಜಿಕ ಜಾಲತಾಣದ ತುಂಬೆಲ್ಲಾ ನಟಿ ರಶ್ಮಿಕಾ ಮಂದಣ್ಣ ಅವರ ವಿಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿದೆ.. ಈಗ ಇದೆಲ್ಲದರ ನಡುವೆ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.. ಹೌದು ರಶ್ಮಿಕಾ ಮಂದಣ್ಣ ಅವರ ಮನೆ ಬಂದವರು ಕರ್ನಾಟಕದ ಅಧಿಕಾರಿಗಳೇ ಅಲ್ಲ‌.. ಹಾಗಿದ್ದರೆ ಮತ್ಯಾರು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. Pin it Email https://nirantharanews.com/%e0%b2%b0%e0%b2%b6%e0%b3%8d%e0%b2%ae%e0%b2%bf%e0%b2%95%e0%b2%be%e0%b2%97%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%8a%e0%b2%82%e0%b2%a6%e0%b3%81-%e0%b2%a6%e0%b3%8a%e0%b2%a1%e0%b3%8d-2/#UGhvdG9HcmlkXzE ನಿನ್ನೆ ಮುಂಜಾನೆ 7.30ಕ್ಕೆ ಕೊಡಗು ಜಿಲ್ಲೆ ವಿರಾಜಪೇಟೆಯ ಕಕ್ಲೂರಿನ ರಶ್ಮಿಕಾ ಅವರ ಮನೆ ಮೇಲೆ ಐ ಟಿ ಅಧಿಕಾರಿಗಳು ರಶ್ಮಿಕಾ ಅವರ ಅಭಿಮಾನಿಗಳು ಎಂದು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links